ಮೈಸೂರು : ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಹಾಕಿದ್ದ ಜನಿವಾರ ತೆಗೆಸಿದ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ, ಶಾಸಕ ಶ್ರೀವತ್ಸ ನೇತೃತ್ವದಲ್ಲಿ ಜಿಲ್ಲಾ ಬ್ರಾಹ್ಮಣ ವೇದಿಕೆ ಪ್ರತಿಭಟನೆ ನಡೆಸಿ ಕೃಷ್ಣರಾಜ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು. ನಗರದ ಅಗ್ರಹಾರ ವೃತ್ತದಲ್ಲಿರುವ ಕೃಷ್ಣರಾಜ ಪೊಲೀಸ್ ಠಾಣೆ ಮುಂದೆ ಘಂಟೆ ಭಾರಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಈ ಘಟನೆಗೆ ಸಂಬಂಧಿಸಿದ ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು, …
Read More »ಪರಿಸರ ರಕ್ಷಣೆಗೆ ಪಣ: ತುಮಕೂರು ಪರಿಸರ ಪ್ರೇಮಿಯ ಸೈಕಲ್ ಯಾತ್ರೆ –
ಬೆಳಗಾವಿ: ಪರಿಸರ ರಕ್ಷಣೆ, ಪ್ರಕೃತಿಯನ್ನು ಉಳಿಸಲು ಇಲ್ಲೊಬ್ಬ ಯುವ ಪರಿಸರ ಪ್ರೇಮಿ ಪಣ ತೊಟ್ಟಿದ್ದಾರೆ. ರಾಜ್ಯಾದ್ಯಂತ ಸೈಕಲ್ ಏರಿ ಪರಿಸರ ಯಾತ್ರೆ ಮಾಡುತ್ತಿದ್ದಾರೆ. ಇವರ ನಿಸ್ವಾರ್ಥ ಸೇವೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹೌದು, ತಾವಾಯ್ತು, ತಮ್ಮ ಕುಟುಂಬ ಆಯ್ತು ಅಂತಾ ಇರುವ ಜನರ ಮಧ್ಯ ಇಲ್ಲೊಬ್ಬ ಯುವಕ ಪರಿಸರಕ್ಕಾಗಿ ರಾಜ್ಯ ಸುತ್ತುತ್ತಿದ್ದಾರೆ. ಹೀಗೆ ಸೈಕಲ್ ಸವಾರಿ ಮಾಡುತ್ತಿರುವ ಯುವಕನೇ ಪರಿಸರ ಪ್ರೇಮಿ ಮಹಾಲಿಂಗ. ಮೂಲತಃ ತುಮಕೂರಿನವರು. ರಾಜ್ಯದ ಎಲ್ಲಾ ಹಳ್ಳಿಗಳಲ್ಲಿ ಅರಣ್ಯ …
Read More »ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಆರೋಪ ಪ್ರಕರಣ ಕುರಿತಂತೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು
ಶಿವಮೊಗ್ಗ: ನಗರದ ಆದಿಚುಂಚನಗಿರಿ ಶಾಲೆಯಲ್ಲಿ ನಡೆದ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾ ನೀಡಿರುವ ದೂರಿನ ಅನ್ವಯ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಜನಿವಾರ ತೆಗೆಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾ ದೂರು ನೀಡಿತ್ತು. ಏಪ್ರಿಲ್ 16ರಂದು ನಡೆದಿದ್ದ ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸಲಾಗಿದೆ ಎಂದು ಆರೋಪಿಸಲಾಗಿದೆ. ಪರೀಕ್ಷಾ ವಿಚಾರದಲ್ಲಿ …
Read More »ರಿಕ್ಕಿ ರೈ ಮೇಲೆ ಗುಂಡಿನ ದಾಳಿ
ರಾಮನಗರ: ದಿವಂಗತ ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ ಅವರ ಮೇಲೆ ದುಷ್ಕರ್ಮಿ ಗುಂಡಿನ ದಾಳಿ ನಡೆಸಿರುವ ಘಟನೆ ಶುಕ್ರವಾರ ರಾತ್ರಿ ಬಿಡದಿ ಬಳಿ ನಡೆದಿದೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಕ್ಕಿ ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಕಾರು ಚಾಲಕ ಬಸವರಾಜು ನೀಡಿರುವ ದೂರಿನ ಮೇರೆಗೆ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚಾಲಕ ನೀಡಿದ ದೂರಿನಲ್ಲಿ …
Read More »ವಿದ್ಯಾಸಿರಿ ಯೋಜನೆಯ ಮೊತ್ತ ಎರಡು ಸಾವಿರ ರೂಪಾಯಿಗೆ ಹೆಚ್ಚಳ: ಸಿಎಂ ಸಿದ್ದರಾಮಯ್ಯ ಘೋಷಣೆ
ವಿದ್ಯಾಸಿರಿ ಯೋಜನೆಯ ಮೊತ್ತ ಎರಡು ಸಾವಿರ ರೂಪಾಯಿಗೆ ಹೆಚ್ಚಳ: ಸಿಎಂ ಸಿದ್ದರಾಮಯ್ಯ ಘೋಷಣೆ ಬೆಂಗಳೂರು: ಮಡಿವಾಳ ಸಮುದಾಯದ ಪ್ರಗತಿಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ: ಮುಖ್ಯವಾಹಿನಿಗೆ ಬರುವ ಪ್ರಯತ್ನ ನಿಮ್ಮಿಂದ ಹೆಚ್ಚೆಚ್ಚು ಆಗಬೇಕು. ಈ ಕಾರಣಕ್ಕೇ ವಿದ್ಯಾಸಿರಿ ಯೋಜನೆಯ ಮೊತ್ತವನ್ನು ಎರಡು ಸಾವಿರ ರೂಪಾಯಿಗೆ ಹೆಚ್ಚಳ ಮಾಡ್ತೀನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಘೋಷಣೆ ಮಾಡಿದರು. ಕೆಂಗೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಿದೇವ ಕನ್ವೆಷ್ನನ್ ಹಾಲ್ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಮಡಿವಾಳ ಮತ್ತು …
Read More »ಖಾನಾಪೂರದಲ್ಲಿ ವಿ. ವಾಯ್. ಚವ್ಹಾಣ್ ಪಾಲಿಟೆಕ್ನಿಕ್ ಕಾಲೇಜಿಗೆ ಅನುಮೋದನೆ ಲೋಕಮಾನ್ಯ ಸಂಸ್ಥೆಯ ಉಪಾಧ್ಯಕ್ಷ ಪಂಢರಿ ಪರಬ್ ಅವರಿಂದ ಮಾಹಿತಿ
ಖಾನಾಪೂರದಲ್ಲಿ ವಿ. ವಾಯ್. ಚವ್ಹಾಣ್ ಪಾಲಿಟೆಕ್ನಿಕ್ ಕಾಲೇಜಿಗೆ ಅನುಮೋದನೆ ಲೋಕಮಾನ್ಯ ಸಂಸ್ಥೆಯ ಉಪಾಧ್ಯಕ್ಷ ಪಂಢರಿ ಪರಬ್ ಅವರಿಂದ ಮಾಹಿತಿ ಲೋಕಮಾನ್ಯ ವಿವಿಧೋದ್ದೇಶ ಸಹಕಾರಿ ಸಂಘವು ಸಹಕಾರಿ ವಲಯದ ಜೊತೆಗೆ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಗ್ರಾಮೀಣ ಅಭಿವೃದ್ಧಿಯ ಕಾರ್ಯಗಳಿಗೆ ಸಮರ್ಪಿತವಾಗಿದೆ. ಶಿಕ್ಷಣದ ಮೂಲಕ ಸಾಮಾಜಿಕ ಪರಿವರ್ತನೆಯ ಪಾತ್ರವನ್ನು ವಹಿಸಿಕೊಂಡು, ಖಾನಾಪೂರದ ಯುವಕರ ಕೌಶಲ್ಯಗಳನ್ನು ಅನಾವರಣಗೊಳಿಸಲು ತಾಲೂಕಿನಲ್ಲಿ ಮೊದಲ ಪಾಲಿಟೆಕ್ನಿಕ್ ಕಾಲೇಜನ್ನು ಪ್ರಾರಂಭಿಸಲಾಗಿದೆ. ಖಾನಾಪೂರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಪಂಢರಿ ಪರಬ್ …
Read More »ಬಸವಾದಿ ಶರಣರ ವೈಭವ’ ರಥಯಾತ್ರೆಗೆ ಸಿಎಂ ಚಾಲನೆ:ಲಾಂಛನ ಬಿಡುಗಡೆ
ಅನುಭವ ಮಂಟಪ- ಬಸವಾದಿ ಶರಣರ ವೈಭವ’ ರಥಯಾತ್ರೆಗೆ ಸಿಎಂ ಚಾಲನೆ:ಲಾಂಛನ ಬಿಡುಗಡೆ ರಥಯಾತ್ರೆಯಿಂದ ಸಾಹಿತ್ಯದ ಪರಿಚಯ, ಬಸವಣ್ಣನವರ ವಿಚಾರಗಳು ಪ್ರಚಾರವಾಗಲಿದೆ :ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು: ‘ಅನುಭವ ಮಂಟಪ- ಬಸವಾದಿ ಶರಣರ ವೈಭವ’ ರಥಯಾತ್ರೆಯು ಇಡೀ ರಾಜ್ಯದಲ್ಲಿ ಪ್ರಯಾಣ ಮಾಡಲಿದೆ. ಇದರಿಂದ ವಚನ ಸಾಹಿತ್ಯದ ಪರಿಚಯ, ಬಸವಣ್ಣನವರ ವಿಚಾರಗಳು ಪ್ರಚಾರವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಧಾನಸೌಧದಲ್ಲಿ ಇಂದು ಆಯೋಜಿಸಲಾಗಿದ್ದ ‘ಅನುಭವ …
Read More »ಕೊನೆಗೂ ಬೆಳಗಾವಿಗರ ಬಹುಪ್ರತೀಕ್ಷಿತ ನೂತನವಾಗಿ ಮಾರ್ಡನ್ ಮಾರ್ಕೆಟಾಗಿ ರೂಪುಗೊಂಡ ಕಲಾಮಂದಿರ
ಕೊನೆಗೂ ಬೆಳಗಾವಿಗರ ಬಹುಪ್ರತೀಕ್ಷಿತ ನೂತನವಾಗಿ ಮಾರ್ಡನ್ ಮಾರ್ಕೆಟಾಗಿ ರೂಪುಗೊಂಡ ಕಲಾಮಂದಿರದ ಲೋಕಾರ್ಪಣೆಗೆ ಮೂಹೂರ್ತ ಫಿಕ್ಸ್ ಆಗಿದೆ. , ಬೆಳಗಾವಿ ಟಿಳಕವಾಡಿಯಲ್ಲಿರುವ ಕಲಾಮಂದಿರಕ್ಕೆ ಹೊಸ ರೂಪವನ್ನು ನೀಡಲಾಗಿದ್ದು, ಮಾರ್ಡನ್ ಮಾರ್ಕೆಟಾಗಿ ಕಲಾಮಂದಿರ ಪರಿವರ್ತನೆಗೊಂಡಿದೆ. ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ನಿರ್ಮಾಣ ಕಾರ್ಯ ಮುಗಿದಿದ್ದು, ಕೊನೆಗೂ ಲೋಕಾರ್ಪಣೆಗೆ ಮೂಹೂರ್ತ ಫಿಕ್ಸ್ ಆಗಿದೆ. ಇದೇ ಏಪ್ರೀಲ್ 20 ರಂದು ಬೆಳಿಗ್ಗೆ 11:30 ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ
Read More »ತಾರಕಕ್ಕೇರಿದ ಪಂಚಮಸಾಲಿ ಸ್ವಾಮೀಜಿ — ಕಾಶಪ್ಪನವರ ಕಾದಾಟ
ಬಾಗಲಕೋಟೆ : ತಾರಕಕ್ಕೇರಿದ ಪಂಚಮಸಾಲಿ ಸ್ವಾಮೀಜಿ — ಕಾಶಪ್ಪನವರ ಕಾದಾಟ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷನಾಗಿ ಸ್ವಾಮೀಜಿಗೆ ಸೆಡ್ಡು ಹೊಡೆದ ಕಾಶಪ್ಪನವರ ಪಂಚಮಸಾಲಿ ಪೀಠಕ್ಕೆ ಪರ್ಯಾಯ ಸ್ವಾಮೀಜಿ ನೇಮಕ ವಿಚಾರ ಚರ್ಚೆ ಮುನ್ನಲೆಯ ಮಧ್ಯೆ ಪಂಚಮಸಾಲಿ ಟ್ರಸ್ಟ್ ಗೆ ನೂತನ ಅಧ್ಯಕ್ಷರಾಗಿ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಜಯ ಮೃತ್ಯುಂಜಯ ಸ್ವಾಮೀಜಿ …
Read More »ಸತೀಶ್ ಜಾರಕಿಹೊಳಿ ರಾಜಕಾರಣಕ್ಕೆ ಬರದಿದ್ದರೆ ಕ್ರಿಕೆಟ್ ಆಟಗಾರನಾಗುತ್ತಿದ್ದರೇ?
ಹಾಸನ, ಏಪ್ರಿಲ್ 18: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ರಾಜಕಾರಣಕ್ಕೆ ಬರದಿದ್ದರೆ ಕ್ರಿಕೆಟ್ ಆಟಗಾರನಾಗುತ್ತಿದ್ದರೇ? ಅವರು ಬ್ಯಾಟ್ ಹಿಡಿಯುವ ರೀತಿ, ಬ್ಯಾಟಿಂಗ್ ಸ್ಟಾನ್ಸ್, ಎಸೆತಗಳನ್ನು ಎದುರಿಸುವ ಮತ್ತು ಆಡುವ ಶೈಲಿ ನೋಡಿದರೆ ಶಾಲಾ ಮತ್ತು ಕಾಲೇಜು ದಿನಗಳಲ್ಲಿ ಕ್ರಿಕೆಟ್ ಆಡಿರೋದು ದೃಢಪಡುತ್ತದೆ. ಹಾಸನದಲ್ಲಿಂದು ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯೊಂದನ್ನು (Tennis ball Cricket tournament) ಉದ್ಘಾಟಿಸಿದ ಸತೀಶ್ ಜಾರಕಿಹೊಳಿ ಒಂದಷ್ಟು ಎಸೆತಗಳನ್ನು ಎದುರಿಸಿ ಆಡಿದರು. ಸ್ಕ್ವೇರ್ ಲೆಗ್ ಮತ್ತು ಮಿಡ್ ವಿಕೆಟ್ ಬೌಂಡರಿ ಕಡೆ …
Read More »
Laxmi News 24×7