Breaking News

ಕಿತ್ತೂರು

200 ನೇ ಕಿತ್ತೂರು ವಿಜಯೋತ್ಸವಕ್ಕೆ 40 ಕೋಟಿ ರೂ.ಅನುದಾನ

ಚನ್ನಮ್ಮನ ಕಿತ್ತೂರು: 2024 ನೇ ಸಾಲಿನ ಚನ್ನಮ್ಮನ ಕಿತ್ತೂರು ವಿಜಯೋತ್ಸವವನ್ನು ಸಂಭ್ರಮದಿಂದ ಅದ್ಧೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಸೋಮವಾರ(ಆ19) ಬೆಂಗಳೂರಿನ ವಿಕಾಸ ಸೌಧದಲ್ಲಿ ಕಂದಾಯ ಸಚಿವ ಹಾಗೂ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಜರುಗಿತು.   200ನೇ ಕಿತ್ತೂರು ವಿಜಯೋತ್ಸವದ ಉತ್ಸವಕ್ಕೆ ಚನ್ನಮ್ಮನ ಕಿತ್ತೂರು ಕೋಟೆ ಆವರಣದಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಲು 35 ಕೋಟಿ ರೂ. ಹಾಗೂ ಉತ್ಸವಕ್ಕೆ ರೂ 5 ಕೋಟಿ …

Read More »

ನಿಂಗಾಪುರ ಗ್ರಾಮಸ್ಥರಲ್ಲಿ ಹರ್ಷ ವರದಿ ಬೆನ್ನಲ್ಲೆ ಗ್ರಾಮಕ್ಕೆ ಬಂತು ಹೊಸ ಬೋಟ್

ವರದಿ ಬೆನ್ನಲ್ಲೆ ಗ್ರಾಮಕ್ಕೆ ಬಂತು ಹೊಸ ಬೋಟ್ ನಿಂಗಾಪುರ ಗ್ರಾಮಸ್ಥರಲ್ಲಿ ಹರ್ಷ *ಬೆಳಗಾವಿ:* ನಿಂಗಾಪುರ ಗ್ರಾಮಸ್ಥರು ಹೊಸ ಬೋಟ್ ಸಿಗುತ್ತಿದ್ದಂತೆಯೇ ಹರ್ಷದಿಂದ ಕುಣಿದರು. ಬೋಟ್ ವ್ಯವಸ್ಥೆ ಇಲ್ಲದೆ, ಗಾಳಿ ತುಂಬಿದ ಟ್ಯೂಬ್‌ ಮೇಲೆ ಶಾಲಾ ಮಕ್ಕಳು ಹಿಂಜರಿಯುತ್ತಿದ್ದ ನಂತರ, ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ, ಜಿಲ್ಲಾಡಳಿತವು ತಕ್ಷಣ ಪ್ರತಿಕ್ರಿಯಿಸಿತು.   ನಿಂಗಾಪುರ ಗ್ರಾಮ, ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನಲ್ಲಿರುವ ಹಿಂದುಳಿದ ಪ್ರದೇಶವಾಗಿದೆ, ಇತ್ತೀಚಿನ ಭಾರಿ ಮಳೆಯಿಂದಾಗಿ ಗ್ರಾಮಸ್ಥರು ಹುಲಿಕೆರೆಯನ್ನು ದಾಟಲು …

Read More »

ಮಳೆಗಾಲದಲ್ಲಿ ‘ಟ್ಯೂಬ್ ತೆಪ್ಪ’ದಲ್ಲೇ ಶಾಲಾ ಮಕ್ಕಳ ಪಯಣ

ಕಿತ್ತೂರು: ಎರಡು ಲಾರಿ ಟ್ಯೂಬ್ ಗಳಿಗೆ ಗಾಳಿ ತುಂಬಿಸಿ ಅದರ ಮೇಲೆ ಕಟ್ಟಿಗೆಯಿಟ್ಟು, ಎರಡೂ ದಂಡೆಗೆ ನೆಡಲಾಗಿರುವ ಗೂಟಗಳಿಗೆ ಹಗ್ಗ ಕಟ್ಟಿ ಮಾಡಿರುವ ‘ಜಗ್ಗುವ ಟ್ಯೂಬ್ ತೆಪ್ಪ’ದಲ್ಲಿ ತಾಲ್ಲೂಕಿನ ಕುಲವಳ್ಳಿಯ ನಿಂಗಾಪುರ ಗ್ರಾಮಸ್ಥರು, ಶಾಲಾ ಮಕ್ಕಳು, ಮಹಿಳೆಯರು, ರೈತರಿಗೆ ಇದೇ ಸಂಚಾರದ ಜಲಮಾರ್ಗವಾಗಿದೆ. ‘ಧಾರವಾಡ ತಾಲ್ಲೂಕಿನ ಅಳ್ನಾವರ ಬಳಿಯ ಹುಲಿಕೆರೆ ಭರ್ತಿಯಾದರೆ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ನಿಂಗಾಪುರಕ್ಕೆ ಈ ಅಪಾಯಕಾರಿ ನೀರ ಮೇಲಿನ ಸಂಚಾರ ತಪ್ಪಿದ್ದಲ್ಲ’ ಎನ್ನುತ್ತಾರೆ ಗ್ರಾಮಸ್ಥರು. ‘ಅಲ್ಲದೇ, …

Read More »

ಕಾರ್‌ ಅಡ್ಡಗಟ್ಟಿ ₹10 ಲಕ್ಷ ಕಳವು

 ಕಿತ್ತೂರು: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಹಿರೇಹಳ್ಳ ಬಳಿ ಕಾರ್‌ ಅಡ್ಡಗಟ್ಟಿ ₹10 ಲಕ್ಷ ಕಸಿದ ಕಳ್ಳರು ಪರಾರಿಯಾಗಿದ್ದಾರೆ. ಬೆಳಗಾವಿ ಶಾಸ್ತ್ರೀನಗರದ ಹಾರ್ಡ್‌ವೇರ್ ಅಂಗಡಿ ಮಾಲೀಕ ಅಮಿತ್ ಅಶೋಕ ಪೇರಿವಾಲ ಅವರು ಶಿವಮೊಗ್ಗದ ಮಿತ್ರರಿಗೆ ₹10 ಲಕ್ಷ ಕೊಡಲು, ತಮ್ಮ ಅಂಗಡಿಯ ಕೆಲಸಗಾರ ಚಂದನಾಥ ರಾಮೇಶ್ವರ ಸಿದ್ ಹಾಗೂ ಸುನೀಲ ರಾಜಕುಮಾರ ಪ್ರಜಾಪತ್ ಅವರನ್ನು ಕಳುಹಿಸಿದ್ದರು. ಅವರು ಸಾಗುತ್ತಿದ್ದ ಕಾರ್‌ ಅಡ್ಡಗಟ್ಟಿದ ಕಳ್ಳರು ಹಣ ಕಸಿದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚುವರಿ …

Read More »

ಸರ್ಕಾರಿ ಪ್ರಾಥಮಿಕ ಶಾಲೆಗೆ ತೆರಳಲು ಕಲ್ಲೆದ್ದ ರಸ್ತೆಯಲ್ಲೇ ಮಕ್ಕಳ ನಡಿಗೆ!

ಚನ್ನಮ್ಮನ ಕಿತ್ತೂರು: ಕಾಲು ದಾರಿ ಮೇಲೆ ಮುಷ್ಟಿಗಾತ್ರದ ಚೂಪನೆಯ ಕಲ್ಲುಗಳು ಎದ್ದು ಕುಳಿತಿವೆ. ಸ್ಮಶಾನಕ್ಕೂ ಇದೇ ದಾರಿ ಅವಲಂಬನೆ. ಮಳೆಯಾದರೆ ಸಾಕು ಮನೆಯೊಳಗೆ ನೀರು ನುಗ್ಗಿ ಬದುಕೇ ಯಾತನಾಮಯ ಆಗುತ್ತದೆ. ಇದು ತಾಲ್ಲೂಕಿನ ಉಗರಖೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ತಿಮ್ಮಾಪುರ ಗ್ರಾಮದ ಅಂಬೇಡ್ಕರ್ ಕಾಲೊನಿ ಮಕ್ಕಳು ಮತ್ತು ನಾಗರಿಕರ ಗೋಳು.   ‘ಕಾಲೊನಿಯಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ತೆರಳಲು ಮಕ್ಕಳು ರಸ್ತೆ ಮೇಲೆ ಎದ್ದು …

Read More »

ಸತ್ಯ ಪ್ರತಿಪಾದಕ ಸ್ವಾಮೀಜಿಗೆ ಈಗ 60ರ ಸಂಭ್ರಮ.

ಚನ್ನಮ್ಮನ ಕಿತ್ತೂರು: ‘ನಿಷ್ಟುರವಾಗಿ ಸತ್ಯ ಹೇಳುವುದು ಮತ್ತು ಸತ್ಯವನ್ನು ನಿಷ್ಟುರವಾಗಿ ಹೇಳುವುದು’ ಇದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ವ್ಯಕ್ತಿತ್ವ. ಸತ್ಯ ಪ್ರತಿಪಾದಕ ಸ್ವಾಮೀಜಿಗೆ ಈಗ 60ರ ಸಂಭ್ರಮ. ಹೆಸರಿಗೆ ತಕ್ಕಂತೆಯೇ ಅವರದು ‘ನಿಜ-ಗುಣ’.   ಮೂರು ದಶಕದ ಹಿಂದೆ ಚನ್ನಮ್ಮನ ಕಿತ್ತೂರು ನಾಡಿಗೆ ಬಂದ ನಂತರ ಅವರು ಸಾಮಾಜಿಕ ಪರಿವರ್ತನೆಗೆ ಹೆಜ್ಜೆ ಇಟ್ಟರು. ಸಾಂಪ್ರದಾಯಿಕ, ಮೌಢ್ಯ ಆಚರಣೆಗಳಿಂದ ಸಮಾಜವನ್ನು ಹೊರತರಲು ಮುಂದಾದರು. ‘ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ’ …

Read More »

ಚನ್ನಮ್ಮನ ಉತ್ಸವಕ್ಕೆ ಜನಸಾಗರವೇ ಕಿತ್ತೂರಿಗೆ ಹರಿದು ಬಂದಿದೆ.

ಬೆಳಗಾವಿ: ಚನ್ನಮ್ಮನ ಉತ್ಸವಕ್ಕೆ ಜನಸಾಗರವೇ ಕಿತ್ತೂರಿಗೆ ಹರಿದು ಬಂದಿದೆ. ಕಲರ್​ಫುಲ್ ಲೈಟಿಂಗ್ಸ್‌ನಿಂದ​ ಕಂಗೊಳಿಸುತ್ತಿದ್ದ ಕೋಟೆಯಲ್ಲಿ ಜನರು ಸೆಲ್ಫಿ ಫೋಟೋ ತೆಗೆಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಉತ್ಸವಕ್ಕೆ ಬಂದವರು ಕೋಟೆ ಅಭಿವೃದ್ಧಿಯಾಗಿ, ಪ್ರಸಿದ್ಧ ಪ್ರವಾಸಿ ತಾಣವಾಗಬೇಕು, ದಸರಾ ಮಾದರಿಯಲ್ಲಿ ಕಿತ್ತೂರು ಉತ್ಸವ ಜರುಗಬೇಕು ಎಂದು ಆಶಿಸಿದರು. ವೀರರಾಣಿ ಚನ್ನಮ್ಮಾಜಿ ಆಳಿದ ಕೋಟೆಯಲ್ಲಿ ಯುವಕ, ಯುವತಿಯರು, ಚಿಕ್ಕ ಮಕ್ಕಳು, ಮಹಿಳೆಯರು ಸೇರಿ ಇಡೀ ಕುಟುಂಬಸ್ಥರು ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು. ವಸ್ತು ಪ್ರದರ್ಶನದಲ್ಲಿ ಮಾರಾಟಕ್ಕೆ ಇಟ್ಟಿರುವ ವಿವಿಧ ವಸ್ತುಗಳ …

Read More »

ಒಂದೇ ಜಾತಿಗೆ ರಾಣಿ ಚನ್ನಮ್ಮಳನ್ನು ಸೀಮಿತಗೊಳಿಸಬೇಡಿ: ಸಂಶೋಧಕ ಸಂತೋಷ ಹಾನಗಲ್

ಬೆಳಗಾವಿ: “ವೀರರಾಣಿ ಕಿತ್ತೂರು ಚನ್ನಮ್ಮಾಜಿಯನ್ನು ಒಂದೇ ಜಾತಿ ಮತ್ತು ಸಮುದಾಯಕ್ಕೆ ಸೀಮಿತಗೊಳಿತ್ತಿರುವ ವಿಚಾರ ಕಳೆದ ಐದು ವರ್ಷಗಳಿಂದ ಶುರುವಾಗಿದೆ. ಮೊಳಕೆಯೊಡೆಯುವ ಮೊದಲೇ ಚಿವುಟಿ ಹಾಕುವ ಅವಶ್ಯಕತೆಯಿದೆ” ಎಂದು ಸಂಶೋಧಕ ಸಂತೋಷ ಹಾನಗಲ್ ಅಭಿಪ್ರಾಯ ವ್ಯಕ್ತಪಡಿಸಿದರು. ಕಿತ್ತೂರು ಉತ್ಸವದ ಅಂಗವಾಗಿ ಮಂಗಳವಾರ ನಡೆದ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಣಿ ಚನ್ನಮ್ಮಾಜಿ ಜತೆ ಸೇರಿಕೊಂಡು ಎಲ್ಲ ಸಮುದಾಯದ ವೀರರು ಸಂಸ್ಥಾನದ ಉಳಿವಿಗಾಗಿ ಹೋರಾಡಿದ್ದಾರೆ. ಅವರೆಲ್ಲ ಇಡೀ ದೇಶಕ್ಕೆ ಸೇರಿದ ಮಹಾಪುರುಷರು. ಅಂತಹವರನ್ನು ಒಂದೇ ಜಾತಿ, …

Read More »

ಕಿತ್ತೂರು ಉತ್ಸವದಲ್ಲಿ ತೋಟಗಾರಿಕಾ ಇಲಾಖೆ, ಬೆಳಗಾವಿ ಜಿ.ಪಂ. ಸಹಯೋಗದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಿದ್ದು, ಗಮನ ಸೆಳೆಯುತ್ತಿದೆ.

ಬೆಳಗಾವಿ: ಸಿರಿಧಾನ್ಯಗಳಲ್ಲಿ ತಯಾರಿಸಿರುವ ವೀರರಾಣಿ ಕಿತ್ತೂರು‌ ಚನ್ನಮ್ಮಾಜಿಯ ಅಶ್ವಾರೂಢ ಮೂರ್ತಿ ಕಿತ್ತೂರು ಉತ್ಸವದ ಫಲಪುಷ್ಪ ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿದೆ. ತರಕಾರಿ, ಹೂವುಗಳಿಂದ ತಯಾರಿಸಿದ ನಾನಾ ರೀತಿಯ ಕಲಾಕೃತಿಗಳು ಜನರ ಕುತೂಹಲ ಕೆರಳಿಸಿವೆ. ಸಿರಿಧಾನ್ಯಗಳಾದ ಜೋಳ, ಸಜ್ಜೆ, ನವನೆ, ರಾಗಿ, ಚನ್ನಂಗಿ ಬೇಳೆಗಳನ್ನು ಬಳಸಿ ತಯಾರಿಸಿರುವ 6.5 ಅಡಿ ಎತ್ತರದ ಚನ್ನಮ್ಮಾಜಿ ವಿಗ್ರಹವನ್ನು ಕಲಾವಿದ ಶಿವಲಿಂಗಪ್ಪ ಬಡಿಗೇರ ರಚಿಸಿದ್ದಾರೆ. ಕಲ್ಲಂಗಡಿಯಲ್ಲಿ ಮಹನೀಯರ ಚಿತ್ರಗಳು: ಕಲ್ಲಂಗಡಿ ಹಣ್ಣಿನಲ್ಲಿ ಅರಳಿರುವ ರಾಣಿ ಚನ್ನಮ್ಮ‌, ಸಂಗೊಳ್ಳಿ ರಾಯಣ್ಣ, …

Read More »

3 ದಿನ ಕಿತ್ತೂರು ಉತ್ಸವ: ಎತ್ತ ನೋಡಿದರೂ ದೀಪಾಲಂಕಾರದಿಂದ ಕಟ್ಟಡಗಳು ಝಗಮಗಿಸುತ್ತಿವೆ.

ಬೆಳಗಾವಿ: ನಾಡಿನೆಲ್ಲೆಡೆ ನವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದ್ದರೆ, ಬೆಳಗಾವಿಯಲ್ಲಿ ಚನ್ನಮ್ಮ‌ನ ಕಿತ್ತೂರು ಉತ್ಸವದ ಸಂಭ್ರಮ ಕಳೆಗಟ್ಟಿದೆ.   ಅ.23 ರಿಂದ 25 ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಐತಿಹಾಸಿಕ ರಾಜ್ಯಮಟ್ಟದ ಉತ್ಸವಕ್ಕೆ ಕಿತ್ತೂರು ಸಜ್ಜಾಗಿದೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಅಶ್ವಾರೂಢ ಚನ್ನಮ್ಮನ ಪ್ರತಿಮೆ ಇರುವ ವೃತ್ತ, ಮಹಾದ್ವಾರ, ಕೋಟೆಯ ಆವರಣ ಮತ್ತು ಸರ್ಕಾರಿ ಕಚೇರಿಗಳು ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಕಿತ್ತೂರು ಉತ್ಸವವನ್ನು 1997ರಿಂದ ಆಚರಿಸಲಾಗುತ್ತಿದೆ. 2022ರಲ್ಲಿ ಬಿಜೆಪಿ ಸರ್ಕಾರ …

Read More »