ಚಿಕ್ಕೋಡಿ : ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ವ್ಯಕ್ತಿ ಹಾಗೂ ಆತನ ಇಬ್ಬರು ಮಕ್ಕಳು ನೀರಲ್ಲಿ ಮುಳುಗಿ ಸಾವಣಪ್ಪಿರುವ ಘಟನೆ ಭಾನುವಾರ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ನಡೆದಿದೆ. ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ಕಲ್ಲಪ್ಪ ಗಾಣಿಗೇರ (36) ಮಕ್ಕಳಾದ ಮನೋಜ ಕಲ್ಲಪ್ಪ ಗಾಣಿಗೇರ (11) ಹಾಗೂ ಮದನ ಕಲ್ಲಪ್ಪ ಗಾಣಿಗೇರ (9) ಮೃತ ದುರ್ದೈವಿಗಳು. ವೃತ್ತಿಯಲ್ಲಿ ಸರ್ಕಾರಿ ಶಿಕ್ಷಕರಾಗಿದ್ದ ಕಲ್ಲಪ್ಪ ಗಾಣಿಗೇರ ನಿಡಗುಂದಿ ಗ್ರಾಮದ ಹುಕ್ಕೇರಿ ತೋಟದ ಮಗದುಮ ಸರ್ಕಾರಿ …
Read More »ಲೋಕಸಭೆ ಚುನಾವಣೆಗೆ ನಾನು, ನನ್ನ ಪುತ್ರ ಸ್ಪರ್ಧಿಸಲ್ಲ: ಪ್ರಕಾಶ್ ಹುಕ್ಕೇರಿ
ಚಿಕ್ಕೋಡಿ, ಮಾರ್ಚ್ 11: ಲೋಕಸಭೆ ಚುನಾವಣೆ (Lok Sabha Election) ಕಲವೇ ತಿಂಗಳು ಬಾಕಿ ಉಳಿದಿವೆ. ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ಎರಡೂ ರಾಷ್ಟ್ರೀಯ ಪಕ್ಷದಲ್ಲಿ ಟಿಕೆಟ್ ವಿಚಾರವಾಗಿ ಸಾಕಷ್ಟು ಹಗ್ಗಜಗ್ಗಾಟ ನಡೆಯುತ್ತಿದೆ. ರಾಜ್ಯ ರಾಜಕೀಯ ಪವರ್ ಸೆಂಟರ್ ಆಗಿರುವ ಬೆಳಗಾವಿ ಮತ್ತು ಚಿಕ್ಕೋಡಿ (Chikkodi) ಎರಡು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಯಾರಿಗೆ ಸಿಗಲಿದೆ ಎಂಬುವುದು ಗೊಂದಲ ಗೂಡಾಗಿದೆ. ಈ ಮಧ್ಯೆ ಲೋಕಸಭೆ ಚುನಾವಣೆಗೆ ನಾನು, ನನ್ನ ಪುತ್ರ …
Read More »ನಿಮ್ಮ ರಾಮ ಮಂದಿರ ಸ್ಫೋಟಿಸುತ್ತೇವೆ,: ಬೆದರಿಕೆ ಪತ್ರ
ಚಿಕ್ಕೋಡಿ: ‘ನಿಮ್ಮ ರಾಮ ಮಂದಿರ ಸ್ಫೋಟಿಸುತ್ತೇವೆ, ಸುಧಾರಿಸಿಕೊಳ್ಳಿ’ ಎಂಬ ಬರಹ ಇರುವ ಬೆದರಿಕೆ ಪತ್ರವೊಂದು ಪತ್ತೆಯಾಗಿದೆ. ನಮ್ಮ ಮಂದಿರಕ್ಕೆ ರಕ್ಷಣೆ ನೀಡುವುದರ ಜೊತೆಗೆ ಬೆದರಿಕೆ ಪತ್ರ ಬರೆದಿರುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನಿಪ್ಪಾಣಿ ಪಟ್ಟಣದ ಶ್ರೀ ರಾಮ ಮಂದಿರದ ಆಡಳಿತ ಮಂಡಳಿ ನಿಪ್ಪಾಣಿ ಶಹರ ಠಾಣೆಯಲ್ಲಿ ದೂರು ನೀಡಿದೆ. ದೇವಸ್ಥಾನ ಟ್ರಸ್ಟ್ನ ಅಧ್ಯಕ್ಷ ಆನಂದ ಸೊಲಾಪೂರೆ ನೀಡಿರುವ ಮಾಹಿತಿ ಪ್ರಕಾರ, ಅಲ್ಲಾ ಹು ಅಕ್ಬರ್ ಹೆಸರಿನಲ್ಲಿ ಬೆದರಿಕೆ ಪತ್ರ …
Read More »ಊರಿನ ಸುತ್ತಲೂ ಕ್ರಷರ್ ಮಷಿನ್‌ಗಳ ಕರ್ಕಶ ಧ್ವನಿ. ದೂಳಿನ ಹಾವಳಿ.
ಚಿಕ್ಕೋಡಿ: ಊರಿನ ಸುತ್ತಲೂ ಕ್ರಷರ್ ಮಷಿನ್‌ಗಳ ಕರ್ಕಶ ಧ್ವನಿ. ದೂಳಿನ ಹಾವಳಿ. ಗ್ರಾಮದೊಳಗೆ ತಿಪ್ಪೆಗಳ ಸಾಲು. ಗ್ರಾಮ ಪಂಚಾಯಿತಿ ಕಚೇರಿ ಹತ್ತಿರವೇ ಕಸದ ರಾಶಿ. ತ್ಯಾಜ್ಯ ವಿಲೇವಾರಿ ಘಟಕದ ಬಳಿಯಂತೂ ಕಸವೋ ಕಸ. ವೀಳ್ಯದೆಲೆಗೆ ಪ್ರಸಿದ್ಧವಾದ ತಾಲ್ಲೂಕಿನ ಜೈನಾಪೂರ ಗ್ರಾಮದ ಸದ್ಯದ ನೋಟವಿದು. ಅಂದಾಜು 8,000 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ 3 ವಾರ್ಡ್‌ಗಳಿದ್ದು, 10 ಸದಸ್ಯರಿದ್ದಾರೆ. ಈ ಪಂಚಾಯಿತಿ ವ್ಯಾಪ್ತಿಯ ತೋರಣಹಳ್ಳಿ ಗ್ರಾಮದಲ್ಲಿ 5,000 ಜನಸಂಖ್ಯೆ ಇದ್ದು, 6 ಸದಸ್ಯರಿದ್ದಾರೆ. ಜೈನಾಪೂರದಲ್ಲಿ …
Read More »‘ನಾನು ಚಿಕ್ಕೋಡಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುವುದಿಲ್ಲ. ಹೈಕಮಾಂಡ್ ಹೇಳಿದಂತೆ ಕೇಳಲು ನಾನು ಫುಟ್‌ಬಾಲ್ ಅಲ್ಲ: ಪ್ರಕಾಶ ಹುಕ್ಕೇರಿ
ಚಿಕ್ಕೋಡಿ: ‘ನಾನು ಚಿಕ್ಕೋಡಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುವುದಿಲ್ಲ. ವಿಧಾನ ಪರಿಷತ್ ಸದಸ್ಯನಾಗಿ ಇರುತ್ತೇನೆ. ಹೈಕಮಾಂಡ್ ಹೇಳಿದಂತೆ ಕೇಳಲು ನಾನು ಫುಟ್‌ಬಾಲ್ ಅಲ್ಲ’ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ-2 ಪ್ರಕಾಶ ಹುಕ್ಕೇರಿ ಪ್ರಶ್ನಿಸಿದರು. ತಾಲ್ಲೂಕಿನ ಕೇರೂರು ಗ್ರಾಮದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘2014ರಲ್ಲಿ ರಾಜ್ಯದಲ್ಲಿ ಸಚಿವನಾಗಿದ್ದ ವೇಳೆ ಒಮ್ಮೆ ಒದ್ದರು, ದೆಹಲಿಗೆ ಹೋಗಿ ಬಿದ್ದೆ. ಅಲ್ಲಿಂದ ಒದ್ದರು, ವಿಧಾನ ಪರಿಷತ್‌ಗೆ ಬಂದೆ. ಈಗ ಮತ್ತೆ …
Read More »ಚಿಕ್ಕೋಡಿ-ಮತ್ತೆ ಕೇಳುತ್ತಿದೆ ಅಖಂಡ ಭಾರತದ ಕೂಗು: ಈಶ್ವರಪ್ಪ
ಚಿಕ್ಕೋಡಿ: ದೇಶವನ್ನು ಲೂಟಿ ಮಾಡಿದವರಿಗೆ ಭಾರತೀಯ ಸಂಸ್ಕೃತಿ ನಾಶ ಮಾಡಲು ಬಿಜೆಪಿ ಬಿಡಲ್ಲ. ಕಾಂಗ್ರೆಸ್ ಅಧಿಕಾರದ ಆಸೆಯಿಂದ ದೇಶ ತುಂಡು ತುಂಡಾಯಿತು. ಜನೇವರಿ 22 ರಾಮ ಮಂದಿರ ಉದ್ಘಾಟನೆ ದಿನದಂದು ಸ್ವಾತಂತ್ರ್ಯ ಹೋರಾಟಗಾರರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ಬಿಜೆಪಿ ಮುಖಂಡ ಮತ್ತು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು. ನಗರದಲ್ಲಿ ಶ್ರೀ ರಾಮಸೇನೆಯಿಂದ ಆಯೋಜಿಸಿದ್ದ ಮೋದಿ ಗೆಲ್ಲಿಸಿ ಭಾರತ ಉಳಿಸಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ಅಖಂಡ ಭಾರತ ನಿರ್ಮಾಣಕ್ಕೆ …
Read More »ವಿದ್ಯುತ್ ಕಡಿತ ರಾಯಬಾಗ ಪಟ್ಟಣದ ಸಮುದಾಯ ಆಸ್ಪತ್ರೆಯಲ್ಲಿ ಪರದಾಡಿದ್ ರೋಗಿಗಳು
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಸಮುದಾಯ ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದೆ ಒಳರೋಗಿಗಳು ಕೆಲ ಕಾಲ ಪರದಾಡಿರುವ ಘಟನೆ ನಡೆದಿದೆ. ಸೋಮವಾರ ರಾತ್ರಿ 10 ಗಂಟೆ ಆಸುಪಾಸಿನಲ್ಲಿ ವಿದ್ಯುತ್ ಕಡಿತಗೊಂಡ ಕಾರಣ ಆಸ್ಪತ್ರೆಯಲ್ಲಿದ್ದ ಒಳರೋಗಿಗಳು ಪರದಾಡುವಂತಾಗಿತ್ತು. ಸೋಮವಾರ ರಾತ್ರಿ 10 ಗಂಟೆ ಆಸುಪಾಸಿನಲ್ಲಿ ವಿದ್ಯುತ್ ಕಡಿತಗೊಂಡ ಕಾರಣ ಆಸ್ಪತ್ರೆಯಲ್ಲಿದ್ದ ಒಳರೋಗಿಗಳು ಪರದಾಡುವಂತಾಗಿತ್ತು. ಇದರಿಂದ ಆಸ್ಪತ್ರೆಯಲ್ಲಿ ಕತ್ತಲುಮಯ ವಾತಾವರಣ ನಿರ್ಮಾಣವಾಗಿ ರೋಗಿಗಳಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಈ ಬಗ್ಗೆ ರೋಗಿಗಳು ಮತ್ತು ಸಂಬಂಧಿಕರು ಆಕ್ರೋಶ …
Read More »ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಡಿಸೆಂಬರ್ 13ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ
ಚಿಕ್ಕೋಡಿ (ಬೆಳಗಾವಿ) : ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರದಲ್ಲಿ ಸರ್ಕಾರಗಳು ಮೀನಾಮೇಷ ಎಣಿಸುತ್ತಿವೆ. ಹಿಂದಿನ ಸರ್ಕಾರ ನಮಗೆ 2ಡಿ ಮೀಸಲಾತಿ ಘೋಷಣೆ ಮಾಡಲಾಗಿತ್ತು. ಅದಿನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಜೊತೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸಮಾಜದ ಮುಖಂಡರ ಸಭೆ ಕರೆದು ತೀರ್ಮಾನ ಮಾಡುತ್ತೇವೆ ಎಂದು ಮಾತು ಕೊಟ್ಟು ತಪ್ಪಿದ್ದಾರೆ. ಈ ಸಂಬಂಧ ಸರ್ಕಾರವನ್ನು ಎಚ್ಚರಿಸಲು ಡಿಸೆಂಬರ್ 13ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು …
Read More »ಬೆಳಗಾವಿ ಅಧಿವೇಶನದಲ್ಲಿ ಕಬ್ಬು ಕಟಾವು ಕಾರ್ಮಿಕರ ಸಮಸ್ಯೆಗಳ ಚರ್ಚೆಗೆ ಒತ್ತಾಯ
ಚಿಕ್ಕೋಡಿ: ರಾಜ್ಯದಲ್ಲೇ ಅತಿ ಹೆಚ್ಚು ಕಬ್ಬು ಬೆಳೆಯನ್ನು ಬೆಳಗಾವಿ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ. ಆದರೆ ಕಬ್ಬು ಕಟಾವು ಮಾಡಿ ಸಾಗಿಸುವ ಕಾರ್ಮಿಕರಿಗೆ ನ್ಯಾಯಯುತ ಸಂಬಳ ಸಿಗದೆ ಇರೋದ್ರಿಂದ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ಈ ಸಮಸ್ಯೆಗಳ ಕುರಿತಾಗಿ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚೆ ನಡೆಸುವಂತೆ ಚಿಕ್ಕೋಡಿ ಭಾಗದ ಕಬ್ಬು ಕಟಾವು ಕಾರ್ಮಿಕರು ಒತ್ತಾಯಿಸಿದ್ದಾರೆ. ಮೂರು ವರ್ಷಗಳಿಂದ ಕಾರ್ಮಿಕರಿಗೆ ಪ್ರತಿ ಟನ್ 324 ರೂ ನೀಡುತ್ತಿದ್ದು, ಈ ಕೂಲಿ ದರವನ್ನು ಸಕ್ಕರೆ ಕಾರ್ಖಾನೆಗಳು …
Read More »ಸೀಲಿಂಗ್ ತುಂಡಾಗಿ ಕಾರ್ಮಿಕ ಸಾವು
ಚಿಕ್ಕೋಡಿ: ಕ್ರೇನ್ ಸೀಲಿಂಗ್ ತುಂಡಾಗಿ ಬಿದ್ದು ಓರ್ವ ಕಾರ್ಮಿಕ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜಂಬಗಿ ಗ್ರಾಮದಲ್ಲಿ ಇಂದು ನಡೆದಿದೆ. ಮಧ್ಯಪ್ರದೇಶದ ಸಂತೋಷ ಮುಣ್ಣಾ ವಿಶ್ವಕರ್ಮ (28) ಮೃತಪಟ್ಟಿದ್ದಾರೆ. ಜಂಬಗಿ ಗ್ರಾಮದ ಶಾವಂತ ಪಾಟೀಲ್ ಎಂಬ ರೈತನ ಜಮೀನಿನಲ್ಲಿ ಮಧ್ಯಪ್ರದೇಶದ ಐವರು ಕಾರ್ಮಿಕರು ಬಾವಿ ಕೊರೆಯುವ ಕೆಲಸ ಮಾಡುತ್ತಿದ್ದರು. ಇಬ್ಬರು ಬಾವಿಗಿಳಿಯುತ್ತಿದ್ದ ಸಂದರ್ಭದಲ್ಲಿ ಕ್ರೇನ್ ಸೀಲಿಂಗ್ ತುಂಡಾಗಿದೆ. ಅಂದಾಜು ನೂರು ಅಡಿ ಆಳದ ಬಾವಿಗೆ …
Read More »