ಬೆಂಗಳೂರು, ಮಾ28- ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಸಿದ ಪ್ರಯಾಣಿಕರಿಬ್ಬರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಒಬ್ಬ ಪ್ರಯಾಣಿಕರು ಮಾ.21ರಂದು ಪ್ರಯಾಣಿಸಿದ ಕರ್ನಾಟಕ ಸಾರಿಗೆ ಬಸ್ಸು ನಂ.KA19 F3329, ಸಂಜೆ 4.30 ಕ್ಕೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಮಂಗಳೂರಿಗೆ ಹೊರಟಿರುತ್ತದೆ. ಮತ್ತೊಬ್ಬ ಪ್ರಯಾಣಿಕರು ಪ್ರಯಾಣಿಸಿದ ರಾಜಹಂಸ ಬಸ್ಸು ನಂ.KA57F3802 ಮಾ.18 ರಂದು ಬೆಳಗ್ಗೆ 10 ಕ್ಕೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ದಾವಣಗೆರೆಗೆ ಹೊರಟಿರುತ್ತದೆ. ಈ ಎರಡು …
Read More »28 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಾಮಗ್ರಿ ತಲುಪಿವೆ: ಸುಧಾ ಮೂರ್ತಿಗೆ ಹರ್ಷ ಧನ್ಯವಾದ
ಮಂಗಳೂರು: ಇನ್ಫೋಸಿಸ್ ಫೌಂಡೇಶನ್‍ನ ಸುಧಾ ಮೂರ್ತಿ ಅವರು ಕಳುಹಿಸಿಕೊಟ್ಟ ವೈದ್ಯಕೀಯ ಸಾಮಗ್ರಿಗಳು ಮಂಗಳೂರಿಗೆ ತಲುಪಿವೆ. ನಿಮಗೆ ಧನ್ಯವಾದ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್.ಹರ್ಷ ಹೇಳಿದ್ದಾರೆ. ಟ್ವೀಟ್ ಮಾಡಿರುವ ಹರ್ಷ ಅವರು, ದಕ್ಷಿಣ ಕನ್ನಡ ಜಿಲ್ಲಾಡಳಿತದ ಪರವಾಗಿ ಮಂಗಳೂರು ಪೊಲೀಸರ ಕರೆಗೆ ಸುಧಾ ಮೂರ್ತಿ ಅವರು ಸ್ಪಂದಿಸಿದ್ದಾರೆ. ನಾವು ಮನವಿ ಸಲ್ಲಿಸಿದ 36 ಗಂಟೆಗಳಲ್ಲಿ 28 ಲಕ್ಷ ರೂ.ಗಳ ಮೌಲ್ಯದ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಅವರು ಕಳುಹಿಸಿದ …
Read More »ರೀ ಓಪನ್ ಆದಾಗ ಸ್ಟಾಕ್ ಪ್ರಮಾಣ ಈಗ ಇರುವ ಸ್ಟಾಕ್‍ಗೆ ಹೋಲಿಕೆ ಆಗಬೇಕು. ಇಲ್ಲದಿದ್ದರೆ ಮದ್ಯದಂಗಡಿಗಳ ಲೈಸೆನ್ಸ್ ರದ್ದು: ಸಚಿವ ಮಾಧುಸ್ವಾಮಿ
ಹಾಸನ: ಹಾಸನ ಸುತ್ತಲಿನ ಜಿಲ್ಲೆಯಲ್ಲಿ ಪಾಸಿಟಿವ್ ಕೇಸ್ ಇರುವುದರಿಂದ, ಹಾಸನದ ಸುತ್ತ ಎಲ್ಲ ಕಡೆ ಸಂಪರ್ಕ ಕಡಿತ ಮಾಡಲು ಕಟ್ಟುನಿಟ್ಟಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹಾಸನದಲ್ಲಿ ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಇಂದು ನಗರದಲ್ಲಿ ಮಾತನಾಡಿದ ಅವರು, ಜನ ಎಷ್ಟು ಹೇಳಿದರೂ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಹೀಗಾಗಿ ಮಧ್ಯಾಹ್ನ ಎರಡು ಗಂಟೆಯವರೆಗೆ ಮಾತ್ರ ಶಾಪ್‍ಗಳನ್ನು ಓಪನ್ ನಂತರ ಕ್ಲೋಸ್ ಮಾಡಿಸಲಾಗುವುದು. ಮೆಡಿಕಲ್ ಸ್ಟೋರ್ ಮತ್ತು ಅಗತ್ಯ ವಸ್ತು ಬಿಟ್ಟು ಎಲ್ಲವನ್ನೂ ಕಡ್ಡಾಯವಾಗಿ ಕ್ಲೋಸ್ …
Read More »ನನಗೆ ಕೊರೊನಾ ಸೋಂಕಿದೆ ಕಾಪಾಡಿ- ಬಿಎಸ್‍ವೈಗೆ ಬೆಳಗಾವಿ ಯೋಧ ಮನವಿ
ಬೆಳಗಾವಿ: ನನಗೆ ಕೊರೊನಾ ಸೋಂಕಿದೆ ಕಾಪಾಡಿ ಎಂದು ಜಿಲ್ಲೆಯ ಯೋಧರೊಬ್ಬರು ವಿಡಿಯೋ ಮೂಲಕ ಸಿಎಂ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಯೋಧ ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದವರಾಗಿದ್ದು, ಮಾರ್ಚ್ 17ರಂದು ಹೈದರಾಬಾದ್‍ನಿಂದ ಗ್ರಾಮಕ್ಕೆ ಬಂದಿದ್ದಾರೆ. ಆದರೆ ತಮಗೆ ಕೊರೊನಾ ಸೋಂಕು ತಗುಲಿದ್ದು, ವೈದ್ಯಾಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ದಯವಿಟ್ಟು ನನ್ನನ್ನು ಕಾಪಾಡಿ ಎಂದು ಕೇಳಿದ್ದಾರೆ.ವಿಡಿಯೋದಲ್ಲಿ ಏನಿದೆ?: ನನಗೆ ಕೋವಿಡ 19 ಲಕ್ಷಣಗಳು ಕಾಣಿಸಿಕೊಂಡಿವೆ. ಈಗ ನನ್ನ …
Read More »ಅನಾವಶ್ಯಕವಾಗಿ ಸಂಚರಿಸುತ್ತಿರುವ ಬೈಕ್ ಹಾಗೂ ಇತರೆ ವಾಹನಗಳ ಚಾಲಕರಿಗೆ ₹500 ರೂಪಾಯಿ ದಂಡ ವಿಧಿಸಿದ್ದಾರೆ.
ಹಾವೇರಿ: ಲಾಕ್ ಡೌನ್ ಘೋಷಿಸಿದ್ದರು ಅನಾವಶ್ಯಕವಾಗಿ ಸಂಚರಿಸುತ್ತಿರುವ ಬೈಕ್ ಹಾಗೂ ಇತರೆ ವಾಹನಗಳ ಚಾಲಕರಿಗೆ ಇಲ್ಲಿನ ಪೊಲೀಸರು ₹500 ರೂಪಾಯಿ ದಂಡ ವಿಧಿಸಿದ್ದಾರೆ. ಕೊರೊನಾ ವೈರಸ್ ಹರಡೋ ಭೀತಿ ಹಿನ್ನೆಲೆ ಹೊರಗಡೆ ಓಡಾಡಬೇಡಿ ಅಂತ ಹೇಳಿ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಆದರು ಸಹ ಜನ ಕೇಳ್ತಿಲ್ಲ. ಪೊಲೀಸರು ಲಾಠಿ ಏಟಿ ಮುಟ್ಟಿಸಿದರು, ಬಸ್ಕಿ ಹೊಡೆಸಿದರು ಸಹ ಯಾವುದಕ್ಕೂ ಬಗ್ಗುತ್ತಿಲ್ಲ. ಲಾಠಿ ಏಟಿಗೂ ಬುದ್ಧಿ ಕಲಿಯದ ಜನರಿಗೆ ಹಾವೇರಿ ಪೊಲೀಸರು ದಂಡ …
Read More »ಐಡಿ ಕಾರ್ಡ್ ತೋರಿಸಿದರು ಸಹ ಹಲ್ಲೆ ಮಾಡಿದ ಪೊಲೀಸ್ ವಿರುದ್ಧ ಕ್ರಮ ಕೈಗೊಳ್ಳಬೇಕು:ಆರೋಗ್ಯ ಇಲಾಖೆ ಅಧಿಕಾರಿಯ
ಬೆಳಗಾವಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 4ರ ಬಳಿ ವಿನಾಕಾರಣ ಆರೋಗ್ಯ ಇಲಾಖೆ ಅಧಿಕಾರಿಯ ಮೇಲೆ ಪೊಲೀಸರು ಪ್ರಜ್ಞಾಹೀನರಾಗುವವರೆಗೂ ಥಳಿಸಿದ ಘಟನೆ ಇಂದು ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿ ಮಹಾಂತೇಶ ನಗರದಿಂದ ಮನೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಲಾಠಿ ಏಟು ತೊರಿಸಿದ್ದಾರೆ. ನಾನು ಆರೋಗ್ಯ ಇಲಾಖೆಯ ಅಧಿಕಾರಿಯಾಗಿದ್ದೆನೆ. ಕೆಲಸದಿಂದ ಮನೆಗೆ ಹೋಗುತ್ತಿದ್ದೆನೆ ಎಂದು ಐಡಿ ಕಾರ್ಡ್ ತೊರಿಸಿದರು. ಪೊಲೀಸರು ಏನು ಅಂತನು ಸಹ ವಿಚಾರಿಸಿದೆ ಹೊಡೆದಿದ್ದಾರೆ ಎಂದು ಬಸವರಾಜ ತಿಳಿಸಿದ್ದಾರೆ. ಐಡಿ …
Read More »ಬುಲೆರೋ ವಾಹನ ಹರಿದು ಮೂವರು ಪಾದಚಾರಿಗಳು ಸಾವನ್ನಪ್ಪಿದ ಘಟನೆ ಹುಕ್ಕೇರಿ ತಾಲೂಕಿನಲ್ಲಿ ನಡೆದಿದೆ.
ಬೆಳಗಾವಿ: ಬುಲೆರೋ ವಾಹನ ಹರಿದು ಮೂವರು ಪಾದಚಾರಿಗಳು ಸಾವನ್ನಪ್ಪಿದ ಘಟನೆ ಹುಕ್ಕೇರಿ ತಾಲೂಕಿನಲ್ಲಿ ನಡೆದಿದೆ. ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಇಬ್ಬರು ಮಹಿಳೆಯರು ಸೇರಿ ಮೂವರು ಸಾವನ್ನಪ್ಪಿದರೆ, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಡಿಕ್ಕಿ ರಭಸಕ್ಕೆ ಒಬ್ಬ ಮಹಿಳೆ 200 ಮೀಟರ್ ಗೂ ಹೆಚ್ಚು ಕಾರು ಎಳೆದುಕೊಂಡು ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮೃತರ ಹೆಸರು ಇನ್ನು ತಿಳಿದು ಬಂದಿಲ್ಲ. ಸುದ್ದಿ ತಿಳಿದು …
Read More »ಜನರಿಗೆ ಅಗತ್ಯವಿರುವ ವಸ್ತುಗಳನ್ನು ಹೆಚ್ಚಿಗೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು
ಬೆಳಗಾವಿ: ಜನರಿಗೆ ಅಗತ್ಯವಿರುವ ವಸ್ತುಗಳನ್ನು ಹೆಚ್ಚಿಗೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರತಿ ಗ್ರಾಮಗಳಲ್ಲಿ ಪಾಗಿಂಗ್ ಹಾಗೂ ಬ್ಲಿಚಿಂಗ್ ಪೌಡರ್ ಸಿಂಪಡಿಸಬೇಕು ಎಂದು ಶಾಸಕರಾದ ಉಮೇಶ ಕತ್ತಿ ಹಾಗೂ ಸತೀಶ ಜಾರಕಿಹೊಳಿ ಅವರ ಜಂಟಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು. ಹುಕ್ಕೇರಿ ತಾಲ್ಲೂಕಾ ಪಂಚಾಯಿತಿ ಸಭಾಭವನದಲ್ಲಿ ಶನಿವಾರ ಕೊರೊನಾ ಕುರಿತು ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಜನರ ಆರೋಗ್ಯದ ದೃಷ್ಟಿಯಿಂದ …
Read More »ಕಾಬೂಲ್ ಗುರುದ್ವಾರದ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಕಾಸರಗೋಡಿನ ಸೂಸೈಡ್ ಬಾಂಬರ್
ನವದೆಹಲಿ: ಇತ್ತೀಚೆಗೆ ಕಾಬೂಲ್‍ನಲ್ಲಿ ನಡೆದ ಸಿಖ್‍ರ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದ ನಾಲ್ಕು ಜನ ಭಯೋತ್ಪಾದಕರಲ್ಲಿ ಓರ್ವ ಕೇರಳದ ಕಾಸರಗೋಡಿನ ಯುವಕನಿದ್ದ ಎಂದು ವರದಿಯಾಗಿದೆ. ಮಾರ್ಚ್ 25ರಂದು ಕಾಬೂಲ್‍ನ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದ ಸಿಖ್‍ರ ಮೇಲೆ ಆತ್ಮಾಹುತಿ ಬಾಂಬ್ ದಾಳಿ ಮಾಡಲಾಗಿತ್ತು. ಈ ದಾಳಿಯಲ್ಲಿ ನಾಲ್ಕು ಜನ ಸೂಸೈಡ್ ಬಾಂಬರ್ ಗಳು ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿತ್ತು. ಈಗ ಇದರಲ್ಲಿ ಓರ್ವ ಭಾರತದ ಮೂಲದವನಾಗಿದ್ದು, ಕೇರಳದಿಂದ 4 ವರ್ಷದ ಹಿಂದೆ …
Read More »ಆಂಧ್ರ ಗಡಿಯಲ್ಲಿ ಪರದಾಡುತ್ತಿದ್ದಾರೆ ಸಾವಿರಕ್ಕೂ ಹೆಚ್ಚು ಮೀನುಗಾರರು
ಕೋಲಾರ: ಮಂಗಳೂರು ಬಂದರಿನಿಂದ ಆಂಧ್ರ ಪ್ರದೇಶಕ್ಕೆ ತೆರಳುತ್ತಿದ್ದ ಮೀನುಗಾರರನ್ನು ಕೋಲಾರದ ಗಡಿ ಭಾಗವಾದ ನಂಗಲಿ ಚೆಕ್ ಪೋಸ್ಟ್ ಬಳಿ ಆಂಧ್ರಪ್ರದೇಶ ಪೊಲೀಸರು ತಡೆ ಹಿಡಿದಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗಡಿಯಲ್ಲಿ ಆಂಧ್ರ ಪೊಲೀಸರು ಮೀನುಗಾರರಿಗೆ ತಡೆ ಮಾಡಿದ್ದು, ಆಂಧ್ರ ಮೂಲದ ನೂರಾರು ಮಂದಿ ಮೀನುಗಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಮಂಗಳೂರಿನಲ್ಲಿ ಮೀನುಗಾರಿಕೆ ಮಾಡಿಕೊಂಡು ಇವರು ಜೀವನ ನಡೆಸುತ್ತಿದ್ದರು. ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲೆಡೆ ಲಾಕ್‍ಡೌನ್ …
Read More »
Laxmi News 24×7