ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನರ್ ರಚನೆಯೋ ಏನೆಂಬುದು ಇಂದೇ ಗೊತ್ತಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದು, ಆ ಮೂಲಕ ಸಚಿವರು ಹಾಗೂ ಆಕಾಂಕ್ಷಿಗಳಲ್ಲಿ ಎದೆಬಡಿತ ಹೆಚ್ಚಿಸಿದ್ದಾರೆ. ಮಾಜಿ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿ ಅವರ 54ನೇ ಪುಣ್ಯತಿಥಿ ನಿಮಿತ್ತ ವಿಧಾನಸೌಧದ ಬಳಿ ಅವರ ಭಾವಚಿತ್ರಕ್ಕೆ ಸೋಮವಾರ ಮಾಲಾರ್ಪಣೆ ಮಾಡಿದ ಬಳಿಕ ಸಿಎಂ ಮಾಧ್ಯಮದವರೊಂದಿಗೆ ಮಾತನಾಡಿದರು. ಖಾಲಿಯಿರುವ 7 ಸ್ಥಾನಗಳನ್ನು ತುಂಬುವುದು ಖಚಿತ. ಬುಧವಾರ ಇಲ್ಲವೇ ಗುರುವಾರ ನೂತನ …
Read More »ಶಾಸಕ ಎಂ.ಸಿ. ಮನಗೂಳಿ ಏರ್ ಲಿಫ್ಟ್ ಮೂಲಕ ಆಸ್ಪತ್ರೆಗೆ ದಾಖಲು
ವಿಜಯಪುರ: ಅನಾರೋಗ್ಯದಿಂದ ಬಳಲುತ್ತಿರುವ ಸಿಂದಗಿ ಶಾಸಕ ಎಂ.ಸಿ. ಮನಗೂಳಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ದಿನಗಳ ಹಿಂದೆ ಕಲಬುರಗಿಯಿಂದ ಏರ್ಲಿಫ್ಟ್ ಮೂಲಕ ಶಾಸಕರನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದ್ದು, ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಫ ಕಟ್ಟಿದ ಹಿನ್ನೆಲೆಯಲ್ಲಿ ಶಾಸಕ ಮನಗೂಳಿ ತೀವ್ರ ಅಸ್ವಸ್ಥರಾಗಿದ್ದರು. ಸದ್ಯ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Read More »ಗೋಹತ್ಯೆ ನಿಷೇಧಿಸಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಸುಗ್ರೀವಾಜ್ಞೆ ಸಿಂಧುವಲ್ಲ. ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗುವುದು: ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ
ಬೆಂಗಳೂರು: ‘ಗೋಹತ್ಯೆ ನಿಷೇಧಿಸಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಸುಗ್ರೀವಾಜ್ಞೆ ಸಿಂಧುವಲ್ಲ. ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗುವುದು’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಅವರು ಭಾನುವಾರ ಹೇಳಿದರು. ಕರ್ನಾಟಕ ರಾಜ್ಯ ರೈತ ಸಂಘ ಆಯೋಜಿಸಿದ್ದ ‘ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ ರೈತರ ಪಾಲಿಗೆ ಮರಣ ಶಾಸನ ಆಗಲಿದೆಯೆ?’ ಎಂಬ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ‘ಸಂವಿಧಾನದತ್ತವಾಗಿರುವ ಮೂಲಭೂತ ಹಕ್ಕುಗಳು, ನಿರ್ದೇಶಕ ತತ್ವಗಳ ವಿರುದ್ಧವಾಗಿ …
Read More »ಬಿಜೆಪಿ ದರಿದ್ರ ಸರ್ಕಾರ:ಸಿದ್ದರಾಮಯ್ಯ ಲೇವಡಿ
ಬೆಂಗಳೂರು (ಜ. 10): ಗೋಹತ್ಯೆ ನಿಷೇಧ ಮಾಡಬೇಕಾದರೆ ಇಡೀ ದೇಶದಲ್ಲಿ ಬ್ಯಾನ್ ಮಾಡಿ. ದೇಶದಲ್ಲಿ ಗೋ ಮಾಂಸ ರಫ್ತು, ಆಮದು ಮಾಡೋದನ್ನು ಮೊದಲು ನಿಲ್ಲಿಸಿ. ಬಿಜೆಪಿಯವರು ಸಗಣಿ ಎತ್ತಿಲ್ಲ, ಗಂಜಲ ಬಾಚಿಲ್ಲ. ಆದರೆ ಗೋಮಾತೆ ಪೂಜೆ ಮಾಡುತ್ತೇವೆ ಎನ್ನುತ್ತಾರೆ. ಬಿಜೆಪಿ ಬೆಂಬಲಿಗರೇ ದನದ ಮಾಂಸ ರಫ್ತು ಮಾಡುತ್ತಾರೆ. ಬಿಜೆಪಿಯದ್ದು ದರಿದ್ರ ಸರ್ಕಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಅಲ್ಲದೆ ಬಿಜೆಪಿ ಸರ್ಕಾರದ ಜನ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ …
Read More »‘ಆನ್‌ಲೈನ್ ಮಾರುಕಟ್ಟೆ ಬಳಸಿಕೊಂಡು ಮಾರಾಟಗಾರರು ಗ್ರಾಹಕರಿಗೆ ಮಾಡುವ ಮೋಸಕ್ಕೆ ಇ- ಕಾಮರ್ಸ್ ಸಂಸ್ಥೆಗಳು ಜವಾಬ್ದಾರಿ ಆಗುವುದಿಲ್ಲ’ ಎಂದಹೈಕೋರ್ಟ್
ಬೆಂಗಳೂರು: ‘ಆನ್‌ಲೈನ್ ಮಾರುಕಟ್ಟೆ ಬಳಸಿಕೊಂಡು ಮಾರಾಟಗಾರರು ಗ್ರಾಹಕರಿಗೆ ಮಾಡುವ ಮೋಸಕ್ಕೆ ಇ- ಕಾಮರ್ಸ್ ಸಂಸ್ಥೆಗಳು ಜವಾಬ್ದಾರಿ ಆಗುವುದಿಲ್ಲ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಸ್ನ್ಯಾಪ್‌ಡೀಲ್ ಸಂಸ್ಥೆ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆ ರದ್ದು ಪಡಿಸಿದ ನ್ಯಾಯಾಲಯ, ಈ ಅಭಿಪ್ರಾಯಪಟ್ಟಿದೆ. ವೆಬ್‌ಸೈಟ್‌ನಲ್ಲಿ ಜಾಹೀರಾತು ಪ್ರದರ್ಶಿಸಿರುವ ಉತ್ಪನ್ನವೊಂದು ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆಗೆ ವಿರುದ್ಧವಾಗಿದೆ ಸ್ನ್ಯಾಪ್‌ಡೀಲ್ ವಿರುದ್ಧ ಮೈಸೂರಿನ ಉಪ ಔಷಧ ನಿಯಂತ್ರಕರು ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಸ್ನ್ಯಾಪ್‌ಡೀಲ್ ಪರವಾಗಿ ಹಾಜರಾದ ಹಿರಿಯ ವಕೀಲ …
Read More »ಯಶ್ ಅಭಿಮಾನಿಗಳ ಪ್ರೀತಿ ಮತ್ತು ಸಹಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ಬೆಂಗಳೂರು: ಕೆಜಿಎಫ್-2 ಚಿತ್ರದ ಟೀಸರ್ ನೋಡಿ ಯಶ್‍ಗೆ ಅಭಿಮಾನಿಗಳೂ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರ ಟೀಸರ್ ನಿಂದಲೇ ದಾಖಲೆ ನಿರ್ಮಿಸಲು ಹೊರಡುತ್ತಿದ್ದಂತೆ ಯಶ್ ಅಭಿಮಾನಿಗಳ ಪ್ರೀತಿ ಮತ್ತು ಸಹಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಕೆಜಿಎಫ್-2 ಚಿತ್ರದ ಟೀಸರ್ ಗುರುವಾರ ರಾತ್ರಿ ಬಿಡುಗಡೆ ಗೊಳಿಸಿದ್ದರು. ಈಗಾಗಲೇ ಸುಮಾರು 10 ಕೋಟಿಗೂ ಅಧಿಕ ವ್ಯೂವ್, ಲೈಕ್ ಮತ್ತು ಕಮೆಂಟ್‍ಗಳನ್ನು ಹಾಕುವ ಮೂಲಕ ಕನ್ನಡ ಚಿತ್ರವೊಂದು ಎಲ್ಲಾ ಯೂಟ್ಯೂಬ್ ದಾಖಲೆಗಳನ್ನು ಪುಡಿಗಟ್ಟಿದೆ. ಈ ಸಂಭ್ರಮವನ್ನು ಇದೀಗ್ ಯಶ್ …
Read More »ಸಿಎಂಗೆ ಮತ್ತೆ ಕೊರೊನಾ ಆತಂಕ:
ಬೆಂಗಳೂರು,ಜ.9- ಸಂಸದ ರಾಜಾ ಅಮರೇಶ್ವರ ನಾಯಕ ಅವರಿಗೆ ಮಹಾಮಾರಿ ಕೊರೊನಾ ಸೋಂಕು ತಗುಲಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೆಗಡಿ, ಕೆಮ್ಮು ಕಾಣಿಸಿಕೊಂಡ ಕಾರಣ ಅವರು ಕೊರೊನಾ ತಪಾಸಣೆಗಾಗಿ ಗಂಟಲು ದ್ರವವನ್ನು ರಾಯಚೂರಿನಲ್ಲಿ ಪರೀಕ್ಷೆ ಮಾಡಿಸಿದ್ದರು. ಕೊರೊನಾ ದೃಢಪಟ್ಟಿರುವುದರಿಂದ ನಗರದ ಪೋರ್ಟಿಸ್ ಆಸ್ಪತ್ರೆಯಲ್ಲಿ ಕೋವಿಡ್-19 ಐಸೋಲೋಷನ್ ವಾರ್ಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಸದ ರಾಜಾ ಅಮರೇಶ್ವರ ನಾಯಕ ಅವರಿಗೆ ಕೋವಿಡ್ ದೃಢಪಟ್ಟಿರುವುದರಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ಸಚಿವರು, ಶಾಸಕರು, ಚುನಾಯಿತ …
Read More »ಸಿಲಿಕಾನ್ ಸಿಟಿ’ ಬೆಂಗಳೂರಿನಲ್ಲಿ ಭಾರಿ ಅಗ್ನಿ ಅವಘಡ : ನೋಡ ನೋಡುತ್ತಿದ್ದಂತೆ ಹೊತ್ತಿ ಉರಿದ ಕಟ್ಟಡ
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಲಕ್ಕಸಂದ್ರದ ಗೋದಾಮಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಇಡೀ ಗೋಡನ್ ಗೆ ಬೆಂಕಿ ತಗುಲಿದ್ದು, ಈಗಾಗಲೇ ಐದಕ್ಕೂ ಹೆಚ್ಚು ಅಗ್ನಿ ಶಾಮಕ ದಳದ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಬಾಪೂಜಿನಗರದ ಹೊಸಗುಡ್ಡದಹಳ್ಳಿಯಲ್ಲಿ ನಡೆದ ಅಗ್ನಿ ಅವಘಡ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಮತ್ತೊಂದು ಘಟನೆ ನಡೆದಿದೆ.
Read More »ಗವಿಮಠದ ಅಜ್ಜನ ಜಾತ್ರೆಯ ತೇರೆಳೆಯೋದು ಪಕ್ಕಾ; ಮೂರೇ ದಿನಕ್ಕೆ ಸೀಮಿತವಾಗಲಿದೆಯಾ ಜಾತ್ರಾ ಮಹೋತ್ಸವ!?
ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ, ಉತ್ತರದ ಸಿದ್ಧಗಂಗೆ ಎಂದೇ ಖ್ಯಾತವಾಗಿರುವ ಕೊಪ್ಪಳ ಗವಿಮಠದ ಅಜ್ಜನ ಜಾತ್ರಾ ಮಹೊತ್ಸವದ ತೇರೆಳೆಯೋದು ಬಹುತೇಕ ಪಕ್ಕಾ ಆಗಿದೆ. ಅಧಿಕೃತವಾಗಿ ಈವರೆಗೆ ಯಾವುದೇ ಪ್ರಕಟಣೆ ಹೊರಬಿದ್ದಿಲ್ಲವಾದರೂ ಶುಕ್ರವಾರ ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಸಂಸದ ಕರಡಿ ಸಂಗಣ್ಣ, ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪೂರ ಮತ್ತು ರಾಘವೇಂದ್ರ ಹಿಟ್ನಾಳರವರು ಜಾತ್ರಾ ಮಹೋತ್ಸವ ಸಂಬಂಧ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ. ಗವಿಮಠದ ಜಾತ್ರೆ, ಭಕ್ತರ ಜಾತ್ರೆ. ಭಕ್ತರ ತೀರ್ಮಾನವೇ ನಮ್ಮ …
Read More »ರಾಗಿಣಿ ದ್ವಿವೇದಿಗೆ ಸದ್ಯಕ್ಕೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.
ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟಿ ರಾಗಿಣಿ ದ್ವಿವೇದಿಗೆ ಸದ್ಯಕ್ಕೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದಿನ ವಾರಕ್ಕೆ ಮುಂದೂಡಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಗಿಣಿ ಸಲ್ಲಿಸಿದ್ದ ಜಾಮೀನು ಅರ್ಜಿ ಮತ್ತು ಪ್ರಕರಣ ನಂಬರ್ 1 ಆರೋಪಿ ಶಿವಪ್ರಕಾಶ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಒಗ್ಗೂಡಿಸಿ ನ್ಯಾ.ನಾಗೇಶ್ವರಾವ್ ನೇತೃತ್ವದ ತ್ರಿ ಸದಸ್ಯ ಪೀಠ ವಿಚಾರಣೆ ನಡೆಸಿತು. ವಿಚಾರಣೆಗೂ ಮುನ್ನ ಅನಾರೋಗ್ಯ ಹಿನ್ನಲೆ …
Read More »
Laxmi News 24×7