ಬೆಂಗಳೂರು, ಏ.3- ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳನ್ನು ತಡೆಗಟ್ಟಬೇಕಾದ ಅಗತ್ಯವಿರುವ ಕಾರಣ ಸರ್ಕಾರದ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಂತ್ರಿಕ ಸಲಹಾ ಸಮಿತಿಯವರ ಶಿಫಾರಸಿನ ಮೇಲೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ಮಾಡಿ ಮಾರ್ಗಸೂಚಿಯನ್ನು ಜಾರಿ ಮಾಡಲಾಗಿದೆ. ಇದು ಏಕಾಏಕಿ ತೆಗೆದುಕೊಂಡ ನಿರ್ಧಾರವಲ್ಲ ಎಂದು ಹೇಳಿದರು. ವೈಜ್ಞಾನಿಕ ವರದಿ ಆಧಾರದ ಮೇಲೆ ಕ್ರಮ ಕೈಗೊಂಡಿದ್ದೇವೆ. ಏಕಾಏಕಿ ಈ …
Read More »ವೇತನ ಹೆಚ್ಚಳ ಬಗ್ಗೆ ಸಿಹಿ ಸುದ್ದಿ ನೀಡಿದ ಡಿಸಿಎಂ ಸವದಿ
ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನವನ್ನು ಸೋಮವಾರ ಹೆಚ್ಚಳಮಾಡುವ ಬಗ್ಗೆ ನಿರ್ಧಾರ ಪ್ರಕಟಿಸಲಾಗುವುದು ಎಂದು ಸಾರಿಗೆ ಸಚಿವರಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಕೆಎಸ್‌ಆರ್ಟಿಸಿ ನೌಕರರ ತರಬೇತಿ ಕೇಂದ್ರ ಆವರಣದಲ್ಲಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಾರಿಗೆ ನೌಕರರ ಸಂಘಟನೆಗಳ ಪ್ರಮುಖರ ಜೊತೆ ಚರ್ಚೆ ನಡೆಸಿದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಸೋಮವಾರ ಹಣಕಾಸು ಇಲಾಖೆ ಹಾಗೂ ಸಿಎಂ …
Read More »6 -9 ನೇ ತರಗತಿ ಸ್ಥಗಿತ, ಸಿನಿಮಾ ಶೇ. 50 ರಷ್ಟು ಸೀಟ್ ಭರ್ತಿ; ಮತ್ತೆ ಕಠಿಣ ನಿಯಮ ಜಾರಿ -ಇಲ್ಲಿದೆ ಮಾಹಿತಿ
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಆತಂಕವನ್ನುಂಟು ಮಾಡಿದ ಹಿನ್ನೆಲೆಯಲ್ಲಿ ಸೋಂಕು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಕಠಿಣ ನಿಯಮ ಜಾರಿಗೆ ತರಲಾಗಿದೆ. ವಿದ್ಯಾಗಮವೂ ಸೇರಿದಂತೆ 6 ರಿಂದ 9 ನೇ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. 10, 11, 12 ನೇ ತರಗತಿಗಳು ಪ್ರಸ್ತುತವಿರುವಂತೆಯೇ ಮುಂದುವರೆಯುತ್ತದೆ. ಆದರೆ ತರಗತಿಗಳಿಗೆ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಾಗಿರುವುದಿಲ್ಲ. ವಸತಿ ಶಾಲೆಗಳು ಬೋರ್ಡಿಂಗ್ ಶಾಲೆಗಳಲ್ಲಿ 10, 11 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆ ಬರೆಯುವ …
Read More »ರಾಬರ್ಟ್ , ಹೀರೋ ಬಳಿಕ ‘ಯುರತ್ನ’ನಿಗೂ ತಟ್ಟಿದ ಪೈರೆಸಿ ಬಿಸಿ..!
ಬೆಂಗಳೂರು: ನಿನ್ನೆ ಅಂದ್ರೆ ಏಪ್ರಿಲ್ 1ರಂದು ರಿಲೀಸ್ ಆಗಿ ಸಕ್ಸಸ್ ಫುಲ್ ಆಗಿ ಪ್ರದರ್ಶನ ಕಾಣ್ತಿರುವ ಯುವರತ್ನ ಸಿನಿಮಾಗೂ ಪೈರಸಿ ಬಿಸಿ ತಟ್ಟಿದೆ. ಹೌದು ಪೊಗರು, ಹೀರೋ, ರಾಬರ್ಟ್ ಸಿನಿಮಾಗಳ ನಂತರ ಇದೀಗ ಯುವರತ್ನ ಸಿನಿಮಾಗೂ ಪೈರೆಸಿ ಕಾಟ ಎದುರಾಗಿದೆ. ಸಿನಿಮಾ ತೆರೆಕಂಡ ಮೊದಲ ಮೊದಲ ದಿನವೇ ಚಿತ್ರ ಪೈರಸಿ ಆಗಿದ್ದು, ಟೆಲಿಗ್ರಾಂ ಸೇರಿದಂತೆ ಎಲ್ಲೆಡೆ ಯುವರತ್ನ ಚಿತ್ರ ಹರಿದಾಡುತ್ತಿದೆ. ಇತ್ತ ಪುನೀತ್ ಅಭಿಮಾನಿಗಳು ಪೈರಸಿ ವಿರುದ್ಧ ಧ್ವನಿಯೆತ್ತಿದ್ದು, ಟೆಲಿಗ್ರಾಂ …
Read More »ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಪತ್ರ ಬರೆದಿದ್ದು ಸರಿಯಲ್ಲ: ಜಗದೀಶ ಶೆಟ್ಟರ್
ಬೆಳಗಾವಿ: ‘ಸಚಿವ ಕೆ.ಎಸ್. ಈಶ್ವರಪ್ಪ ಅವರು ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿದ್ದು ಸರಿಯಲ್ಲ’ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು. ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಬಹಿರಂಗವಾಗಿ ಪತ್ರ ಬರೆಯುವುದು, ಅದನ್ನು ರಾಜ್ಯಪಾಲರಿಗಾಗಲಿ ಅಥವಾ ಪಕ್ಷದ ಮೇಲಿನವರಿಗಾಗಲಿ ಕಳುಹಿಸುವಂಥದು ಆಗಬಾರದಿತ್ತು. ಏನಿದ್ದರೂ ಮುಖ್ಯಮಂತ್ರಿ ಜೊತೆಯೇ ಚರ್ಚಿಸಬೇಕಿತ್ತು. ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಬೇಕಿತ್ತು. ಇದೆಲ್ಲವೂ ನಾಲ್ಕು ಗೋಡೆಗಳ ಒಳಗೆ ಆಗಬೇಕಾಗಿತ್ತು’ ಎಂದು ಪ್ರತಿಕ್ರಿಯಿಸಿದರು. ‘ನಾವೆಲ್ಲವೂ ಬಿ.ಎಸ್. ಯಡಿಯೂರಪ್ಪ ನಾಯಕತ್ವದಲ್ಲೇ …
Read More »ಭ್ರಷ್ಟಾಚಾರ ಆರೋಪ: ಸರ್ಕಾರ ವಜಾಕ್ಕೆ ಸಿದ್ದರಾಮಯ್ಯ ಆಗ್ರಹ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ನೇರ ಆರೋಪ ಮಾಡಿರುವುದರಿಂದ ರಾಜ್ಯಪಾಲರು ತಕ್ಷಣ ಮಧ್ಯ ಪ್ರವೇಶಿಸಿ ಮುಖ್ಯಮಂತ್ರಿಯನ್ನು ವಜಾಗೊಳಿಸಬೇಕು. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಶಿಫಾರಸು ಮಾಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ರಾಜ್ಯದ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ. ಬಿಜೆಪಿ ಸರ್ಕಾರದಲ್ಲಿರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ಅಕ್ರಮಗಳ ಕುರಿತು ವಿರೋಧ …
Read More »ಸಿಡಿ ಸಂತ್ರಸ್ತೆಯ ಬಟ್ಟೆ ತೆಗೆದುಕೊಂಡ ಎಸ್‌ಐಟಿ; ಎಫ್ಎಸ್ಎಲ್ ಪ್ರಯೋಗಾಲಯಕ್ಕೆ ಕಳುಹಿಸಲು ಸಿದ್ಧತೆ
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿರುವ ಸಂತ್ರಸ್ತ ಯುವತಿ ವಾಸವಿದ್ದ ಪಿಜಿ ಕೇಂದ್ರದಲ್ಲಿ ಎಸ್‌ಐಟಿ ಅಧಿಕಾರಿಗಳು ಮಹಜರು ಕಾರ್ಯ ನಡೆಸಿದ್ದಾರೆ. ಆಕೆಗೆ ಸಂಬಂಧಿಸಿದ ಬಟ್ಟೆ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ಪಿಜಿಯನ್ನು ಮಹಜರು ಮಾಡಲಾಗಿದ್ದು, ವಶಕ್ಕೆ ಪಡೆದ ಎಲ್ಲಾ ವಸ್ತುಗಳನ್ನೂ ಸೀಲ್ ಮಾಡಿ ಎಫ್ಎಸ್ಎಲ್ ಪ್ರಯೋಗಾಲಯಕ್ಕೆ ರವಾನಿಸುವುದಾಗಿ ತಿಳಿದುಬಂದಿದೆ. ಆ ಮೂಲಕ ಇಂದು ಬೆಳಗ್ಗೆಯಿಂದ ಸತತ …
Read More »ಕರ್ನಾಟಕದಲ್ಲಿ ವಕೀಲಿ ವೃತ್ತಿ ನಡೆಸಲು ಜಗದೀಶ್ ಕುಮಾರ್ ಹೆಸರನ್ನೇ ನೋಂದಾಯಿಸಿಲ್ಲ: ಬಾರ್ ಕೌನ್ಸಿಲ್ ಸ್ಪಷ್ಟನೆ
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಿಡಿ ಸಂತ್ರಸ್ತೆಯ ಪರ ವಕಾಲತ್ತು ವಹಿಸಿರುವ ವಕೀಲ ಕೆ.ಎನ್.ಜಗದೀಶ್ ಕುಮಾರ್ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಕರ್ನಾಟಕದಲ್ಲಿ ವಕೀಲಿ ವೃತ್ತಿ ನಡೆಸಲು ಕೆ.ಎನ್.ಜಗದೀಶ್ ಕುಮಾರ್ ಹೆಸರನ್ನು ನೋಂದಾಯಿಸಿಯೇ ಇಲ್ಲ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ. ಈ ಕುರಿತು ವಕೀಲ ಎಸ್.ಬಸವರಾಜ್ ಎಂಬುವವರು ಕೇಳಿದ್ದ ಪ್ರಶ್ನೆಗೆ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಸ್ಪಷ್ಟನೆ ನೀಡಿದ್ದು, ಕೆ.ಎನ್.ಜಗದೀಶ್ ಕುಮಾರ್ ಕರ್ನಾಟಕದಲ್ಲಿ ವಕೀಲಿ ವೃತ್ತಿಗೆ …
Read More »ಮಾಜಿ ಸಿಎಂ ಕುಮಾರಸ್ವಾಮಿ ಸೇರಿ ಐವರು ಶಾಸಕರಿಗೆ ಸಮನ್ಸ್ ಜಾರಿ
ಬೆಂಗಳೂರು: ಜೆಡಿಎಸ್ ತೊರೆಯಲು 5 ಕೋಟಿ ರೂಪಾಯಿ ಆಮಿಷವೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಶಾಸಕ ಶ್ರೀನಿವಾಸ್ ಗೌಡ, ಡಿಸಿಎಂ ಅಶ್ವತ್ಥ ನಾರಾಯಣ, ಸಚಿವ ಯೋಗೇಶ್ವರ್, ಎಸ್.ಆರ್. ವಿಶ್ವನಾಥ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ. ಜೆಡಿಎಸ್ ಪಕ್ಷ ತ್ಯಜಿಸಲೆಂದು ಬಿಜೆಪಿ ನಾಯಕರಿಂದ ಬರೋಬ್ಬರಿ 5 ಕೋಟಿ ರೂಪಾಯಿ ಆಮಿಷವೊಡ್ಡಲಾಗಿತ್ತು ಎಂದು ಆರೋಪಿಸಿ ಟಿ.ಜೆ. ಅಬ್ರಾಹಂ ಖಾಸಗಿ ದೂರು ದಾಖಲಿಸಿದ್ದರು. ಅಲ್ಲದೇ ಈ ಬಗ್ಗೆ ವಿಧಾನಸಭೆಯಲ್ಲಿಯೂ ಕೆ. ಶ್ರೀನಿವಾಸ್ …
Read More »ಸಿಡಿ ಕೇಸ್: ಆರ್‌ಟಿ ನಗರದ ಪಿಜಿಯಲ್ಲಿ ಎಸ್‌ಐಟಿ ಮಹಜರು
ಬೆಂಗಳೂರು, ಏಪ್ರಿಲ್ 01: ಸಿಡಿ ಪ್ರಕರಣ ಸಂಬಂಧ ಸಂತ್ರಸ್ತ ಯುವತಿ ತಂಗಿದ್ದ ಆರ್.ಟಿ. ಪಿಜಿಯಲ್ಲಿ ಎಸ್‌ಐಟಿ ಅಧಿಕಾರಿಗಳು ಗುರುವಾರ ಬೆಳಗ್ಗೆ ಮಹಜರು ನಡೆಸಿದ್ದಾರೆ. ಸಿಡಿ ಸಂತ್ರಸ್ತ ಲೇಡಿ ತಂಗಿದ್ದ ಪಿಜಿ ಮೇಲೆ ಈ ಹಿಂದೆ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. 9 ಲಕ್ಷ ರೂ. ನಗದು ಹಣವನ್ನು ವಶಪಡಿಸಿಕೊಂಡಿದ್ದರು. ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಅರೋಪ ಹೊರಿಸಿರುವ ಸಿಡಿಲೇಡಿ ಸಮ್ಮುಖದಲ್ಲಿ ಇದೀಗ ಆಕೆ ತಂಗಿದ್ದ ಪಿಜಿಯಲ್ಲಿ ಮಹಜರು ನಡೆಸಿದರು. ಜತೆಗೆ …
Read More »