Breaking News

ನವದೆಹಲಿ

ಪ್ರಣಬ್ ಮುಖರ್ಜಿ ಅವರಿಗೆ ಮಾರಕ ಕೊರೊನಾ ವೈರಸ್ ಸೋಂಕು

ಹೊಸದಿಲ್ಲಿ: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಹಾಗೂ ಭಾರತ ರತ್ನ ಪುರಸ್ಕೃತ ಪ್ರಣಬ್ ಮುಖರ್ಜಿ ಅವರಿಗೆ ಮಾರಕ ಕೊರೊನಾ ವೈರಸ್ ಸೋಂಕು ತಗುಲಿದೆ. ಈ ಕುರಿತು ಖುದ್ದು ಮಾಹಿತಿ ನೀಡಿರುವ ಪ್ರಣಬ್ ಮುಖರ್ಜಿ, ನಿಯಮಿತ ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ಭೇಟಿ ನೀಡಿದಾಗ ತಮಗೆ ಕೊರೊನಾ ಸೋಂಕು ತಗುಲಿದೆ ಎಂಬುದು ದೃಢಪಟ್ಟಿದೆ ಎಂದು ಟ್ವೀಟ್ ಮಾಡಿದ್ದಾರೆ. ತಮಗೆ ಕೊರೊನಾ ವೈರಸ್ ಸೋಂಕು ತಗುಲಿರುವುದನ್ನು ವೈದ್ಯರು ದೃಢಪಡಿಸಿದ್ದು, ನನ್ನ ಸಂಪರ್ಕಕ್ಕೆ ಬಂದ …

Read More »

ಭಾರತದಲ್ಲಿ ಕೊರೊನಾಗೆ 196 ವೈದ್ಯರ ಸಾವು – ಪ್ರಧಾನಿ ಮೋದಿಗೆ ಐಎಂಎ ಪತ್ರ

ನವದೆಹಲಿ: ಕೊರೊನಾ ಸೋಂಕಿನಿಂದ ಈವರೆಗೂ ಭಾರತದಲ್ಲಿ 196 ವೈದ್ಯರು ಪ್ರಾಣ ಕಳೆದುಕೊಂಡಿದ್ದು, ಈ ವಿಚಾರದ ಬಗ್ಗೆ ಗಮನ ಹರಿಸುವಂತೆ ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ. ಐಎಂಎ ಬರೆದ ಪತ್ರದಲ್ಲಿ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ವೈದ್ಯರ ಸಾವುಗಳು ಹೆಚ್ಚುತ್ತಿರುವ ಬಗ್ಗೆ ಕಳವಳಗಳ ವ್ಯಕ್ತಪಡಿಸಲಾಗಿದೆ. ಕೊರೊನಾದಿಂದಾಗಿ ವೈದ್ಯರು ಸೋಂಕಿಗೆ ಒಳಗಾಗುವ ಮತ್ತು ಪ್ರಾಣ ಕಳೆದುಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಅವರಲ್ಲಿ ಅನೇಕ ಸಾಮಾನ್ಯ ವೈದ್ಯರಿದ್ದಾರೆ ಎಂದು …

Read More »

ವಿಮಾನ ದುರಂತದಲ್ಲಿ ಮಡಿದ ಪೈಲಟ್‍ಗೆ ಏರ್ ಇಂಡಿಯಾ ಎಕ್ಸ್‍ ಪ್ರೆಸ್ ಸಿಬ್ಬಂದಿ ಅಂತಿಮ ನಮನ

ದೆಹಲಿ/ಲಕ್ನೋ: ಕೇರಳದ ಕೋಯಿಕ್ಕೋಡ್ ಕರಿಪುರ ವಿಮಾನ ದುರಂತದಲ್ಲಿ ಮಡಿದ ಪೈಲಟ್‍ಗೆ ಏರ್ ಇಂಡಿಯಾ ಎಕ್ಸ್‍ ಪ್ರೆಸ್ ಸಿಬ್ಬಂದಿ ಅಂತಿಮ ನಮನ ಸಲ್ಲಿಸಿದರು.ಶುಕ್ರವಾರ ರಾತ್ರಿ ನಡೆದ ದುರಂತದಲ್ಲಿ ಪೈಲಟ್ ಅಖಿಲೇಶ್ ಕುಮಾರ್ ಮೃತಪಟ್ಟಿದ್ದರು. ಶನಿವಾರ ರಾತ್ರಿ ಏರ್ ಇಂಡಿಯಾ ಸಿಬ್ಬಂದಿ ಅಂತಿಮ ನಮನ ಸಲ್ಲಿಸಿ, ಮೃತದೇಹ ಇಂದು ಬೆಳಗ್ಗೆ ಹುಟ್ಟೂರು ಉತ್ತರ ಪ್ರದೇಶದ ಮಥುರಾಗೆ ತಲುಪಿದೆ. ಕೊರೊನಾ ವೈರಸ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ದುಬೈನಲ್ಲಿ ಸಿಲುಕಿದ್ದ ಭಾರತೀಯರನ್ನು ಶುಕ್ರವಾರ ಏರ್ ಇಂಡಿಯಾ ವಿಮಾನ …

Read More »

ಪಾಕಿಸ್ತಾನದ ಟೀಕೆಗೆ ಭಾರತ ಖಡಕ್ ವಾರ್ನಿಂಗ್…………..

ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬುಧವಾರ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ್ದು, ಈ ಕುರಿತು ಪಾಕಿಸ್ತಾನದ ಟೀಕೆಗೆ ಭಾರತ ಖಡಕ್ ವಾರ್ನಿಂಗ್ ನೀಡಿದೆ.   ದೇಶದ ಆಂತರಿಕ ವಿಚಾರದಲ್ಲಿ ನೀವು ತಲೆ ಹಾಕಬೇಡಿ ಎಂದು ಭಾರತ ಎಚ್ಚರಿಸಿದೆ. ಈ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಪ್ರತಿಕ್ರಿಯಿಸಿ, ಭಾರತದ ಆಂತರಿಕ ವಿಷಯದ ಬಗ್ಗೆ ‘ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನ’ದ ಪತ್ರಿಕಾ ಹೇಳಿಕೆ ಗಮನಕ್ಕೆ ಬಂದಿದೆ. ಪಾಕಿಸ್ತಾನವು ಭಾರತದ …

Read More »

ಚೀನಾ ಪ್ರಾಯೋಜಕತ್ವಕ್ಕೆ ಐಪಿಎಲ್‍ನಿಂದ ಗೇಟ್ ಪಾಸ್ ಸಾಧ್ಯತೆ

ನವದೆಹಲಿ: ಈ ಬಾರಿಯ ಐಪಿಎಲ್-13ರಿಂದ ಚೀನಾ ಪ್ರಾಯೋಜಕತ್ವಕ್ಕೆ ಗೇಟ್ ಪಾಸ್ ನೀಡಲು ಬಿಸಿಸಿಐ ನಿರ್ಧರಿಸಿದ್ದು, ಈ ಕುರಿತು ಆಗಸ್ಟ್ 6ರಂದು ಅಧಿಕೃತ ಪ್ರಕಟನೆ ಹೊರಡಿಸುವ ಸಾಧ್ಯತೆಗಳಿವೆ. ಐಪಿಎಲ್ ಲೀಗ್ 19ನೇ ಆವೃತ್ತಿಯ ಪಂದ್ಯಗಳು ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿವೆ. ಚೀನಾದ ವಿವೋ ಸ್ಮಾರ್ಟ್ ಕಂಪನಿ ಐಪಿಎಲ್-13ರ ಪ್ರಾಯೋಜಕತ್ವ ಹೊಂದಿರೋದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆ ಎಚ್ಚೆತ್ತಿರುವ ಪ್ರಾಯೋಜಕತ್ವದ ಚೀನಾದ ವಿವೋ ಕಂಪನಿಯನ್ನು ಕೈ ಬಿಡಲು ತೀರ್ಮಾನಿಸಿದೆ ಎಂದು …

Read More »

ಭೂಮಿ ಪೂಜೆ ಲೈವ್‌ – ಇಂದಿರಾ ಗಾಂಧಿ ಭಾಷಣದ ವಿಡಿಯೋ ಅಪ್ಲೋಡ್‌ ಮಾಡಿ ಪ್ರಶ್ನೆ ಕೇಳಿದ ಬಿಜೆಪಿ

ನವದೆಹಲಿ: ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆಯ ಕಾರ್ಯಕ್ರಮವನ್ನು ಡಿಡಿ ವಾಹಿನಿಯಲ್ಲಿ ಲೈವ್‌ ಪ್ರಸಾರ ಮಾಡವುದಕ್ಕೆ ಟೀಕೆ ವ್ಯಕ್ತವಾಗಿದ್ದಕ್ಕೆ ಬಿಜೆಪಿ ಇಂದಿರಾ ಗಾಂಧಿ ಭಾಷಣದ ವಿಡಿಯೋವನ್ನು ರಿಲೀಸ್‌ ಮಾಡಿ ತಿರುಗೇಟು ನೀಡಿದೆ. ಆಗಸ್ಟ್‌ 5 ರಂದು ಆಯೋಜನೆಗೊಂಡಿರುವ ರಾಮ ಮಂದಿರದ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ದೂರದರ್ಶನ ಲೈವ್‌ ಪ್ರಸಾರ ಮಾಡಲು ಸಿದ್ಧತೆ ನಡೆಸುತ್ತಿತ್ತು.ಸರ್ಕಾರದ ವಾಹಿನಿಯಾಗಿರುವ ಡಿಡಿ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಲು …

Read More »

ಲೈಂಗಿಕ ಕಾರ್ಯಕರ್ತೆಯರ ಮಕ್ಕಳನ್ನು ಆರ್ಥಿಕವಾಗಿ ಪೋಷಣೆ ಮಾಡಲು ಮುಂದಾಗಿದ್ದಾರೆಗೌತಮ್ ಗಂಭೀರ್.

ನವದೆಹಲಿ: ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಲೈಂಗಿಕ ಕಾರ್ಯಕರ್ತೆಯರ ಮಕ್ಕಳನ್ನು ಆರ್ಥಿಕವಾಗಿ ಪೋಷಣೆ ಮಾಡಲು ಮುಂದಾಗಿದ್ದಾರೆ. ಹೌದು..ರಾಷ್ಟ್ರ ರಾಜಧಾನಿಯ ಜಿಬಿ ರಸ್ತೆ ಪ್ರದೇಶಯಲ್ಲಿರುವ ಲೈಂಗಿಕ ಕಾರ್ಯಕರ್ತೆಯರ 25 ಮಕ್ಕಳ ಪೋಷಣೆಗೆ ಗೌತಮ್ ಗಂಭೀರ್ ಮುಂದಾಗಿದ್ದಾರೆ. ಅಂದರೆ 25 ಮಕ್ಕಳ ಶಾಲೆಯ ಶುಲ್ಕ, ಆರೋಗ್ಯ, ಆಹಾರ, ಔಷಧಿ ಮತ್ತು ಇತರ ವಿವಿಧ ವೆಚ್ಚಗಳನ್ನು ಭರಿಸುತ್ತಾರೆ. ಗೌತಮ್ ಗಂಭೀರ್ ತಮ್ಮ ಈ ಕಾರ್ಯಕ್ಕೆ “PANKH” (ರೆಕ್ಕೆಗಳು) ಎಂದು ಕರೆದಿದ್ದಾರೆ. ಸಂಸದರು …

Read More »

ಸೈಕ್ಲಿಸ್ಟ್ ಕನಸು ಕಂಡ ವಿದ್ಯಾರ್ಥಿಗೆ ರಾಷ್ಟ್ರಪತಿಯಿಂದ ರೇಸಿಂಗ್ ಸೈಕಲ್ ಗಿಫ್ಟ್

ನವದೆಹಲಿ: ತಾನೊಬ್ಬ ಖ್ಯಾತ ಸೈಕ್ಲಿಸ್ಟ್ ಆಗಬೇಕು ಎಂದು ಕನಸು ಕಾಣುತ್ತಿರೋ ಬಡ ವಿದ್ಯಾರ್ಥಿಗೆ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರು ಸೈಕಲ್ ಗಿಫ್ಟ್ ಮಾಡಿ ಸಾಧನೆಗೆ ಉತ್ತೇಜನ ನೀಡಿದ್ದಾರೆ. ಹೌದು. ರಾಷ್ಟ್ರ ರಾಜಧಾನಿ ದೆಹಲಿಯ ಶಾಲೆಯೊಂದರಲ್ಲಿ 9 ನೇ ತರಗತಿಯಲ್ಲಿ ಓದುತ್ತಿರುವ ರಿಯಾಜ್ ಇಂದು ರಾಷ್ಟ್ರಪತಿಯವರಿಂದ ಉಡುಗೊರೆ ಪಡೆದ ವಿದ್ಯಾರ್ಥಿ. ಈದ್ ಮಿಲಾದ್ ಹಬ್ಬದಂದೇ ಗಿಫ್ಟ್ ನೀಡಿರುವ ರಾಷ್ಟ್ರಪತಿಗಳು ವಿಶ್ವಮಟ್ಟದ ಸೈಕ್ಲಿಸ್ಟ್ ಆಗಿ ಮಿಂಚಬೇಕು ಎಂದು ಶುಭಹಾರೈಸಿದ್ದಾರೆ. ಮೂಲತಃ ಬಿಹಾರದ ಮಧುಬಾನಿ …

Read More »

ನಾಳೆ ಪ್ರಧಾನಿ ನರೇಂದ್ರ ಮೋದಿ ಭಾಷಣ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉದ್ದೇಶಿಸಿ ಸಂಜೆ 4.30ಕ್ಕೆ ಮಾತನಾಡಲಿದ್ದಾರೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದ್ದು, ಈ ಕುರಿತು ಪ್ರಧಾನಿ ಮೋದಿ ಭಾಷಣದಲ್ಲಿ ಮಾತನಾಡಲಿದ್ದಾರೆ ಎಂದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ತಿಳಿಸಿದೆ. ಅಲ್ಲದೇ ಕೊರೊನಾ ಅನ್‍ಲಾಕ್ 3.0 ನಾಳೆಯಿಂದ ಜಾರಿ ಆಗಲಿದೆ. ಈ ವೇಳೆಯಲ್ಲೇ ಪ್ರಧಾನಿಗಳು ಭಾಷಣ ಮಾಡುತ್ತಿರುವುದು ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.ಮಾತೃಭಾಷೆಯಲ್ಲೇ …

Read More »

50ಕ್ಕೂ ಹೆಚ್ಚು ಜನರನ್ನ ಕೊಲೆಗೈದ ಆರೋಪದಲ್ಲಿ ಆಯುರ್ವೇದ ವೈದ್ಯನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಹೊಸದಿಲ್ಲಿ: ದಿಲ್ಲಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಜನರನ್ನ ಕೊಲೆಗೈದ ಆರೋಪದಲ್ಲಿ ಆಯುರ್ವೇದ ವೈದ್ಯನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಆಲಿಘರ್ ನಿವಾಸಿಯಾಗಿದ್ದ ದೇವೇಂದರ್ ಶರ್ಮಾ(62) ಬಂಧಿತ. ಹಲವು ಅಪಹರಣ ಮತ್ತು ಕೊಲೆ ಪ್ರಕರಣಗಳಲ್ಲಿ ದೋಷಿ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ನಕಲಿ ಗ್ಯಾಸ್ ಏಜೆನ್ಸಿ ನಡೆಸುತ್ತಿದ್ದದ್ದಕ್ಕಾಗಿ ಬಂಧಿಸಲಾಗಿತ್ತು . ಕಿಡ್ನಿ ದಂಧೆ ಪ್ರಕರಣದಲ್ಲಿ ಜೈಪುರದ ಸೆಂಟ್ರಲ್ ಜೈಲಿನಲ್ಲಿ ಆತ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. ಬಳಿ ತಪ್ಪಿಸಿಕೊಂಡಿದ್ದನು …

Read More »