Breaking News

ಚಿಕ್ಕ ಮಂಗಳೂರು

ಲಾಠಿ ಬಿಟ್ಟ ಖಾಕಿ – ಮನೆ, ಮನೆಗೆ ತೆರಳಿ ಕೊರೊನಾ ಜಾಗೃತಿ

ಚಿಕ್ಕಮಗಳೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕಿತರಿಂದ ದೇಶವೇ ಲಾಕ್‍ಡೌನ್ ಆಯ್ತು. ಆದರೆ ಜನಸಾಮಾನ್ಯರು ಪರಿಸ್ಥಿತಿಯನ್ನ ಅವಲೋಕಿಸದೆ ಬೇಕಾಬಿಟ್ಟಿ ಮನೆಯಿಂದ ಹೊರಬಂದು ಓಡಾಡುತ್ತಿದ್ದಾರೆ. ಹೀಗಾಗಿ ಪೊಲೀಸರು ಮನೆ-ಮನೆಗೆ ತೆರಳಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಮೊದಲಿಗೆ ಪೊಲೀಸರು ಎಲ್ಲಾ ರೀತಿಯಲ್ಲೂ ಮನವಿ ಮಾಡಿದ್ದರು. ಕೈಮುಗಿದು ಕೇಳಿಕೊಂಡಿದ್ದರು, ಕೊನೆಗೆ ಲಾಠಿಯಿಂದ ಹೊಡೆಯಲು ಶುರು ಮಾಡಿದ್ದರು. ಇದರಿಂದ ಪೊಲೀಸರ ವರ್ತನೆ ತೀವ್ರ ವಿರೋಧ ಹಾಗೂ ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪೊಲೀಸರು …

Read More »

ಕೊರೊನಾ ಭೀತಿಗೆ ಗ್ರಾಮಕ್ಕೆ ಬಂದ ನೆಂಟರನ್ನೇ ವಾಪಸ್ ಕಳಿಸಿದ್ರು

ಚಿಕ್ಕಮಗಳೂರು: ಜಗತ್ತಿನಾದ್ಯಂತ ದಿನದಿಂದ ದಿನಕ್ಕೆ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸೋಂಕಿನ ಭೀತಿಗೆ ಜನ ಮನೆಯಿಂದ ಹೊರಬರೋದಕ್ಕೆ ಹಿಂದೇಟು ಹಾಕ್ತಿದ್ದಾರೆ. ಈಗಾಗಲೇ ಕೆಎಫ್‍ಡಿ ಭಯದಿಂದ ಕಂಗಲಾಗಿರೋ ಮಲೆನಾಡಿಗರಲ್ಲಿ ಮಹಾಮಾರಿ ಕೊರೊನಾ ಮತ್ತಷ್ಟು ಆತಂಕ ಸೃಷ್ಟಿಸಿದೆ. ಹೀಗಿರುವಾಗ ಹಳ್ಳಿ ಬಿಟ್ಟು ವರ್ಷವಾಗಿದ್ದ ಜನ ಕೊರೊನಾ ವೈರಸ್‍ಗೆ ಹೆದರಿ ಮತ್ತೆ ಹಳ್ಳಿಗಳತ್ತ ಮುಖ ಮಾಡ್ತಿದ್ದಾರೆ. ಆದ್ದರಿಂದ ಮಲೆನಾಡಿಗರು ಅವರಿಗೆಲ್ಲಾ ಬರಬೇಡಿ ಅಲ್ಲೇ ಇರಿ ಎಂದು ಮನವಿ ಕೂಡ ಮಾಡಿಕೊಂಡಿದ್ದಾರೆ. ಜಿಲ್ಲೆಯ ಶೃಂಗೇರಿ …

Read More »

23 ದಿನದ ಹಸುಗೂಸನ್ನೇ ಒಲೆಗೆ ಹಾಕಿ ಸುಟ್ಟು ಹಾಕಿದ ತಾಯಿ…..

ಚಿಕ್ಕಮಗಳೂರು:   ತನ್ನ 23 ದಿನದ ಹೆಣ್ಣುಮಗುವನ್ನು ತಾಯಿಯೇ ಒಲೆಯಲ್ಲಿ ಹಾಕಿ ಹುಟ್ಟು ಹಾಕಿದ ಅಮಾನವೀಯ ಘಟನೆ ಕಡೂರು ತಾಲೂಕಿನ ಕೆರೆ ಸಂತೆ ಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು ಚಂದ್ರಾಬಾಯಿ ಎಂದು ಗುರುತಿಸಲಾಗಿದೆ. ರಮೇಶ್ ನಾಯ್ಕ ಎಂಬಾತನ ಪತ್ನಿ. ಈ ದಂಪತಿಗೆ ಮಾಚ್. 2 ರಂದು ಹೆಣ್ಣು ಮಗು ಜನಿಸಿತ್ತು. ಆಕೆಗೆ ಹೆಣ್ಣು ಮಗು ಬೇಕಿರಲಿಲ್ಲ.  ಹೀಗಾಗಿ ಮಾ.21 ರಂದು ಮಗುವನ್ನು ಒಲೆಗೆ ಹಾಕಿ  ಸುಟ್ಟು ಹಾಕಿದ್ದಳು. ಬಳಿಕ ಮಗುವನ್ನು ನಾಯಿ ಎತ್ತಿಕೊಂಡು …

Read More »

ಭಾನುವಾರ ಇಡೀ ದೇಶಕ್ಕೇ ಮದ್ದು ಸಿಂಪಡಿಸ್ತಾರಂತೆ ಮೋದಿ’..!

ಮಂಗಳೂರು(ಮಾ.21): ಕೊರೋನಾ ವೈರಸ್‌ ನಾಶಪಡಿಸಲು ರಾತ್ರಿವೇಳೆ ರಾಸಾಯನಿಕಯುಕ್ತ ಔಷಧಿ ಸಿಂಪಡಿಸಲಾಗುತ್ತದೆ ಎನ್ನುವ ವದಂತಿ ಕುರಿತು ಅಧಿಕಾರಿಗಳು ಈಗಾಗಲೇ ಸ್ಪಷ್ಟನೆ ನೀಡಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಇನ್ನೂ ಈ ಸುಳ್ಳು ಸುದ್ದಿಯನ್ನು ಪಸರಿಸುತ್ತಿರುವುದು ಕಂಡುಬಂದಿದೆ. ಇಂತಹ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದ್ದರೂ ಕಿಡಿಗೇಡಿಗಳು ಪಸರಿಸುತ್ತಿದ್ದಾರೆ. ಇನ್ನು ಕೊರೋನಾ ಕುರಿತು ತಪ್ಪುಮಾಹಿತಿ ನೀಡಿದ ಕೆಲವು ವೆಬ್‌ಸೈಟ್‌ಗಳ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗೆ ವರದಿ ನೀಡಲಾಗಿದೆ. ಜನಸಂಚಾರ ವಿರಳ: ಕೊರೋನಾ …

Read More »

6 ಕಿ.ಮೀ ರಸ್ತೆಗೆ 6 ಕೋಟಿ- ರಾತ್ರಿ ಹಾಕಿದ್ದ ಡಾಂಬರ್ ಬೆಳಗ್ಗೆ ಕೈಯಲ್ಲಿ

ಚಿಕ್ಕಮಗಳೂರು: 6 ಕಿ.ಮೀ. ರಸ್ತೆಗೆ 6 ಕೋಟಿ ರೂ. ಒಂದು ವರ್ಷದ ಹಿಂದೆ ಬಿಡುಗಡೆಯಾಗಿತ್ತು. ಆದರೆ ಒಂದು ವರ್ಷದಿಂದ ಕಾಮಗಾರಿ ಮಾಡಿದ ಗುತ್ತಿಗೆದಾರ ಹಾಗೂ ಸರ್ಕಾರ ಒಂದು ವರ್ಷದ ಅವಧಿಯಲ್ಲಿ ಮಾಡಿದ್ದು ಮೂರೇ ಮೂರು ಕಿ.ಮೀ. ರಸ್ತೆ. ಅದು ರಾತ್ರಿ ಹಾಕಿದ ಡಾಂಬರ್ ಬೆಳಗ್ಗೆ ಕೈಗೆ ಬರುವಂತೆ ಎಂದು ಆರೋಪಿಸಿರೋ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಿಕ್ಕನಕೂಡಿಗೆ ಗ್ರಾಮಸ್ಥರು ಗುತ್ತಿಗೆದಾರ ಹಾಗೂ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ನೇರ ರಸ್ತೆಗೆ ಡಾಂಬರ್ …

Read More »

ಮಿಳ್ಳೆ ಹುಡುಗನ ಮೂತಿಗೆ ತಿವಿದರು ಮೂಡಿಗೆರೆ ಮಂದಿ

ಮಿಳ್ಳೆ ಹುಡುಗನ ಮೂತಿಗೆ ತಿವಿದರು ಮೂಡಿಗೆರೆ ಮಂದಿ! ಕಳೆದ ಬಿಗ್ ಬಾಸ್ ಸೀಜ಼ನ್ನಿನಲ್ಲಿ ಸ್ಪರ್ಧಿಸಿದ್ದ ಕಿಶನ್ ಗೊತ್ತಲ್ಲಾ? ವಯ್ಯಾರಿಯಂತೆ ನುಲಿಯುವ ಕಿಶನ್ ಕಿಸ್ಸಿಂಗ್ ಸ್ಟಾರ್ ಅನ್ನೋ ಪಟ್ಟ ಪಡೆದು ನೋಡುಗರಿಗೆ ಬಲು ಮಜಾ ಕೊಟ್ಟಿದ್ದ. ಈಗ ಹುಟ್ಟೂರಿಗೆ ಬಂದು ಸನ್ಮಾನ ಸ್ವೀಕರಿಸಲೂ ಕಾಸು ಕೇಳಿ ಮಕ್ಕುಗಿಸಿಕೊಂಡಿದ್ದಾನೆ. ಹಿಂದಿಯ ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ಹೆಸರು ಮಾಡಿ, ನಂತರ ಬಿಗ್ ಬಾಸ್ ಸ್ಪರ್ಧಿಯಾದ ಕಿಶನ್ ಬೆಳಗಲಿ ಮೂಲತಃ ಚಿಕ್ಕಮಗಳೂರಿನವನು. ಡ್ಯಾನ್ಸು, ರಿಯಾಲಿಟಿ …

Read More »

ಶೃಂಗೇರಿಯ ಕಾಲೇಜು ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರಿಗೆ ಗಲ್ಲು ಶಿಕ್ಷೆ

ಬೆಂಗಳೂರು, ಜ.18-ಶೃಂಗೇರಿಯ ಕಾಲೇಜು ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರಿಗೆ ಗಲ್ಲು ಶಿಕ್ಷೆ ವಿಧಿಸಿ ಚಿಕ್ಕಮಗಳೂರು ಸ್ಥಳೀಯ ನ್ಯಾಯಾಲಯ ಆದೇಶ ನೀಡಿದೆ. 2016, ಫೆ.16 ರಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆಯಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿ ಕೊಂದು ಹಾಳು ಬಾವಿಗೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಂ.ಉಮೇಶ್ ಅಡಿಗ ಅವರು ಆರೋಪಿಗಳಾದ ಸಂತೋಷ್, ಪ್ರದೀಪ್ ಮೇಲಿನ ಆರೋಪ ಸಾಬೀತಾದ …

Read More »