ಧಾರವಾಡ: ಜಿಲ್ಲೆಯ ಎಲ್ಲ ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರಗಳನ್ನು ನೀಡಬೇಕು ಎಂಬುದು ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಜಿಲ್ಲಾ ಘಟಕದವರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಕಡಪಾ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಮಾವೇಶಗೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸರ್ಕಾರಗಳು ಕಾರ್ಪೋರೇಟ್ ಪರವಾದ ಕೃಷಿ …
Read More »ಮೀನುಗಾರಿಕೆಗೆ ಹೋದಾಗ ನೀರುಪಾಲು: ಇಬ್ಬರು ಮಕ್ಕಳ ಮೃತದೇಹ ಪತ್ತೆ; ತಂದೆಗಾಗಿ ಶೋಧ
ಯಮಕನಮರಡಿ(ಬೆಳಗಾವಿ ಜಿಲ್ಲೆ): ಸಮೀಪದ ಬೆನಕನಹೊಳಿ ಬಳಿ ಘಟಪ್ರಭಾ ನದಿ ಹಿನ್ನೀರಿನ ಪ್ರದೇಶದಲ್ಲಿ ತಂದೆಯೊಂದಿಗೆ ಮೀನುಗಾರಿಕೆಗೆ ಹೋದಾಗ ನೀರುಪಾಲಾಗಿದ್ದ ಇಬ್ಬರು ಮಕ್ಕಳ ಮೃತದೇಹ ಸೋಮವಾರ ಸಂಜೆ ಪತ್ತೆಯಾಗಿವೆ. ಬೆನಕನಹೊಳಿಯ ರಮೇಶ ಅಂಬಲಿ(15), ಯಲ್ಲಪ್ಪ ಅಂಬಲಿ(13) ಮೃತರು. ಅವರ ತಂದೆ ಲಕ್ಷ್ಮಣ ಅಂಬಲಿ(45) ಪತ್ತೆಗಾಗಿ ಅಗ್ನಿಶಾಮಕ ದಳ ತಂಡ ಹಾಗೂ ಪೊಲೀಸರಿಂದ ಕಾರ್ಯಾಚರಣೆ ಮುಂದುವರಿದಿದೆ. ‘ಲಕ್ಷ್ಮಣ ಅವರು ಘಟಪ್ರಭಾ ನದಿ ಸೇತುವೆ ಮೇಲೆ ಭಾನುವಾರ ರಾತ್ರಿ ಬೈಕ್ ನಿಲ್ಲಿಸಿ ತಮ್ಮ ಇಬ್ಬರು ಮಕ್ಕಳೊಂದಿಗೆ ಮೀನುಗಾರಿಕೆಗಾಗಿ …
Read More »ವೈದ್ಯರ ನಿರ್ಲಕ್ಷ್ಯದಿಂದ ಬೆಳಗಾವಿಯಲ್ಲಿ ಬಾಣಂತಿ ಸಾವು ರೊಚ್ಚಿಗೆದ್ದ ಕುಟುಂಬಸ್ಥರಿಂದ ಬೆಳಗಾವಿ ಬೀಮ್ಸ್ ಎದುರಿಗೆ ದಿಢೀರ್ ಪ್ರತಿಭಟನೆ!
ವೈದ್ಯರ ನಿರ್ಲಕ್ಷ್ಯದಿಂದ ಬೆಳಗಾವಿಯಲ್ಲಿ ಬಾಣಂತಿ ಸಾವು ರೊಚ್ಚಿಗೆದ್ದ ಕುಟುಂಬಸ್ಥರಿಂದ ಬೆಳಗಾವಿ ಬೀಮ್ಸ್ ಎದುರಿಗೆ ದಿಢೀರ್ ಪ್ರತಿಭಟನೆ! ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ನಾಗನೂರ ತಾಂಡಾದ ಬಾಣಂತಿ ಕಲ್ಪನಾ ರಾಠೋಡ ಸಾವು ಮಧ್ಯರಾತ್ರಿ 2.30ರ ಸುಮಾರಿಗೆ ಶಸ್ತ್ರಚಿಕಿತ್ಸೆ ಮೂಲಕ ಗಂಡು ಮಗವಿಗೆ ಜನ್ಮ ನೀಡಿದ್ದ ಬಾಣಂತಿ ಮಗು ಮತ್ತು ತಾಯಿ ಆರೋಗ್ಯವಾಗಿ ಇರುವುದಾಗಿ ವೈದ್ಯರು ಹೇಳಿಕೆ ಇಂದು ಬೆಳಿಗ್ಗೆ 8.30ರವರೆಗೂ ಆರೋಗ್ಯವಾಗಿದ್ದ ಬಾಣಂತಿ ಕಲ್ಪನಾ ರಾಠೋಡ ಬಳಿಕ ಬಾಣಂತಿ ಆರೋಗ್ಯದಲ್ಲಿ ಏಕಾಏಕಿ …
Read More »ಬೆಳಗಾವಿಗೆ ಬೇಕು ಇನ್ನೊಂದು ಸಚಿವ ಸ್ಥಾನ: ಆಸಿಫ್ ಸೇಠ್
ಬೆಳಗಾವಿ: ‘ಬೆಳಗಾವಿ ಜಿಲ್ಲೆ ಅತ್ಯಂತ ದೊಡ್ಡದು. ಕನಿಷ್ಠ ಇನ್ನೊಂದು ಸಚಿವ ಸ್ಥಾನ ಕೊಡಬೇಕು. ಇಲ್ಲದಿದ್ದರೆ, ಜಿಲ್ಲೆಗೆ ಅನ್ಯಾಯ ಮಾಡಿದಂತಾಗುತ್ತದೆ’ ಎಂದು ಶಾಸಕ ಆಸಿಫ್ ಸೇಠ್ ಅಸಮಾಧಾನ ವ್ಯಕ್ತಪಡಿಸಿದರು. ‘ಬೆಂಗಳೂರು ಮೊದಲನೇ ಮತ್ತು ಬೆಳಗಾವಿ ಎರಡನೇ ಅತಿ ದೊಡ್ಡ ಜಿಲ್ಲೆ. ಬೆಂಗಳೂರಿಗೆ ಎಷ್ಟು ಸಚಿವ ಸ್ಥಾನ ನೀಡಿದ್ದೀರಿ, ಬೆಳಗಾವಿಗೆ ಎಷ್ಟು ನೀಡಿದ್ದೀರಿ ಯೋಚಿಸಿ. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ನನ್ನ ಸಮುದಾಯ ನನ್ನನ್ನೂ ಪ್ರಶ್ನಿಸುತ್ತಿದೆ. ಉತ್ತರ ಕರ್ನಾಟಕದಲ್ಲಿ ಏಕೆ ಅಲ್ಪಸಂಖ್ಯಾತರಿಗೆ …
Read More »ತಿರುಪತಿ ಭಕ್ತರಿಗೆ ಭರ್ಜರಿ ಗುಡ್‌ನ್ಯೂಸ್! ಇನ್ಮೇಲೆ ಕೇವಲ ಮೂರೇ ಗಂಟೆಯಲ್ಲಿ ಸಿಗುತ್ತೆ ದರ್ಶನ! ಹೇಗೆ?
ತಿರುಪತಿ: ತಿರುಮಲದಲ್ಲಿ ತಿರುಪತಿ ತಿರುಮಲ ವೆಂಕಟೇಶ್ವರ (Tirupati ) ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಇನ್ಮುಂದೆ 2ರಿಂದ 3 ಗಂಟೆಯೊಳಗೆ ತಿಮ್ಮಪ್ಪನ ದರ್ಶನ (Tirupati Darshanam) ಭಾಗ್ಯ ಸಿಗುವಂತೆ ಕ್ರಮ ಕೈಗೊಳ್ಳಲು ಟಿಟಿಡಿ (TTD) ನಿರ್ಧರಿಸಿದೆ.ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನದ ಉಸ್ತುವಾರಿ ವಹಿಸಿರುವ ಹೊಸದಾಗಿ ರಚನೆಯಾಗಿವ ತಿರುಮಲ ತಿರುಪತಿ ದೇವಸ್ಥಾನಮ್ ಮಂಡಳಿಯು ಈಗಾಗಲೇ ದೇಗುಲದಲ್ಲಿ ಅನೇಕ ಬದಲಾವಣೆಗಳನ್ನು ತರಲು ಮುಂದಾಗಿದ್ದು, ವಿಶೇಷವಾಗಿ ಹಿಂದೂಯೇತರರಿಗೆ ಇಲ್ಲಿ ಅವಕಾಶ ಇಲ್ಲ, ಹೀಗಾಗಿ ಈ …
Read More »ಪಂಚ ‘ಗ್ಯಾರಂಟಿ ಯೋಜನೆ’ಗಳು ಇಂದಿರಾಗಾಂಧಿಯಿಂದ ಪ್ರೇರಣೆ ಪಡೆದಿವೆ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ಸೇರಿದಂತೆ ನಮ್ಮ ಪಂಚ ಗ್ಯಾರಂಟಿ ಯೋಜನೆಗಳು ಕೂಡಾ ಶ್ರೀಮತಿ ಇಂದಿರಾಗಾಂಧಿಯವರಿಂದ ಪ್ರೇರಣೆ ಪಡೆದಿವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವಂತಹ ಸಿಎಂ ಸಿದ್ದರಾಮಯ್ಯ ‘ಬಡವರ ಬಗ್ಗೆ ಅವರ ಹೃದಯ ಸದಾ ಮಿಡಿಯುತ್ತಿತ್ತು. ಗರೀಬಿ ಹಟಾವೋ ಎಂದು ಹೇಳುತ್ತಾ ಬಡತನದ ವಿರುದ್ಧ ಅವರು ಸಮರವನ್ನೇ ಸಾರಿದ್ದರು.ಸರ್ವರಿಗೂ ಸಮಪಾಲು ನೀಡುವ ಸ್ವಾವಲಂಬಿ ಮತ್ತು ಜಾತ್ಯತೀತ ಭಾರತದ ರೂವಾರಿ ಶ್ರೀಮತಿ ಇಂದಿರಾಗಾಂಧಿಯವರನ್ನು …
Read More »ರಾಮದುರ್ಗ | ರೈಲು ಮಾರ್ಗ ಸಮೀಕ್ಷೆಗೆ ಯತ್ನ: ಅಶೋಕ ಪಟ್ಟಣ
ರಾಮದುರ್ಗ | ರೈಲು ಮಾರ್ಗ ಸಮೀಕ್ಷೆಗೆ ಯತ್ನ: ಅಶೋಕ ಪಟ್ಟಣ ರಾಮದುರ್ಗ: ಲೋಕಾಪೂರದಿಂದ ರಾಮದುರ್ಗ, ಸವದತ್ತಿ ಮೂಲಕ ಧಾರವಾಡಕ್ಕೆ ಸೇರುವ ಹೊಸ ರೈಲು ಮಾರ್ಗದ ಸಮೀಕ್ಷೆಗಾಗಿ ಮುಖಂಡರ ನಿಯೋಗ ಡಿಸೆಂಬರ್ ಕೊನೆಯ ವಾರದಲ್ಲಿ ದೆಹಲಿಗೆ ಹೋಗಿ ಕೇಂದ್ರ ರೈಲು ಸಚಿವರನ್ನು ಭೇಟಿ ಮಾಡಲಾಗುವುದು ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು. ರಾಮದುರ್ಗದ ರೈಲು ಹೋರಾಟ ಕ್ರಿಯಾ ಸಮಿತಿಯು ಸೋಮವಾರ ಇಲ್ಲಿನ ಪ್ರವಾಸಿ ಮಂದಿರದ ಆವರಣದಲ್ಲಿ ಸೇರಿದ್ದ ಸಭೆಯಲ್ಲಿ …
Read More »ಸೌಕರ್ಯ, ಸಿಬ್ಬಂದಿ: ಕೊರತೆ ಆಸ್ಪತ್ರೆಗೇ ಬೇಕಿದೆ ಚಿಕಿತ್ಸೆ!
ಚಿಕ್ಕೋಡಿ: ಪಟ್ಟಣದ ಹೊರವಲಯದಲ್ಲಿ ₹20 ಕೋಟಿ ವೆಚ್ಚದಲ್ಲಿ ಐದು ಎಕರೆಯಲ್ಲಿ ತಲೆ ಎತ್ತಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ಆಗದಿದ್ದರೂ, ಸೇವೆ ಆರಂಭಿಸಿ ತಿಂಗಳಾಗಿದೆ. ಒಳರೋಗಿಗಳ ವಿಭಾಗ ಕಾರ್ಯಾರಂಭ ಮಾಡಿದ್ದು, ವೈದ್ಯರು, ಸಿಬ್ಬಂದಿ ಹಾಗೂ ಮೂಲಸೌಕರ್ಯ ಕೊರತೆ ಎದ್ದು ಕಾಣುತ್ತಿದೆ. 100 ಹಾಸಿಗೆಗಳ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅ.17ರಿಂದ ನ.16ರವರೆಗೆ 35 ಹೆರಿಗೆಯಾಗಿವೆ. ಈ ಪೈಕಿ 12 ಸಿಸೇರಿಯನ್ ಹೆರಿಗೆಯಾಗಿವೆ. ಆದರೆ, ಆರೋಗ್ಯ ಮತ್ತು …
Read More »ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
ಬಳ್ಳಾರಿ (ಹೊಸಪೇಟೆ): ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ ಹಂಚಿಕೆಯಲ್ಲಿ ವಿಜಯನಗರ ಕ್ಷೇತ್ರಕ್ಕೆ ಭಾರಿ ಅನ್ಯಾಯವಾಗಿದ್ದು, ಅನುದಾನವೇ ಇಲ್ಲದೇ, ಕ್ಷೇತ್ರವನ್ನು ಹೇಗೆ ಅಭಿವೃದ್ಧಿ ಮಾಡೋಕೆ ಆಗುತ್ತದೆ ಎಂದು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿಜಯನಗರ ಶಾಸಕ ಎಚ್.ಆರ್.ಗವಿಯಪ್ಪ, ಸರ್ಕಾರದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ. ಹೊಸಪೇಟೆ ನಗರದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದುವರೆ ವರ್ಷವಾದರೂ, ಅನುದಾನವೇ ನೀಡುತ್ತಿಲ್ಲ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ ಹಂಚಿಕೆಯಲ್ಲಿ ವಿಜಯನಗರ …
Read More »ಗೋಬಿ, ಕಾಟನ್ ಕ್ಯಾಂಡಿಯಲ್ಲಿ ಮತ್ತೆ ಕೃತಕಬಣ್ಣ!
ಬೆಂಗಳೂರು: ರಾಜ್ಯದಲ್ಲಿ ಕೃತಕ ಬಣ್ಣ ಬಳಸಿ ತಯಾರಿಸುವ ಕಲರ್ ಕಾಟನ್ ಕ್ಯಾಂಡಿ, ಕಬಾಬ್, ಗೋಬಿ ಮಂಚೂರಿಗಳ ಮಾರಾಟ ನಿಷೇಧ ಆದೇಶ ಹೊರಡಿಸಿ ವರ್ಷ ಪೂರ್ಣಗೊಳ್ಳುವುದರ ಒಳಗಾಗಿ ಬೆಂಗಳೂರು ಮತ್ತಿತರ ಕಡೆಗಳಲ್ಲಿ ಬಣ್ಣ ಬಣ್ಣದ ಕಾಟನ್ ಕ್ಯಾಂಡಿ ಮಾರಾಟ ಮತ್ತೆ ಆರಂಭವಾಗಿದೆ. ಗೋಬಿ ಮಂಚೂರಿಯಲ್ಲೂ ಕೃತಕ ಬಣ್ಣ ಬಳಕೆಯ ಪ್ರಕರಣಗಳು ವರದಿಯಾಗುತ್ತಿವೆ. ಆಹಾರ ಸುರಕ್ಷೆ ಮತ್ತು ಗುಣಮಟ್ಟದ ಇಲಾಖೆಯು ರಾಜ್ಯಾದ್ಯಂತ ಮಾರಾಟ ಮಾಡುತ್ತಿರುವ ಬಣ್ಣದ ಕಾಟನ್ ಕ್ಯಾಂಡಿಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. …
Read More »
Laxmi News 24×7