Breaking News

ರಾಜ್ಯ

ಗೋಕಾಕದಲ್ಲಿ ಮಾಧವಾನಂದ ಪ್ರಭೂಜಿ ಜಯಂತಿ ಉದ್ಘಾಟಿಸಿದ ಸಚಿವ ರಮೇಶ್ ಜಾರಕಿಹೊಳಿ

      ಗೋಕಾಕದಲ್ಲಿ ಸ.ಸ.ಮಾಧವಾನಂದ ಪ್ರಭೂಜಿ ಅವರ 105 ನೇ ಜಯಂತಿ ಕಾರ್ಯಕ್ರಮವನ್ನು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಉದ್ಘಾಟಿಸಿದರು. ಗೋಕಾಕದಲ್ಲಿ ಸೋಮವಾರ ಸ.ಸ.ಮಾಧವಾನಂದ ಪ್ರಭೂಜಿ ಅವರ 105 ನೇ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಜಯಂತಿ ಅಂಗವಾಗಿ ಮಾಧವಾನಂದ ಪ್ರಭೂಜಿ ಅವರ ಪಾಲಕಿ ಉತ್ಸವದ ಮೆರವಣಿಗೆ ನಡೆಯಿತು. ಪ್ರಭೂಜಿ ಅವರ ಭಕ್ತರು ಭಜನೆ ಮೇಳದೊಂದಿಗೆ ಪಾಲಕಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ …

Read More »

ಮನೆಗೆಲಸ ಮಾಡುವ ವಿಚಾರವಾಗಿ ತಾಯಿ ಬೈದಿದ್ದಕ್ಕೆ ಬೇಸರಗೊಂಡ 16 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ

ಬೆಂಗಳೂರು: ಮನೆಗೆಲಸ ಮಾಡುವ ವಿಚಾರವಾಗಿ ತಾಯಿ ಬೈದಿದ್ದಕ್ಕೆ ಬೇಸರಗೊಂಡ 16 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಗಿರಿನಗರ ಸಮೀಪ ಮುನೇಶ್ವರ ಬ್ಲಾಕ್‌ನಲ್ಲಿ ಭಾನುವಾರ ನಡೆದಿದೆ. ಮುನೇಶ್ವರ ಬ್ಲಾಕ್‌ನ ನಿವಾಸಿ ಮಹಾಲಕ್ಷ್ಮಿ (16) ಮೃತ ದುರ್ದೈವಿ. ಮನೆಯಲ್ಲಿ ತನ್ನ ಎಂಟು ವರ್ಷದ ತಮ್ಮನನ್ನು ಸ್ನಾನಗೃಹದಲ್ಲಿ ಕೂಡಿಹಾಕಿ ಬಳಿಕ ನೇಣು ಬಿಗಿದುಕೊಂಡು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಾಲಕನ ಚೀರಾಟ ಕೇಳಿ ನೆರೆ ಹೊರೆಯರು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು …

Read More »

ಅಕ್ರಮವಾಗಿ ಮಹಿಳೆಯೊಬ್ಬರನ್ನು ಬಂಧಿಸಿರುವ ಆರೋಪಕ್ಕೆ ಇನ್ಸ್‌ಪೆಕ್ಟರ್ ಸೇರಿ ನಾಲ್ವರು ಮೇಲೆ FIR ದಾಖಲಾಗಿದೆ.

ಬೆಂಗಳೂರು: ಅಕ್ರಮವಾಗಿ ಮಹಿಳೆಯೊಬ್ಬರನ್ನು ಬಂಧಿಸಿರುವ ಆರೋಪಕ್ಕೆ ಇನ್ಸ್‌ಪೆಕ್ಟರ್ ಸೇರಿ ನಾಲ್ವರು ವಿಜಯನಗರ ಠಾಣೆ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅಕ್ರಮ ಬಂಧನ ಮಾಡಿದ್ದಾರೆ. ಹಾಗೂ ಅವ್ಯಾಚ್ಯಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಮಹಿಳೆಯೊಬ್ಬರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದ ಮೇರೆಗೆ ಪೊಲೀಸರ ವಿರುದ್ಧ FIR ದಾಖಲಾಗಿದೆ. ವಿಜಯನಗರ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಭರತ್, ಠಾಣೆಯ ಸಬ್ ಇನ್ಸ್‌ಪೆಕ್ಟರ್‌ಗಳಾದ ಅಕ್ಷತಾ, ಸಂತೋಷ್, ಹೆಡ್ ಕಾನ್ಸ್‌ಟೇಬಲ್ ಲಿಂಗರಾಜು ವಿರುದ್ಧ ವಿಜಯನಗರ …

Read More »

ಬೆಳ್ಳಂ ಬೆಳಗ್ಗೆಯೇ ಖಾಕಿ ಗನ್ ಸದ್ದು ಮಾಡಿದೆ. 4 ಕೊಲೆ ಆರೋಪಿಗಳ ಮೇಲೆ ಪೊಲೀಸರು

ಆನೇಕಲ್: ಬೆಳ್ಳಂ ಬೆಳಗ್ಗೆಯೇ ಖಾಕಿ ಗನ್ ಸದ್ದು ಮಾಡಿದೆ. 4 ಕೊಲೆ ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲೂಕಿನ ಗ್ರಾಮಗಳಾದ ಅವಡದೇವನಹಳ್ಳಿ, ಮುತ್ಯಾನಲ್ಲೂರಿನಲ್ಲಿ ನಡೆದಿದೆ. ಅವಡದೇವನಹಳ್ಳಿಯಲ್ಲಿ ಗೋಪಿ ಮತ್ತು ಗಂಗಾ ಎಂಬ ಇಬ್ಬರು ಆರೋಪಿಗಳ ಮೇಲೆ ಫೈರಿಂಗ್ ಆದ್ರೆ ಮುತ್ಯಾನಲ್ಲೂರಿನಲ್ಲಿ ಅನಂತ್, ಬಸವನ ಮೇಲೆ ಫೈರಿಂಗ್ ನಡೆದಿದೆ. ಅಕ್ಟೋಬರ್ 30ರಂದು ಶೆಟ್ಟಿಹಳ್ಳಿಯಲ್ಲಿ ವಿನೀತ್ ಕೊಲೆ ಹಿನ್ನೆಲೆಯಲ್ಲಿ ಆರೋಪಿಗಳ ಬಗ್ಗೆ ಖಚಿತ ಮಾಹಿತಿಯ …

Read More »

2 ವಾಹನಗಳ ಮಧ್ಯೆ ಡಿಕ್ಕಿಯಾಗಿ 6 ಜನ ಸ್ಥಳದಲ್ಲೇ ಸಾವು

ಪಯಾಗ್‌ಪುರ: ಉತ್ತರ ಪ್ರದೇಶದ ಪಯಾಗ್‌ಪುರ ಬಳಿ ಭೀಕರ ಅಪಘಾತ ಸಂಭವಿಸಿದೆ. 2 ವಾಹನಗಳ ಮಧ್ಯೆ ಡಿಕ್ಕಿಯಾಗಿ 6 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಗೂ 10 ಜನರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹೆಚ್ಚಿನ ಮಾಹಿತಿ ಲಾಭ್ಯವಾಗಿಲ್ಲ.

Read More »

ಕನ್ನಡ ಅಭಿಮಾನ

ಕನ್ನಡ ಅಭಿಮಾನ ಮೂಡಿಬರಲಿ ಕನ್ನಡ ಅಭಿಮಾನ ಕನ್ನಡ ನಾಡಿನ ಅಭಿಮಾನ ಒಕ್ಕೊರಲಿಂದ ಕನ್ನಡಿಗರೆಂದು ಹೇಳೋಣ ಎಲ್ಲರೂ ಒಂದಂಬ ಭಾವದಲಿ…. ಎಲ್ಲ ಕಡೆ ಚೆಲುವ ಕನ್ನಡ ಮೊಳಗಲಿ…. ಬೆಳಗಲಿ….. ಎಲ್ಲೆಲ್ಲಿಯೂ ಕನ್ನಡ ಜ್ಯೋತಿ ಬೆಳಗಲಿ….. ಬೆಳೆಯಲಿ….. ಭಾವೈಕ್ಯತೆಯ ಭಾವ ಮೂಡಲಿ ನಾಡು-ನುಡಿಗಾಗಿ ಮನ ತುಡಿಯಲಿ…. ಮಿಡಿಯಲಿ….. ನಾಡ ಸಂಸ್ಕೃತಿಯನು ಬೆಳೆಸಲಿ ಅರ್ಪಣೆಯಾಗಲಿ ನಾಡಿಗಾಗಿ ಬದುಕು ಕನ್ನಡದ ಪ್ರೀತಿ ಹೆಚ್ಚಲಿ….. ಕನ್ನಡತನಕ್ಕಾಗಿ ಹೋರಾಡು ನೀ ತೀರಿಸು ನೀ ಕನ್ನಡ ತಾಯಿಯ ಋಣ….. ವಿದ್ಯಾ …

Read More »

ನಾನು ಕೂಡ  ಸಿಎಂ  ಸ್ಥಾನದ ಆಕಾಂಕ್ಷಿ ಅಂತಾ ಶಾಸಜ   ತನ್ವೀರ್ ಸೇಠ್ ಹೊಸ ಬಾಂಬ್

ಮೈಸೂರು:  ನಾನು ಕೂಡ  ಸಿಎಂ  ಸ್ಥಾನದ ಆಕಾಂಕ್ಷಿ ಅಂತಾ ಶಾಸಜ   ತನ್ವೀರ್ ಸೇಠ್ ಹೊಸ ಬಾಂಬ್ ಸಿಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಾರು ಆಗ್ತಾರೆ ಎನ್ನುವುದು ಮುಖ್ಯವಲ್ಲ. ಅಂಕಿ ಸಂಖ್ಯೆ ಮುಖ್ಯವಾಗುತ್ತದೆ.   ಪಕ್ಷ ಅಧಿಕಾರಕ್ಕೆ ಬರಬೇಕು. ಮುಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ.  ಬಂದಾಗ ಅಂಕಿ ಸಂಖ್ಯೆ ಅನುಗುಣವಾಗಿ ಹೈಕಮಾಂಡ್ ತೀರ್ಮಾನ ಮಾಡತ್ತೆ.   ನಾನು ಸಿಎಂ ಆಗುವ ಅರ್ಹತೆ ಇಟ್ಟುಕೊಂಡಿದ್ದೇನೆ ಎಂದರು. ಜನರಿಂದ ಆಯ್ಕೆಯಾದವರು …

Read More »

ಸರಳ ದಸಾರಕ್ಕೆ ವೆಚ್ಚವಾಗಿದ್ದು ಕೇವಲ 2 ಕೋಟಿ ರೂ.

ಮೈಸೂರು, ನ.1- ಕೊರೊನಾ ಹಿನ್ನೆಲೆಯಲ್ಲಿ ನಡೆದ ಸರಳ ದಸಾರಕ್ಕೆ ವೆಚ್ಚವಾಗಿದ್ದು ಕೇವಲ 2 ಕೋಟಿ ರೂ. ಸರ್ಕಾರ ದಸರಾ ಆಚರಣೆಗಾಗಿ 10 ಕೋಟಿ ರೂ.ವನ್ನು ಬಿಡುಗಡೆ ಮಾಡಿತ್ತು. ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿತ್ತಾದರೂ ಸಂಪ್ರದಾಯವನ್ನು ಕೈ ಬಿಡದಂತೆ ವಿಶ್ವ ವಿಖ್ಯಾತ ದಸರಾವನ್ನು ಸರಳವಾಗಿ ಆಚರಿಸಿ ವೆಚ್ಚ ಮಾಡಿದ್ದು ಕೇವಲ 2 ಕೋಟಿ ರೂ. ಮಾತ್ರ. 25 ವರ್ಷಗಳ ಇತಿಹಾಸದಲ್ಲಿ ಒಂದು ವಾರದೊಳಗೆ ದಸರಾ ವೆಚ್ಚವನ್ನು ನೀಡಿರುವುದು ಇದೇ ಮೊದಲ …

Read More »

ಎಂಇಎಸ್ ಪ್ರತಿಭಟನಾ ಸಭೆಯಲ್ಲಿ ಭಾಗಿಯಾಗಿರುವ ಮಹಾರಾಷ್ಟ್ರ ಎನ್‌ಸಿಪಿ ನಾಯಕಿ ರೂಪಾಲಿ ಕರ್ನಾಟಕದ ವಿರುದ್ದ ಪ್ರಚೋದನಕಾರಿ ಭಾಷಣ

ಬೆಳಗಾವಿ: ಪೊಲೀಸರ ಕಣ್ಣುತಪ್ಪಿಸಿ ಎನ್‌ಸಿಪಿ ಮಹಿಳಾ ಘಟಕದ ರೂಪಾಲಿ ಚಾಕನಕರ ಬೆಳಗಾವಿಗೆ ಆಗಮಿಸಿ ಎಂಇಎಸ್  ಪ್ರತಿಭಟನಾ  ಸಭೆಯಲ್ಲಿ ಭಾಗಿಯಾಗಿದ್ದಾರೆ.  ಎಂಇಎಸ್ ಪ್ರತಿಭಟನಾ ಸಭೆಯಲ್ಲಿ ಭಾಗಿಯಾಗಿರುವ ಮಹಾರಾಷ್ಟ್ರ ಎನ್‌ಸಿಪಿ ನಾಯಕಿ ರೂಪಾಲಿ ಕರ್ನಾಟಕದ ವಿರುದ್ದ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.  ಎನ್‌ಸಿಪಿ ವರಿಷ್ಠ ಶರದ್ ಪವಾರ್ ಆದೇಶ ಮೇರೆಗೆ ಸಭೆಗೆ ಬಂದಿದ್ದೇನೆ.‌ ಕರ್ನಾಟಕ ಸರ್ಕಾರ ಕರಾಳ ದಿನ ನಿಷೇಧಿಸಿದ್ದರೂ ನಾವು ಮಹಾರಾಷ್ಟ್ರದಲ್ಲಿ ಆಚರಿಸುತ್ತಿದ್ದೇವೆ. ಮಹಾರಾಷ್ಟ್ರದಲ್ಲಿ ನಾವು ಕಪ್ಪುಪಟ್ಟಿ ಧರಿಸಿ ಕರಾಳ ದಿನ ಆಚರಿಸುತ್ತಿದ್ದೇವೆ.‌ …

Read More »

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪಕ್ಷದ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ: ಲಕ್ಷಣ ಸವದಿ

ರಾಯಚೂರು: ಸಿಎಂ ಬದಲಾವಣೆ ಹೇಳಿಕೆ ವಿಚಾರ ಹಿನ್ನೆಲೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪಕ್ಷದ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಅಂತ ಉಪಮುಖ್ಯಮಂತ್ರಿ ಲಕ್ಷಣ ಸವದಿ ಹೇಳಿದ್ದಾರೆ .ನಗರದಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ಬಳಿಕ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರು, ರಾಷ್ಟ್ರಾಧ್ಯಕ್ಷರು ಆ ಬಗ್ಗೆ ಸೂಕ್ತ ಸಂದರ್ಭದಲ್ಲಿ ಕ್ರಮಕೈಗೊಳ್ಳುತ್ತಾರೆ ಎಂದರು. ಕಳೆದ ವರ್ಷದ ಬೆಳೆ ವಿಮೆಯ ಹಣ ರೈತರಿಗೆ ಸಿಗದೆ ಹೋಗಿದೆ. ಈ ಬಗ್ಗೆಯೂ ಪರಿಶೀಲಿಸಲಾಗುವುದು. ಭತ್ತ, ತೊಗರಿ, ಉದ್ದು …

Read More »