ಭೀಮಾತೀರದ ಮಹಾದೇವ ಸಾಹುಕಾರ್ ಪ್ರಕರಣ : ಒಂದೂವರೆ ಸಾವಿರ ಪೊಲೀಸರು ನಿಯೋಜನೆ ವಿಜಯಪುರ : ಭೀಮಾತೀರದ ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ ಗುಂಡಿನ ದಾಳಿ ಪ್ರಕರಣ ತನಿಖೆಗಾಗಿ, ಒಂದೂವರೆ ಸಾವಿರ ಪೊಲೀಸರು ಒಳಗೊಂಡ ಹತ್ತು ತಂಡಗಳುನ್ನು ನಿಯೋಜನೆ ಮಾಡಲಾಗಿದೆ. ಅಚ್ಚರಿಯಾದರು ಸತ್ಯ. ಯಾವುದಾದರೂ ಒಂದು ಅಪರಾಧ ಪ್ರಕರಣವನ್ನು ಒಬ್ಬಿಬ್ಬರು ಪೊಲೀಸರು ಅಥವಾ ಹತ್ತಾರು ಪೊಲೀಸರ ಒಂದು ತಂಡ ಬೆನ್ನು ಹತ್ತುವುದು ಸಾಮಾನ್ಯ. ಆದರೆ ಈ ಪ್ರಕರಣದ ತನಿಖೆಗಾಗಿ …
Read More »24 ಗಂಟೆಗಳಲ್ಲಿಯೇ 195 ಕೋಟಿ ರೂ ಅನುದಾನ ಬಿಡುಗಡೆ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ವಿಜಯಪುರ: ‘ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಅನೇಕ ಬಾರಿ ಭೇಟಿಯಾಗಿದ್ದೆ. ವಿಜಯಪುರಕ್ಕೆ ಅನುದಾನ ಬಿಡುಗಡೆ ಮಾಡುವ ಸಂಬಂಧ ಮನವಿ ಮಾಡಿದ್ದಾಗ ಅನುದಾನದ ಭರವಸೆ ನೀಡಿದ್ದರು. ಆದರೆ ಬಿಡುಗಡೆ ಮಾಡಿರಲಿಲ್ಲ. ಆದರೆ ಮೊನ್ನೆ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡಿದ್ದರ ಫಲವಾಗಿ ಕೇವಲ 24 ಗಂಟೆಗಳಲ್ಲಿಯೇ 195 ಕೋಟಿ ರೂ ಅನುದಾನ ಬಿಡುಗಡೆ ಮಾಡಿದ್ದಾರೆ’ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲಿದ್ದಾರೆ, ಉತ್ತರ ಕರ್ನಾಟಕದವರೊಬ್ಬರು …
Read More »B.S.ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಶಾಸಕ ಯತ್ನಾಳ್ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.ಶಾಸಕ ಬಸನಗೌಡಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರ: ಸಿಎಂ ಸ್ಥಾನದಿಂದ B.S.ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಶಾಸಕ ಯತ್ನಾಳ್ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. BSY 3 ವರ್ಷವೂ ಸಿಎಂ ಆಗಿರ್ತಾರೆಂದು ನಾನೇನೂ ಹೇಳಲ್ಲ. ಸೂರ್ಯ, ಚಂದ್ರರಿರುವಷ್ಟು ದಿನ CM ಆಗಿರ್ತಾರೆಂದು ಕೆಲ ಸಚಿವರು ಹೀಗೆ ಹೇಳಿದ್ದಾರೆ. ಆದ್ರೆ ನಾನು ಈ ರೀತಿ ಹೇಳಲ್ಲ ಎಂದು ಶಾಸಕ ಬಸನಗೌಡಪಾಟೀಲ್ ಯತ್ನಾಳ್ ಹೇಳಿದ್ದಾರೆ. ಸಿಎಂ, ಸರ್ಕಾರದ ವಿರುದ್ಧ ಮಾತಾಡಿದ್ದಕ್ಕೆ ಪತ್ರ ಬರೆದ ವಿಚಾರವಾಗಿ ಕೆಲವು ಸಚಿವರು, ಪಕ್ಷದ ಹಿರಿಯ ಶಾಸಕರು ಪತ್ರ …
Read More »ಪುತ್ರನ ರಕ್ಷಣೆಗಾಗಿ ಧಾವಿಸಿದ ತಾಯಿಯೂ ಸಹ ನೀರಿನಲ್ಲಿ ಮುಳುಗಿ ಸಾವು
ವಿಜಯಪುರ: ಕಾಲುವೆಯಲ್ಲಿ ಮುಳುಗಿ ತಾಯಿ, ಮಗ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನಿಡಗುಂದಿ ಹೊರವಲಯದ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ನಡೆದಿದೆ. ಅಂಜನಾ ಕೊಂಚಿಕೊರವರ(28) ಮತ್ತು ನಾಗೇಶ(8) ನೀರುಪಾಲಾದ ದುರ್ದೈವಿಗಳು. ಪುತ್ರನ ಜೊತೆ ಅಂಜನಾ ಬಟ್ಟೆ ತೊಳೆಯಲು ತೆರಳಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಕಾಲುವೆಯಲ್ಲಿ ಈಜಾಡುವ ವೇಳೆ ನಾಗೇಶ ಮುಳುಗಲು ಆರಂಭಿಸಿದ್ದನಂತೆ. ಈ ನಡುವೆ, ಪುತ್ರನ ರಕ್ಷಣೆಗಾಗಿ ಧಾವಿಸಿದ ತಾಯಿಯೂ ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ.
Read More »ಮದ್ಯ ಸೇವಿಸಲು ಹಣ ನೀಡದ್ದಕ್ಕೆ ಪಾಪಿ ಪತಿಯೊಬ್ಬ ಪತ್ನಿಯನ್ನು ಕೊಲೆಗೈದಿರುವ ಘಟನೆ
ವಿಜಯಪುರ: ಮದ್ಯ ಸೇವಿಸಲು ಹಣ ನೀಡದ್ದಕ್ಕೆ ಪಾಪಿ ಪತಿಯೊಬ್ಬ ಪತ್ನಿಯನ್ನು ಕೊಲೆಗೈದಿರುವ ಘಟನೆ ಜಿಲ್ಲೆಯ ಆಲಮೇಲ ತಾಲೂಕಿನ ದೇವನಣಗಾಂವ್ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. 45 ವರ್ಷದ ಮಲಕವ್ವ ಹರಗೋಲ ಕೊಲೆಯಾದ ದುರ್ದೈವಿ. ಮದ್ಯ ಸೇವಿಸಲು ಹಣ ನೀಡದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಪತಿ ಶಿವಪ್ಪ ಹರಗೋಲ ಕೊಡಲಿಯಿಂದ ಕೊಚ್ಚಿ ಕೊಚ್ಚಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆಲಮೇಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.
Read More »ಸೇತುವೆ ಮೇಲಿಂದ ಭೀಮಾ ನದಿಗೆ ಹಾರಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ
ವಿಜಯಪುರ: ಸೇತುವೆ ಮೇಲಿಂದ ಭೀಮಾ ನದಿಗೆ ಹಾರಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಆಲಮೇಲ ತಾಲೂಕಿನ ದೇವಣಗಾಂವ್ ಸೇತುವೆ ಬಳಿ ನಡೆದಿದೆ. ಧಾರವಾಡ ಜಿಲ್ಲೆಯ ನವಲಗುಂದದ ನಿವಾಸಿ ಐಶ್ವರ್ಯ ಶ್ರೀಪಾಲ್ ಕಬ್ಬಿನ(20) ಆತ್ಮಹತ್ಯೆ ಮಾಡಿಕೊಂಡ ಯುವತಿ ಎಂದು ತಿಳಿದುಬಂದಿದೆ. ಕಲಬುರಗಿ ಜಿಲ್ಲೆಯ ಗಾಣಗಾಪುರದಲ್ಲಿರುವ ದತ್ತಾತ್ರೇಯ ದೇಗುಲಕ್ಕೆ ಹೋಗುವಾಗ ದಾರಿ ಮಧ್ಯೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
Read More »ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು,ನಿಮ್ಮನ್ನು ಏನು ಮಾಡಬೇಕು: ಹರಕು ಬಾಯಿಈಶ್ವರಪ್ಪ ಹೇಳಿಕೆಗೆ ಅಭಿಮಾನಿ ಫೋಸ್ಟ್
ವಿಜಯಪುರ: ತಮ್ಮನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂಬ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಅಭಿಮಾನಿ ಫೋಸ್ಟ್ ಮಾಡಿರುವುದನ್ನು ನಮ್ಮ ಖಾತೆಗೆ ಹಂಚಿಕೊಳ್ಳುವ ಮೂಲಕ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತಿರುಗೇಟು ನೀಡಿದ್ದಾರೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಿಎಂ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ಮಾಡಿರುವ ಆರೋಪಕ್ಕೆ ನಿನ್ನೆ ಸಚಿವ ಕೆ.ಎಸ್.ಈಶ್ವರಪ್ಪ, ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಆಗ್ರಹಿಸಿದ್ದರು. ಈ ಹೇಳಿಕೆಗೆ ಖಾರವಾಗಿ ಫೇಸ್ಬುಕ್ ಮೂಲಕ ಯತ್ನಾಳ್ ಬೆಂಬಲಿಗ ಎನ್ನಲಾದ …
Read More »ಮಳೆ ನಿಂತರೂ ಭೀಮಾ ನದಿಯ ಹರಿವು ಮಾತ್ರ ಕಡಿಮೆಯಾಗಿಲ್ಲ.
ವಿಜಯಪುರ: ಮಳೆ ನಿಂತರೂ ಭೀಮಾ ನದಿಯ ಹರಿವು ಮಾತ್ರ ಕಡಿಮೆಯಾಗಿಲ್ಲ. ಇದರಿಂದ ಜನ ನೀರಿನ ಮಧ್ಯೆ ಜೀವನ ಕಳೆಯುವಂತಾಗಿದೆ. ವಿಜಯಪುರ ಜಿಲ್ಲೆಯ ಇಂಡಿ, ಚಡಚಣ, ಆಲಮೇಲ ತಾಲೂಕಿನ ನದಿ ಪಾತ್ರದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಚಡಚಣ ತಾಲೂಕಿನ ಹೊಳೆಸಂಕ, ಧೂಳಖೇಡದಲ್ಲಿ ಪ್ರವಾಹ ಕಡಿಮೆಯಾಗಿಲ್ಲ. ಇಂಡಿ ತಾಲೂಕಿನ ಮೀರಗಿಯಲ್ಲೂ ನೆರೆ ಕಡಿಮೆಯಾಗಿಲ್ಲ. ತಾರಾಪುರ, ಕುಮಸಗಿ, ದೇವಣಗಾಂವ್ ಗ್ರಾಮಗಳು ಇನ್ನೂ ನಡುಗಡ್ಡೆಯಾಗಿಯೇ ಉಳಿದಿವೆ. ಮನೆ ನಿಂತರೂ ಪ್ರವಾಹದ ಅಬ್ಬರ ನಿಂತಿಲ್ಲ. ಮಳೆ ನೀರು …
Read More »ಬೆಳೆ ನಾಶದಿಂದ ಬೇಸತ್ತು ನದಿ ಪಾಲಾಗ್ತೀವಿ ಅಂತಾ ಮರವೇರಿದ ತಾಯಿ-ಮಗ, ಮುಂದೇನಾಯ್ತು?
ವಿಜಯಪುರ: ಬೆಳೆ ನಾಶದಿಂದ ಬೇಸತ್ತು ತಾಯಿ ಮತ್ತು ಆಕೆಯ ಮಗ ಮರವೇರಿದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಹಿಂಗಣಿ ಗ್ರಾಮದಲ್ಲಿ ನಡೆದಿದೆ. ಬೆಳೆ ನಾಶದಿಂದ ಮನನೊಂದಿದ್ದ ತಾಯಿ ಹಾಗೂ ಮಗನನ್ನು ರಕ್ಷಣೆ ಮಾಡಲಾಗಿದೆ. ಭೀಮಾ ನದಿ ಪ್ರವಾಹಕ್ಕೆ ಸಿಲುಕಿ ತಮ್ಮ ಜಮೀನಿನಲ್ಲಿದ್ದ ಬಾಳೆ ಹಾಗೂ ಕಬ್ಬು ಬೆಳೆ ಹಾಳಾದ ಕಾರಣ ತನ್ನ 110 ವರ್ಷದ ತಾಯಿ ನೀಲಮ್ಮಳ ಜೊತೆ ಶಿವಮಲಪ್ಪ ಕೋಳಿ ಮರವೇರಿ ಕುಳಿತಿದ್ದ. ಇಡೀ ಬೆಳೆ ಹಾಳಾಗಿದೆ. ನಮ್ಮನ್ನ ರಕ್ಷಣೆ …
Read More »ಧಾರಾಕಾರ ಮಳೆಗೆ ಎಲ್ಲವೂ ಹಾನಿ.. ಜನಜೀವನ ಅಸ್ತವ್ಯಸ್ತ
ವಿಜಯಪುರ: ಧಾರಾಕಾರ ಮಳೆಗೆ ಡೋಣಿ ನದಿ ತುಂಬಿ ಹರಿಯುತ್ತಿದೆ. ನದಿತೀರದ ಉಕುಮನಾಳ, ಸಾರವಾಡದಲ್ಲಿ ಪ್ರವಾಹ ಭೀತಿ ಶುರುವಾಗಿದೆ. ತಾಳಿಕೋಟೆ ಸೇತುವೆ ಜಲಾವೃತವಾದ ಹಿನ್ನೆಲೆಯಲ್ಲಿ ಹಡಗಿನಾಳ, ಕಲ್ಲದೇವನಹಳ್ಳಿ, ಶಿವಪುರ, ಹರನಾಳ, ಮೂಕಿನಾಳ ಗ್ರಾಮಗಳ ಸಂಪರ್ಕ ಕಟ್ ಆಗಿದೆ. ತಾಳಿಕೋಟೆ ಬಳಿಯ ಹನುಮಾನ್ ಮಂದಿರ ನೀರಿನಲ್ಲಿ ಮುಳುಗಿದೆ. ಕಟಾವಿಗೆ ಬಂದಿದ್ದ ಕಬ್ಬು ನಾಶ: ಇನ್ನು ನದಿಯ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಜಲಾವೃತಗೊಂಡಿದೆ. ಗದ್ದೆಗಳಲ್ಲಿ ನೀರು ನಿಂತಿರುವುದನ್ನು ನೋಡಿ ರೈತರು ಕಂಗಾಲಾಗಿದ್ದಾರೆ. …
Read More »