Breaking News
Home / ರಾಜ್ಯ (page 608)

ರಾಜ್ಯ

ಬೆಟ್ಟಿಂಗ್ ಅಪ್ಲಿಕೇಶನ್ ಪ್ರಚಾರ ಮಾಡಿದ ಆಶಿಕಾ; ಈ ಕಾರಣಕ್ಕೆ ಅಹೋರಾತ್ರ ಈಗ ಮಾತನಾಡಲ್ಲ ಬಿಡಿ ಎಂದ ನೆಟ್ಟಿಗರು!

ಅಹೋರಾತ್ರ.. ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡದಿದ್ದರೂ ಸಿನಿ ರಸಿಕರಿಗೆ ಅತಿ ಪರಿಚಿತವಾಗಿರುವ ಹೆಸರು. ಕನ್ನಡದ ಯಾವುದೇ ಸ್ಟಾರ್ ನಟರ ಕಟ್ಟಾಭಿಮಾನಿಗಳ ಬಳಿ ಹೋಗಿ ಅಹೋರಾತ್ರ ಯಾರು ಅಂತ ಕೇಳಿದ್ರೆ ಗೊತ್ತು ಬಿಡಿ ಎಂಬ ಉತ್ತರವೇ ಬರಲಿದೆ. ಆದರೆ ಒಳ್ಳೆ ರೀತಿಯಲ್ಲಿ ಅಹೋರಾತ್ರ ಗೊತ್ತು ಎಂದು ಹೇಳಿಕೊಳ್ಳುವವರ ಸಂಖ್ಯೆ ತೀರಾ ಕಡಿಮೆಯೇ. ಆತನ ಬಗ್ಗೆ ಪ್ರತಿಕ್ರಿಯಿಸುವ ಬಹುತೇಕ ಸ್ಟಾರ್ ನಟರ ಅಭಿಮಾನಿಗಳು ಆತನ ಬಗ್ಗೆ ಕೆಟ್ಟದಾಗಿಯೇ ಮಾತನಾಡುತ್ತಾರೆ. ಇದಕ್ಕೆ ಕಾರಣ ಅಹೋರಾತ್ರ …

Read More »

ಒಳಮೀಸಲಾತಿ ರದ್ದುಪಡಿಸಿ, ಇಲ್ಲವೇ ವಿಷ ಕೊಡಿ: ಬಂಜಾರ‌ ಸಮಾಜದ ಮುಖಂಡ ರಾಜು ಲಮಾಣಿ

ಬಾಗಲಕೋಟೆ: ಒಳ ಮೀಸಲಾತಿ ‌ರದ್ದುಪಡಿಸಿ, ಇಲ್ಲವೇ‌ ವಿಷ ಕೊಡಿ ಎಂದು ಬಂಜಾರ‌ ಸಮಾಜದ ಮುಖಂಡ ರಾಜು ಲಮಾಣಿ ಆಗ್ರಹಿಸಿದರು. ಬಾಗಲಕೋಟೆಯಲ್ಲಿ ಪ್ರತಿಭಟನೆ ಮಾಡಿದ ಬಂಜಾರ ಸಮಾಜದ ಮುಖಂಡರು, ಬಿಜೆಪಿ ಸರ್ಕಾರದ ‌ವಿರುದ್ಧ ಘೋಷಣೆಗಳನ್ನು ಕೂಗಿದರು.   ಬಂಜಾರ‌ ಸೇವಾ‌ ಸಂಘದ‌ ಜಿಲ್ಲಾ ಘಟಕದ ಅಧ್ಯಕ್ಷ ಬಲರಾಮ ನಾಯ್ಕ ಮಾತನಾಡಿ, ಸರ್ಕಾರ ‌ನಮಗೆ ಊಟ ಹಾಕಿತ್ತು. ‌ಅದನ್ನ ಇವರು ಬೂಟುಗಾಲಿಲೇ ಒದ್ದಿದ್ದಾರೆ, ನಾವು ಜಾಡಿಸಿ, ಜಾಡಿಸಿ ಒದೆಯಲು ನಾವು ಸಿದ್ಧರಿದ್ದೇವೆ ಎಂದರು. ಶೇ …

Read More »

ಮಾಡಾಳ್​ ವಿರೂಪಾಕ್ಷಪ್ಪಗೆ ಲೋಕಾಯುಕ್ತ ಅಧಿಕಾರಿಗಳ ಡ್ರಿಲ್! ಉತ್ತರಿಸಲು ತಡಬಡಾಯಿಸುತ್ತಿರುವ ಶಾಸಕ

ಬೆಂಗಳೂರು: ಲಂಚ ಪ್ರಕರಣದಲ್ಲಿ ನಿನ್ನೆ (ಮಾ.27) ರಾತ್ರಿ ಬಂಧನವಾಗಿರುವ ಬಿಜೆಪಿ ಶಾಸಕ ಮಾಡಾಳ್​ ವಿರೂಪಾಕ್ಷಪ್ಪ ಲೋಕಾಯುಕ್ತ ಕಚೇರಿಯಲ್ಲೇ ಒಂದು ರಾತ್ರಿ ಕಳೆದಿದ್ದಾರೆ. ತೀವ್ರ ವಿಚಾರಣೆ ನಡೆಸಿದ ಬಳಿಕವು ಹಣ ಮೂಲಕ್ಕೆ ನಿಖರವಾದ ದಾಖಲೆಗಳನ್ನು ನೀಡಲು ವಿಫಲವಾಗಿರುವ ಮಾಡಾಳ್​ ಅವರನ್ನು ಲೋಕಾಯುಕ್ತ ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರುಪಡಿಸಿ ತಮ್ಮ ಕಸ್ಟಡಿಗೆ ಕೇಳಲಿದ್ದಾರೆ.   ನಿನ್ನೆ ಬಂಧನವಾದ ಮಾಡಾಳ್​ಗೆ ರಾತ್ರಿ 12 ಗಂಟೆವರೆಗೆ ಲೋಕಾಯುಕ್ತ ಅಧಿಕಾರಿಗಳು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಆದರೆ, ಯಾವೊಂದು ಪ್ರಶ್ನೆಗೂ ಸರಿಯಾಗಿ …

Read More »

ತಂದೆಯನ್ನು ಬಿಜೆಪಿ ಮರೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ವಿಜೇತಾ ಅನಂತಕುಮಾರ್

ಬೆಂಗಳೂರು: ಚುನಾವಣೆ ಸಮೀಪಿಸುತ್ತಿರುವಾಗ ಪಕ್ಷಗಳ ವಿರುದ್ಧ ಕೆಲವು ನಾಯಕರಿಂದ ಅಸಮಾಧಾನ ವ್ಯಕ್ತವಾಗುವುದು ಸಹಜ. ಇದೀಗ ಬಿಜೆಪಿ ವಿರುದ್ಧ ಮಾಜಿ ಸಚಿವ ಅನಂತಕುಮಾರ್ ಕುಟುಂಬದಿಂದ ಬೇಸರವೊಂದು ವ್ಯಕ್ತವಾಗಿದೆ. ಆದರೆ ಇದು ಚುನಾವಣೆ ವಿಚಾರಕ್ಕಾಗಿ ಅಲ್ಲ.   ಕೇಂದ್ರದ ಮಾಜಿ ಸಚಿವ, ಬಿಜೆಪಿಯ ಹಿರಿಯ ನಾಯಕರಾಗಿದ್ದ ಅನಂತಕುಮಾರ್ ಅವರ ಪುತ್ರಿ ವಿಜೇತಾ ಅನಂತಕುಮಾರ್ ಬಿಜೆಪಿ ವಿರುದ್ಧ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಭಾರತೀಯ ಜನತಾ ಪಕ್ಷವು ನನ್ನ ತಂದೆಯನ್ನು ಮರೆಯುತ್ತಿದೆ ಎಂಬುದನ್ನು ಅರಿತುಕೊಳ್ಳಬೇಕಿದೆ ಎಂದೂ …

Read More »

ಚರಂಡಿ ಯಾವಾಗ ಮಾಡಿಸ್ತೀರಾ ಶಾಸಕರೇ? ದಿಗ್ಬಂಧನ ಹಾಕಿ ತರಾಟೆಗೆ ತೆಗೆದುಕೊಂಡ ಮಹಿಳೆಯರು!

ಗದಗ: ಈ ನಾರಿಮಣಿಯರು, ಶಾಸಕರಿಗೆ ತಕ್ಕ ಪಾಠ ಕಲಿಸಿದ್ದು ಭೂಮಿ ಪೂಜೆಗೆ ಬಂದವರನ್ನು ಸುತ್ತುವರೆದು ತರಾಟೆಗೆ ತೆಗೆದುಕೊಂಡರು. ಈ ಅಪರೂಪದ ಘಟನೆ ನಡೆದದ್ದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಹಳ್ಳದ ಕೇರಿ ಮತ್ತು ಕರೆ ಗೋರಿ ಆಶ್ರಯ ಪ್ಲಾಟ್​ನಲ್ಲಿ.   ಲಕ್ಷ್ಮೇಶ್ವರ ಪಟ್ಟಣದ ಹಳ್ಳದ ಕೇರಿ ಮತ್ತು ಕೆರೆ ಗೋರಿ ಆಶ್ರಯ ಪ್ಲಾಟ್​ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಮಾಡಲು ಶಾಸಕರಾದ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಆಗಮಿಸಿದ್ದರು. ಈ …

Read More »

ಗದಗ ಜಿಲ್ಲೆಯಲ್ಲೂ ಶುರುವಾಯ್ತು ಒಳ ಮೀಸಲಾತಿ ಕಿಚ್ಚು; ಚುನಾವಣಾ ಬಹಿಷ್ಕಾರಕ್ಕೆ ತಾಂಡಾ ನಿರ್ಧಾರ!

ಗದಗ: ಗದಗ ಜಿಲ್ಲೆಯಲ್ಲೂ ಒಳ ಮೀಸಲಾತಿ ಕಿಚ್ಚು ಆರಂಭವಾಗಿದ್ದು ಹಳ್ಳಿ ಹಳ್ಳಿಗೂ ವ್ಯಾಪ್ತಿಸುತ್ತಿದೆ. ಒಳ ಮೀಸಲಾತಿಯನ್ನು ವಿರೋಧಿಸಿ ಬೆಳಧಡಿ ಗ್ರಾಮದಲ್ಲಿ ಲಂಬಾಣಿ ಸಮುದಾಯ ರೊಚ್ಚಿಗೆದ್ದಿದ್ದು ಗದಗ ತಾಲೂಕಿ ಬೆಳಧಡಿ ತಾಂಡ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಚುನಾವಣೆ ಬಹಿಷ್ಕಾರಕ್ಕೆ ಬೆಳಧಡಿ ತಾಂಡಾ ನಿವಾಸಿಗಳು ನಿರ್ಧಾರ ಮಾಡಿದ್ದು ಜನರು ಬೆಳಧಡಿ ಗ್ರಾಮದಲ್ಲಿ ಬೀದಿಗಿಳಿದು ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಳ ಮೀಸಲಾತಿ ವಿಚಾರದಲ್ಲಿ ತಾಂಡಾ ನಿವಾಸಿಗಳು ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ. ತಾಂಡಾ …

Read More »

ಅಂಗವಿಕಲರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ

ನವದೆಹಲಿ: ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣಾ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ. ಈ ಬಗ್ಗೆ ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು​ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.   ಈ ಬಾರಿಯ ಚುನಾವಣೆಯಲ್ಲಿ ಮೊದಲ ಬಾರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ಚುನಾವಣಾ ಆಯೋಗ ಕಲ್ಪಿಸಿದೆ. 80 ವರ್ಷ ಮೇಲ್ಪಟ್ಟವರು, ಅಂಗವಿಕಲರು ಮತ್ತು …

Read More »

ಮತ ಎಣಿಕೆಗೆ ಎರಡು ದಿನ ಬೇಕೆ? ಬಲ್ಲವರು ತಿಳಿಸಿ;

ಬೆಂಗಳೂರು: ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣಾ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ. ಈ ಬಗ್ಗೆ ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು​ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.   ಇದೀಗ ನಟ, ಪ್ರಜಾಕೀಯ ಪಕ್ಷ ಸಂಸ್ಥಾಪಕ ಉಪೇಂದ್ರ ಟ್ವಿಟರ್​ನಲ್ಲಿ ಪ್ರಶ್ನೆಯೊಂದನ್ನು ಎತ್ತಿದ್ದಾರೆ. ಕರ್ನಾಟಕದಲ್ಲಿ ಮೇ 10, ಬುಧವಾರದಂದು ಒಂದೇ ಹಂತದಲ್ಲಿ ಮತದಾನ …

Read More »

ಈ ಬಾರಿ M3 EVM ಬಳಕೆ, ಎಲ್ಲ ಪಕ್ಷಗಳ ಜತೆ ಹೊಸ ಯಂತ್ರ ಪರಿಶೀಲನೆ: ರಾಜ್ಯ ಚುನಾವಣಾ ಆಯೋಗ ಮಾಹಿತಿ

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ ಇಂದು (ಮಾ.29) ಸುದ್ದಿಗೋಷ್ಠಿ ನಡೆಸಿ, ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟಿಸಿದ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಿ, ಚುನಾವಣಾ ಪೂರ್ವ ತಯಾರಿ ಹಾಗೂ ನೀತಿ ಸಂಹಿತೆಯ ಎಚ್ಚರಿಕೆ ಸೇರಿದಂತೆ ಅನೇಕ ಮಾಹಿತಿಗಳನ್ನು ತಿಳಿಸಿದೆ.   ಬಹುನಿರೀಕ್ಷಿತ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನವು ಮೇ 10ರಂದು ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಏಪ್ರಿಲ್ 13ಕ್ಕೆ ಅಧಿಸೂಚನೆ ಪ್ರಕಟವಾಗಲಿದೆ. ರಾಜ್ಯ ಚುನಾವಣಾ …

Read More »

ಸಿದ್ದರಾಮಯ್ಯ, ಸಚಿವರಿಗೆ ತಟ್ಟಿದ ನೀತಿ ಸಂಹಿತೆ ಬಿಸಿ*

ಬೆಂಗಳೂರು; ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಚಿವರು, ವಿಪಕ್ಷ ನಾಯಕರಿಗೆ ನೀತಿ ಸಂಹಿತೆ ಬಿಸಿ ತಟ್ಟಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಿ ಕಾರಿನಲ್ಲಿ ವರುಣಾ ಕ್ಷೇತ್ರದ ಪ್ರವಾಸದಲ್ಲಿದ್ದರು. ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಸರ್ಕಾರಿ ವಾಹನ ಬಿಟ್ಟು ಖಾಸಗಿ ವಾಹನದಲ್ಲಿ ಸಿದ್ದರಾಮಯ್ಯ ತೆರಳಿದ್ದಾರೆ. ಈ ನಡುವೆ ಸಚಿವರಾದ ಹಾಲಪ್ಪ ಆಚಾರ್, ಸಿ.ಸಿ.ಪಾಟೀಲ್ ಕೂಡ ಸರ್ಕಾರಿ ವಾಹನಗಳಿಗೆ ಗುಡ್ ಬೈ ಹೇಳಿದ್ದು, ಖಾಸಗಿ …

Read More »