Breaking News

ರಾಷ್ಟ್ರೀಯ

ಯಡಿಯೂರಪ್ನೋರೆ ನೀವು ತಡೆಯಾಜ್ಞೆ ತರಲ್ವಾ: ಸಿಎಂಗೆ ಕಾಂಗ್ರೆಸ್‌ ಟಾಂಗ್‌

ಮೈಸೂರು: ರಮೇಶ್‌ ಜಾರಕಿಹೊಳಿ ಸಿಡಿ ಬಿಡುಗಡೆಯಾದ ಬೆನ್ನ ಹಿಂದೆಯೇ ತಮ್ಮ ಬಗ್ಗೆ ಯಾವುದೇ ಸುದ್ದಿ ಪ್ರಸಾರ ಮಾಡಬಾರದೆಂದು ಕೋರ್ಟ್‌ ಮೆಟ್ಟಿಲೇರಿರುವ ಸಚಿವರ ವಿಷಯವಾಗಿ ಕಾಂಗ್ರೆಸ್‌, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾಲೆಳೆದಿದೆ. ಈ ಕುರಿತು ಟ್ವೀಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್‌ ಯತ್ನಾಳ್‌ ಅವರು ಹೇಳಿದಂತೆ ಕಣ್ಣಲ್ಲಿ ನೋಡೋಕೇ ಆಗದಂತ ದೃಶ್ಯಗಳು ಇವೆಯಂತೆ. ಬಿಎಸ್‌ವೈ ಅವರು ಕೋರ್ಟ್‌ ಮೆಟ್ಟಿಲೇರುವುದಿಲ್ಲವೇ ಎಂದು ಟ್ವೀಟ್‌ ಮಾಡಲಾಗಿದೆ.

Read More »

ಸಚಿವ ಜಗದೀಶ್ ಶೆಟ್ಟರ್ ಸಂಧಾನ: ಟೊಯೊಟಾ ಕಾರ್ಮಿಕರ ಸಮಸ್ಯೆ ಪರಿಹಾರ

ಬೆಂಗಳೂರು: ರಾಮನಗರ ಜಿಲ್ಲೆ ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಮಧೆ ಉದ್ಭವಿಸಿದ್ದ ಸಮಸ್ಯೆಗಳ ಪರಿಹಾರದಲ್ಲಿ ಪ್ರಮುಖ ಪಾತ್ರ ವಹಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಕಾರ್ಖಾನೆಯ ಆಡಳಿತ ಮಂಡಳಿಯ ಅಧಿಕಾರಿಗಳು ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ್ದಾರೆ. 2020 ನವೆಂಬರ್ 9ರಂದು ಪ್ರಾರಂಭವಾದ ಕಾರ್ಮಿಕರ ಮುಷ್ಕರದ ಸಂದರ್ಭದಲ್ಲಿ ಸಚಿವ ಜಗದೀಶ್ ಶೆಟ್ಟರ್ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ …

Read More »

ದೆಹಲಿಯಲ್ಲಿ ರಾಜ್ಯ ಶಾಲಾ ಶಿಕ್ಷಣ ಮಂಡಳಿಗೆ ರಾಜ್ಯ ಸರ್ಕಾರ ಒಪ್ಪಿಗೆ: ಕೇಜ್ರಿವಾಲ್

ನವದೆಹಲಿ : ದೆಹಲಿಯಲ್ಲಿ ರಾಜ್ಯ ಶಾಲಾ ಶಿಕ್ಷಣ ಮಂಡಳಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ. ಕ್ಯಾಬಿನೆಟ್ ಸಭೆಯ ಬಳಿಕ ಈ ಬಗ್ಗೆ ಮಾತನಾಡಿರುವ ಅರವಿಂದ್ ಕೇಜ್ರಿವಾಲ್, ರಾಜ್ಯದಲ್ಲಿ 1000 ಸರ್ಕಾರಿ ಶಾಲೆಗಳು ಮತ್ತು 1700 ಖಾಸಗಿ ಶಾಲೆಗಳು ಇವೆ. ಎಲ್ಲಾ ಸರ್ಕಾರಿ ಶಾಲೆಗಳನ್ನು ಮತ್ತು ಬಹುಪಾಲು ಖಾಸಗಿ ಶಾಲೆಗಳು ಸಿಬಿಎಸ್ ಸಿ ಯನ್ನು ಅನುಸರಿಸುತ್ತಿವೆ. ಮುಂಬರುವ ಶೈಕ್ಷಣಿಕ ವರ್ಷದಲ್ಲಿ 20-25 ಸರ್ಕಾರಿ ಶಾಲೆಗಳನ್ನು ರಾಜ್ಯ …

Read More »

ಶೀ‍ಘ್ರದಲ್ಲೇ ಕಡಿಮೆ ದರದ ‘ಜಿಯೋ’ ಲ್ಯಾಪ್ ಟಾಪ್ ಮಾರುಕಟ್ಟೆಗೆ ಲಗ್ಗೆ..!

ಟೆಲಿಕಾಂ ಮಾರುಕಟ್ಟೆಯಲ್ಲಿ ಪಾರುಪತ್ಯೆ ಮೆರೆದಿರುವ ರಿಲಯನ್ಸ್ ಜಿಯೋ ಇದೀಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದೆ. ಕೋಟ್ಯಂತರ ಭಾರತೀಯರಿಗೆ ಕಡಿಮೆ ದರದ ಲ್ಯಾಪ್‍ಟಾಪ್ ನೀಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. 2018ರಲ್ಲಿಯೇ ‘ಜಿಯೋ ಬುಕ್’ ಹೆಸರಿನ ಲ್ಯಾಪ್‍ಟಾಪ್ ಸಿದ್ಧಪಡಿಸಲು ಯೋಜನೆ ರೂಪಿಸಲಾಗಿತ್ತು. ಈ ವಿನೂತನ ಪ್ರಯೋಗಕ್ಕೆ 2019ರಲ್ಲಿ ಚಾಲನೆ ನೀಡಲಾಗಿತ್ತು. ಇದೀಗ ಅತೀ ಕಡಿಮೆ ದರದ ಲಾಪ್ ಟಾಪ್ ಜನರ ಕೈ ಸೇರುವ ಕಾಲ ಸನ್ನಿಹಿತವಾಗಿದೆ. ಸಿಮ್ ಕಾರ್ಡ್ ಸಪೋರ್ಟ್ : ಪ್ರಸ್ತುತ ಮಾರುಕಟ್ಟೆಯಲ್ಲಿರುವ …

Read More »

ವಿಚಾರಣೆ ಮುಗಿಸಿ ಹೊರಬಂದ ದಿನೇಶ್ ಕಲ್ಲಹಳ್ಳಿ ಹೇಳಿದ್ದೇನು ಗೊತ್ತಾ..?

ಬೆಂಗಳೂರು: ರಮೇಶ್ ಜಾರಕಿಹೊಳಿ ಅವರದ್ದೆನ್ನಲಾದ ರಾಸಲೀಲೆ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ದಿನೇಶ್ ಕಲ್ಲಹಳ್ಳಿ 4 ಗಂಟೆ ವಿಚಾರಣೆ ಮುಗಿಸಿ ಠಾಣೆಯಿಂದ ಹೊರ ಬಂದಿದ್ದಾರೆ. ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಂದ ದಿನೇಶ್ ಕಲ್ಲಹಳ್ಳಿ ವಿಚಾರಣೆ ಮುಕ್ತಾಯವಾಗಿದ್ದು ಹೊರಬಂದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಬಳಿ ಲಭ್ಯವಿರುವ ಮಾಹಿತಿಯನ್ನು ನೀಡಿದ್ದೇನೆ. ತನಿಖೆಗೆ ಬೇಕಾದ ಮಾಹಿತಿಯನ್ನು ನೀಡಿದ್ದೇನೆ. ಮುಚ್ಚಿದ ಲಕೋಟೆಯಲ್ಲಿ ಇದ್ದ ಸಿಡಿಯನ್ನು ನೀಡಿದ್ದೇನೆ. ಉಳಿದಂತೆ ಯಾವುದೇ ವಿಚಾರ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಎಂದು …

Read More »

ಪ್ರಧಾನಿ ಮೋದಿ ದುರ್ಯೋಧನನಂತೆ’- ಪ್ರಿಯಾಂಕಾ ಗಾಂಧಿ ಟೀಕೆ

ಹರಿಯಾಣ :ಲೋಕಸಭೆ ಚುನಾವಣೆಗೆ ಇನ್ನೇನು ತೆರೆ ಬೀಳಲಿದೆ. ಆದ್ರೆ ಈ ಮಧ್ಯೆ ರಾಜಕೀಯ ನಾಯಕರು ತಮ್ಮ ನಾಲಿಗೆ ಮೇಲಿನ ಹಿಡಿತ ಕಳೆದುಕೊಳ್ತಿದ್ದಾರೆ. ಹರಿಯಾಣದ ಅಂಬಾಲಾದಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡ್ತಿದ್ದ ವೇಳೆ ಪ್ರಿಯಾಂಕಾ ಗಾಂಧಿ ಪ್ರಧಾನಿ ನರೇಂದ್ರ ಮೋದಿಯನ್ನ ದುರ್ಯೋಧನನಿಗೆ ಹೋಲಿಸಿದ್ದಾರೆ. ಭಾರತದ ನೆಲದಲ್ಲಿ ಅಹಂಕಾರದಿಂದ ನಡೆದುಕೊಳ್ಳೋ ವ್ಯಕ್ತಿಗಳಿಗೆ ಶಿಕ್ಷೆಯಾಗಿದೆ. ಮಹಾಭಾರತದಲ್ಲಿ ಅಹಂಕಾರದಿಂದ ನಡೆದುಕೊಂಡ ದುರ್ಯೋಧನ. ಆತ ಕೃಷ್ಣ ಸಂಧಾನಕ್ಕೆ ಬಂದರೂ ಒಪ್ಪಲಿಲ್ಲ, ಹೀಗಾಗಿ ನಾಶವಾಗಿ ಹೋದ. ಹೀಗೆ ಮೋದಿ …

Read More »

ಕೊರೊನಾ ತಂದಿಟ್ಟ ಸಂಕಷ್ಟ: ಮರದ ಕೆಳಗೆ ಬದುಕು ಕಂಡುಕೊಂಡ ಮಹಿಳೆ

ಸಿದ್ದಾಪುರ: ಅಪ್ಪ, ಅಮ್ಮ, ಪತಿ, ಕುಟುಂಬದ ಯಾರೂ ಇಲ್ಲ. ತಾನು ಓದದೇ ಇದ್ದರೂ, ತನ್ನ ಮಕ್ಕಳನ್ನು ಓದಿಸಬೇಕೆಂಬ ಛಲದಿಂದ ಜೀವನ ಸಾಗಿಸುತ್ತಿದ್ದ ಮಹಿಳೆಗೆ ಕೊರೊನಾ ಸಂಕಷ್ಟ ತಂದೊಡ್ಡಿದ್ದು, ಇದೀಗ ಗುಡಿಸಲಿನಲ್ಲಿ ವಾಸ ಮಾಡುವ ಸ್ಥಿತಿ ಬಂದಿದೆ. ಸಿದ್ದಾಪುರ ಸಮೀಪದ ಮಾಲ್ದಾರೆ ಗ್ರಾಮ ಪಂಚಾಯಿತಿ ಸಮೀಪದ ತಟ್ಟಳ್ಳಿ ಹಾಡಿಯ ನಿವಾಸಿ ಸುನಿತ ಮದುವೆಯಾದ ಕೆಲವೇ ವರ್ಷಗಳಲ್ಲಿ ತನ್ನ ಪತಿಯನ್ನು ಕಳೆದುಕೊಂಡಿದ್ದರು. ಕುಟುಂಬವೂ ಸುನಿತಾರನ್ನು ಕೈಬಿಟ್ಟಾಗ ಅವರಿಗೆ ದಿಕ್ಕು ತೋಚದಾಗಿತ್ತು. ಮುದ್ದಾದ ಇಬ್ಬರು …

Read More »

ಮತ್ತೂಂದು ಸ್ಪೇಸ್‌ ಎಕ್ಸ್‌ ರಾಕೆಟ್‌ ಸ್ಫೋಟ

ಕ್ಯಾಲಿಫೋರ್ನಿಯಾ: ಅಮೆರಿಕದ ಪ್ರಸಿದ್ಧ ರಾಕೆಟ್‌ ನಿರ್ಮಾಣ ಸಂಸ್ಥೆ ಸ್ಪೇಸ್‌ ಎಕ್ಸ್‌ನ ಸ್ಟಾರ್‌ಶಿಪ್‌ ಪರೀಕ್ಷಾ ಮಾದರಿಯ ರಾಕೆಟ್‌, ಅತ್ಯುನ್ನತ ಎತ್ತರದ ಪರೀಕ್ಷಾ ಹಾರಾಟ ಮುಗಿಸಿ, ಲ್ಯಾಂಡ್‌ ಆಗುವ ವೇಳೆ ಸ್ಫೋಟಗೊಂಡಿದೆ. ಮುಂದಿನ ಪೀಳಿಗೆಯ ವಾಹನವಾದ “ಎಸ್‌ಎನ್‌- 10′ ರಾಕೆಟ್‌, ಟೆಕ್ಸಾಸ್‌ನ ಬೊಕಾ ಚಿಕಾ ಎಂಬಲ್ಲಿ ಸುರಕ್ಷಿತವಾಗಿಯೇ ಇಳಿದಿತ್ತು. ಆದರೆ ಕಾಂಕ್ರೀಟ್‌ ಲ್ಯಾಂಡಿಂಗ್‌ ಪ್ಯಾಡ್‌ ಮೇಲೆ ಇಳಿದ ಎಂಟೇ ನಿಮಿಷಗಳಲ್ಲಿ ಸ್ಫೋಟದಿಂದ ಛಿದ್ರವಾಗಿದೆ. ರ್ಯಾಪ್ಟರ್‌ ಎಂಜಿನ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದೇ ಸ್ಫೋಟಕ್ಕೆ ಕಾರಣ ಎಂದು …

Read More »

ಕಿರು ತೆರೆಗೆ ಬರ್ತಿದೆ ನಕಲಿ ಛಾಪಾ ಕಾಗದ ಹಗರಣದ ಸೂತ್ರಧಾರ ತೆಲಗಿ ಕತೆ

ಮುಂಬೈ: ಬೆಳಗಾವಿಯ ಖಾನಾಪುರದ ಅಬ್ದುಲ್‌ ಕರೀಂಲಾಲ್‌ ತೆಲಗಿಯ ಛಾಪಾಕಾಗದ ಹಗರಣವು ಸದ್ಯದಲ್ಲೇ ಕಿರುತೆರೆಗೆ ಬರಲಿದೆ. ಈ ಹಿಂದೆ Sony Livನಲ್ಲಿ ಈ ಹಿಂದೆ 1992 ಸ್ಕ್ಯಾಮ್‌ ಎನ್ನುವ ವೆಬ್‌ ಸರಣಿಯನ್ನು ನಿರ್ದೇಶಿಸಿದ್ದ ಹರ್ಷದ್‌ ಮೆಹ್ತಾ ಅವರು ಸ್ಕ್ಯಾಮ್‌ 2003 ಎನ್ನುವ ಹೊಸ ಸರಣಿಯನ್ನು ಅದೇ ಒಟಿಟಿ ವೇದಿಕೆಗೆ ವೆಬ್‌ ಸರಣಿ ರೂಪದಲ್ಲಿ ತರುತ್ತಿದ್ದು ಇದರಲ್ಲಿ ತೆಲಗಿಯ ಛಾಪಾ ಕಾಗದ ಹಗರಣವನ್ನು ಹೆಣೆಯಲಾಗಿದೆ. ತೆಲಗಿಯ ಕಥೆಯು ಪತ್ರಕರ್ತ ಸಂಜಯ್‌ ಸಿಂಗ್‌ ಅವರ …

Read More »

ಸುಶಾಂತ್ ಸಿಂಗ್ ಡ್ರಗ್ ಪ್ರಕರಣ: 33 ಜನರ ಹೆಸರು, 30 ಸಾವಿರ ಪುಟಗಳ ಚಾರ್ಜ್ ಶೀಟ್!

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ತಳುಕು ಹಾಕಿಕೊಂಡಿದ್ದ ಡ್ರಗ್ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ ಸಿಬಿ ಅಧಿಕಾರಿಗಳು ಇಂದು ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಸುಮಾರು 30 ಸಾವಿರ ಪುಟಗಳಷ್ಟಿರುವ ಚಾರ್ಜ್ ಶೀಟನ್ನು ಎನ್ ಸಿಬಿ ಮುಖ್ಯಸ್ಥ ಸಮೀರ್ ವಾಂಖೆಡೆ ಸ್ವತಃ ಸಲ್ಲಿಕೆ ಮಾಡಲಿದ್ದಾರೆ. ಈ ಪ್ರಕರಣ ದೇಶದಲ್ಲಿ ಭಾರಿ ಸುದ್ದಿ ಮಾಡಿತ್ತು. ಸುಶಾಂತ್ ಸಿಂಗ್ ಸಾವಿನ ಬಳಿಕ ಹಲವಾರು ಡ್ರಗ್ ಪ್ರಕರಣಗಳು ಬೆಳಕಿಗೆ …

Read More »