Breaking News

ಬೆಂಗಳೂರು

ರಾಜ್ಯದ ಕೆಲವೆಡೆ ಮಳೆರಾಯನ ಅಬ್ಬರ – ಸಿಡಿಲು ಬಡಿದು ರೈತ ಸಾವು

ಬೆಂಗಳೂರು: ಕೊರೊನಾ ಅಬ್ಬರದ ಮಧ್ಯೆ ವರುಣರಾಯ ಕೂಡ ರಾಜ್ಯದ ಕೆಲವೆಡೆ ಅಬ್ಬರಿಸಿದ್ದಾನೆ. ಧಾರವಾಡ, ಶಿವಮೊಗ್ಗ, ದಾವಣಗೆರೆ, ವಿಜಯಪುರ ಸೇರಿ ಹಲವೆಡೆ ಧಾರಕಾರ ಮಳೆಯಾಗಿದೆ. ವಿಜಯಪುರದ ಮುದ್ದೇಬಿಹಾಳ ತಾಲೂಕಿನ ಹಳ್ಳೂರಿನಲ್ಲಿ ಸಿಡಿಲು ಹೊಡೆದು ರೈತ ಗುಂಡಪ್ಪ ಸಾವನ್ನಪ್ಪಿದ್ದಾರೆ. ಶಿವಮೊಗ್ಗದಲ್ಲಿ ಗುಡುಗು, ಸಿಡಿಲ ಮಳೆಗೆ ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಾರ್ಡ್ ನಲ್ಲಿ ವಿದ್ಯುತ್ ಅವಘಡ ಸಂಭವಿಸಿದ್ದು ಭಾರೀ ಅನಾಹುತ ತಪ್ಪಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆಸ್ಪತ್ರೆಯಲ್ಲಿದ್ದ ಮಕ್ಕಳನ್ನು ಸುರಕ್ಷಿತವಾಗಿ ಖಾಸಗಿ ಆಸ್ಪತ್ರೆಗೆ …

Read More »

ಬೆಂಗಳೂರು:ಅಂಬುಲೆನ್ಸ್‌ನಲ್ಲಿ ಗುಜರಿ ವಸ್ತುಗಳ ಸಾಗಾಟ

ಬೆಂಗಳೂರು: ಯಾರೂ ಹಿಡಿಯುವುದಿಲ್ಲ, ಪರಿಶೀಲನೆ ನಡೆಸುವುದಿಲ್ಲ ಎಂದು ಕಳ್ಳತನ ಮಾಡಿದ್ದ ಗುಜರಿ ವಸ್ತುಗಳನ್ನು ಅಂಬುಲೆನ್ಸ್ ನಲ್ಲಿ ಸಾಗಾಟ ಮಾಡುತ್ತಿದ್ದರು. ಶಿವಾಜಿ ನಗರದ ರೆಸಲ್ ಮಾರ್ಕೆಟ್‍ನಲ್ಲಿ ಸತೀಶ್, ಮಹೇಶ್ ಗುಜರಿ ಸಾಮಾನುಗಳನ್ನು ಹರ್ಷಿಣಿ ಹೆಸರಿನ ಅಂಬುಲೆನ್ಸ್ ಮೂಲಕ ಸಾಗಾಟ ಮಾಡುತ್ತಿದ್ದರು. ವಾಹನಗಳ ಟೈರ್, ಟ್ಯೂಬ್ ಸೇರಿದಂತೆ ಹಲವು ಗುಜರಿ ವಸ್ತುಗಳನ್ನು ಖದೀಮರು ಅಂಬುಲೆನ್ಸ್ ನಲ್ಲಿ ಸಾಗಿಸುತ್ತಿದ್ದರು. ಅನುಮಾನ ಬಂದು ಪೊಲೀಸರು ಅಂಬುಲೆನ್ಸ್ ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಗುಜರಿ ಸಾಮಾನು …

Read More »

ಕೊರೊನಾಗೆ 24 ಗಂಟೆಯಲ್ಲಿ 27 ಸಾವು – ಸೋಂಕಿತರ ಸಂಖ್ಯೆ 4,200ಕ್ಕೆ ಏರಿಕೆ

ಬೆಂಗಳೂರು: 27 ಜನರು ಕಳೆದ 24 ಗಂಟೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 100ಕ್ಕೆ ತಲುಪಿದೆ. ಭಾನುವಾರ ಸುಮಾರು 12 ಜನರನ್ನು ಕೊರೊನಾ ಬಲಿ ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಇನ್ನು ಕೊರೊನಾ ಸೋಂಕಿತರ ಸಂಖ್ಯೆ 4 ಸಾವಿರದ ಗಡಿ ದಾಟಿದೆ. ಭಾನುವಾರ ಒಂದೇ ದಿನ ಸುಮಾರು 500ಕ್ಕೂ ಅಧಿಕ ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕಳೆದ ನಾಲ್ಕು ದಿನಗಳಿಂದ ಸೋಂಕಿಂತರ ಸಂಖ್ಯೆ ದ್ವಿಗುಣವಾಗಿ ಏರಿಕೆಯಾಗ್ತಿರೋದು ಆತಂಕಕ್ಕೆ ಕಾರಣವಾಗಿದೆ. ಏಪ್ರಿಲ್ …

Read More »

ಶೀಘ್ರದಲ್ಲೇ ಟೊಮೋಟೊ ಸಂಸ್ಕರಣಾ ಘಟಕ ಆರಂಭ………..

ಬೆಂಗಳೂರು : ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಆಗಿದ್ದರ ಪರಿಣಾಮ ಅನ್ನದಾತ ತೀವ್ರ ಸಂಕಷ್ಟಕ್ಕೆ ಸಿಲುಕಿರೋದು ನಿಜ. ಆದ್ರೆ ರೈತರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ತೋಟಗಾರಿಕಾ ಇಲಾಖೆ ಅವಿರತ ಶ್ರಮಿಸುತ್ತಿದೆ. ಸಚಿವ ಡಾ. ನಾರಾಯಣಗೌಡ ಅವರ ಸೂಚನೆಯಂತೆ ತರಕಾರಿ, ಹಣ್ಣು ಮಾರಾಟದ ಬಗ್ಗೆ ಈಗಾಗಲೆ ಕ್ರಮ ತೆಗೆದುಕೊಳ್ಳಲಾಗಿದ್ದು, ಸುಸೂತ್ರವಾಗಿ ಮಾರಾಟ ಕೂಡ ನಡೆಯುತ್ತಿದೆ. ಆದರೆ ಟೊಮೋಟೊ ಬೆಳೆಗಾರರ ಸಮಸ್ಯೆ ಮುಂದುವರೆದಿತ್ತು. ಬೆಲೆ ಪಾತಾಳಕ್ಕೆ ಕುಸಿದ ಪರಿಣಾಮ ರೈತರ ಸ್ಥಿತಿ …

Read More »

ಕೊರೊನಾ ವಿರುದ್ಧದ ಹೋರಾಟದಲ್ಲಿ ಮೋದಿಗೆ ನನ್ನ ಬೆಂಬಲವಿದೆ: ಹೆಚ್‍ಡಿಡಿ

ಬೆಂಗಳೂರು: ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಬೆಂಬಲವಿದೆ ಎಂದು ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು ಟ್ವೀಟ್ ಮಾಡಿದ್ದಾರೆ. ಕೊರೊನಾ ವೈರಸ್ ನಿಂದ ದೇಶ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಮೋದಿ ಅವರು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿದ್ದಾರೆ. ಜೊತೆಗೆ ಇಂದು ದೇಶದ ಹಲವಾರು ನಾಯಕರಿಗೆ ಕರೆ ಮಾಡಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಬೆಂಬಲ ಸೂಚಿಸುವಂತೆ ಕೋರುತ್ತಿದ್ದಾರೆ. ಅಂತಯೇ ದೇವೇಗೌಡರಿಗೂ ಕರೆ ಮಾಡಿದ್ದು, ನಾನು ಬೆಂಬಲ …

Read More »

ರಾಜ್ಯದಲ್ಲಿ 7 ಮಂದಿಗೆ ಕೊರೊನಾ, ಐವರಿಗೆ ಜಮಾತ್ ನಂಟು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 151ಕ್ಕೆ ಏರಿದೆ. ಶನಿವಾರ ಏಕಾಏಕಿ 16 ಮಂದಿ ಸೋಂಕಿತರು ಪತ್ತೆಯಾಗಿದ್ದರೆ, ಇಂದು 7 ಜನರಿಗೆ ಕೊರೊನಾ ತಗುಲಿರುವುದು ದೃಢವಾಗಿದೆ. ಈ ಪೈಕಿ 5 ಕೇಸ್‍ಗಳು ದೆಹಲಿಯ ತಬ್ಲಿಘಿ ಧರ್ಮ ಸಭೆಗೆ ಹೋಗಿ ಬಂದವರೇ ಆಗಿದ್ದಾರೆ. ಬೆಳಗಾವಿಯ ನಾಲ್ವರು, ಬಳ್ಳಾರಿಯ ಒಬ್ಬರ ಜೊತೆ ದುಬೈನಿಂದ ಬೆಂಗಳೂರಿಗೆ ಆಗಮಿಸಿದ ವೃದ್ಧ ದಂಪತಿಗೆ ಸೋಂಕು ಬಂದಿದೆ. ರೋಗಿ 145 – ಬೆಂಗಳೂರಿನ 68 ವರ್ಷದ ವೃದ್ಧ. ದುಬೈಗೆ …

Read More »

ಸರ್ಕಾರಕ್ಕೆ ವೈದ್ಯರಿಗೆ ಸಹಕಾರ ನೀಡದವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು :ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ: ದೇಶದಲ್ಲಿ ಕೊರೊನಾ ಜಿಹಾದ್ ನಡೆಯುತ್ತಿದೆ. ಸರ್ಕಾರಕ್ಕೆ ವೈದ್ಯರಿಗೆ ಸಹಕಾರ ನೀಡದವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕೊರೊನಾ ರೋಗಿ ವೈದ್ಯರನ್ನು ತಬ್ಬಿಕೊಳ್ಳುತ್ತಾರೆ. ನರ್ಸ್ ಗಳಿಗೆ ರೋಗ ಹಬ್ಬಿಸುವ ಧಮ್ಕಿ ಹಾಕಿದ್ದಾರೆ. ಇದು ಭಯೋತ್ಪಾದನೆಯ ಮುಂದುವರಿದ ಭಾಗ. ಕ್ವಾರಂಟೈನ್‍ನಲ್ಲಿ ಇರುವ ಜಿಹಾದಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು. ಕಠಿಣವಾದ ಕಾನೂನು ದೇಶದಲ್ಲಿ ಜಾರಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ. ಕೊರೊನಾ ವಿಚಾರದಲ್ಲಿ …

Read More »

ಬೆಂಗಳೂರು: ವಿದೇಶದಿಂದ ಭಾರತಕ್ಕೆ ಮರಳಿದ್ದ 47 ಮಂದಿ ಕೊರೋನಾ ಶಂಕಿತರನ್ನು ಡಿಸ್ಚಾರ್ಜ್​ ಮಾಡಲಾಗಿದೆ.

ಬೆಂಗಳೂರು: ವಿದೇಶದಿಂದ ಭಾರತಕ್ಕೆ ಮರಳಿದ್ದ 47 ಮಂದಿ ಕೊರೋನಾ ಶಂಕಿತರನ್ನು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿದೆ. ಕೊರೋನಾ ಶಂಕೆ ಹಿನ್ನಲೆಯಲ್ಲಿ ವಿದೇಶದಿಂದ ಬಾಂದವರನ್ನು 16 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು. ಇದೀಗ ಕ್ವಾರಂಟೈನ್ ಅವಧಿ ಮುಗಿದ ಬಳಿಕ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಮನೆ ಸೇರಿಕೊಂಡಿದ್ದಾರೆ. ಆಸ್ಟ್ರೇಲಿಯಾ, ಜಪಾನ್, ದುಬೈ, ಸಿಂಗಾಪುರ್ ಸೇರಿ‌ 6 ದೇಶಗಳಿಂದ 47 ಮಂದಿ ಭಾರತೀಯರು ಆಗಮಿಸಿದ್ದರು. ಕೊರೋನಾ ಶಂಕೆ ಹಿನ್ನೆಲೆ, ಸಪ್ತಗಿರಿ ಆಸ್ಪತ್ರೆಯಲ್ಲಿ ಕಳೆದ …

Read More »

16 ಹೊಸ ಪ್ರಕರಣ – ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 144ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 16 ಪ್ರಕರಣಗಳು ಬೆಳಕಿಗೆ ಬಂದಿದ್ದು ಕರ್ನಾಟಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ 144ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿನ ಹಾಟ್‍ಸ್ಪಾಟ್‍ಗಳಲ್ಲಿ ಒಂದಾಗಿರುವ ಮೈಸೂರಿನಲ್ಲಿ ಇಂದು ಒಂದೇ ದಿನಕ್ಕೆ 7 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರಲ್ಲಿ 5 ಮಂದಿ ದೆಹಲಿಗೆ ಹೋಗಿ ಬಂದವರಾಗಿದ್ದಾರೆ. ದೆಹಲಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಒಟ್ಟು 16 ಮಂದಿ ಕೊರೊನಾಗೆ ತುತ್ತಾಗಿದ್ದು, ಈ ಮೂಲಕ ಮೈಸೂರಿನಲ್ಲಿ ಸೊಂಕಿತರ ಸಂಖ್ಯೆ 28ಕ್ಕೆ ಏರಿದೆ. ದೆಹಲಿಯಲ್ಲಿ …

Read More »

ಸ್ಯಾಂಡಲ್‍ವುಡ್ ನಟಿ ಶರ್ಮಿಳಾ ಮಾಂಡ್ರೆ ಲಾಕ್‍ಡೌನ್ ಇದ್ದರೂ ಜಾಲಿ ರೈಡ್ ಮಾಡಿ ಅಪಘಾತ ಮಾಡಿದ್ದಾರೆ.

ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಕೆಲ ನಟ-ನಟಿಯರು ಮನೆಯಲ್ಲಿ ಇರಿ, ಯಾರೂ ಹೊರಗೆ ಬರಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಮಧ್ಯೆ ಸ್ಯಾಂಡಲ್‍ವುಡ್ ನಟಿಯೊಬ್ಬರು ಲಾಕ್‍ಡೌನ್ ಇದ್ದರೂ ಜಾಲಿ ರೈಡ್ ಮಾಡಿ ಅಪಘಾತ ಮಾಡಿದ್ದಾರೆ. ನಟಿ ಶರ್ಮಿಳಾ ಮಾಂಡ್ರೆ ಜಾಲಿ ರೈಡ್ ಮಾಡಲು ಹೋಗಿ ಅಪಘಾತ ಮಾಡಿದ್ದಾರೆ. ಇಂದು ನಸುಕಿನ ಜಾವ 3 ಗಂಟೆಗೆ ಈ ಘಟನೆ ನಡೆದಿದ್ದು, ಪ್ರಾಥಮಿಕ ತನಿಖೆಯಲ್ಲಿ ಇದು …

Read More »