ಬೆಂಗಳೂರು, ಏಪ್ರಿಲ್ 13; “ಕೋವಿಡ್ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಲು ಏಪ್ರಿಲ್ 18ರಂದು ಸರ್ವಪಕ್ಷಗಳ ಸಭೆಯನ್ನು ಕರೆಯಲಾಗಿದೆ. ಸದ್ಯಕ್ಕೆ ಲಾಕ್ ಡೌನ್ ಪ್ರಶ್ನೆಯೇ ಇಲ್ಲ” ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದರು. ಬಸವಕಲ್ಯಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಯಡಿಯೂರಪ್ಪ, “ಮೇ 2ರ ತನಕ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ತಾಂತ್ರಿಕ ಸಲಹಾ ಸಮಿತಿ ಹೇಳಿದೆ” ಎಂದರು. ತಾಂತ್ರಿಕ ಸಹಲಾ ಸಮಿತಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ …
Read More »ನೌಕರರ ಷರತ್ತು ಒಪ್ಪಿಕೊಳ್ಳಲು ಸಾಧ್ಯವಿಲ್ಲ- ಸಿಎಂ ಬಿಎಸ್ ವೈ
ಬೆಂಗಳೂರು : ಇಂದು ಯುಗಾದಿ ಹಬ್ಬದ ಹಿನ್ನಲೆಯಲ್ಲಿ ನಾಡಿನ ಸಮಸ್ತ ಜನರಿಗೆ ಸಿಎಂ ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ. ಬಳಿಕ ನೌಕರರ ಮುಷ್ಕರದ ಬಗ್ಗೆ ಬಸವ ಕಲ್ಯಾಣದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನೌಕರರ ಷರತ್ತು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹಬ್ಬಹರಿದಿನಗಳಲ್ಲಿ ಈ ರೀತಿ ಮಾಡೋದು ಸರಿಯಿಲ್ಲ. ಹಠವನ್ನು ಬಿಟ್ಟು ಕೆಲಸಕ್ಕೆ ಹಾಜರಾಗಬೇಕು. ಕೆಲಸಕ್ಕೆ ಹಾಜರಾಗದವರಿಗೆ ಸಂಬಳ ಕೊಡಲ್ಲ ಎಂದು ಹೇಳಿದ್ದಾರೆ. ಸದ್ಯಕ್ಕೆ ಲಾಕ್ ಡೌನ್ ಇಲ್ಲ. ಏ.18, 19ಕ್ಕೆ ಸರ್ವಪಕ್ಷದ ಸಭೆ …
Read More »7 ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ : ಇಂದು ಭಿಕ್ಷೆ ಬೇಡುವ ಮೂಲಕ ವಿನೂತನ ಪ್ರತಿಭಟನೆ
ಬೆಂಗಳೂರು : ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಇಂದುಉ 7 ನೇ ದಿನಕ್ಕೆ ಕಾಲಿಟ್ಟಿದ್ದು, ಯುಗಾದಿ ಹಬ್ಬಕ್ಕೆ ಸಂಬಳವಿಲ್ಲದ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಇಂದು ರಾಜ್ಯಾದ್ಯಂತ ಭಿಕ್ಷೆ ಬೇಡುವ ಮೂಲಕ ವಿನೂತನ ಪ್ರತಿಭಟನೆಗೆ ಮುಂದಾಗಿದ್ದಾರೆ. ಸಾರಿಗೆ ನೌಕರರು ತಟ್ಟೆ ಲೋಟ ಹಿಡಿದು ಕುಟುಂಬದ ಜೊತೆ ಭಿಕ್ಷಾಟನೆ ಮಾಡಲು ನಿರ್ಧರಿಸಿದ್ದು, ಯಾವುದೇ ಕಾರಣಕ್ಕು ಕರ್ತವ್ಯಕ್ಕೆ ಮರಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ ಕುರಿತು ಮಾತನಾಡಿರುವ …
Read More »ನಾಡಿನ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಯುಗಾದಿ ಹಬ್ಬಕ್ಕೆ ಕನ್ನಡದಲ್ಲೇ ಶುಭಾಶಯಗಳನ್ನು ತಿಳಿಸಿದ್ದಾರೆ.
ನವದೆಹಲಿ : ನಾಡಿನ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಯುಗಾದಿ ಹಬ್ಬಕ್ಕೆ ಕನ್ನಡದಲ್ಲೇ ಶುಭಾಶಯಗಳನ್ನು ತಿಳಿಸಿದ್ದಾರೆ. ಯುಗಾದಿ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟರ್ ನಲ್ಲಿ ಶುಭಾಶಯ ಕೋರಿದ್ದು, ನಿಮ್ಮೆಲ್ಲರಿಗೂ ಯುಗಾದಿಯ ಶುಭಕಾಮನೆಗಳು, ಮುಂಬರುವ ವರ್ಷ ಅದ್ಭುತಬವಾಗಲಿ, ನೀವೆಲ್ಲರೂ ಆರೋಗ್ಯ ಹಾಗೂ ಸಂತಸದಿಂದಿರಿ, ಎಲ್ಲೆಡೆ ಸಮೃದ್ಧಿ ಹಾಗೂ ಸಂತೋಷ ಪಸರಿಸಲಿ ಎಂದು ಶುಭಕೋರಿದ್ದಾರೆ. ದೇಶಾದ್ಯಂತ ಇಂದು ಯುಗಾದಿ ಹಬ್ಬದ ಸಂಭ್ರಮ. ಕೊರೊನಾ ನಡುವೆಯೂ ನಿಯಮಗಳನ್ನು ಪಾಲಿಸುವ ಮೂಲಕ …
Read More »ಕೊರೊನಾ ಕೂಪವಾಯ್ತು ಬೆಂಗಳೂರು : ಇಂದು ಮತ್ತೆ ಕೊರೊನಾ ಬ್ಲಾಸ್ಟ್ Corona
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿದಿನ ಕೊರೊನಾ ಸ್ಫೋಟವಾಗುತ್ತಿದೆ. ನಗರದ ಗಲ್ಲಿ ಗಲ್ಲಿಯಲ್ಲೂ ಕೊರೊನಾ ಕೇಸ್ ಗಳು ಪತ್ತೆಯಾಗುತ್ತಿರೋದು ಆತಂಕಕ್ಕೆ ಕಾರಣವಾಗಿದೆ. ನಿನ್ನೆ ಒಂದೇ ದಿನ 7 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, ಮೆಟ್ರೋ ಮಂದಿಗೆ ಆಘಾತ ನೀಡಿದ್ದರೇ ಇಂದು ಮತ್ತೆ ಕೊರೊನಾ ಬ್ಲಾಸ್ಟ್ ಆಗುವ ಸಾಧ್ಯತೆಗಳಿವೆ. ಮೂಲಗಳ ಪ್ರಕಾರ ಇಂದು 6574 ಜನರಲ್ಲಿ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಮುಖ್ಯವಾಗಿ ಬೆಂಗಳೂರು ದಕ್ಷಿಣ ವಿಭಾಗದಲ್ಲೇ ಅತಿ ಹೆಚ್ಚು …
Read More »”ಉತ್ತರ ಕರ್ನಾಟಕಕ್ಕೆ ಪ್ರಮುಖ ಇಲಾಖೆಗಳ ಕಚೇರಿ ಸ್ಥಳಾಂತರಕ್ಕೆ ಕಾನೂನಾತ್ಮಕ ಹೋರಾಟ”
ಬೆಂಗಳೂರು, ಎ. 11: ಉತ್ತರ ಕರ್ನಾಟಕದ ಜನತೆಯ ಅನುಕೂಲಕ್ಕಾಗಿ ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿರುವ ಪ್ರಮುಖ ಇಲಾಖೆಯ ಕಚೇರಿಗಳನ್ನು ಉತ್ತರ ಕರ್ನಾಟಕ ಭಾಗಕ್ಕೆ ಸ್ಥಳಾಂತರಿಸಬೇಕು. ಈ ಕುರಿತಂತೆ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದು ಉತ್ತರ ಕರ್ನಾಟಕ ರೈತರ ಅಭಿವೃದ್ದಿ ಸಂಘದ ಅಧ್ಯಕ್ಷ ಯಾಸೀರ್ ಜವಳಿ, ನ್ಯಾಯವಾದಿ ಶೇಖ್ ಸೌದ್ ತಿಳಿಸಿದ್ದಾರೆ. ರವಿವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019ರಲ್ಲಿಯೇ ರಾಜ್ಯ ಸರಕಾರ ಗೆಜೆಟ್ ಹೊರಡಿಸಿ ಅನೇಕ ಪ್ರಮುಖ ಇಲಾಖೆ ಕಚೇರಿಗಳನ್ನು …
Read More »ಈ ಹಿಂದೆ ಬಲವಂತದ ಹೇಳಿಕೆ ನೀಡಿದ್ದೇನೆ. ಹೀಗಾಗಿ ನನಗೆ ಮತ್ತೆ ಹೇಳಿಕೆ ನೀಡಲು ಅವಕಾಶ ಮಾಡಿಕೊಡಬೇಕು: ಸಿಡಿ ಯುವತಿ?
ಬೆಂಗಳೂರು: ಇಂದು ಎಸ್‍ಐಟಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಲು ಮುಂದಾದ ಸಿಡಿ ಯುವತಿ ಇದೀಗ ಮತ್ತೆ ಸಮಯಾವಕಾಶ ಕೇಳಿದ್ದಾರೆ. ಹೌದು. ಇದ್ದಕ್ಕಿದ್ದಂತೆ ಇಂದು ಸಿಡಿ ಯುವತಿ ಎಸ್‍ಐಟಿ ಅಧಿಕಾರಿಗಳ ಮುಂದೆ ಬಂದು, ಈ ಹಿಂದೆ ಬಲವಂತದ ಹೇಳಿಕೆ ನೀಡಿದ್ದೇನೆ. ಹೀಗಾಗಿ ನನಗೆ ಮತ್ತೆ ಹೇಳಿಕೆ ನೀಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಇದೀಗ ಹೇಳಿಕೆ ನೀಡಲು ಕೂಡ ಸಮಯವನ್ನು ಸಿಡಿ ಯುವತಿ ಕೇಳಿದ್ದಾರೆ. ವಕೀಲರು ಬಂದು ಹೇಳಿಕೆ …
Read More »ಶಮಂತ್ ಬದಲು ವೈಜಯಂತಿ ಮನೆಯಿಂದ ಹೊರಕ್ಕೆ- ಕಿಚ್ಚನ ಖಡಕ್ ಎಚ್ಚರಿಕೆ
ಬೆಂಗಳೂರು: ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿಯಾಗಿದ್ದ ವೈಜಯಂತಿ ಅಡಿಗ ಈ ವಾರ ಎಲಿಮಿನೇಟ್ ಆಗಿದ್ದು, ಈ ಮೂಲಕ ಶಮಂತ್ ಸೇವ್ ಆಗಿದ್ದಾರೆ. ಕೇವಲ ನಾಲ್ಕೇ ದಿನಕ್ಕೆ ವೈಜಯಂತಿ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿರುವುದು ಅಚ್ಚರಿ ಮೂಡಿಸಿದ್ದು, ಇನ್ನೂ ಆಶ್ಚರ್ಯವೆಂಬಂತೆ ವೈಜಯಂತಿ ಈ ವಾರ ಮನೆಯಿಂದ ಎಲಿಮಿನೇಟ್ ಆಗಲು ನಾಮಿನೇಟ್ ಸಹ ಆಗಿರಲಿಲ್ಲ. ಹೀಗಿರುವಾಗ ತಾವೇ ಮನೆಯಿಂದ ಹೊರ ಬರುವ ನಿರ್ಧಾರವನ್ನು ವೈಜಯಂತಿ ಮಾಡಿದ್ದಾರೆ ಇದರಿಂದ …
Read More »ಹೆಚ್.ಡಿ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್, ಯು.ಟಿ. ಖಾದರ್ ವಿರುದ್ಧ ಬಿಜೆಪಿ ದೂರು
ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ, ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಶಾಸಕರಾದ ಯು.ಟಿ. ಖಾದರ್ ಮತ್ತಿತರ ಮುಖಂಡರ ವಿರುದ್ಧ ಬಿಜೆಪಿ ವತಿಯಿಂದ ಇಂದು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗೆ ದೂರು ಸಲ್ಲಿಸಲಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಅವರು ಬಸವಕಲ್ಯಾಣದ ಗಾಂಧಿವೃತ್ತದಲ್ಲಿ ಭಾಷಣ ಮಾಡುವ ವೇಳೆ “ನಗರ ಮತ್ತು ಗ್ರಾಮೀಣ ವಾಸಿಗಳ ಪ್ರತಿ ಕುಟುಂಬಕ್ಕೆ ಒಂದು ಮನೆ ಮಂಜೂರು ಮಾಡುತ್ತೇನೆ” ಎಂದು ಮತದಾರರಿಗೆ ಆಮಿಷ ತೋರಿರುತ್ತಾರೆ. ಇದು ಚುನಾವಣಾ …
Read More »ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಸಾರಿಗೆ ನೌಕರರು : ಇಂದು ಡಿಸಿ, ತಹಶೀಲ್ದಾರ್ ಕಚೇರಿ ಮುಂದೆ ತಟ್ಟೆ, ಜಾಗಟೆ ಬಡಿದು ಪ್ರತಿಭಟನೆ
ಬೆಂಗಳೂರು : ರಾಜ್ಯ ಸರ್ಕಾರ ಹಾಗೂ ಸಾರಿಗೆ ನೌಕರರ ನಡುವಿನ ನಾ ಕೊಡೆ, ನಾ ಬಿಡೆ ಎನ್ನುವ ಸಂಘರ್ಷ ಇಂದಿಗೆ 6ನೇ ದಿನಕ್ಕೆ ಕಾಲಿಟ್ಟಿದೆ. ಮುಷ್ಕರ ನಿರತರನ್ನು ಮನವೊಲಿಸೋ ಪ್ರಯತ್ನಕ್ಕೆ ಇಳಿದಯಂತ ರಾಜ್ಯ ಸರ್ಕಾರ, ವಿವಿಧ ತಂತ್ರಗಾರಿಕೆ ಮೂಲಕ ನೌಕರರನ್ನು ಮುಷ್ಕರದಿಂದ ಸೇವೆಗೆ ಮರಳೋದಕ್ಕೆ ಪ್ರಯತ್ನಕ್ಕಿಳಿದಿದೆ. ಇದರ ಮಧ್ಯೆ ಇಂದಿನಿಂದ ರಾಜ್ಯ ಸರ್ಕಾರ ವಿರುದ್ಧ ಸಾರಿಗೆ ನೌಕರರು ಸಿಡಿದೆದ್ದಿದ್ದು, ತಮ್ಮ ಪ್ರತಿಭಟನೆಯನ್ನು ಮತ್ತೆ ತೀವ್ರಗೊಳಿಸಿದ್ದಾರೆ. ಇಂದಿನಿಂದ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಕಚೇರಿ …
Read More »