ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ರಾಜ್ಯಾದ್ಯಂತ ಜಾರಿಯಾಗಿದ್ದ ಲಾಕ್ ಡೌನ್ ನಾಳೆಯಿಂದ 19 ಜಿಲ್ಲೆಗಳಲ್ಲಿ ತೆರವುಗೊಳ್ಳಲಿದ್ದು, ಅನ್ ಲಾಕ್ ಪ್ರಕ್ರಿಯೆ ಆರಂಭವಾಗಲಿದೆ. ಆದರೆ 11 ಜಿಲ್ಲೆಗಳಲ್ಲಿ ಜೂನ್ 21ರವರೆಗೆ ಲಾಕ್ ಡೌನ್ ಮುಂದುವರೆಯಲಿದೆ. ಸೋಂಕಿತರ ಸಂಖ್ಯೆ ಹೆಚ್ಚಿರುವ ಜಿಲ್ಲೆಗಳಾದ ಬೆಳಗಾವಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಮಂಡ್ಯ ಹಾಗೂ ಕೊಡಗು ಜಿಲ್ಲೆಗಳಲ್ಲಿ ಒಂದು ವಾರಗಳ ಕಾಲ ಲಾಕ್ ಡೌನ್ ಮುಂದುವರೆಯಲಿದೆ. …
Read More »CD ಕೇಸ್; ಪ್ರತ್ಯೇಕ ದಿನಗಳಲ್ಲಿ ವಿಚಾರಣೆಗೆ ಹಾಜರಾಗಲು ನರೇಶ್, ಶ್ರವಣ್ಗೆ SIT ನೋಟಿಸ್
ಬೆಂಗಳೂರು: ಸಿ.ಡಿ ಕೇಸ್ಗೆ ಸಂಬಂಧಿಸಿದಂತೆ ತನಿಖಾಧಿಕಾರಿ ಎಸಿಪಿ ಧರ್ಮೇಂದ್ರ ನೇತೃತ್ವದಲ್ಲಿ ನಿನ್ನೆ ಆರೋಪಿಗಳಾದ ನರೇಶ್ ಹಾಗೂ ಶ್ರವಣ್ ವಿಚಾರಣೆ ನಡೆದಿದೆ. ಅದರ ಬೆನ್ನಲ್ಲೇ ಆರೋಪಿಗಳಿಗೆ ಮತ್ತೆ ವಿಚಾರಣೆಗೆ ಹಾಜರಾಗಲು ಎಸ್ಐಟಿ ನೋಟಿಸ್ ನೀಡಿದೆ. ವಿಶೇಷ ಎಂದರೆ ನಿನ್ನೆ ಒಟ್ಟಿಗೆ ವಿಚಾರಣೆಗೆ ಹಾಜರಾಗಿದ್ದ ಇಬ್ಬರು ಆರೋಪಿಗಳಿಗೆ ನೋಟಿಸ್ ನೀಡಿರುವ ಪೊಲೀಸರು, ಪ್ರತ್ಯೇಕ ದಿನಗಳಲ್ಲಿ ವಿಚಾರಣೆಗೆ ಕರೆದಿದ್ದಾರೆ. ಜೂನ್ 14ರ ಸೋಮವಾರ 11 ಗಂಟೆಗೆ ಆರೋಪಿ ನರೇಶ್ಗೆ ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದಾರೆ. ಇನ್ನು …
Read More »ಅಪಾರ್ಟ್ ಮೆಂಟ್ ಒಂದರಲ್ಲಿ ಇಬ್ಬರು ಮಕ್ಕಳು ಸೇರಿದಂತೆ 7 ಜನರಲ್ಲಿ ಕೊರೊನಾ,ಸೀಲ್ ಡೌನ್ ಮಾಡಿದ ಅಧಿಕಾರಿಗಳು
ಬೆಳಗಾವಿ: ಇಲ್ಲಿಯ ಟಿಳಕವಾಡಿಯಲ್ಲಿರುವ ಅಪಾರ್ಟ್ ಮೆಂಟ್ ಒಂದರಲ್ಲಿ ಇಬ್ಬರು ಮಕ್ಕಳು ಸೇರಿದಂತೆ 7 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, ಮುಂಜಾಗೃತಾ ಕ್ರಮವಾಗಿ ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ. ಟಿಳಕವಾಡಿಯ ರಾಯ್ ರೋಡ್ ನ ಶ್ರೀಗಂಧ ಅಪಾರ್ಟ್ ಮೆಂಟ್ ನಲ್ಲಿ 7 ಜನರು ಕೋವಿಡ್ ನಿಂದ ಬಳಲುತ್ತಿದ್ದಾರೆ. ಒಂದೇ ಮನೆಯಲ್ಲಿ ನಾಲ್ವರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದರೆ, ಅಪಾರ್ಟ್ ಮೆಂಟ್ ನ ಮತ್ತೊಂದು ಮನೆಯ ಮೂವರಲ್ಲಿ ಸೋಂಕು ದೃಢಪಟ್ಟಿದೆ. ಇಡೀ ಅಪಾರ್ಟ್ ಮೆಂಟ್ …
Read More »ಜೂಜಾಟ: 18 ಆರೋಪಿಗಳ ಬಂಧನ
ಬೆಳಗಾವಿ: ಇಲ್ಲಿನ ಖಂಜರ್ ಗಲ್ಲಿಯಲ್ಲಿ ಶನಿವಾರ ಮಧ್ಯರಾತ್ರಿ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ 18 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅದೇ ಗಲ್ಲಿಯ ಜುಬೇರ ಸುಬೇದಾರ, ಆರೀಫ ಖೊತ್ವಾಲ್, ಅಯಾಜ್ ಖತೀಬ, ಅಬ್ದುಲ್ ಸಲಾಮ್ ಬಾಳೇಕುಂದ್ರಿ, ಸೊಹೆಲ್ ಮುಲ್ಲಾ, ಷರೀಪ ಮುಲ್ಲಾ, ಅಬುತಾಲಿಪ್ ಶೇಕ್, ಆಸೀಫ್ ಸೈಯದ್, ಆಯೂಬಖಾನ ಪಠಾಣ, ವಾಸಿಂ ಸೌದಾಗರ, ಇಮ್ರಾನ ಪಟೇಲ, ವಾಸಿಂ ಅಲವಾಡಕರ, ಮುಸ್ತಾಕ ತಹಶೀಲ್ದಾರ, ಇಕ್ಬಾಲ ನರೇಗಲ್, ಫಿರೋಜ ಪಠಾಣ, ರಫೀಕ ತಹಶೀಲ್ದಾರ, ಸಲೀಂ …
Read More »ಶಿಕ್ಷಣ ಸಚಿವರ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿಗಳು; ಎಸ್.ಎಸ್.ಎಲ್.ಸಿ. ಪರೀಕ್ಷೆ ರದ್ದುಗೊಳಿಸಿ; ಸರ್ಕಾರಕ್ಕೆ ಪೋಷಕರ ಡೆಡ್ ಲೈನ್
ಬೆಂಗಳೂರು: ಪರೀಕ್ಷೆ ಬಗ್ಗೆ ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ ಖಾತೆ ಬದಲಾವಣೆ ಮಾಡಬೇಕು. ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ಪೋಷಕರು ಹಾಗೂ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಕೊರೊನಾ ಸಂಕಷ್ಟದ ಸಂದರ್ಭದಿಂದಾಗಿ ಸರಿಯಾಗಿ ತರಗತಿಗಳೇ ನಡೆದಿಲ್ಲ. ಪಾಠವನ್ನೂ ಮಾಡಲಾಗಿಲ್ಲ. ಹೀಗಿರುವಾಗ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಎದುರಿಸುವುದಾದರೂ ಹೇಗೆ? ಎಲ್ಲಿಯೂ ನಡೆಯದ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಸಚಿವರು ತಮ್ಮ ಸ್ವಪ್ರತಿಷ್ಠೆಗಾಗಿ ನಮ್ಮಲ್ಲಿ ನಡೆಸುತ್ತಿರುವುದಾದರೂ ಯಾಕೆ ಎಂದು ಪೋಷಕರು …
Read More »ಬೆಳಗಾವಿ ಪೊಲೀಸರು ನಡೆಸಿ, 18 ಜನರನ್ನು ಬಂಧಿಸಿದ್ದಾರೆ.
ಬೆಳಗಾವಿ : ಇಲ್ಲಿನ ಖಂಜರ ಗಲ್ಲಿಯಲ್ಲಿ ನಿನ್ನೆ ರಾತ್ರಿ ಜೂಜು ಅಡ್ಡೆ ಮೇಲೆ ದಾಳಿ ಬೆಳಗಾವಿ ಪೊಲೀಸರು ನಡೆಸಿ, 18 ಜನರನ್ನು ಬಂಧಿಸಿದ್ದಾರೆ. ಜುಬೆರ ಶಕಿಲ ಸುಬೆದಾರ, ಆರೀಪ ಜಿಲಾನಿ ಖೊತ್ವಾಲ್ , ಅಯಾಜ್ ಬಾಬು ಖತಿಬ್ , ಅಬ್ದುಲ್ ಸಲಾಮ್ ಮೈಬುಸಾಬ ಬಾಳೆಕುಂದ್ರೀ, ಸೊಹೆಲ್ ಅಕ್ತರ ಮುಲ್ಲಾ, ಷರಿಪ್ ದಸ್ಥಗಿರಸಾಬ ಮುಲ್ಲಾ, ಅಬುತಾಲಿಪ್ ಗೌಸ್ ಶೆಕ್, ಆಸಿಪ್ ಯುಸುಪಖಾನ್ ಸಯ್ಯದ, ಆಯೂಬಖಾನ್ ಕರಿಂಖಾನ ಪಠಾಣ , ವಾಸಿಂ ಆಯೂಬ್ ಸೌದಾಗರ್ …
Read More »ಅಥಣಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ : ಗ್ರಾಪಂ. ಸದಸ್ಯ ಸಾವು
ಅಥಣಿ : ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಶುಕ್ರವಾರ ತಡ ರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ಹತ್ತಿದ ಪರಿಣಾಮ ಗ್ರಾಪಂ. ಸದಸ್ಯ ಸಾವನ್ನಪ್ಪಿದ ಘಟನೆ ನಡೆದಿದೆ. ಶಿರಗುಪ್ಪಿ ಗ್ರಾಮದ ಸೋಮೇಶ್ ಶಿವಾನಂದ ಪಾಟೀಲ ( 32 ) ಮೃತ ಗ್ರಾಪಂ ಸದಸ್ಯ . ಹಳೆ ಮನೆಯ ದುರಸ್ತಿ ಕಾರ್ಯ ನಡೆದಿದ್ದರಿಂದ ಮನೆಯವರೆಲ್ಲ ಬೇರೆ ಮನೆಯಲ್ಲಿ ಇದ್ದರು . ಇವರು ಮಾತ್ರ ಮನೆಯ ಚಾವಣಿಯ ಮೇಲೆ ಮಲಗಿದ್ದರು . ಏಕಾಏಕಿ …
Read More »ಜೂನ್ 14ರಿಂದಲೇ ಇತರ ಜಿಲ್ಲೆಗಳಂತೆ ಬೆಳಗಾವಿಯಲ್ಲೂ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿ ಎಂದು ಮನವಿ
ಬೆಳಗಾವಿ – ಬೆಳಗಾವಿ ಸೇರಿದಂತೆ ರಾಜ್ಯದ 11 ಜಿಲ್ಲೆಗಳಲ್ಲಿ ಇನ್ನೊಂದು ವಾರ ಲಾಕ್ ಡೌನ್ ವಿಸ್ತರಿಸಲು ನಿರ್ಧರಿಸಲಾಗಿದೆ. ಆದರೆ ಬೆಳಗಾವಿಯ ವಾಣಿಜ್ಯೋದ್ಯಮ ಸಂಘದ ಪದಾಧಿಕಾರಿಗಳು ಸೋಮವಾರ (ಜೂ.14) ದಿಂದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಜೂನ್ 21ರ ವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರಿಸಲು ನಿರ್ಧರಿಸಲಾಗಿದೆ. ಅಲ್ಲದೆ ಯಾವ …
Read More »ನೀಷೆಧಾಜ್ಞೆಯನ್ನು ಜೂನ್ ೨೧ ರ ಬೆಳಿಗ್ಗೆ ೬ ಗಂಟೆಯವರೆಗೆ ವಿಸ್ತರಿಸಲಾಗಿದೆ: ಎಂ.ಜಿ.ಹಿರೇಮಠ
ಬೆಳಗಾವಿ : ಕೋವಿಡ್-೧೯ ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗೃತಾ ಕ್ರಮವಾಗಿ ಜೂನ್ ೨೧ರ ಬೆಳಿಗ್ಗೆ ೬ ಗಂಟೆಯವರೆಗೆ ನಿಷೇಧಾಜ್ಞೆಯನ್ನು ಮುಂದುವರೆಸಿ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಕೋರೊನಾ ವೈರಸ್ ಸೋಂಕು ಹರಡದಂತೆ ಸಾರ್ವಜನಿಕರ ಆರೋಗ್ಯ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಜೂನ್ ೭ ರ ಬೆಳಿಗ್ಗೆ ೬ ಗಂಟೆಯಿಂದ ಜೂನ್ ೧೪ ರ ಬೆಳಿಗ್ಗೆ ೬ ಗಂಟೆಯವರೆಗೆ ನಿಷೇಧಾಜ್ಞೆಯನ್ನು ಹೊರಡಿಸಲಾಗಿತ್ತು. ಆದರೆ, ಕೊವಿಡ್ ಪ್ರಕರಣಗಳಲ್ಲಿ ಪ್ರತಿದಿನ …
Read More »ಆರೋಪಿಗಳಾದ ನರೇಶ್, ಶ್ರವಣ್ ವಿಚಾರಣೆಯಿಂದ ಮಹತ್ವದ ಸತ್ಯ ಬಯಲು!
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕೋಲಾಹಲವೆಬ್ಬಿಸಿ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುವಂತೆ ಮಾಡಿದ ಸಿಟಿ ಪ್ರಕರಣ ಸಂಬಂಧ ಇಂದು ಮಹತ್ವದ ವಿಚಾರಣೆ ನಡೆಯಿತು. ತಿಂಗಳಾನುಗಟ್ಟಲೇ ತಲೆಮರೆಸಿಕೊಂಡು, ಕೋರ್ಟ್ನಿಂದ ಜಾಮೀನು ಪಡೆದಿರುವ ಆರೋಪಿಗಳಾದ ನರೇಶ್ಗೌಡ ಹಾಗೂ ಶ್ರವಣ್ ಇಂದು ವಿಚಾರಣೆಗೆ ಹಾಜರಾಗಿದ್ದರು. ಆಡುಗೋಡಿ ಟೆಕ್ನಿಕಲ್ ಸೆಲ್ನಲ್ಲಿ ಇಬ್ಬರು ಆರೋಪಿಗಳನ್ನು ಪ್ರತ್ಯೇಕವಾಗಿ ಎಸಿಪಿ ಧರ್ಮೇಂದ್ರ ವಿಚಾರಣೆ ನಡೆಸಿದರು. ನ್ಯಾಯಾಲಯದ ಆದೇಶದ ಪ್ರತಿ ಹಾಗೂ ಷರತ್ತುಗಳನ್ನು ಪೂರೈಕೆ ಮಾಡಿರುವ ಬಗ್ಗೆ ಪರಿಶೀಲನೆ ಬಳಿಕ …
Read More »
Laxmi News 24×7