Breaking News

ರಾಜ್ಯ

ರಾಜ್ಯದಲ್ಲಿ ಕಳೆದ ಒಂದು ತಿಂಗಳಲ್ಲಿ ಕೋವಿಡ್ ಸೋಂಕಿಗೆ 3,030 ಮಂದಿ ಬಲಿ

ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ತಿಂಗಳಲ್ಲಿ ಸರಿಸುಮಾರು ಮೂರು ಸಾವಿರದಷ್ಟು ಕೋವಿಡ್ ವೈರಸ್ ಸೋಂಕಿತರ ಸಾವಾಗಿದೆ. ಈ ಮೂಲಕ ಒಟ್ಟಾರೆ ಸೋಂಕಿಗೆ ಬಲಿಯಾದವರ ಸಂಖ್ಯೆ ನಾಲ್ಕು ಸಾವಿರ ಗಡಿದಾಟಿದೆ. ಸೋಮವಾರ 115 ಮಂದಿ ಸೋಂಕು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದು ವರದಿಯಾಗಿದ್ದು, ಒಟ್ಟಾರೆ ಸಂಖ್ಯೆ 4062ಕ್ಕೆ ಏರಿಕೆಯಾಗಿದೆ. ಒಂದು ತಿಂಗಳ ಹಿಂದಷ್ಟೆ (ಜುಲೈ 16ಕ್ಕೆ) ಸೋಂಕಿತರ ಸಾವಿನ ಸಂಖ್ಯೆ ಒಂದು ಸಾವಿರ ಗಡಿದಾಟಿತ್ತು. ಆ ನಂತರ ನಿತ್ಯ ಸರಾಸರಿ ನೂರು ಸೋಂಕಿತರು ಸಾವು …

Read More »

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಮಲಪ್ರಭಾ ನದಿ ತೀರದ ವಿವಿಧ ಗ್ರಾಮಗಳು ಮತ್ತು ಮುಂಜಾಗ್ರತಾ ಕ್ರಮವಾಗಿ ಆರಂಭಿಸಲಾಗಿರುವ ಪರಿಹಾರ(ಕಾಳಜಿ) ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಬೆಳಗಾವಿ: ನೆರೆಯ ಮಹಾರಾಷ್ಟ್ರ ಹಾಗೂ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ  ಹಿನ್ನೆಲೆಯಲ್ಲಿ ಪ್ರವಾಹ ಭೀತಿ ಎದುರಾಗಿದ್ದು,  ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಮಲಪ್ರಭಾ ನದಿ ತೀರದ ವಿವಿಧ ಗ್ರಾಮಗಳು ಮತ್ತು ಮುಂಜಾಗ್ರತಾ ಕ್ರಮವಾಗಿ ಆರಂಭಿಸಲಾಗಿರುವ ಪರಿಹಾರ(ಕಾಳಜಿ) ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಸವದತ್ತಿ ತಾಲ್ಲೂಕಿನ ನವೀಲುತೀರ್ಥ ಜಲಾಶಯಕ್ಕೆ  ಭೇಟಿ ನೀಡಿ ನೀರಿನ ಒಳ ಹರಿವು ಮತ್ತು ಹೊರ ಹರಿವು ಪ್ರಮಾಣದ ಮಾಹಿತಿಯನ್ನು ಪಡೆದುಕೊಂಡರು. ಜಲಾಶಯದ ನೀರಿನ ಮಟ್ಟದ ಮೇಲೆ ನಿರಂತರವಾಗಿ ನಿಗಾ ವಹಿಸಬೇಕು. …

Read More »

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರಿಗೆ ಮನವಿ

ಹೊಸದಿಲ್ಲಿ: ರಾಷ್ಟ್ರೀಯ ಜಲ ನೀತಿಯನ್ನು ರೂಪಿಸುವುದು ಮತ್ತು ಅತಿವೃಷ್ಟಿಯನ್ನು ತಡೆಯಲು ನದಿಗಳ ಜೋಡಣೆ ಮಾಡುವ ಯೋಜನೆ ರೂಪಿಸುವ ದೃಷ್ಟಿಯಿಂದ ಪಕ್ಷವು ನಿರ್ದಿಷ್ಟ ಕಾರ್ಯಕ್ರಮ ರೂಪಿಸಬೇಕೆಂದು ರಾಜ್ಯದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರಿಗೆ ಮನವಿ ಮಾಡಿದರು.  ನವದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಈ ಭೇಟಿಯ ಸಮಯದಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯ ಯೋಜನೆಗಳನ್ನು  ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ಪಕ್ಷದ …

Read More »

ಬೆಂಗಳೂರು ಗಲಭೆ – ಇಬ್ಬರು ಕಾಂಗ್ರೆಸ್ ಕಾರ್ಪೋರೇಟರ್​ಗಳಿಗೆ ನೋಟಿಸ್

ಬೆಂಗಳೂರು: ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಕಾಂಗ್ರೆಸ್ ಕಾರ್ಪೋರೇಟರ್ ಗಳಿಗೆ ನೋಟಿಸ್ ನೀಡಿದ್ದಾರೆ. ಮಾಜಿ ಮೇಯರ್ ಸಂಪತ್‍ರಾಜ್ ಮತ್ತು ಪುಲಕೇಶಿನಗರ ಕಾರ್ಪೋರೇಟರ್ ಅಬ್ದುಲ್ ರಕೀಬ್ ಝಾಕೀರ್ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.ಶಾಸಕ ಅಖಂಡ ಶ್ರೀನಿವಾಸ್‍ಮೂರ್ತಿ ಮನೆ ಮೇಲಿನ ದಾಳಿ, ಡಿ ಜೆ ಹಳ್ಳಿ, ಕೆಜಿಹಳ್ಳಿ ಮತ್ತು ಕಾವಲ್‍ಬೈರಸಂದ್ರದಲ್ಲಿ ನಡೆದಿದ್ದ ದಳ್ಳುರಿ ಹಿಂದೆ ರಾಜಕೀಯ ದ್ವೇಷದ ಕಾರಣವಿದೆ ಎಂಬ ಕಾರಣಕ್ಕಾಗಿ ಇಬ್ಬರು ಕಾಂಗ್ರೆಸ್ ಪಾಲಿಕೆ ಸದಸ್ಯರನ್ನ …

Read More »

ಒನ್ ಸೈಡ್ ಲವ್ – 16 ವರ್ಷದ ಹುಡುಗ ನೇಣಿಗೆ ಶರಣು

ಮುಂಬೈ: 16 ವರ್ಷದ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವ ಘಟನೆ ಮುಂಬೈನ ಸಂತಾಕ್ರೂಜ್ ನ ಕೊಲಿವೆರಿಯಲ್ಲಿ ನಡೆದಿದೆ. ವಿದ್ಯಾರ್ಥಿ ಆತ್ಮಹತ್ಯೆಗೂ ಮುನ್ನ ತಾನು ಪ್ರೀತಿಸುತ್ತಿದ್ದ ಗೆಳತಿಗೆ ಗುಡ್ ಬೈ ಮೆಸೇಜ್ ಕಳುಹಿಸಿದ್ದಾನೆ. 12ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಒನ್ ಸೈಡ್ ಪ್ರೀತಿಯಲ್ಲಿದ್ದನು. ಶುಕ್ರವಾರ ಪೋಷಕರು ಕೆಲಸಕ್ಕೆ ಹೋದಾಗ ಮನೆಯನ್ನು ಲಾಕ್ ಮಾಡಿಕೊಂಡಿದ್ದಾನೆ. ನೆರೆ ಮನೆಯ ಮಹಿಳೆ ಬಾಗಿಲು ತಟ್ಟಿದ್ದಾರೆ. ಬಾಗಿಲು ತೆಗೆಯದಿದ್ದಾಗ, ಮಹಿಳೆ ಕಿಟಕಿಯಲ್ಲಿ ಇಣುಕಿ ನೋಡಿದ್ದಾರೆ. ವಿದ್ಯಾರ್ಥಿ …

Read More »

ಡಿಜೆ ಹಳ್ಳಿ, ಕೆಜಿಹಳ್ಳಿಗೆ ಇಂದು ಕಟೀಲ್ ನೇತೃತ್ವದ ನಿಯೋಗ ಭೇಟಿ

ಬೆಂಗಳೂರು,ಆ.17- ರಾಜ್ಯಾದ್ಯಂತ ತೀವ್ರ ವಿವಾದ ಸೃಷ್ಟಿಸಿರುವ ರಾಜಧಾನಿ ಬೆಂಗಳೂರಿನ ಡಿಜೆ ಹಳ್ಳಿ, ಕೆಜಿಹಳ್ಳಿ ಗಲಭೆ ಪ್ರಕರಣದ ಘಟನಾ ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದ ನಿಯೋಗ ಇಂದು ಸಂಜೆ ಭೇಟಿ ನೀಡಲಿದೆ. ಬಿಜೆಪಿ ಮುಖಂಡರ ನಿಯೋಗದ ಜೊತೆಗೆ ನಳಿನ್ ಕುಮಾರ್ ಕಟೀಲ್ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಿದ್ದು, ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ನಿವಾಸಕ್ಕೂ ಭೇಟಿ ನೀಡುವರು. ಇದಕ್ಕೂ ಮುನ್ನ ಗೃಹ ಸಚಿವರ …

Read More »

ಇಂದಿನಿಂದ 5 ದಿನ ತೆರೆದಿರುತ್ತೆ ಶಬರಿಮಲೆ ಅಯ್ಯಪ್ಪ ದೇವಸ್ಥಾನ

ಪಟ್ಟಣಂತಿಟ್ಟ, ಆ.17- ವಿಶ್ವವಿಖ್ಯಾತ ಶಬರಿ ಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲನ್ನು ಐದು ದಿನಗಳ ಮಾಸಿಕ ವಿಶೇಷ ಪೂಜೆಗಾಗಿ ಇಂದು ಬೆಳಗ್ಗೆ ತೆರೆಯಲಾಗಿದೆ. ಮಲೆಯಾಳಂ ಪಂಚಾಂಗದ ಪ್ರಕಾರ ಇಂದಿನಿಂದ ಆಗಸ್ಟ್ 21ರ ವರೆಗೆ ಅಯ್ಯಪ್ಪ ಸ್ವಾಮಿಗೆ ಮಾಸಿಕ ವಿಶೇಷ ಪೂಜೆ ನೆರವೇರಿಸಲಾಗುತ್ತದೆ ಎಂದು ಟ್ರವಾಂಕುರ್ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಎನ್.ವಾಸು ತಿಳಿಸಿದ್ದಾರೆ.ದೇವಸ್ಥಾನಕ್ಕೆ ಭೇಟಿ ನೀಡುವವರು ಕಡ್ಡಾಯವಾಗಿ ಕೊರೊನಾ ನೆಗೆಟಿವ್ ಪ್ರಮಾಣ ಪತ್ರ ಹಾಜರುಪಡಿಸಬೇಕು. ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದೇವಸ್ಥಾನವು ಕಟ್ಟುನಿಟ್ಟಿನ …

Read More »

ಆಸ್ಪತ್ರೆಯಲ್ಲಿದ್ದ ಸೋಂಕಿತ ಪತಿಗೆ ಕದ್ದು ಮುಚ್ಚಿ ಎಣ್ಣೆ ತಂದುಕೊಟ್ಟ ಪತ್ನಿ

ಚೆನ್ನೈ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನ್ನ ಪತಿಗೆ 38 ವರ್ಷದ ಮಹಿಳೆಯೊಬ್ಬರು ಮದ್ಯ ತಂದುಕೊಟ್ಟು ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.ತಮಿಳುನಾಡಿನ ಕುದ್ದಲೂರಿನ ಚಿದಂಬರಂನ ರಾಜಾ ಮುತ್ತಯ್ಯ ವೈದ್ಯಕೀಯ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಪತಿಗೆ ಮದ್ಯ ತಂದುಕೊಟ್ಟಿದ್ದಕ್ಕೆ ಮಹಿಳೆಯನ್ನು ಬಂಧಿಸಲಾಗಿದೆ. ಕುಡಿದ ಮತ್ತಿನಲ್ಲಿ ಮಹಿಳೆಯ ಪತಿ ಆಸ್ಪತ್ರೆಯಲ್ಲಿ ಗಲಾಟೆ ಮಾಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಟಿ.ಮುತ್ತುಕುಮಾರ್(48) ಅವರಿಗೆ ವಾರದ ಹಿಂದೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತು. …

Read More »

ಹಿಡಕಲ್ ಜಲಾಶಯಿಂದ 40 ಸಾವಿರ ಕ್ಯೂಸೆಕ್ಸ ನೀರು ಘಟಪ್ರಭಾ ನದಿಗೆ ಬಿಡುಗಡೆ- ಗ್ರಾಮಸ್ಥರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಗೋಕಾಕ ತಹಶಿಲ್ದಾರ ಸೂಚನೆ.

ಬೆಳಗಾವಿ: ಪಶ್ಚಿಮ ಗಟ್ಟದಲ್ಲಿ ಧಾರಾಕಾರು ಮಳೆಯಾಗುತ್ತಿರುವುದರಿಂದ ಹಿಡಕಲ್ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ‌ ಒಳ ಹರಿಯುವ ಹೆಚ್ಚಾಗಿದ್ದು ಜಲಾಶಯದಿಂದ ಇಂದು 40000 ಕ್ಯೂಸೆಕ್ಸ ನೀರು ಹೊರ ಬಿಡಲಾಗಿದೆ . ಹಿಡಕಲ್ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು ಒಳಹರಿಯುವ 18052 ಕ್ಯೂಸೆಕ್ಸ ಇದ್ದು ಈ ಒಳ ಹರಿವಿನ ಪ್ರಮಾಣವನ್ನು‌ ದೃಷ್ಟಿಯಲ್ಲಿಟ್ಟುಕೊಂಡು‌ ಜಲಾಶಯದ ಕ್ರಷ್ಟ ಗೇಟುಗಳು ಮೂಲಕ  ಘಟಪ್ರಭಾ ನದಿಗೆ ನೀರು ಹರಿದು ಬಿಡಲಾಗಿದೆ. ಬಾನುವಾರ ಸಂಜೆ 5:30 ಕ್ಕೆ 40 ಸಾವಿರ ಕ್ಯೂಸೆಕ್ಸ ನೀರು ನದಿಗೆ …

Read More »

ಲಡಾಖ್‌ ಹುತಾತ್ಮ ಕರ್ನಲ್‌ ಸಂತೋಷ್‌ ಬಾಬು ಪತ್ನಿಗೆ ಡೆಪ್ಯುಟಿ ಕಲೆಕ್ಟರ್‌ ಹುದ್ದೆ

ಹೈದರಾಬಾದ್‌: ಭಾರತ-ಚೀನಾ ಗಡಿಯಲ್ಲಿ ಇತ್ತೀಚೆಗೆ ಸಂಭವಿಸಿದ ಹಿಂಸಾತ್ಮಕ ಸಂಘರ್ಷದಲ್ಲಿ ಮೃತಪಟ್ಟ ಕರ್ನಲ್ ಸಂತೋಷ್‌ ಬಾಬು ಅವರ ಪತ್ನಿ ತೆಲಂಗಾಣ ಸರ್ಕಾರದ ಡೆಪ್ಯುಟಿ ಕಲೆಕ್ಟರ್‌ ಆಗಿ ಅಧಿಕೃತವಾಗಿ ವರದಿ ಮಾಡಿಕೊಂಡಿದ್ದಾರೆ. ಸಂತೋಷ್‌ ಬಾಬು ಪತ್ನಿ ಸಂತೋಷಿ ಅವರನ್ನು ಡೆಪ್ಯುಟಿ ಕಲೆಕ್ಟರ್‌ ಹುದ್ದೆಗೆ ನೇಮಕ ಮಾಡಲಾಗಿದೆ. ಸಂತೋಷಿ ಅವರು ಹೈದರಾಬಾದ್‌ನ ಬಿಆರ್‌ಕೆಆರ್ ಭವನದಲ್ಲಿ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಅವರಿಗೆ ವರದಿ ಪತ್ರವನ್ನು ನೀಡಿದ್ದಾರೆ ಎಂದು ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ. ಮುಖ್ಯಮಂತ್ರಿ ಕೆ. …

Read More »