ಮೈಸೂರು: ರಾಜ್ಯದೆಲ್ಲೆಡೆ ಇಂದು ಆಯುಧ ಪೂಜೆಯ ಸಂಭ್ರಮ. ಅದರಲ್ಲೂ ಅರಮನೆ ನಗರಿಯಲ್ಲಿ ಅಬ್ಬರ ಜೋರಾಗಿದೆ. ಇಂದು ಆಯುಧ ಪೂಜೆ ನಡೆದ್ರೆ, ನಾಳೆ ಜಂಬೂ ಸವಾರಿ ನಡೆಯಲಿದೆ. ಬೆಳಗ್ಗೆಯಿಂದಲೇ ಅರಮನೆಯಲ್ಲಿ ಪೂಜಾ ಕೈಂಕರ್ಯಗಳು ಶುರುವಾಗಿವೆ. ಮೈಸೂರು ಅರಮನೆಯಲ್ಲಿ ಸರಳ ಆಯುಧ ಪೂಜೆ ಸಂಭ್ರಮ ಕಳೆಗಟ್ಟಿದೆ. ಬೆಳಗ್ಗೆ 6.15ಕ್ಕೆ ಅರಮನೆಯಲ್ಲಿ ಚಂಡಿ ಹೋಮದಿಂದ ಇಂದಿನ ಕಾರ್ಯಗಳು ಆರಂಭವಾಗಿದೆ. ಬೆಳಗ್ಗೆ 6.28ಕ್ಕೆ ಅರಮನೆ ಆವರಣದ ಕೋಡಿ ಸೋಮೇಶ್ವರ ದೇಗುಲಕ್ಕೆ ಆಯುಧಗಳನ್ನು ರವಾನಿಸಲಾಗುತ್ತೆ. ಸುಮಾರು ಒಂದು …
Read More »ಡಿಕೆಶಿಯವರದ್ದು ಯಾವಾಗಲೂ ಗೂಂಡಾ ರಾಜಕಾರಣ- ಶೋಭಾ ಕರಂದ್ಲಾಜೆ
ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರದ್ದು ಯಾವಾಗಲೂ ಗೂಂಡಾ ರಾಜಕಾರಣ. ಆರ್.ಆರ್ ನಗರ ಚುನಾವಣೆಯಲ್ಲೂ ಗೂಂಡಾಗಿರಿ ಮೂಲಕ ಗೆಲ್ಲುವ ಪ್ರಯತ್ನ ನಡೆಸಿದ್ದಾರೆ ಎಂದು ಸಂಸದೆ ಶೋಭ ಕರಂದ್ಲಾಜೆ ವಾಗ್ದಾಳಿ ನಡೆಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್.ಆರ್ ನಗರದಲ್ಲಿ ಡಿಕೆಶಿ ಸಹೋದರ ಡಿಕೆ ಸುರೇಶ್ ಅವರೇ ಸಂಸದರು. ಎಲ್ಲ ಗೂಂಡಾಗಳನ್ನು ಬಳಸಿಕೊಂಡು ಕಾನೂನು ಸುವ್ಯವಸ್ಥೆ ಹದಗೆಡಿಸುವ ಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ. ಚುನಾವಣೆ …
Read More »ರಸ್ತೆ ದಾಟುತ್ತಿದ್ದ ಜಿಂಕೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಜಿಂಕೆ ಸಾವನ್ನಪ್ಪಿರೋ ಘಟನೆ
ಮೈಸೂರು: ರಸ್ತೆ ದಾಟುತ್ತಿದ್ದ ಜಿಂಕೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಜಿಂಕೆ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ನಾಗಾಪುರ ಬಳಿ ನಡೆದಿದೆ. ಹುಣಸೂರು-ನಾಗರಹೊಳೆ ರಸ್ತೆಯಲ್ಲಿರುವ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಬಳಿ ಅವಘಡ ಸಂಭವಿಸಿದೆ. ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿದೆ. ಇನ್ನು ಬೈಕ್ ಸವಾರ ಸಂತೋಷ್ಗೆ ಗಾಯಗಳಾಗಿದ್ದು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಬಂಡೀಪುರದಲ್ಲಿ ಸಫಾರಿ ವೇಳೆ ಹುಲಿ ನೋಡಿದ್ದಾಗಿ ನಟ ಧನ್ವೀರ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.
ಮೈಸೂರು: ಬಂಡೀಪುರದಲ್ಲಿ ಸಫಾರಿ ವೇಳೆ ಹುಲಿ ನೋಡಿದ್ದಾಗಿ ನಟ ಧನ್ವೀರ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ಧನ್ವೀರ್ ರಾತ್ರಿ ಸಫಾರಿ ಮಾಡಿರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ತಮ್ಮ ಸಫಾರಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಧನ್ವೀರ್ ಬಂಡೀಪುರದಲ್ಲಿ ರಾತ್ರಿ ಸಫಾರಿ ನಡೆಸಿರುವುದು ಕಾನೂನುಬಾಹಿರ ಎಂದು ಹಲವರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಸಿನಿಮಾ ಹೀರೋಗೆ ಬಂಡೀಪುರದಲ್ಲಿ ರಾತ್ರಿ ಸಫಾರಿ ನಡೆಸಲು ಅನುಮತಿ ನೀಡಲಾಗಿದೆ. …
Read More »ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಗರಂ ಆಗಿರುವ ಮೇಯರ್ ತಸ್ನೀಂ ಬಾನು
ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಗರಂ ಆಗಿರುವ ಮೇಯರ್ ತಸ್ನೀಂ ಬಾನು, ರೋಹಿಣಿ ಅವರು ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದ್ದಾರೆಂದು ಆರೋಪಿಸಿ, ಶಿಷ್ಟಾಚಾರ ಪಾಲನೆಯ ಪಾಠ ಮಾಡಿದ್ದಾರೆ. ದಸರಾ ಉದ್ಘಾಟನೆಗೆ ಮುಖ್ಯಮಂತ್ರಿಯವರಿಗೆ ಸ್ವಾಗತ ನೀಡುವಾಗ ಮೈಸೂರಿನ ಪ್ರಥಮ ಪ್ರಜೆಗೂ ಅವಕಾಶ ನೀಡಬೇಕು. ಆದರೆ, ಮೇಯರ್ ಅವರನ್ನು ಒಳಗೆ ಬಿಡದಂತೆ ಜಿಲ್ಲಾಧಿಕಾರಿ, ಪೋಲೀಸರಿಗೆ ಹೇಳುತ್ತಾರೆ. ಉದ್ಘಾಟನೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಪಕ್ಕದಲ್ಲಿ ನಮ್ಮ ಆಸನ ಇಡಬೇಕು. ಆದರೆ, ಕೊನೆಯಲ್ಲಿ ನಮಗೆ ನೀಡುತ್ತೀರಿ …
Read More »ಅರಮನೆಯಲ್ಲಿ ಇಂದು 5ನೇ ದಿನದ ನವರಾತ್ರಿ ಉತ್ಸವ ನಡೆಯಲಿದೆ.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ಅರಮನೆಯಲ್ಲಿ ಇಂದು 5ನೇ ದಿನದ ನವರಾತ್ರಿ ಉತ್ಸವ ನಡೆಯಲಿದೆ. ಅರಮನೆಯ ಚಾಮುಂಡಿ ತೊಟ್ಟಿಯಲ್ಲಿ ರಾಜವಂಶಸ್ಥ ಯದುವೀರ್ ಒಡೆಯರ್‌ರಿಂದ ಸರಸ್ವತಿಗೆ ಪೂಜೆ ನಡೆಯಲಿದೆ. ಬೆಳ್ಳಿಗ್ಗೆ 9.45ರ ಸಮಯಕ್ಕೆ ಅರಮನೆ ಪುರೋಹಿತರಿಂದ ಪೂಜೆ ಪ್ರಾರಂಭವಾಗಲಿದೆ. ಅರಮನೆ ಸಂಪ್ರದಾಯದಂತೆ ರಾಜಮನೆತನದ ಪುರಾತನ ಗ್ರಂಥಗಳು, ಸಂಗೀತ ಉಪಕರಣಗಳಿಗೆ ಹಾಗೂ ಸರಳವಾಗಿ ಸರಸ್ವತಿ ಪೂಜೆ ಮಾಡಲಾಗುತ್ತೆ. ಸದ್ಯ ರಾಜವಂಶಸ್ಥರು ಹಾಗೂ ಪುರೋಹಿತರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಇರುತ್ತದೆ. *ಹೆಚ್ಚಿನ …
Read More »ಮೈಸೂರಿನ ದೇವರಾಜ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಮೈಸೂರು: ತಮಿಳುನಾಡಿನ ಚಿನ್ನಾಭರಣ ವ್ಯಾಪಾರಿಗೆ ವಂಚನೆ ಪ್ರಕರಣ ಸಂಬಂಧಿಸಿ ಇಬ್ಬರು ವಂಚಕರನ್ನು ಮೈಸೂರಿನ ದೇವರಾಜ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಸೋಮಶೇಖರ್(61) ಮತ್ತು ರಘು(67) ಬಂಧಿತ ಆರೋಪಿಗಳು. ಆರೋಪಿಗಳು ಚಿನ್ನಾಭರಣ ತಯಾರಕ ಕುರುಪಸ್ವಾಮಿಗೆ ವಂಚಿಸಿದ್ದರು. ಚಿನ್ನ ಖರೀದಿಸುವುದಾಗಿ ಹೇಳಿ ಕುರುಪಸ್ವಾಮಿಗೆ ಮೈಸೂರಿಗೆ ಕರೆಸಿಕೊಂಡು ಅಕ್ಟೋಬರ್ 6ರಂದು 10 ಲಕ್ಷ ಮೌಲ್ಯದ 196 ಗ್ರಾಂ ಚಿನ್ನ ಪಡೆದು ಪರಾರಿಯಾಗಿದ್ರು. ಸದ್ಯ ಕುರುಪಸ್ವಾಮಿಗೆ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ …
Read More »ಇಬ್ಬರು ಬಾಲಕರು ಸೇರಿ ಮೂವರು ದ್ವಿಚಕ್ರ ವಾಹನ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರು: ಇಬ್ಬರು ಬಾಲಕರು ಸೇರಿ ಮೂವರು ದ್ವಿಚಕ್ರ ವಾಹನ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 12 ಲಕ್ಷ ಮೌಲ್ಯದ 17 ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಸ್ಕೂಟರ್ ಮೆಕ್ಯಾನಿಕ್ ಮಹಮದ್ ಶುಹೇಬ್ (19) ಬಂಧಿತ ಆರೋಪಿ. ಹಾಗೂ ಕಳ್ಳತನಕ್ಕೆ ಸಾಥ್ ನೀಡಿದ್ದ 17 ವರ್ಷದ ಬಾಲಕ ಹಾಗೂ 15 ವರ್ಷದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಕಳುವು ಮಾಡಿದ ದ್ವಿಚಕ್ರ ವಾಹನಗಳಲ್ಲಿ ವೀಲಿಂಗ್ ಮಾಡುತ್ತಿದ್ದರು. ಅದರಲ್ಲೂ ಸಿಲ್ವರ್ ಕಲರ್ ದ್ವಿಚಕ್ರ …
Read More »ಅರಮನೆ ನಗರಿ ಮದುವಣಗಿತ್ತಿಯಂತೆ ವಿದ್ಯುತ್ ದೀಪಾಲಂಕಾರದಿಂದ ಮೀರ ಮೀರ ಮಿಂಚುತ್ತಿದೆ.
ಮೈಸೂರು: ಅರಮನೆ ನಗರಿ ಮದುವಣಗಿತ್ತಿಯಂತೆ ವಿದ್ಯುತ್ ದೀಪಾಲಂಕಾರದಿಂದ ಮೀರ ಮೀರ ಮಿಂಚುತ್ತಿದೆ. ಎಲ್ಲೆ ಹೋದ್ರೂ ಕಲರ್ ಫುಲ್ ಲೈಟಿಂಗ್ಸ್‌ಗಳು ಎಲ್ಲರನ್ನೂ ಸೆಳೆಯುತ್ತಿದೆ. ಆದ್ರೆ ಇದೇ ಕೊರೊನಾ ಹೆಚ್ಚಾಗಲು ಕಾರಣವಾಗುತ್ತಾ ಅನ್ನೋ ಭಯ ಕಾಡುಲು ಶುರು ಮಾಡಿದೆ. ಎಲ್ಲೇ ನೋಡಿದ್ರೂ ಕಾಣುವ ಝಗಮಗಿಸೋ ದೀಪಾಲಂಕಾರ. ಬೀದಿ ಬೀದಿಗಲ್ಲಿ ಫಳ ಫಳ ಹೊಳೆಯೋ ಕಲರ್ ಫುಲ್ ವಿದ್ಯುತ್ ದೀಪ.. ಮರದ ಮೇಲೆ, ಕಟ್ಟಡದ ಮೇಲೆ, ರಸ್ತೆಯ ಉದ್ದಕ್ಕೂ ಕಣ್ಣು ಕುಕ್ಕುವ ಲೈಟಿಂಗ್ಸ್. ಮಿಂಚುವ …
Read More »ಗ್ರಾಮೀಣ ಪ್ರದೇಶದ ಜನ ದಯವಿಟ್ಟು ದಸರಾಗೆ ಬರಬೇಡಿ’
ಮೈಸೂರು: ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2020ಕ್ಕೆ ತಯಾರಿ ಶುರುವಾಗಿದ್ದು, ಗ್ರಾಮೀಣ ಪ್ರದೇಶದ ಜನ ದಯವಿಟ್ಟು ದಸರಾಗೆ ಬರಬೇಡಿ ಎಂದು ಮೈಸೂರು ಜಿಲ್ಲಾ ಪಂಚಾಯಿತಿ ಸಿಇಒ ಡಿ. ಭಾರತಿ ಸದುದ್ದೇಶದ ಮನವಿ ಮಾಡಿಕೊಂಡಿದ್ದಾರೆ. ಕೊರೊನಾ ಹಬ್ಬಲು/ಹಬ್ಬಿಸಿಕೊಳ್ಳಲು ಅವಕಾಶ ಕೊಡಬೇಡಿ ಈ ಬಾರಿ ದಸರಾದಲ್ಲಿ ಜಂಬೂಸವಾರಿ ಮೆರವಣಿಗೆ ಇರಲ್ಲ. ಅರಮನೆಯಲ್ಲಿ ಮಾತ್ರ ಜಂಬೂಸವಾರಿ ಇರುತ್ತೆ. ಅರಮನೆ ಒಳಗೆ 300 ಜನರಿಗೆ ಮಾತ್ರ ಅವಕಾಶ ಇದೆ. ಸಾರ್ವಜನಿಕರಿಗೆ ನೇರವಾಗಿ ಜಂಬೂಸವಾರಿ ನೋಡುವ ಅವಕಾಶ …
Read More »
Laxmi News 24×7