ಬೆಂಗಳೂರು: ಕೊರೊನಾ ಲಾಕ್‍ಡೌನ್ 3.0 ಮುಕ್ತಾಯಕ್ಕೆ ಇನ್ನು 7 ದಿನ ಬಾಕಿ ಇದೆ. ಈ ಹೊತ್ತಲ್ಲೇ ಮೇ 17ರ ಬಳಿಕ ಮುಂದಿನ ಕಥೆ ಏನು? ಲಾಕ್‍ಡೌನ್ ಅಂತ್ಯ ಆಗುತ್ತಾ? ಮತ್ತೆ ಏನಾದರೂ ಮುಂದುವರಿಸ್ತಾರಾ? ಮುಂದುವರಿಸೋದಾದ್ರೆ, ಯಾವ ಮಾರ್ಗಸೂಚಿ ಇರುತ್ತೆ? ಲಾಕ್‍ಡೌನ್ ಎಂಡ್ ಆದರೆ ಮತ್ತೆ ವೈರಸ್ ಹಬ್ಬಿದ್ರೆ ಏನ್ ಮಾಡೋದು? ಅನ್ನೋ ಎಲ್ಲಾ ಲೆಕ್ಕಾಚಾರ-ಆತಂಕದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಮಧ್ಯಾಹ್ನ 3 ಗಂಟೆಗೆ ಎಲ್ಲಾ ರಾಜ್ಯಗಳ …
Read More »ಮೆಗಾ ಏರ್‌ಲಿಫ್ಟ್ ಮೂಲಕ ಬೇರೆ ಬೇರೆ ರಾಜ್ಯಗಳಿಂದ ಮತ್ತು ವಿದೇಶಗಳಿಂದ ಇಂದು ತಾಯ್ನಾಡಿಗೆ 326 ಕನ್ನಡಿಗರು ಬಂದಿಳಿದಿದ್ದಾರೆ.
ಬೆಂಗಳೂರು: ಮಹಾಮಾರಿ ಕೊರೊನಾದಿಂದ ಭಾರತ ನಲುಗಿ ಹೋಗಿದೆ. ಹೀಗಾಗಿ ಆಪರೇಷನ್ ವಂದೇ ಭಾರತ್ ಮೆಗಾ ಏರ್‌ಲಿಫ್ಟ್ ಮೂಲಕ ಬೇರೆ ಬೇರೆ ರಾಜ್ಯಗಳಿಂದ ಮತ್ತು ವಿದೇಶಗಳಿಂದ ಕನ್ನಡಿಗರು ವಾಪಸ್ಸಾಗುತ್ತಿದ್ದಾರೆ. ಇಂದು ತಾಯ್ನಾಡಿಗೆ 326 ಕನ್ನಡಿಗರು ಬಂದಿಳಿದಿದ್ದಾರೆ. ಬೆಂಗಳೂರಿಗೆ 323 ಜನ ಕನ್ನಡಿಗರು ಬಂದಿಳಿದಿದ್ದಾರೆ. ವಿಶೇಷ ವಿಮಾನದ ಮೂಲಕ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಸುಕಿನ ಜಾವ 4.47ಕ್ಕೆ ಕನ್ನಡಿಗರು ಆಗಮಿಸಿದ್ದಾರೆ. ಮೊದಲಿಗೆ ವಿಮಾನ ಲಂಡನ್‍ನಿಂದ ದೆಹಲಿಗೆ ಬಂದಿದೆ. ನಂತರ ದೆಹಲಿಯಿಂದ ಬೆಂಗಳೂರಿಗೆ …
Read More »ವಾಣಿ ವಿಲಾಸ್ ಆಸ್ಪತ್ರೆ ಸಿಬ್ಬಂದಿ ದಿಢೀರ್ ಪ್ರತಿಭಟನೆ, ಕಾರಣವೇನು ಗೊತ್ತೇ..
ಬೆಂಗಳೂರು, ಮೇ 9- ಪಿಪಿಇ ಕಿಟ್ ಇಲ್ಲ. ನಮಗೆ ಇಲ್ಲಿ ಯಾವ ಸೇಫ್ಟಿ ಇಲ್ಲ… ಕನಿಷ್ಠ ಸುರಕ್ಷಾ ಕ್ರಮಗಳಿಲ್ಲ. ಸೋಂಕಿತರನ್ನೆಲ್ಲಾ ಇಲ್ಲಿಗೆ ಸ್ಥಳಾಂತರ ಮಾಡಿದರೆ ನಾವು ಕೆಲಸ ಮಾಡುವುದು ಹೇಗೆ. ನಮಗೂ ಸೋಂಕು ತಗುಲುವ ಆತಂಕವಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ನಗರದ ವಾಣಿ ವಿಲಾಸ್ ಆಸ್ಪತ್ರೆ ಸಿಬ್ಬಂದಿ ಆಡಳಿತ ಮಂಡಳಿ ವಿರುದ್ಧ ದಿಢೀರ್ ಪ್ರತಿಭಟನೆ ನಡೆಸಿದರು. ವೈದ್ಯರು, ನರ್ಸ್‍ಗಳು, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಬಹಳಷ್ಟು ಜನ ಆಸ್ಪತ್ರೆಯ ಮುಂದೆ ಜಮಾಯಿಸಿ …
Read More »ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಬೆನ್ನಲ್ಲೇ ಅಬಕಾರಿ ಇಲಾಖೆಯಲ್ಲಿ ಭಾರಿ ವರ್ಗಾವಣೆ
ಬೆಂಗಳೂರು, ಮೇ 9- ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಬೆನ್ನಲ್ಲೇ ಅಬಕಾರಿ ಇಲಾಖೆಯಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಇಲಾಖೆಯನ್ನು ಮರು ವಿನ್ಯಾಸಗೊಳಿಸಿ ಅಧಿಕಾರಿಗಳ ಸ್ಥಳ ನಿಯುಕ್ತಿ ಹಾಗೂ ವರ್ಗಾವಣೆ ಮಾಡಲಾಗಿದೆ. 11 ಮಂದಿ ಅಬಕಾರಿ ಉಪ ಆಯುಕ್ತರನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಅದೇ ರೀತಿ 15 ಮಂದಿ ಅಬಕಾರಿ ಉಪ ಅಧೀಕ್ಷಕರಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ. ಮೂರು ಮಂದಿ ಅಬಕಾರಿ ಅಧೀಕ್ಷಕರುಗಳನ್ನು ವರ್ಗಾವಣೆ ಮಾಡಲಾಗಿದೆ ಹಾಗೂ 14 ಮಂದಿ …
Read More »ಎದ್ದು ಬಿದ್ದು ಸ್ವಗ್ರಾಮಕ್ಕೆ ತೆರಳಿದ್ದ ಕಾರ್ಮಿಕರು ಅಷ್ಟೇ ವೇಗದಲ್ಲಿ ಬೆಂಗಳೂರಿಗೆ ವಾಪಾಸ್..!
ಬೆಂಗಳೂರು, ಮೇ 9- ದೇಶಾದ್ಯಂತ ಲಾಕ್ ಡೌನ್ ಸಡಿಲಿಸಿ ವಲಸೆ ಕಾರ್ಮಿಕರಿಗೆ ತಮ್ಮೂರಿಗೆ ಸೇರಿಕೊಳ್ಳಲು ಅವಕಾಶ ಮಾಡಿಕೊಟ್ಟ ಬೆನ್ನಲ್ಲೆ ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿರುವ ಚೆಕ್ ಪೋಸ್ಟ್ ಗಳಿಗೆ ಬರುತ್ತಿರುವ ವಾಹನಗಳ ಸಂಖ್ಯೆ 20 ಪಟ್ಟು ಹೆಚ್ಚಾಗಿದೆ. ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಮಧ್ಯ ಪ್ರದೇಶದಗಳಿಂದ ಸಾವಿರಾರು ವಾಹನಗಳು ಬರಲಾರಂಭಿಸಿವೆ. ಇಲ್ಲಿಂದ ಬೇರೆ ಹೋಗಿ ಕೆಲಸ ಮಾಡುತ್ತಿದ್ದವರು ವಾಪಸ್ ಬರುವುದು ಒಂದು ಕತೆಯಾದರೆ, ಇಲ್ಲಿದ್ದು ಮೇ 4ರ ನಂತರ ಸ್ವಂತ ಅಥವಾ ಬಾಡಿಗೆ …
Read More »ಬೆಂಗಳೂರು – ರಾಜ್ಯದಲ್ಲಿ ಇಂದು 36 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಒಟ್ಟೂ ಸೋಂಕಿತರ ಸಂಖ್ಯೆ 789ಕ್ಕೇ
ಬೆಂಗಳೂರು – ರಾಜ್ಯದಲ್ಲಿ ಇಂದು 36 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಒಟ್ಟೂ ಸೋಂಕಿತರ ಸಂಖ್ಯೆ 789ಕ್ಕೇರಿದೆ. ದಾವಣಗೆರೆ 6, ಬೆಂಗಳೂರು 12, ಭಟ್ಕಳದಲ್ಲಿ 10, ಬೀದರ್ ನಲ್ಲಿ 3, ಚಿತ್ರದಿರ್ಗದಲ್ಲಿ 3, ವಿಜಯಪುರ ಹಾಗೂ ತುಮಕೂರಿನಲ್ಲಿ ತಲಾ 1 ಸೋಂಕು ಪತ್ತೆಯಾಗಿದೆ. ಭಟ್ಕಳದಲ್ಲಿ ನಿನ್ನೆ 12 ಜನರಿಗೆ ಸೋಂಕು ಪತ್ತೆಯಾಗಿತ್ತು. ಇಂದು ಮತ್ತೆ 10 ಜನರಿಗೆ ಸೋಂಕು ತಗುಲಿದೆ. ಬೆಂಗಳೂರಿನ ಪಾದರಾಯನಪುರದಲ್ಲಿ 7 ಜನರಿಗೆ ಸೋಂಕು ತಗುಲಿದೆ. ಬೆಳಗಾವಿಯಲ್ಲಿ …
Read More »ಸರ್ಕಾರದ ಎಡವಟ್ಟಿನಿಂದ ಇದೀಗ ರಾಜ್ಯದಲ್ಲಿ ಕೊರೊನಾ ಸೋಂಕು ಇನ್ನಷ್ಟು ಹೆಚ್ಚುವ ಭೀತಿ
ಬೆಂಗಳೂರು: ಸರ್ಕಾರದ ಎಡವಟ್ಟಿನಿಂದ ಇದೀಗ ರಾಜ್ಯದಲ್ಲಿ ಕೊರೊನಾ ಸೋಂಕು ಇನ್ನಷ್ಟು ಹೆಚ್ಚುವ ಭೀತಿ ಎದುರಾಗಿದೆ. ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸುವ ಮೂಲಕ ಇದೀಗ ಗ್ರಾಮೀಣ ಪ್ರದೇಶಗಳಲ್ಲೂ ಕೊರೊನಾ ಸೋಂಕು ಹರಡುವ ಸಾಧ್ಯತೆಯಿದೆ. ಲಾಕ್ ಡೌನ್ ಸಡಿಲಿಕೆಯಿಂದಾಗಿ ಬೆಂಗಳೂರಿನಲ್ಲಿದ್ದ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ತೆರಳಲು ಕೆ ಎಸ್ ಆರ್ ಟಿಸಿಯಿಂದ ಉಚಿತ ಬಸ್ ವ್ಯವಸ್ಥೆ ಮಾಡಿ ಕಳುಹಿಸಲಾಗಿತ್ತು. ಹೀಗೆ ಕಳುಹಿಸುವಾಗ ಕಾರ್ಮಿಕರಿಗೆ ಕಾಟಾಚಾರಕ್ಕೆ ತಪಾಸಣೆ ನಡೆಸಲಾಗಿದೆ ಹೊರತು ಸೂಕ್ತವಾಗಿ ತಪಾಸಣೆ …
Read More »ತಣ್ಣಗಿದ್ದ ಹೊಂಗಸಂಧ್ರದಲ್ಲಿ ಮತ್ತೆ ಕೊರೊನಾ – ಕ್ವಾರಂಟೈನ್ ಮುಗಿಸಿದ್ದ 5 ಮಂದಿಗೆ ಸೋಂಕು
ಬೆಂಗಳೂರು: ಹೊಂಗಸಂಧ್ರದಲ್ಲಿ ಬಿಹಾರಿ ಕೂಲಿ ಕಾರ್ಮಿಕನಿಂದ 29 ಪ್ರಕರಣಗಳು ಪತ್ತೆಯಾಗಿತ್ತು. ಕೆಲ ದಿನಗಳ ನಂತರ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ಹೊಂಗಸಂಧ್ರ ಸಹಜ ಸ್ಥಿತಿಯತ್ತ ಸಾಗುತ್ತಿದೆ ಎನ್ನುವಷ್ಟರಲ್ಲೇ ಬಿಹಾರಿ ಕೂಲಿ ಕಾರ್ಮಿಕನ ಸಂಬಂಧ ಕ್ವಾರಂಟೈನ್ ಮಾಡಿದ್ದವರಲ್ಲಿ ಬರೋಬ್ಬರಿ ಐದು ಜನರಿಗೆ ಸೊಂಕು ಪತ್ತೆಯಾಗಿದೆ. ಇದರಿಂದ ಮತ್ತೆ ಹೊಂಗಸಂಧ್ರದಲ್ಲಿ ಭೀತಿ ಎದುರಾಗಿದೆ. ಬಿಹಾರಿ ಕೂಲಿ ಕಾರ್ಮಿಕನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 184 ಜನರನ್ನ ಹೋಟೆಲ್ ಕ್ವಾರಂಟೈನ್ ಮಾಡಲಾಗಿತ್ತು. ಇವರನ್ನು 14 ದಿನಗಳು ಕ್ವಾರಂಟೈನ್ …
Read More »ಬೆಂಗಳೂರಿನಲ್ಲಿ ಮತ್ತೊಬ್ಬ ಗರ್ಭಿಣಿಗೆ ಕೊರೊನಾ…………
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೊರೊನಾಸುರ ಅಬ್ಬರಿಸುತ್ತಿದ್ದು, ಇಂದು ಇಬ್ಬರು ಗರ್ಭಿಣಿಯರಿಗೆ ಕೊರೊನಾ ಸೋಂಕು ತಗುಲಿದೆ. ಮಧ್ಯಾಹ್ನ ಪಾದರಾಯನಪುರದ ಗರ್ಭಿಣಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಅದೇ ವ್ಯಾಪ್ತಿಯ ಮತ್ತೊಬ್ಬ ಗರ್ಭಿಣಿಗೆ ಸೋಂಕು ಕಾಣಿಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ಇಂದು ಬೆಂಗಳೂರಿನ ಒಟ್ಟು 16 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಪಾದರಾಯನಪುರ 10ನೇ ಕ್ರಾಸ್ ನಿವಾಸಿ 19 ವರ್ಷದ 8 ತಿಂಗಳು ಗರ್ಭಿಣಿಗೆ ಸೋಂಕು ತಗುಲಿದೆ. ಮಹಿಳೆಯ ಪತಿ (ರೋಗಿ 706)ಗೆ ಸಾಮೂಹಿಕ ಪರೀಕ್ಷೆಯಲ್ಲಿ …
Read More »ಕಂಠಪೂರ್ತಿ ಕುಡಿದಿದ್ದ ರೌಡಿಶೀಟರ್‌ನನ್ನ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು……….
ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದಾಗಿ ಮದ್ಯ ಸಿಗದೆ ಸೈಲೆಂಟ್ ಆಗಿದ್ದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈಗ ವೈಲೆಂಟ್ ಆಗಿದೆ. ಮದ್ಯ ಮಾರಟಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿದಾಗಿನಿಂತ ನಿತ್ಯವೂ ಒಂದಿಲ್ಲೊಂದು ಹಲ್ಲೆ, ಕೊಲೆ ಪ್ರಕರಣಗಳು ನಡೆಯುತ್ತಲೇ ಇವೆ. ಕೆಲ ದುಷ್ಕರ್ಮಿಗಳು ನಿನ್ನೆ ರಾತ್ರಿ ಕಂಠಪೂರ್ತಿ ಕುಡಿದಿದ್ದ ಓರ್ವ ರೌಡಿಶೀಟರ್‌ನನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆಗೈದಿದ್ದಾರೆ. ಬ್ಯಾಟರಾಯನಪುರದ ಅಶೋಕ್ ಅಲಿಯಾಸ್ ದಡಿಯಾ ಕೊಲೆಯಾದ ರೌಡಿಶೀಟರ್. ಬ್ಯಾಟರಾಯನಪುರದ ಭಾರತೀನಗರದಲ್ಲಿ ಘಟನೆ ನಡೆದಿದೆ. ಗುರುವಾರ ತಡರಾತ್ರಿ ಕುಡಿದ …
Read More »