Breaking News

ಹಾವೇರಿ

ಆಶಾ ಕಾರ್ಯಕರ್ತೆಯಿಂದ ಸ್ಟಾಫ್ ನರ್ಸ್ ಗೂ ತಗುಲಿದ ಕೊರೊನಾ

ಹಾವೇರಿ: ಜಿಲ್ಲೆಯಲ್ಲಿ ಇವತ್ತು 10 ಮಂದಿಗೆ ಕೊರೊನಾ ತಗುಲಿದ್ದು, ಸೋಂಕಿತರ ಸಂಖ್ಯೆ 54ಕ್ಕೇರಿಕೆಯಾಗಿದೆ. ಸವಣೂರು ಪಟ್ಟಣದಲ್ಲಿ ಸ್ಟಾಫ್ ನರ್ಸ್ ಸೇರಿದಂತೆ ಏಳು ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಸವಣೂರು ಪಟ್ಟಣದ 23 ವರ್ಷದ ಗರ್ಭಿಣಿಗೆ ರೋಗಿ 8699 ಪ್ರಾಥಮಿಕ ಸಂಪರ್ಕದಿಂದ ಏಳು ಜನರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಇನ್ನು ಸವಣೂರು ತಾಲೂಕಿನ ಕಾರಡಗಿ ಗ್ರಾಮದ 38 ವರ್ಷದ ಆಶಾ ಕಾರ್ಯಕರ್ತೆ (ರೋಗಿ-8700)ಯ ಸಂಪರ್ಕದಿಂದ ಸ್ಟಾಫ್ ನರ್ಸ್ ಗೆ ಕೊರೊನಾ ವಕ್ಕರಿಸಿದೆ. …

Read More »

ಕೊರೊನಾ ವಾರಿಯರ್ಸ್‍ಗಳಿಗೂ ಸೋಂಕುತಪಾಸಣೆ ಮಾಡೋ ಸಿಬ್ಬಂದಿಯಂತೂ ಕಾಳಜಿಯನ್ನೆ ವಹಿಸ್ತಿಲ್ಲ…..

ಹಾವೇರಿ: ಕೊರೊನಾ ವಾರಿಯರ್ಸ್‍ಗಳಿಗೂ ಸೋಂಕು ತಗುಲಿದೆ. ಆದರೆ ಆರೋಗ್ಯ ಇಲಾಖೆ ಸಿಬ್ಬಂದಿ ನಿಷ್ಕಾಳಜಿ ತೋರುತ್ತಿದೆ. ಅದರಲ್ಲೂ ಈ ಜಿಲ್ಲೆಯಲ್ಲಿನ ಕ್ವಾರಂಟೈನ್ ಕೇಂದ್ರಗಳಲ್ಲಿನ ಜನರ ತಪಾಸಣೆ ಮಾಡೋ ಸಿಬ್ಬಂದಿಯಂತೂ ಕಾಳಜಿಯನ್ನೆ ವಹಿಸ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ರಾಜ್ಯದಲ್ಲಿ ಕೊರೊನಾ ವಾರಿಯರ್ಸ್ ಆಗಿರೋ ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೋಂಕು ತಗುಲಿದೆ. ಅದರಲ್ಲೂ ಹಾವೇರಿ ಜಿಲ್ಲೆಯಲ್ಲಿ ದೃಢಪಟ್ಟಿರೋ ಬಹುತೇಕ ಪ್ರಕರಣಗಳು ಸಾಂಸ್ಥಿಕ ಕ್ವಾರಂಟೈನ್ ಆಗಿದ್ದವರು. ಹೀಗಿದ್ದರೂ ಕ್ವಾರಂಟೈನ್ ಕೇಂದ್ರಗಳಲ್ಲಿನ ಜನರ ತಪಾಸಣೆ …

Read More »

ಕೊರೊನಾಕ್ಕಿಂತ ದೊಡ್ಡ ಗ್ರಹಣ ಹಿಡಿಯೋದಿಲ್ಲ: ಸಚಿವ ಬಿ.ಸಿ.ಪಾಟೀಲ್…………

ಹಾವೇರಿ: ಕೊರೊನಾಕ್ಕಿಂತ ದೊಡ್ಡ ಗ್ರಹಣ ಹಿಡಿಯೋದಿಲ್ಲ. ಗ್ರಹಣ ಎಂದು ಯಾರೂ ಉಸಿರಾಡೋದು ನಿಲ್ಲಿಸಿಲ್ಲ. ಗ್ರಹಣ ಎಂಬುದು ಪ್ರಕೃತಿಯಲ್ಲಿ ನಡೆಯೋ ಚಟುವಟಿಕೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ. ಜಿಲ್ಲೆಯ ಹಿರೇಕೆರೂರು ಪಟ್ಟಣದ ನಿವಾಸದಲ್ಲಿ ಮಾತನಾಡಿದ ಅವರು, ಗ್ರಹಣಕ್ಕೆ ಅಷ್ಟೊಂದು ಮಹತ್ವ ಕೊಟ್ಟು ಮೂಢನಂಬಿಕೆ ಬಿತ್ತೋದು ಸರಿಯಲ್ಲ. ಗ್ರಹಣ ಹಿಡಿದಿದೆ ಅಂತಾ ಎಲ್ಲರೂ ಒಂದು ಕ್ಷಣ ಉಸಿರು ನಿಲ್ಲಿಸಲಿ ನೋಡೋಣ. ಗ್ರಹಣಕ್ಕೆ ಅಷ್ಟು ಮಹತ್ವ ಕೊಡೋ ಅಗತ್ಯವಿಲ್ಲ. ನಮ್ಮ ಕೆಲಸವನ್ನ ನಾವು …

Read More »

ಎಸ್‍ಎಸ್‍ಎಲ್‍ಸಿಪರೀಕ್ಷೆಗೆ ಹಾಜರಾಗಬೇಕಿದ್ದ ವಿದ್ಯಾರ್ಥಿನಿಗೆ ಕೋವಿಡ್-19 ತಗುಲಿರುವುದು ದೃಢ

ಹಾವೇರಿ: ರಾಜ್ಯಾದ್ಯಂತ ಜೂನ್ 25ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಆರಂಭವಾಗಲಿವೆ. ಆದರೆ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾಗಬೇಕಿದ್ದ ವಿದ್ಯಾರ್ಥಿನಿಗೆ ಕೋವಿಡ್-19 ತಗುಲಿರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಶನಿವಾರ ಹನ್ನೆರಡು ಜನರಿಗೆ ಹೆಮ್ಮಾರಿ ಕೊರೊನಾ ಪತ್ತೆಯಾಗಿದೆ. ಇತ್ತ ಶಿಗ್ಗಾಂವಿ ಪಟ್ಟಣದ ದೇಸಾಯಿ ಗಲ್ಲಿ ಮತ್ತು ಗೌಡರ ಓಣಿಯ ಒಟ್ಟು 12 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿ ಕೂಡ ಇದ್ದು, ಎಲ್ಲರನ್ನೂ ಜಿಲ್ಲೆಯ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. 62 ವರ್ಷದ …

Read More »

ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕನ್ನು ಹೋಗಲಾಡಿಸಲು ತಮ್ಮ ಜೀವವನ್ನು ಲೆಕ್ಕಿಸದೇ ಸೋಂಕಿತರನ್ನು ಪತ್ತೆಗಾಗಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದರು

ಸವಣೂರ: ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕನ್ನು ಹೋಗಲಾಡಿಸಲು ತಮ್ಮ ಜೀವವನ್ನು ಲೆಕ್ಕಿಸದೇ ಸೋಂಕಿತರನ್ನು ಪತ್ತೆಗಾಗಿ ಶ್ರಮಿಸುತ್ತಾ, ಸಾರ್ವಜನಿಕರಿಂದ ನಿಂದನೆಗೊಳಗಾದರೂ ಸಹ, ನಿರ್ಲಕ್ಷಿಸಿ ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಮುಂದಾದ ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯವಾಗಿದೆ ಎಂದು ಬಿಜೆಪಿ ತಾಲೂಕಾಧ್ಯಕ್ಷ ಗಂಗಾಧರ ಬಾಣದ ಹೇಳಿದರು. ಕಂದಾಯ ಇಲಾಖೆಯ ಆವರಣದಲ್ಲಿ ಆಶಾ ಕಾರ್ಯಕರ್ತರಿಗೆ ಹಾಗೂ ಪುರಸಭೆ ನೀರು ನಿರ್ವಹಣಾ ಸಿಬ್ಬಂದಿಗಳಿಗೆ ಕ್ಷಮತಾ ಸೇವಾ ಸಂಘದ ವತಿಯಿಂದ ನೀಡಲ್ಪಟ್ಟ ಆಹಾರ ಧಾನ್ಯಗಳ ಕಿಟ್ ವಿತರಿಸಿ ಮಾತನಾಡಿದರು. …

Read More »

ಸುಮಾರು 15-20 ಶಾಸಕರು ನಮ್ಮ ಪಕ್ಷಕ್ಕೆ ಬರಲು ಸಿದ್ಧರಿದ್ದಾರೆ: ಲಕ್ಷ್ಮಣ ಸವದಿ ಹೊಸ ಬಾಂಬ್

ಹಾವೇರಿ: ಬಿಜೆಪಿ ಸಂಪರ್ಕದಲ್ಲಿ ಸುಮಾರು 15-20 ಶಾಸಕರು ಇದಾರೆ. ಅವರೆಲ್ಲರೂ ನಮ್ಮ ಪಕ್ಷಕ್ಕೆ ಬರಲು ಸಿದ್ಧರಿದ್ದಾರೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೊಸ ಬಾಂಬ್ ಸಿಡಿಸಿದ್ದಾರೆ. ಇಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾಧ್ಯಮದೊಂದಿಗೆ ಅವರು ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ಸರಕಾರದ ಆಡಳಿತ ನೋಡುತ್ತಿರುವ ಸುಮಾರು 15-20 ಜನ ಕಾಂಗ್ರೆಸ್ – ಜೆಡಿಎಸ್  ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ  ಎನ್ನುವ ಮೂಲಕ ಜಲಸಂಪನ್ಮೂಲ ಸಚಿವ …

Read More »

ಲಾಕ್‍ಡೌನ್ ಸಡಿಲಿಕೆಯಾದ ಹಿನ್ನೆಲೆ ಹಾವೇರಿಯಿಂದ ಅಂತರ್ ಜಿಲ್ಲಾ ಬಸ್ ಸಂಚಾರ ಆರಂಭ

ಹಾವೇರಿ: ಲಾಕ್‍ಡೌನ್ ಸಡಿಲಿಕೆಯಾದ ಹಿನ್ನೆಲೆ ಹಾವೇರಿಯಿಂದ ಅಂತರ್ ಜಿಲ್ಲಾ ಬಸ್ ಸಂಚಾರ ಆರಂಭವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಪ್ರಯಾಣಿಕರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಬೆಳಗ್ಗೆ ಏಳೂವರೆಗೆ ಬಸ್ ಸಂಚಾರ ಆರಂಭವಾಗಿದೆ. ಆದರೆ ನಸುಕಿನಿಂದಲೇ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಕಾದು ಕುಳಿತಿದ್ದು, ಬೇರೆ ಜಿಲ್ಲೆಗಳ ಊರುಗಳಿಗೆ ತೆರಳಲು ನೂರಾರು ಜನ ಬಸ್ ನಿಲ್ದಾಣದಲ್ಲಿ ಜಮಾಯಿಸಿ, ಬಸ್ಸಿಗಾಗಿ ಕಾಯುತ್ತಿದ್ದರು. ಈ ವೇಳೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡಿಲ್ಲ. ಅಲ್ಲದೆ ಬಸ್ ಬರುತ್ತಿದ್ದಂತೆ ಪ್ರಯಾಣಿಕರು ಸಾಮಾಜಿಕ ಅಂತರ ಮರೆತು …

Read More »

ಅಣ್ಣನ ಜೊತೆ ಮೀನು ಹಿಡಿಯಲು ತೆರೆಳಿದ್ದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

ಹಾವೇರಿ: ಹತ್ತು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅಮಾನವೀಯ ಘಟನೆ ಜಿಲ್ಲೆಯ ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಬಂಧನಕ್ಕೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಒತ್ತಾಯಿಸುತ್ತಿದ್ದು, ಹಾನಗಲ್ ಪೊಲೀಸ್ ಠಾಣೆಯ ಬಳಿ ಗ್ರಾಮಸ್ಥರು ಪೊಲೀಸರನ್ನು ಆಗ್ರಹಿಸಿದ್ದಾರೆ. ಮೇ 6ರಂದು ಅಣ್ಣನ ಜೊತೆ ಮೀನು ಹಿಡಿಯಲು ತೆರೆಳಿದ್ದ ವೇಳೆ ಕಾಮುಕ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಘಟನೆ ನಂತರ ಆರೋಪಿ ತಲೆ ಮರೆಸಿಕೊಂಡಿದ್ದು, ಬಾಲಕಿಯ …

Read More »

ಕೊರೊನಾ ವಾರಿಯರ್ಸ್‍ಗೆ ಪಾದ ಪೂಜೆ ಮಾಡಿ ದಾದಿಯರ ದಿನಾಚರಣೆ ಆಚರಣೆ

ಹಾವೇರಿ: ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ವಾರಿಯರ್ಸ್ ಕಾಲು ತೊಳೆದು, ಕುಂಕುಮ ಹಚ್ಚಿ, ಪೂಜೆ ಮಾಡಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿಆಲೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ನಾಲ್ವರು ದಾದಿಯರಿಗೆ ಗ್ರಾಮದ ವಿಶ್ವನಾಥ ಹಿರೇಮಠ ಮತ್ತು ಕೃಷ್ಣ ಈಳಿಗೇರ ಸ್ನೇಹ ಬಳಗದ ವತಿಯಿಂದ ಪಾದ ಪೂಜೆ ನೆರವೇರಿಸಲಾಗಿದೆ. ಈ ಮೂಲಕ ಸ್ನೇಹ ಬಳಗದ ಸದಸ್ಯರು ಕೊರೊನಾ ವಾರಿಯರ್ಸ್ ಕಾರ್ಯಕ್ಕೆ ಧನ್ಯವಾದ ಅರ್ಪಿಸಿದ್ದಾರೆ. …

Read More »

ಸವಣೂರು ಪಟ್ಟಣದ ಎಸ್.ಎಂ.ಕೃಷ್ಣ ನಗರ ಸೀಲ್‍ಡೌನ್

ಹಾವೇರಿ: ಜಿಲ್ಲೆಯ ಸವಣೂರು ಪಟ್ಟಣದ ಎಸ್.ಎಂ.ಕೃಷ್ಣ ನಗರವನ್ನು ಸೀಲ್‍ಡೌನ್ ಮಾಡಲಾಗಿದೆ. ಮುಂಬೈನಿಂದ ಬಂದಿದ್ದ ಇಬ್ಬರಿಗೆ ಕೊರೊನಾ ತಗುಲಿರೋದು ದೃಢಪಡುತ್ತಿದ್ದಂತೆ ಸೋಂಕಿತರು ವಾಸವಾಗಿದ್ದ ಎಸ್.ಎಂ.ಕೃಷ್ಣ ನಗರವನ್ನು ಜಿಲ್ಲಾಡಳಿತ ಸೀಲ್‍ಡೌನ್ ಮಾಡಿದೆ. ಸೀಲ್‍ಡೌನ್ ಮಾಡಿರೋ ಪ್ರದೇಶದಲ್ಲಿ ಯಾರೂ ಒಳಗೆ ಮತ್ತು ಹೊರಗೆ ಹೋಗದಂತೆ ಜಿಲ್ಲಾಡಳಿತ ಪ್ರವೇಶ ನಿರ್ಬಂಧಿಸಿದೆ. ಪ್ರದೇಶದ ಜನರಿಗಾಗಿ ಜಿಲ್ಲಾಡಳಿತ ಕಂಟ್ರೋಲ್ ರೂಂ ಸ್ಥಾಪಿಸಿದ್ದು, ಅಗತ್ಯ ವಸ್ತುಗಳನ್ನ ಪೂರೈಸೋದಾಗಿ ಹೇಳಿದೆ. ಎಸ್.ಎಂ.ಕೃಷ್ಣ ನಗರದ ಸುತ್ತಲಿನ 5 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಬಫರ್ …

Read More »