ನವದೆಹಲಿ: ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ ಬಸವರಾಜ್ ಬೊಮ್ಮಾಯಿ ದೆಹಲಿಗೆ ತೆರಳಿದ್ದು, ಸಿಎಂ ದೆಹಲಿ ಭೇಟಿಗೂ ಮೊದಲೇ ಸಚಿವಾಕಾಂಕ್ಷಿಗಳು ರಾಷ್ಟ್ರ ರಾಜಧಾನಿಯಲ್ಲಿ ಬೀಡುಬಿಟ್ಟಿದ್ದಾರೆ. ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಮಂತ್ರಿ ಸ್ಥಾನಕ್ಕಾಗಿ ನೇರವಾಗಿ ವರಿಷ್ಠರ ಬಳಿ ಲಾಬಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕುಮಾರಸ್ವಾಮಿ, ಈ ಹಿಂದೆ 17 ಶಾಸಕರಿಗೆ ಮಂತ್ರಿ ಸ್ಥಾನ ನೀಡಲೇಬೇಕು ಎಂಬ ಅನಿವಾರ್ಯ ಇತ್ತು ಹಾಗಾಗಿ ನಾವೆಲ್ಲ ತಾಳ್ಮೆಯಿಂದ ಇದ್ದೆವು. …
Read More »ಸಂಕಷ್ಟದ ಪರಿಸ್ಥಿತಿಯಲ್ಲಿ ಕ್ಯಾಬಿನೆಟ್ ಕುಸ್ತಿ | ಬೇಕಿತ್ತಾ ಈ ಸರ್ಕಾರ..?
ಸಂಕಷ್ಟದ ಪರಿಸ್ಥಿತಿಯಲ್ಲಿ ಕ್ಯಾಬಿನೆಟ್ ಕುಸ್ತಿ.. ನೆರೆಗೆ ಉತ್ತರ ತತ್ತರಿಸುತ್ತಿದ್ದರೂ ಯಾಕೀ ವಿಳಂಬ..? ಸುಮ್ನೆ ಟೈಂ ಪಾಸ್ ಗೆ ಸಿಎಂ ಆದ್ರಾ ಬಾಮ್ಮಾಯಿ ಸಾಹೇಬ್ರೆ..? ರಾಮೇಶ್ವರಕ್ಕೆ ಹೋದ್ರು ಶನೇಶ್ವರನ ಕಾಟ ತಪ್ಪಲಿಲ್ಲ ಎಂಬಂತೆ ಮುಖ್ಯಮಂತ್ರಿ ಬದಲಾದರೂ ರಾಜ್ಯದ ಜನರ ಹಣೆಬರಹ ಬದಲಾಗೋ ಲಕ್ಷಣಗಳೇ ಕಾಣುತ್ತಿಲ್ಲ. ಒಂದು ಕಡೆ ಕೊರೊನಾ ಮೂರನೇ ಅಲೆಯ ಎಚ್ಚರಿಕೆಯ ಗಂಟೆ ಬಾರಿಸುತ್ತಿದೆ. ಇನ್ನೊಂದೆಡೆ ಜಲಾಸುರ ಉತ್ತರ ಕರ್ನಾಟಕವನ್ನು ನುಂಗುತ್ತಾ ಬರುತ್ತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಹಿತ ಕಾಯಬೇಕಿದ್ದ …
Read More »ವಲಸಿಗರ ಕೈ ಬಿಟ್ರಾ ಬಿ.ಎಸ್.ಯಡಿಯೂರಪ್ಪ..?
ಚಾಮರಾಜನಗರ : ಕೇವಲ ಬಿ.ಎಸ್.ಯಡಿಯೂರಪ್ಪ ಅವರನ್ನು ನಂಬಿ ಬಿಜೆಪಿಗೆ ಬಂದು ಸಚಿವರಾಗಿದ್ದ 17 ಮಂದಿ ಶಾಸಕರಿಗೆ ಬಿಎಸ್ ವೈ ಶಾಕ್ ನೀಡಿದ್ದಾರೆ. ಅವರಿಗೆ ಮತ್ತೆ ಮಂತ್ರಿ ಸ್ಥಾನ ಕೊಡೋದು ಬಿಡೋದು ಸಿಎಂ ಬೊಮ್ಮಾಯಿ ಅವರಿಗೆ ಬಿಟ್ಟಿದ್ದು ಎಂದು ಹೇಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಮೈತ್ರಿ ಸರ್ಕಾರದ ವೇಳೆ ಕಾಂಗ್ರೆಸ್ – ಜೆಡಿಎಸ್ ನಲ್ಲಿದ್ದ ಶಾಸಕರನ್ನು ಬಿಜೆಪಿಗೆ ಸೆಳೆದು ಸರ್ಕಾರ ರಚಿಸಿದ್ದ ಬಿಎಸ್ ವೈ ಕೊಟ್ಟ ಮಾತಿನಂತೆ ಅವರಿಗೆ ಸಚಿವ …
Read More »ದೆಹಲಿಗೆ ತೆರಳಿದ ಸಿಎಂ ಬೊಮ್ಮಾಯಿ: ಇವತ್ತೇ ಫೈನಲ್ ಆಗುತ್ತಾ ಸಚಿವ ಸಂಪುಟ?
ಬೆಂಗಳೂರು: ಮುಖ್ಯಮಂತ್ರಿಯಾಗಿ ಚುಕ್ಕಾಣಿ ಹಿಡಿದ ಬಳಿಕ ಬಸವರಾಜ ಬೊಮ್ಮಾಯಿಯವರು ಮೊದಲ ಬಾರಿ ದೆಹಲಿ ವಿಮಾನ ಏರಿದ್ದಾರೆ. ಸಿಎಂ ದೆಹಲಿ ಭೇಟಿ ರಾಜ್ಯದ ಸಚಿವ ಸ್ಥಾನಾಕಾಂಕ್ಷಿಗಳ ನೀರಿಕ್ಷೆ ಹೆಚ್ಚಿಸುವಂತೆ ಮಾಡಿದೆ. ಸಿಎಂ ಬೊಮ್ಮಾಯಿ ಇಂದು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಲಿದ್ದಾರೆ. ತನ್ನನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ ಹೇಳಲು ತಾನು ದೆಹಲಿಗೆ ಹೋಗುತ್ತಿರುವುದಾಗಿ ಬೊಮ್ಮಾಯಿ ಹೇಳಿಕೆ …
Read More »ಗದಗ ಜಿಲ್ಲೆಯಲ್ಲಿ ‘ಸಲ್ಮಾನ್ ಖಾನ್’ಗ್ರಾಮ ಕೇಳಿದ್ದೀರಾ? ಇಲ್ಲಿ ಮದುವೆಯಾಗಲು ಕ್ಯೂನಲ್ಲಿ ನಿಂತಿದ್ದಾರೆ ಯುವಕರು!
ಗದಗ:ಜಿಲ್ಲೆಯ ರೋಣ ತಾಲ್ಲೂಕಿನ ಸಣ್ಣ ಹಳ್ಳಿಯಿದು, ಈ ಹಳ್ಳಿ ಗದಗ ಪಟ್ಟಣದಿಂದ 59 ಕಿಲೋ ಮೀಟರ್ ದೂರದಲ್ಲಿದೆ. ಸಲ್ಮಾನ್ ಖಾನ್ ಗ್ರಾಮ ಎಂಬ ಹೆಸರು ಈ ಗ್ರಾಮಕ್ಕೆ ಬಂದಿದೆ, ಅರೆ ಬಾಲಿವುಡ್ ನಟ ಸಲ್ಮಾನ್ ಖಾನ್ ಗೂ ಈ ಗ್ರಾಮಕ್ಕೂ ಏನು ಸಂಬಂಧ ಎಂದುಕೊಂಡಿರಾ? ಈ ಗ್ರಾಮದಲ್ಲಿ ಯಾರೂ ನಟರಿಲ್ಲ, ಬದಲಿಗೆ ಹಲವು ಯುವಕರು, ಪುರುಷರು ಮದುವೆಯಾಗಲು ಸೂಕ್ತ ಹೆಣ್ಣು ಸಿಗದೆ ಬ್ರಹ್ಮಚಾರಿಗಳಾಗಿಯೇ ಉಳಿದಿದ್ದಾರೆ. ಕಳೆದ 10 ವರ್ಷಗಳಿಂದ ಗ್ರಾಮದಲ್ಲಿ …
Read More »ಮೇರಿ ಕೋಮ್ ಎಂಬ ‘ಫೈಟಿಂಗ್ ಸ್ಪಿರಿಟ್’ಗೆ ವಿದಾಯ
ಇಂದು ನೂರಾರು ರಾಜಕೀಯ ಸುದ್ದಿಗಳ ನಡುವೆ ಇದೊಂದು ಸುದ್ದಿ ಪ್ರಾಮುಖ್ಯತೆ ಪಡೆಯಲೇ ಇಲ್ಲ! ಬಾಕ್ಸಿಂಗ್ ಲೆಜೆಂಡ್ ಮೇರಿ ಕೋಮ್ ಒಲಿಂಪಿಕ್ಸ್ ಕೂಟದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂದು ಕೊಲಂಬಿಯಾದ ವೇಲೆಂಶಿಯ ಎಂಬ ಬಾಕ್ಸರ್ ಗೆ ಭಾರೀ ಫೈಟ್ ಕೊಟ್ಟು 3-2 ಅಂಕಗಳಿಂದ ಸೋತು ರಿಂಗ್ಸ್ ನಿಂದ ನಿರ್ಗಮಿಸುವಾಗ ಆಕೆಯ ಕಣ್ಣಂಚಿನಲ್ಲಿ ಜಿನುಗಿದ ಕಣ್ಣೀರು ಯಾವುದೇ ಮಾಧ್ಯಮಕ್ಕೆ ಕೂಡ TRP ಕಂಟೆಂಟ್ ಆಗಿಲ್ಲ. ಇನ್ನು ಮುಂದೆ ಮೇರಿ ಕೋಮ್ ಬಾಕ್ಸಿಂಗ್ …
Read More »ಆಧಾರ್ ಕಾರ್ಡ್ ಸಿಕ್ಕಿಲ್ಲ: ಅಂಗವಿಕಲ ವೇತನವೂ ಇಲ್ಲ: ಅಂಗವಿಕಲ ಯುವತಿಯ ಅಳಲು
ಬಜಪೆ: ಎಷ್ಟು ಪ್ರಯತ್ನ ಪಟ್ಟರೂ ಆಧಾರ್ ಕಾರ್ಡ್ ಪಡೆಯಲು ಸಾಧ್ಯವಾಗದೆ ಇಲ್ಲೊಬ್ಬ ವಿಶೇಷ ಚೇತನ ಯುವತಿ ಸರಕಾರದ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಮಂಗಳೂರು ತಾಲೂಕು ಎಕ್ಕಾರು ಗ್ರಾಮ ಪಂಚಾಯತ್‌ನ ತೆಂಕ ಎಕ್ಕಾರು ಪಲ್ಲದ ಕೋಡಿ ಮುರ ಮನೆಯ ಪದ್ಮನಾಭ ಗೌಡ – ಮೀನಾಕ್ಷಿ ದಂಪತಿಯ ಪುತ್ರಿ ಧನ್ಯಶ್ರೀ (23) ಸಂತ್ರಸ್ತ ಯುವತಿ. ಕೂಲಿ ಕಾರ್ಮಿಕ ದಂಪತಿಗೆ ನಾಲ್ವರು ಮಕ್ಕಳು. ಧನ್ಯಶ್ರೀ ಹುಟ್ಟಿನಿಂದ ಅಂಗವೈಕಲ್ಯ ಮತ್ತು ಮಧ್ಯಮ ಬುದ್ಧಿ ಮಾಂದ್ಯತೆಯಿಂದ ಬಳಲುತ್ತಿದ್ದಾರೆ. ದಿನಗೂಲಿ …
Read More »ಮತ್ತೆ ಏರುಗತಿಯಲ್ಲಿ ಕೋವಿಡ್ ಪ್ರಕರಣಗಳು: ಸ್ವಯಂ ರಕ್ಷಣೆ ಅನಿವಾರ್ಯ
ನಮ್ಮ ನೆರೆ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ ಸಹಿತ ದೇಶದ ಹಲವೆಡೆ ಕೊರೊನಾ ಪ್ರಕರಣಗಳು ಕಳೆದ ಕೆಲವು ದಿನಗಳಿಂದೀಚೆಗೆ ಹೆಚ್ಚುತ್ತಲೇ ಸಾಗಿದೆ. ಕೊರೊನಾ ಮೊದಲನೇ ಅಲೆ ವೇಳೆ ಸಾಂಕ್ರಾಮಿಕದ ನಿಯಂತ್ರ ಣದಲ್ಲಿ ದೇಶ ಮಾತ್ರವಲ್ಲದೆ ವಿಶ್ವ ಆರೋಗ್ಯ ಸಂಸ್ಥೆಯ ಗಮನ ಸೆಳೆದಿದ್ದ ಕೇರಳ ಎರಡನೇ ಅಲೆಯನ್ನು ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫಲ ವಾಗಿರುವುದು ತೀವ್ರ ಅಚ್ಚರಿಯುಂಟು ಮಾಡಿದೆ. ದೇಶಾದ್ಯಂತ ಕೊರೊನಾ ಎರಡನೇ ಅಲೆ ವ್ಯಾಪಿಸಲಾರಂಭಿಸಿದಾಗಿನಿಂದಲೂ ಕೇರಳದಲ್ಲಿ ಸೋಂಕಿನ ಹರಡುವಿಕೆ ತೀವ್ರಗತಿಯಲ್ಲಿತ್ತು. ಸೋಂಕಿನ ಪ್ರಸರಣಕ್ಕೆ …
Read More »ಭ್ರಷ್ಟಾಚಾರವೇ ಸರಕಾರದ ಸಾಧನೆ: ಸಿದ್ದು
“ಆಪರೇಷನ್ ಕಮಲ’ ಎಂಬ ಅನೈತಿಕ ಮಾರ್ಗದಿಂದ ಅಧಿಕಾರಕ್ಕೇರಿದ ರಾಜ್ಯ ಬಿಜೆಪಿ ಸರಕಾರವು ಭ್ರಷ್ಟಾಚಾರ, ದುರಾಡಳಿತಗಳಿಂದಲೇ ಎರಡು ವರ್ಷಗಳನ್ನು ಪೂರೈಸಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಸರಕಾರಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ “ಜನಪೀಡಕ ಸರಕಾರ’ ಕಿರುಹೊತ್ತಿಗೆ ಬಿಡುಗಡೆ ಮಾಡಿದ ಅವರು, ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಬಿಜೆಪಿ ಸರಕಾರ ಇದ್ದರೆ ಸ್ವರ್ಗವನ್ನೇ ಸೃಷ್ಟಿಸುತ್ತೇವೆ ಎಂದು ಜನರನ್ನು ನಂಬಿಸಿ ರಾಜ್ಯವನ್ನು ಲೂಟಿ ಮಾಡಿದ್ದಾರೆ ಎಂದು ಟೀಕಿಸಿದರು. ಕೊರೊನಾ ಸಂಬಂಧಿ ಸಲಕರಣೆ …
Read More »ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿದ ಸಿಎಂ ಬೊಮ್ಮಾಯಿ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ವರಿಷ್ಠರಿಗೆ ಸಚಿವ ಸಂಪುಟ ರಚನೆಯ ತಲೆನೋವು ಆರಂಭವಾಗಿದೆ. ಪ್ರಮುಖ ಸ್ವಾಮೀಜಿಗಳು ತಮ್ಮ ಸಮುದಾಯಗಳ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಡ ಹೇರುತ್ತಿರುವುದು ಇದಕ್ಕೆ ಕಾರಣ. ಮುಖ್ಯಮಂತ್ರಿ ಬೊಮ್ಮಾಯಿ ತತ್‌ಕ್ಷಣ ಸಚಿವ ಸಂಪುಟ ರಚಿಸುವ ಲೆಕ್ಕಾಚಾರದಲ್ಲಿ ಇದ್ದಂತೆ ಕಾಣಿಸುತ್ತಿಲ್ಲ. ಆಷಾಢ ಮುಗಿ ಯುವವರೆಗೂ ಆಕಾಂಕ್ಷಿಗಳು ಕಾಯ ಬೇಕಾಗ ಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರ ವಾರ ದಿಲ್ಲಿಗೆ ತೆರಳಲಿದ್ದು, ಪ್ರಧಾನಿ ಮೋದಿ, …
Read More »
Laxmi News 24×7