Breaking News

ಒನ್ ಸೈಡ್ ಲವ್ – 16 ವರ್ಷದ ಹುಡುಗ ನೇಣಿಗೆ ಶರಣು

Spread the love

ಮುಂಬೈ: 16 ವರ್ಷದ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವ ಘಟನೆ ಮುಂಬೈನ ಸಂತಾಕ್ರೂಜ್ ನ ಕೊಲಿವೆರಿಯಲ್ಲಿ ನಡೆದಿದೆ. ವಿದ್ಯಾರ್ಥಿ ಆತ್ಮಹತ್ಯೆಗೂ ಮುನ್ನ ತಾನು ಪ್ರೀತಿಸುತ್ತಿದ್ದ ಗೆಳತಿಗೆ ಗುಡ್ ಬೈ ಮೆಸೇಜ್ ಕಳುಹಿಸಿದ್ದಾನೆ.

12ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಒನ್ ಸೈಡ್ ಪ್ರೀತಿಯಲ್ಲಿದ್ದನು. ಶುಕ್ರವಾರ ಪೋಷಕರು ಕೆಲಸಕ್ಕೆ ಹೋದಾಗ ಮನೆಯನ್ನು ಲಾಕ್ ಮಾಡಿಕೊಂಡಿದ್ದಾನೆ. ನೆರೆ ಮನೆಯ ಮಹಿಳೆ ಬಾಗಿಲು ತಟ್ಟಿದ್ದಾರೆ. ಬಾಗಿಲು ತೆಗೆಯದಿದ್ದಾಗ, ಮಹಿಳೆ ಕಿಟಕಿಯಲ್ಲಿ ಇಣುಕಿ ನೋಡಿದ್ದಾರೆ. ವಿದ್ಯಾರ್ಥಿ ನೇಣು ಹಾಕಿಕೊಳ್ಳುತ್ತಿರೋದನ್ನು ನೋಡಿದ ಮಹಿಳೆ ನೆರೆಹೊರೆಯವರನ್ನ ಸೇರಿಸಿ ಬಾಗಿಲು ಒಡೆದಿದ್ದಾರೆ. ಅಷ್ಟರಲ್ಲಿ ವಿದ್ಯಾರ್ಥಿ ಶವ ನೇತಾಡುತ್ತಿತ್ತು. ಕೂಡಲೇ ಆಸ್ಪತ್ರೆಗೆ ರವಾನಿಸಿದಾಗ ವಿದ್ಯಾರ್ಥಿ ಸಾವನ್ನಪ್ಪಿರೋದನ್ನು ವೈದ್ಯರು ದೃಢಪಡಿಸಿದ್ದಾರೆ ಎಂದು ವಕೋಲ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಪುತ್ರನ ಮೊಬೈಲ್ ಚೆಕ್ ಮಾಡಿದಾಗ ಆತ್ಮಹತ್ಯೆಗೂ ಮುನ್ನ ಆತ ಹಲವು ಗೆಳೆಯರಿಗೆ ಕರೆ ಮಾಡಿದ್ದಾನೆ. ಆದ್ರೆ ಯಾರೂ ಅವನ ಕರೆಯನ್ನ ಸ್ವೀಕರಿಸಿಲ್ಲ. ಅವನು ಪ್ರೀತಿಸುತ್ತಿದ್ದ ಗೆಳತಿಗೆ ‘ನಾನು ಹೋಗುತ್ತಿದ್ದೇನೆ. ನಾನು ಯಾರಿಗೂ ತೊಂದರೆ ನೀಡಲ್ಲ’ ಅಂತ ಬರೆದು ವಾಟ್ಸಪ್ ಸಂದೇಶ ಕಳುಹಿಸಿದ್ದಾನೆ ಎಂದು ವಿದ್ಯಾರ್ಥಿಯ ತಂದೆ ಹೇಳಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ