ಬೆಂಗಳೂರು: ಕಳೆದ ಜೂನ್ ನಲ್ಲಿ ನಡೆದಿದ್ದಂತ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ( SSLC Supplementary Exam Result 2022 ) ಇಂದು ಪ್ರಕಟಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ಇಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತ ವೆಬ್ ಸೈಟ್ https://karresults.nic.in/ ನಲ್ಲಿ ಫಲಿತಾಂಶ ಲಭ್ಯ ವೀಕ್ಷಿಸಬಹುದಾಗಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ( Minister BC Nagesh ) ಮಾಹಿತಿ ಬಿಡುಗಡೆ ಮಾಡಿದ್ದು, 2022ರ ಜೂನ್ …
Read More »B.S.F.ಯೋಧನ ಅಂತ್ಯಕ್ರಿಯೆ ಸರ್ಕಾರಿ ಗೌರವದೊಂದಿಗೆ
ಚಿಕ್ಕೋಡಿ: ಕರ್ತವ್ಯಕ್ಕೆ ತೆರಳುವ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದ ಬಿಎಸ್‌ಎಫ್ ಯೋಧನ ಅಂತ್ಯಕ್ರಿಯೆ ಸರ್ಕಾರಿ ಗೌರವದೊಂದಿಗೆ ನಡೆಯಿತು. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದ ಬಿಎಸ್‌ಎಫ್ ಯೋಧ ಸೂರಜ್ ಧೋಂಡಿರಾಮ ಸುತಾರ(30) ಆಟೋದಿಂದ ಕೆಳಗಿಳಿಯುತ್ತಿದ್ದಾಗ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ ಯೋಧ ಪಶ್ಚಿಮ ಬಂಗಾಳ ರಾಜ್ಯದ ಪಂಜಿ ಪಾಡಾ ಎಂಬಲ್ಲಿ ಸೋಮವಾರ ನಿಧನರಾಗಿದ್ದರು. ಅವರ ಪಾರ್ಥಿವ ಶರೀರ ಬುಧವಾರ ಬೆಳಗ್ಗೆ ದೆಹಲಿಯ ಮೂಲಕ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದು …
Read More »ಕಾಂಗ್ರೆಸ್‌ಗೆ ಇನ್ಮುಂದೆ ಎಂದಿಗೂ ಅಧಿಕಾರ ಸಿಗುವುದಿಲ್ಲ: ಹಾಲಪ್ಪ ಆಚಾರ್
ಕೊಪ್ಪಳ: ಕಾಂಗ್ರೆಸ್ ಈ ದೇಶದಲ್ಲಿ ಬಹು ವರ್ಷಗಳ ಕಾಲ ಅಧಿಕಾರ ಅನುಭವಿಸಿದ್ದಾರೆ. ಈಗ ಅಧಿಕಾರ ಕಳೆದುಕೊಂಡು ಸಿಎಂ ರೇಸ್ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ಎಂದಿಗೂ ಅಧಿಕಾರ ಸಿಗುವುದಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್ ಅವರು ಹೇಳಿದರು. ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಈಚೆಗಿನ ಸಮೀಕ್ಷೆಯಲ್ಲಿ ಬಿಜೆಪಿಗೆ ಹಿನ್ನೆಡೆ ಎಂದೆನ್ನುತ್ತಿದ್ದಾರೆ. ಈ ಹಿಂದೆಯೂ ಉತ್ತರ ಪ್ರದೇಶದಲ್ಲಿ ಹಿನ್ನಡೆಯಾಗಲಿದೆ ಎಂದು ಹೇಳಿದ್ದರು. ಆದರೆ ಫಲಿತಾಂಶ ಏನಾಯ್ತು …
Read More »ಅಪ್ಪ ಹಣ ಕೊಟ್ಟಿಲ್ಲ ಎಂದು ಮಗನನ್ನೇ ಕಿಡ್ನಾಪ್
ಬೆಂಗಳೂರು (ಜು.20): ತಂದೆಯ (Father) ಜೊತೆಗಿನ ವ್ಯವಹಾರ ವೈಷಮ್ಯಕ್ಕೆ ಮಗನನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ನಾಲ್ವರು ಆರೋಪಿಗಳನ್ನು (Accused) ಯಲಹಂಕ ಪೊಲೀಸರು 4 ಗಂಟೆಯಲ್ಲಿ ಬಂಧಿಸಿದ್ದಾರೆ. ಚಿತ್ರದುರ್ಗದಲ್ಲಿ (Chitradurga) ಟ್ರ್ಯಾಕ್ ಮಾಡಿ ಬಂಧಿಸಿ ಕರೆತಂದಿದ್ದಾರೆ. ಕಲಬುರಗಿ ಮೂಲದ ರಮೇಶ್ ರಾಥೋಡ್ (Ramesh Rathod) (43), ರಿಜ್ವಾನ್ ಪಟೇಲ್ (23), ಇಂದ್ರಜಿತ್ ಪವಾರ್ (23) ಹಾಗೂ ಹರೀಶ್ ಕುಮಾರ್ (24) ಬಂಧಿತ ಆರೋಪಿಗಳು. 4 ಗಂಟೆಯಲ್ಲಿ ಆರೋಪಿಗಳ ಬಂಧನ ಪ್ರಕರಣದ …
Read More »ದಿಗಳ ದಿನಗೂಲಿ ಹೆಚ್ಚಳ ಮಾಡಿಲ್ಲ; ಗೃಹ ಸಚಿವ ಆರಗ ಜ್ಞಾನೇಂದ್ರ
ಬೆಂಗಳೂರು: ಜೈಲಿನಲ್ಲಿರುವ ಕೈದಿಗಳಿಗೆ ದಿನಗೂಲಿ ಏರಿಕೆ ಮಾಡಿದ್ದಾರೆ ಎಂಬ ವಿಷಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಮನಬಂದಂತೆ ವ್ಯಂಗ್ಯ ಚಿತ್ರಣ, ಮೀಮ್ ಮಾಡುವುದು, ಬರಹಗಳನ್ನು ಹಾಕಿದ್ದಾರೆ. ಕೈದಿಗಳ ದಿನಗೂಲಿಯನ್ನ 525 ರೂ.ಗಳಿಗೆ ಏರಿಸಿದ್ದು ಬೇರೆ ಉದ್ಯೋಗಗಳಿಗಿಂತ ಜೈಲುವಾಸವೇ ಲಾಭದಾಯಕ ಎಂಬಂತೆ ಹಲವರು ಗೇಲಿ ಮಾಡಿ ಹರಿಬಿಟ್ಟಿರುವುದು ಕಂಡುಬಂದಿದೆ. ಈ ವಿಷಯದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ಪಷ್ಟೀಕರಣ ನೀಡಿದ್ದು, ರಾಜ್ಯದಲ್ಲಿ ಸುಮಾರು ಹದಿನೈದು ಸಾವಿರ ಕೈದಿಗಳು ಜೈಲುವಾಸ ಅನುಭವಿಸುತ್ತಿದ್ದಾರೆ. …
Read More »ಜನರು ತುಂಬಿದ್ದ ನೀರಿನ ಬಿಲ್ ಗುಳುಂ ಮಾಡಿತಾ ದಂಡು ಮಂಡಳಿ..?
ನೀರಿನ ಬಿಲ್‍ನ್ನು ಇಲ್ಲಿನ ಜನರು ತುಂಬಿದರೂ ಕೂಡ ಅಧಿಕಾರಿಗಳು ಮಾಡಿದ ಯಡವಟ್ಟಿನಿಂದಾಗಿ ಇಲ್ಲಿನ ಮನೆಗಳಿಗೆ ಕಳೆದ 20 ದಿನಗಳಿಂದ ನೀರನ್ನು ಬಿಟ್ಟಿಲ್ಲ. ಇದರಿಂದ ರೋಸಿ ಹೋದ ಇಲ್ಲಿನ ಮಹಿಳೆಯರು ಸಂಬಂಧಿಸಿದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಹೌದು ಹೀಗೆ ಚಿಕ್ಕ ಮಕ್ಕಳನ್ನು ಹಿಡಿದುಕೊಂಡು ನಿಂತಿರುವ ಈ ನೂರಾರು ಮಹಿಳೆಯರು ಬೆಳಗಾವಿಯ ಕ್ಯಾಂಪ್ ಪ್ರದೇಶದವರು. ಕಳೆದ 20 ದಿನಗಳಿಂದ ಇವರ ಮನೆಗಳಿಗೆ ನೀರನ್ನು ಬಿಟ್ಟಿಲ್ಲ. ಇದರಿಂದ ಆಕ್ರೋಶಗೊಂಡಿರುವ …
Read More »ಅಕ್ರಮವಾಗಿ ಅನ್ನಭಾಗ್ಯ ಯೋಜನೆಯ ಅಕ್ಕಿ ಸಾಗಿಸುತ್ತಿದ್ದ ಗಾಡಿ ಸೀಜ್
ಅಕ್ರಮವಾಗಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಸಾಗಿಸುತ್ತಿದ್ದ ಗಾಡಿಯನ್ನು ಸೀಜ್ ಮಾಡಿ ಅಪಾರ ಪ್ರಮಾಣದ ಅಕ್ಕಿಯನ್ನು ನೇಸರಗಿ ಪೊಲೀಸರು ಜಪ್ತಿ ಮಾಡಿದ್ದಾರೆ. ಹೌದು ಬೊಲೆರೋ ಪಿಕ್‍ಅಪ್ ವಾಹನದಲ್ಲಿ ಅಕ್ರಮವಾಗಿ ರೇಶನ್ ಅಕ್ಕಿಯನ್ನು ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ನೇಸರಗಿ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ವಾಹನ ಸಮೇತ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 76,076 ರೂಪಾಯಿ ಮೌಲ್ಯದ 71 ಚೀಲ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ಚಾಲಕನನ್ನು ವಶಕ್ಕೆ …
Read More »ಮರಾಠ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂ. ಅನುದಾನ ಏನೆಲ್ಲಾ ಯೋಜನೆಗಳು ಸಿಗಲಿದೆ?
ಬೆಂಗಳೂರು: ರಾಜ್ಯ ಸರ್ಕಾರದ ಎದುರು ಕರ್ನಾಟಕದ ಮರಾಠ ಸಮುದಾಯ (Maratha community) ಹಲವು ಬೇಡಿಕೆಗಳನ್ನು ಇಟ್ಟಿದೆ. ಮರಾಠ ಸಮುದಾಯದವರ ಮೀಸಲಾತಿ ಬೇಡಿಕೆಗೆ ರಾಜ್ಯ ಹಿಂದುಳಿದ ವರ್ಗದ ವರದಿ ಬಂದ ನಂತರ ಸಂವಿಧಾನದ ಚೌಕಟ್ಟಿನೊಳಗೆ ನ್ಯಾಯ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ತಿಳಿಸಿದರು. ಅವರು ಇಂದು ಕರ್ನಾಟಕ ಮರಾಠ ಅಭಿವೃದ್ಧಿ ನಿಗಮ ಹಾಗೂ ಫಲಾನುಭವಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರ ಮವನ್ನು ಉದ್ಘಾಟಿಸಿ ಮಾತನಾಡಿದದ್ದರು. ಮರಾಠ …
Read More »ಅಂಗನವಾಡಿ ಕಾರ್ಯಕರ್ತೆಯರ ಬಹುದಿನದ ಬೇಡಿಕೆಗೆ ಸಿಗಲಿದೆ ಗ್ರೀನ್ ಸಿಗ್ನಲ್!?
ಬೆಂಗಳೂರು (ಜು.19): ಅಂಗನವಾಡಿ ಕಾರ್ಯಕರ್ತೆಯರ (Anganwadi Workers) ಬಹುದಿನದ ಕನಸು ನನಸಾಗುವ ಸಾಧ್ಯತೆ ಇದೆ. ಅಂಗನವಾಡಿ ಕಾರ್ಯಕರ್ತರನ್ನು ಶಿಕ್ಷಕಿಯರೆಂದು (Teacher) ಪರಿಗಣಿಸಲು ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸ್ಸು ಮಾಡಿದೆ. ಒಂದು ವೇಳೆ ಈ ಶಿಫಾರಸ್ಸಿಗೆ ಅನುಮೋದನೆ ಸಿಕ್ಕಿದ್ದೇ ಆದಲ್ಲಿ ಗೌರವ ಧನ, ವೇತನವಾಗಿ (Salary) ಪರಿವರ್ತನೆಯಾಗಲಿದ್ದು ಅದರ ಜೊತೆಗೆ ಸೇವಾ ಭದ್ರತೆ ಕೂಡ ದೊರೆಯಲಿದೆ. ಅಂಗನವಾಡಿಗಳ ಜೊತೆಗೆ ಒಂದು ಮತ್ತು ಎರಡನೇ ತರಗತಿಗಳನ್ನು ಸಂಯೋಜಿಸಿ ಶಾಲೆಗಳ (Combined Schools) ಸ್ವರೂಪವನ್ನು ಬದಲಾವಣೆ …
Read More »ಕಿತ್ತೋದ ಬಸ್ ನಿಲ್ದಾಣದ ಅದ್ಧೂರಿ ಉದ್ಘಾಟನೆ; ಚೀಫ್ ಗೆಸ್ಟ್ ಆಗಿ ಬಂದಿದ್ದು ಎಂಎಲ್ಎ ಅಲ್ಲ, ಎಮ್ಮೆ!
ಗದಗ: ಕಾಮಗಾರಿ (Work) ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಿದ್ಧವಾಗಿತ್ತು. ಈ ಬಸ್ ನಿಲ್ದಾಣ (Bus Stand) ಕಟ್ಟಡದ ಉದ್ಘಾಟನೆ (Inauguration) ಯಾವಾಗ ಎಂದು ಎದುರು ನೋಡುತ್ತಿದ್ದ ಜನ ಅದಕ್ಕೊಂದು ಶುಭ ಮುಹೂರ್ತವನ್ನು ನಿಗದಿ ಮಾಡಿಯೇಬಿಟ್ಟರು. ಅವರೆಲ್ಲ ಎದುರು ನೋಡುತ್ತಿದ್ದ ಶುಭ ಸಮಯ ಬಂದೇಬಿಟ್ಟಿತು. ಗ್ರಾಮಸ್ಥರೆಲ್ಲರೂ (Villagers) ಸೇರಿ ಉದ್ಘಾಟಕರನ್ನು ಬಿಗಿ ಭದ್ರತೆಯೊಂದಿಗೆ, ದೊಡ್ಡ ಸ್ವರದ ಮೈಕ್ ಸ್ವಾಗತದೊಂದಿಗೆ, ಹೂಮಾಲೆಗಳಿಂದ, ಬ್ಯಾನರ್ ಗಳಿಂದ ಸಿಂಗಾರಗೊಂಡಿದ್ದ ಬಸ್ ನಿಲ್ದಾಣದ ಬಳಿ ಕರೆತಂದು ರಿಬ್ಬನ್ (Ribbon) …
Read More »
Laxmi News 24×7