Breaking News

ಮೈಸೂರ್

ನಿವೃತ್ತ ಪ್ರಾಂಶುಪಾಲರ ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ ಖ್ಯಾತ ಗಾಯಕಿ ಅನನ್ಯ ಭಟ್​ ತಂದೆ

ಮೈಸೂರು: ನಿವೃತ್ತ ಪ್ರಾಂಶುಪಾಲರ ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ ಖ್ಯಾತ ಗಾಯಕಿ ಅನನ್ಯ ಭಟ್​ ತಂದೆ ವಿಶ್ವನಾಥ್​​ ಭಟ್​​ ಅವರನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸರು ಮೂವರು ಶಿಕ್ಷಕರು ಸೇರಿ ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಸಪ್ಟೆಂಬರ್​ 20ರಂದು ಮೈಸೂರಿನ ಶರದಾದೇವಿ ನಗರದಲ್ಲಿ ನಿವೃತ್ತ ಪ್ರಾಂಶುಪಾಲರಾದ ಪರಶಿವಮೂರ್ತಿ ಅವರ ಹತ್ಯೆ ಮಾಡಲಾಗಿತ್ತು. ಸದ್ಯ ಆರೋಪಿ ವಿಶ್ವನಾಥ್ ಭಟ್ ಪರಶಿವಮೂರ್ತಿ ಕೊಲೆಗೆ ₹7 ಲಕ್ಷ ಸುಪಾರಿ …

Read More »

ಸಿಎಂ ಯಡಿಯೂರಪ್ಪನವರೇ ವಿಲನ್’ ಎಂದು ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ST ಸೋಮಶೇಖರ್ ಹೇಳಿಬಿಟ್ಟರು. ನೆರೆದಿದ್ದ ಎಲ್ಲರೂ ನಗೆಗಡಲಲ್ಲಿ ತೇಲುತ್ತಿದ್ದಂತೆ ಕೂಡಲೇ ಸಾರ್ ಅದು ವಿಲನ್ ಅಲ್ಲ..

ಮೈಸೂರು: ಇವರು ಯಾರೂ ವಿಲನ್​ ಅಲ್ಲ.. ಯಡಿಯೂರಪ್ಪನವರೇ ವಿಲನ್ ಎಂದು ಮಾತಿನ ಭರದಲ್ಲಿ ‘ಸಿಎಂ ಯಡಿಯೂರಪ್ಪನವರೇ ವಿಲನ್’ ಎಂದು ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ST ಸೋಮಶೇಖರ್ ಹೇಳಿಬಿಟ್ಟರು. ನೆರೆದಿದ್ದ ಎಲ್ಲರೂ ನಗೆಗಡಲಲ್ಲಿ ತೇಲುತ್ತಿದ್ದಂತೆ ಕೂಡಲೇ ಸಾರ್ ಅದು ವಿಲನ್ ಅಲ್ಲ.. ಹೀರೋ ಎಂದು ಮಾಜಿ ಸಚಿವ S.A. ರಾಮದಾಸ್ ಅವರನ್ನು ತಿದ್ದಲು ಮುಂದಾದರು. ತಕ್ಷಣ ಎಚ್ಚೆತ್ತ ಸೋಮಶೇಖರ್​ ಅದು ವಿಲನ್ ಅಲ್ಲ ಹೀರೋ ಎಂದು ಸರಿಪಡಿಸಿಕೊಂಡರು! ನಗರದಲ್ಲಿ ನಡೆದ ದಸರಾ …

Read More »

ಗಜಪಡೆ. ಸದ್ಯ ಗಜಪಡೆಯನ್ನು ಸಿದ್ದಪಡಿಸಲಾಗುತ್ತಿದೆ. ಆನೆಗಳಿಗೆ ಅರಮನೆಯ ಆವರಣದ ತಾತ್ಕಾಲಿಕ ಸ್ನಾನದ ಹೊಂಡದಲ್ಲಿ ಸ್ನಾನ ಮಾಡಿಸಿ ಸಿಂಗರಿಸಲಾಗುತ್ತಿದೆ.

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ಜಂಬೂ ಸವಾರಿಯ ಪ್ರಮುಖ ಆಕರ್ಷಣೆ ಎಂದರೆ ಅದು ಗಜಪಡೆ. ಸದ್ಯ ಗಜಪಡೆಯನ್ನು ಸಿದ್ದಪಡಿಸಲಾಗುತ್ತಿದೆ. ಆನೆಗಳಿಗೆ ಅರಮನೆಯ ಆವರಣದ ತಾತ್ಕಾಲಿಕ ಸ್ನಾನದ ಹೊಂಡದಲ್ಲಿ ಸ್ನಾನ ಮಾಡಿಸಿ ಸಿಂಗರಿಸಲಾಗುತ್ತಿದೆ. ಕಲಾವಿದ ನಾಗಲಿಂಗಪ್ಪ ನೇತೃತ್ವದಲ್ಲಿ ಗಜಪಡೆಗೆ ಬಣ್ಣ ಹಚ್ಚುವ ಕೆಲಸ ಆರಂಭವಾಗಿದೆ. ಹುಣಸೂರು ಮೂಲದ ಒಟ್ಟು 5 ಕಲಾವಿದರು ದಸರಾ ಆನೆಗಳಿಗೆ ಪ್ರತೀ ಬಾರಿಯಂತೆ ವಿಶೇಷ ಬಣ್ಣಗಳಿಂದ ಅಲಂಕರಿಸುತ್ತಿದ್ದಾರೆ. …

Read More »

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ.

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸರಳವಾಗಿ ಜಂಬೂಸವಾರಿ ಮೆರವಣಿಗೆ ನಡೆಯುತ್ತಿದ್ದ ಹಿಂದಿನ ವೈಭವವನ್ನು ಕಳೆದುಕೊಂಡಿದೆ. ಆಗಿದ್ರೆ ಕೊರೊನಾ ದಸರಾ ಜಂಬೂಸವಾರಿ ಹೇಗಿರುತ್ತೇ ಅನ್ನೋ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. ಕೊರೊನಾ ನಡುವೆ ಜಂಬೂ ಸವಾರಿ ಮೆರವಣಿಗೆ! ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಕೇವಲ ಆಚರಣೆಗೆ ಮಾತ್ರ ಜಂಬೂಸವಾರಿ ಸೀಮಿತವಾಗಿದೆ. ಕೇವಲ ಅರಮನೆಯ …

Read More »

ಕಾಂಗ್ರೆಸ್ ನಿಂದ ಹೊರಬರಲು ಕಾರಣ ಡಿ.ಕೆ. ಶಿವಕುಮಾರ್ ಎಂದು ಸಚಿವ ಎಸ್.ಟಿ. ಸೋಮಶೇಖರ್ ವಾಗ್ದಾಳಿ

ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತಿಗೆ ಕಾಂಗ್ರೆಸ್ ನಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ. ಅವರ ಮಾತನ್ನು ಸಿದ್ದರಾಮಯ್ಯನವರೇ ಕೇಳಲ್ಲ. ನಾವೆಲ್ಲ ಕಾಂಗ್ರೆಸ್ ನಿಂದ ಹೊರಬರಲು ಕಾರಣ ಡಿ.ಕೆ. ಶಿವಕುಮಾರ್ ಎಂದು ಸಚಿವ ಎಸ್.ಟಿ. ಸೋಮಶೇಖರ್ ವಾಗ್ದಾಳಿ ನಡೆಸಿದ್ದಾರೆ. ಆರ್.ಆರ್. ನಗರ ಉಪಚುನಾವಣೆ ಹಿನ್ನೆಲೆಯಲ್ಲಿ ಮಾತನಾಡಿದ ಸೋಮಶೇಖರ್, ಮುನಿರತ್ನ, ನಾನು ಹಾಗೂ ಭೈರತಿ ಕಾಂಗ್ರೆಸ್ ಗೆ ನಿಷ್ಠಾವಂತ ಕಾರ್ಯಕರ್ತರಾಗಿದ್ದೆವು. ಆದರೆ ನಾವು ಪಕ್ಷ ತೊರೆಯಲು ಕಾರಣ ಯಾರೆಂಬುದು ಎಲ್ಲರಿಗೂ ಗೊತ್ತಿದೆ ಎಂದರು. ಆರ್.ಆರ್.ನಗರದಲ್ಲಿ …

Read More »

ವರನಟ ಡಾ ರಾಜ್ ಅಪಹರಣ ಸಮಯದಲ್ಲಿ ಸರಳ ಜಂಬೂ ಸವಾರಿ

ಮೈಸೂರು: ಜಗತ್ತಿನಾದ್ಯಂತ ಕೋವಿಡ್-19 ತನ್ನ ಕಬಂಧಬಾಹು ವಿಸ್ತರಿಸಿರುವ ಹಿನ್ನೆಲೆ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಸರಳವಾಗಿ ನಡೆಯುತ್ತಿದ್ದು, ದಸರೆಯ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಅರಮನೆ ಆವರಣಕ್ಕಷ್ಟೇ ಸೀಮಿತವಾಗಿದೆ. ಕೋವಿಡ್-19 ಸೋಂಕು ಸಂಕಷ್ಟ ಹಾಗೂ ನೆರೆ ಹಾವಳಿಯಿಂದ ತತ್ತರಿಸಿರುವ ರಾಜ್ಯ ಸರ್ಕಾರ ಈ ಬಾರಿಯ ದಸರಾ ಉತ್ಸವವನ್ನು ಸರಳವಾಗಿ ಆಚರಿಸಲು ತೀರ್ಮಾನಿಸಿದ್ದು, ಸಾಂಪ್ರದಾಯಿಕ ಆಚರಣೆ ಕೈಬಿಡದೆ, ವೈಭವಕ್ಕೆ ಕಡಿವಾಣ ಹಾಕುವ ಮೂಲಕ ಜನಸಂದಣಿ ಉಂಟಾಗದಂತೆ ಸರಳ ಹಾಗೂ ಸಂಕೇತಿಕವಾಗಿ ಆಚರಿಸಲಾಗುತ್ತಿದೆ. …

Read More »

ರಾಜ್ಯದೆಲ್ಲೆಡೆ ಇಂದು ಆಯುಧ ಪೂಜೆಯ ಸಂಭ್ರಮ. ಅದರಲ್ಲೂ ಅರಮನೆ ನಗರಿಯಲ್ಲಿ ಅಬ್ಬರ ಜೋರಾಗಿದೆ.

ಮೈಸೂರು: ರಾಜ್ಯದೆಲ್ಲೆಡೆ ಇಂದು ಆಯುಧ ಪೂಜೆಯ ಸಂಭ್ರಮ. ಅದರಲ್ಲೂ ಅರಮನೆ ನಗರಿಯಲ್ಲಿ ಅಬ್ಬರ ಜೋರಾಗಿದೆ. ಇಂದು ಆಯುಧ ಪೂಜೆ ನಡೆದ್ರೆ, ನಾಳೆ ಜಂಬೂ ಸವಾರಿ ನಡೆಯಲಿದೆ. ಬೆಳಗ್ಗೆಯಿಂದಲೇ ಅರಮನೆಯಲ್ಲಿ ಪೂಜಾ ಕೈಂಕರ್ಯಗಳು ಶುರುವಾಗಿವೆ. ಮೈಸೂರು ಅರಮನೆಯಲ್ಲಿ ಸರಳ ಆಯುಧ ಪೂಜೆ ಸಂಭ್ರಮ ಕಳೆಗಟ್ಟಿದೆ. ಬೆಳಗ್ಗೆ 6.15ಕ್ಕೆ ಅರಮನೆಯಲ್ಲಿ ಚಂಡಿ ಹೋಮದಿಂದ ಇಂದಿನ ಕಾರ್ಯಗಳು ಆರಂಭವಾಗಿದೆ. ಬೆಳಗ್ಗೆ 6.28ಕ್ಕೆ ಅರಮನೆ ಆವರಣದ ಕೋಡಿ ಸೋಮೇಶ್ವರ ದೇಗುಲಕ್ಕೆ ಆಯುಧಗಳನ್ನು ರವಾನಿಸಲಾಗುತ್ತೆ. ಸುಮಾರು ಒಂದು …

Read More »

ಡಿಕೆಶಿಯವರದ್ದು ಯಾವಾಗಲೂ ಗೂಂಡಾ ರಾಜಕಾರಣ- ಶೋಭಾ ಕರಂದ್ಲಾಜೆ

ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರದ್ದು ಯಾವಾಗಲೂ ಗೂಂಡಾ ರಾಜಕಾರಣ. ಆರ್.ಆರ್ ನಗರ ಚುನಾವಣೆಯಲ್ಲೂ ಗೂಂಡಾಗಿರಿ ಮೂಲಕ ಗೆಲ್ಲುವ ಪ್ರಯತ್ನ ನಡೆಸಿದ್ದಾರೆ ಎಂದು ಸಂಸದೆ ಶೋಭ ಕರಂದ್ಲಾಜೆ ವಾಗ್ದಾಳಿ ನಡೆಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್.ಆರ್ ನಗರದಲ್ಲಿ ಡಿಕೆಶಿ ಸಹೋದರ ಡಿಕೆ ಸುರೇಶ್ ಅವರೇ ಸಂಸದರು. ಎಲ್ಲ ಗೂಂಡಾಗಳನ್ನು ಬಳಸಿಕೊಂಡು ಕಾನೂನು ಸುವ್ಯವಸ್ಥೆ ಹದಗೆಡಿಸುವ ಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ. ಚುನಾವಣೆ …

Read More »

ರಸ್ತೆ ದಾಟುತ್ತಿದ್ದ ಜಿಂಕೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಜಿಂಕೆ ಸಾವನ್ನಪ್ಪಿರೋ ಘಟನೆ

ಮೈಸೂರು: ರಸ್ತೆ ದಾಟುತ್ತಿದ್ದ ಜಿಂಕೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಜಿಂಕೆ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ನಾಗಾಪುರ ಬಳಿ ನಡೆದಿದೆ. ಹುಣಸೂರು-ನಾಗರಹೊಳೆ ರಸ್ತೆಯಲ್ಲಿರುವ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಬಳಿ ಅವಘಡ ಸಂಭವಿಸಿದೆ. ಬೈಕ್​ ಡಿಕ್ಕಿ ಹೊಡೆದ ರಭಸಕ್ಕೆ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿದೆ. ಇನ್ನು ಬೈಕ್​ ಸವಾರ ಸಂತೋಷ್​ಗೆ ಗಾಯಗಳಾಗಿದ್ದು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Read More »

ಬಂಡೀಪುರದಲ್ಲಿ ಸಫಾರಿ ವೇಳೆ ಹುಲಿ ನೋಡಿದ್ದಾಗಿ ನಟ ಧನ್ವೀರ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.

ಮೈಸೂರು: ಬಂಡೀಪುರದಲ್ಲಿ ಸಫಾರಿ ವೇಳೆ ಹುಲಿ ನೋಡಿದ್ದಾಗಿ ನಟ ಧನ್ವೀರ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ಧನ್ವೀರ್​ ರಾತ್ರಿ ಸಫಾರಿ ಮಾಡಿರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ತಮ್ಮ ಸಫಾರಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಧನ್ವೀರ್ ಬಂಡೀಪುರದಲ್ಲಿ ರಾತ್ರಿ ಸಫಾರಿ ನಡೆಸಿರುವುದು ಕಾನೂನುಬಾಹಿರ ಎಂದು ಹಲವರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಸಿನಿಮಾ ಹೀರೋಗೆ ಬಂಡೀಪುರದಲ್ಲಿ ರಾತ್ರಿ ಸಫಾರಿ ನಡೆಸಲು ಅನುಮತಿ ನೀಡಲಾಗಿದೆ. …

Read More »