Breaking News

ರಾಜ್ಯ

ಮತ್ತೆ 4ಸಾವಿರ ಕಿಟ್‌ಗಳ ಪೂರೈಕೆ

ಬೆಳಗಾವಿ: ‘ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಕೋವಿಡ್-19 ಹೊರತುಪಡಿಸಿ ಇತರ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ತುರ್ತು ಚಿಕಿತ್ಸೆ ನೀಡಲು ನಿರಾಕರಿಸಿದರೆ ಅಂತಹ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಎಚ್ಚರಿಕೆ ನೀಡಿದರು. ಇಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ‘ತುರ್ತು ಚಿಕಿತ್ಸೆಗೆ ಅಗತ್ಯ ಇರುವವರಿಗೆ ತಪಾಸಣೆ ನಡೆಸಿ ಪ್ರಮಾಣಪತ್ರವನ್ನು ನೀಡಲು ಜಿಲ್ಲೆಗೆ ಮತ್ತೆ 4ಸಾವಿರ ರ‍್ಯಾಪಿಡ್ ಆಂಟಿಜೆನ್ ಕಿಟ್‌ಗಳು ಬಂದಿವೆ. ಪ್ರಮಾಣಪತ್ರ ಪಡೆದ ಬಳಿಕವೂ …

Read More »

ಗೋಕಾಕ: ನಗರಸಭೆ ಸದಸ್ಯ ಗಿರೀಶ ಖೋತ್( 45) ಅಕಾಲಿಕ ಮರಣ……….

ಗೋಕಾಕ: ಮೂರು ಬಾರಿ ನಗರಸಭೆ ಸದಸ್ಯರಾಗಿ ಜನಸೇವಕರಾಗಿ ದುಡಿದಿದ್ದ  ಗಿರೀಶ ಖೋತ್ (45) ಅಕಾಲಿಕ ಮರಣ ಹೊಂದಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಸವನಗರದ ನಿವಾಸದಲ್ಲಿ ಅವರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. 14 ನೇ ವಾರ್ಡಿನ್ ಮೂರು ಬಾರಿ ಸದಸ್ಯರಗಾಗಿ ಜನಸೇವಕರಾಗಿ ದುಡಿದಿದ್ದ ಗಿರೀಶ ಖೋತ ಅವರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಅಕಾಲಿಕ ಮರಣಕ್ಕೆ ಸೌಭಾಗ್ಯ ಲಕ್ಷ್ಮಿ ಚೇರ್ಮನ್ ರಾದಂತ ಶ್ರೀ ಸಂತೋಷ್ ಜಾರಕಿಹೊಳಿ ಅವರು …

Read More »

ಮಕ್ಕಳ ಪರೇಡ್, ಸಾಂಸ್ಕೃತಿಕ ಕಾರ್ಯಕ್ರಮ ಇಲ್ಲ

ಬೆಳಗಾವಿ: ‘ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು. ಇಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಆ.15ರ ಬೆಳಿಗ್ಗೆ 9ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತ್ತು ಅಂತರ ಕಾಯ್ದುಕೊಂಡು ಭಾಗವಹಿಸಬೇಕು. ಪ್ರತಿ ವರ್ಷದಂತೆ …

Read More »

ಬಿಎಸ್‍ವೈ ಪುತ್ರಿ, ಕಾವೇರಿ ನಿವಾಸದ ಸಿಬ್ಬಂದಿಗೂ ಕೊರೊನಾ ಶಾಕ್.!

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಯಾರ್ಯಾರಿಗೆ ಕೊರೊನಾ ಸೋಂಕು ಇದೆ ಎಂಬುದರ ಪತ್ತೆ ನಡೆಸಿದಾಗ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಯಡಿಯೂರಪ್ಪ ಪುತ್ರಿ ಪದ್ಮಾವತಿ ಹಾಗೂ ಕಾವೇರಿ ನಿವಾಸದ ಮನೆಗೆಲಸದವರು, ಅಡುಗೆಯವರು ಹಾಗೂ ವಿಶೇಷ ಕರ್ತವ್ಯಾಧಿಕಾರಿ ಕಾರು ಚಾಲಕ ಸೇರಿದಂತೆ 6 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ.  ಯಡಿಯೂರಪ್ಪ ಅವರು ಅಡ್ಮಿಟ್ ಆಗಿರುವ ವಾರ್ಡ್‍ನಲ್ಲೇ ಪುತ್ರಿ ಪದ್ಮಾವತಿ ಅವರೂ ಕೂಡ ದಾಖಲಾಗಿದ್ದಾರೆ.

Read More »

ಸಿಎಂ ನಿವಾಸ ಕಾವೇರಿಯ 9 ಮಂದಿಗೆ ಕೊರೊನಾ: ಕುಟುಂಬಸ್ಥರಿಗೆ ಪರೀಕ್ಷೆ

ಸಿಎಂ ನಿವಾಸ ಕಾವೇರಿಯಲ್ಲಿ 9 ಮಂದಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಸಿಎಂ ಯಡಿಯೂರಪ್ಪ ಸೇರಿದಂತೆ 8 ಮಂದಿಗೆ ಕೊರೊನಾದ ರೋಗ ಲಕ್ಷಣ ಕಂಡು ಬಂದಿಲ್ಲ. ಆದ್ರೆ ಕೊರೊನಾ ಇರುವುದು ದೃಢಪಟ್ಟಿದ್ದು,ಚಿಕಿತ್ಸೆ ನಡೆಯುತ್ತಿದೆ. ಈ ಮಧ್ಯೆ ಸಿಎಂ ಸಂಪರ್ಕಕ್ಕೆ ಬಂದಿದ್ದ ಜನರಿಗೆ ಸೆಲ್ಫ್ ಕ್ವಾರಂಟೈನ್ ಆಗುವಂತೆ ಹೇಳಲಾಗಿದೆ.ಸಿಎಂ ಕುಟುಂಬದ ಎಲ್ಲ ಸದಸ್ಯರಿಗೂ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಕುಟುಂಬ ಸದಸ್ಯರಿಗೆ ಬಿಬಿಎಂಪಿ ಆಂಟಿಜೆನ್ ಟೆಸ್ಟ್ ಮಾಡ್ತಿದೆ.   ಸಿಎಂ ನಿವಾಸದ …

Read More »

ಸಿಎಂ ತವರು ಶಿವಮೊಗ್ಗದಲ್ಲಿ ಮತ್ತೊಬ್ಬ ಶಾಸಕರಿಗೆ ಕೋವಿಡ್-19 ಪಾಸಿಟಿವ್

ಶಿವಮೊಗ್ಗ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಮತ್ತೋರ್ವ ಶಾಸಕರಿಗೆ ಕೋವಿಡ್ 19 ಸೋಂಕು ತಾಗಿರುವುದು ದೃಢವಾಗಿದೆ. ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ಅವರಿಗೆ ಕೋವಿಡ್-19 ಪಾಸಿಟಿವ್ ಪತ್ತೆಯಾಗಿದೆ. ರ್ಯಾಪಿಡ್ ಆಯಂಟಿಜೆನ್ ಟೆಸ್ಟ್ ನಲ್ಲಿ ಕೋವಿಡ್ 19 ಸೋಂಕು ತಾಗಿರುವುದು ದೃಢವಾಗಿದೆ. ಇಂದು ಆರ್.ಪ್ರಸನ್ನ ಕುಮಾರ್ ಅವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡರು. ಈ ವೇಳೆ ಸೋಂಕು ಪತ್ತೆಯಾಗಿದೆ. ಆದರೆ ರೋಗ …

Read More »

ಸೋಂಕಿನಿಂದ ಗುಣಮುಖ: ಬೆಳಗಾವಿಯಲ್ಲಿ ಯುವಕನಿಗೆ ಮಾಲೆ ಹಾಕಿ ಪಟಾಕಿ ಸಿಡಿಸಿ ಸ್ವಾಗತ

ಬೆಳಗಾವಿ: ಕೋವಿಡ್-19 ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದ ಯುವಕನಿಗೆ ಮಾಲೆ ಹಾಕಿ, ಪಟಾಕಿ ಸಿಡಿಸಿ ಇಲ್ಲಿಯ ಖಡಕ್‌ ಗಲ್ಲಿಯಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು. ಆಸ್ಪತ್ರೆಯಿಂದ ಬಿಡುಗಡೆ ಆಗಿ ಬರುತ್ತಿದ್ದಂತೆ ಖಡಕ್ ಗಲ್ಲಿಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆಯಾಗಿ ಬರುತ್ತಿದ್ದಂತೆ ಪಟಾಕಿ ಸಿಡಿಸಿದ ಸ್ಥಳೀಯ ಯುವಕರು ಸಂಭ್ರಮಿಸಿದರು. ಹತ್ತು ದಿನಗಳ ಹಿಂದೆ ಖಡಕ್ ಗಲ್ಲಿಯ 35 ವರ್ಷ ವಯಸ್ಸಿನ ಈ ವ್ಯಕ್ತಿಗೆ ಕೋವಿಡ್-19 ‌ಸೋಂಕು ವಕ್ಕರಿಸಿತ್ತು. ಇಲ್ಲಿನ ಕೋವಿಡ್ ವಾರ್ಡ್​​​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ …

Read More »

ಜಿಲ್ಲಾಡಳಿತ ಮತ್ತು ಬಿಮ್ಸ್ ಎಡವಟ್ಟು: ಎರಡನೇ ಬೆಂಗಳೂರು ಆಗ್ತಿದೆಯಾ ಕುಂದಾನಗರಿ?

ಬೆಳಗಾವಿ: ಜಿಲ್ಲಾಡಳಿತ ಮತ್ತು ಬಿಮ್ಸ್ ಆಸ್ಪತ್ರೆ ಎಡವಟ್ಟಿನಿಂದ ಕೊವಿಡ್ ವಿಚಾರದಲ್ಲಿ ಎರಡನೇ ಬೆಂಗಳೂರು ಆಗ್ತಿದೆಯಾ ಕುಂದಾನಗರಿ ಎಂಬ ಆತಂಕ ಉಂಟಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ನಿತ್ಯವೂ ಬೆಳಗಾವಿಯಲ್ಲಿ ಸೋಂಕಿತರ ಸಂಖ್ಯೆ ಇನ್ನೂರು, ಮುನ್ನೂರರ ಗಡಿ ದಾಟುತ್ತಿದೆ. ಜಿಲ್ಲಾಡಳಿತ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾದ್ರೂ ಮುಚ್ಚಿಡುವ ಪ್ರಯತ್ನ? ಮಾಡುತ್ತಿದೆ. ಮೃತದೇಹ ಸಾಗಿಸುವ ವಾಹನದ ಡ್ರೈವರ್ ಹೇಳುವಂತೆ ನಿತ್ಯವೂ ಹದಿನೈದರಿಂದ ಹದಿನೆಂಟು ಸೋಂಕಿತರು ಮೃತಪಡುತ್ತಿದ್ದಾರಂತೆ. ವಯಸ್ಸಾದವರು ಆಸ್ಪತ್ರೆಗೆ ದಾಖಲಾದ್ರೂ ಚಿಕಿತ್ಸೆ …

Read More »

ಸಿಎಂ ಯಡಿಯೂರಪ್ಪನವರ ಸಂಪರ್ಕದಲ್ಲಿದ್ದವರು ಕ್ವಾರಂಟೈನ್ ಸಾಧ್ಯತೆ; ರಾಜ್ಯದ ಆಡಳಿತ ನೋಡಿಕೊಳ್ಳುವವರು ಯಾರು?

ಬೆಂಗಳೂರು (ಜು. 3): ಕೊರೋನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿನ್ನೆ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸಂಪರ್ಕದಲ್ಲಿದ್ದವರು ಕ್ವಾರಂಟೈನ್ ಆಗಬೇಕೆಂದು ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಆಡಳಿತವನ್ನು ನೋಡಿಕೊಳ್ಳುವವರು ಯಾರು? ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಾರದ ರೊಟೀನ್ ಚೆಕಪ್​ ವೇಳೆ ನಿನ್ನೆ ಸಿಎಂಗೆ ಕೊರೋನಾ ಪಾಸಿಟಿವ್ ಇರುವುದು ಪತ್ತೆಯಾಗಿತ್ತು. ಹೀಗಾಗಿ, ರಾತ್ರೋರಾತ್ರಿ ಅವರು ಆಸ್ಪತ್ರೆಗೆ …

Read More »

ಜನ್ಮಜನ್ಮಕೂ ಇವನೇ ನನ್ನ ಅಣ್ಣನಾಗಲಿ, ಇವಳೇ ನನ್ನ ತಂಗಿಯಾಗಲಿ……

ಅಣ್ಣ ತಂಗಿಯರ ಬಾಂಧವ್ಯವದ ಶ್ರೇಷ್ಠತೆಯನ್ನು ಸಾರುವ ಹಬ್ಬ ರಾಖಿ ಹಬ್ಬ. ರಾಖಿ ಹಬ್ಬದಂದು ಸಹೋದರಿ ಸಹೋದರನ ಕೈಗೆ ಕೇಸರಿ ದಾರ ಬರಿ ದಾರವಲ್ಲ, ಅದು ರಕ್ಷೆಯ ಪ್ರತೀಕ. ಅದರಲ್ಲಿ ಅಣ್ಣ ಸದಾಕಾಲ ನನ್ನನ್ನು ರಕ್ಷಿಸಬೇಕೆಂಬ ಆಶಯ ಅಡಗಿದೆ ರಕ್ಷಾ ಬಂಧನವನ್ನು ಏಕೆ ಆಚರಿಸುತ್ತೇವೆ? ಅಣ್ಣ ತಂಗಿಯರ ಅನುಬಂಧದ ಶ್ರೇಷ್ಠತೆಯನ್ನು ಪ್ರತಿಬಿಂಬಿಸುವ ಅರ್ಥಗರ್ಭಿತ ಹಬ್ಬವೇ ರಕ್ಷಾಬಂಧನ. ಭಾರತೀಯ ಸಂಸ್ಕೃತಿಯಲ್ಲಿ ಕಂಡಬರುವ ವೈವಿಧ್ಯಮಯ ಆಚರಣೆಗಳಲ್ಲಿ ಈ ಹಬ್ಬವು ಕೂಡ ಒಂದು. ರಕ್ಷಾಬಂಧನ ಎಂದರೆ …

Read More »