ಬೆಂಗಳೂರು, ನ.13- ಕಾದಂಬರಿಕಾರ, ಲೇಖಕ, ನಿರೂಪಕ ಹೀಗೆ ನಾನಾ ಮಜಲುಗಳಲ್ಲಿ ಗುರುತಿಸಿಕೊಂಡಿದ್ದ ರವಿಬೆಳೆಗೆರೆಯವರ ಹೆಜ್ಜೆ ಗುರುತುಗಳು ಬಣ್ಣದ ಲೋಕದಲ್ಲೂ ಮೂಡಿವೆ. ಸಿನಿಮಾಲೋಕ ಹಾಗೂ ಸಿನಿಮಂದಿ ಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ರವಿಬೆಳೆಗೆರೆ ಅವರು ರವಿಶ್ರೀವಾತ್ಸ ನಿರ್ದೇಶನದ ಗಂಡ ಹೆಂಡತಿ ಚಿತ್ರದಲ್ಲಿ ತನಿಖಾಧಿಕಾರಿಯಾಗಿ ಗಮನ ಸೆಳೆದರು. ನಂತರ ಗುರುದೇಶಪಾಂಡೆ ನಿರ್ದೇಶಿಸಿದ್ದ ವಾರಸ್ದಾರ, ಶಿವರಾಜ್‍ಕುಮಾರ್ ಅಭಿನಯದ ಮಾದೇಶ, ಡೆಡ್ಲಿ ಸೋಮ ಚಿತ್ರಗಳಲ್ಲೂ ತಮ್ಮ ಅಭಿನಯದ ಮಿಂಚು ಹರಿಸಿದ್ದರು. ಡೆಡ್ಲಿ ಸೋಮ ಸಿನಿಮಾಕ್ಕೆ ರವಿಬೆಳೆಗೆರೆ …
Read More »IMA ಹೂಡಿಕೆದಾರರಿಗೆ ಹಣ ವಾಪಸ್ ನೀಡಲು ಆನ್‍ಲೈನ್ ಅರ್ಜಿ ಆಹ್ವಾನ
ಬೆಂಗಳೂರು,ನ.13- ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಹೂಡಿಕೆದಾರರಿಗೆ ಹಣ ವಾಪಸ್ ಕೊಡಿಸಲು ರಾಜ್ಯ ಸರ್ಕಾರ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ. ನ.25ರಿಂದ ಆನ್‍ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಾರ್ತಾ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಐಎಂಎ ಹಗರಣದ ಬಗ್ಗೆ ಮಾಹಿತಿ ನೀಡಿದ ಸಕ್ಷಮ ಪ್ರಾಧಿಕಾರ ಹಾಗೂ ವಿಶೇಷ ಅಧಿಕಾರಿ ಹರ್ಷಗುಪ್ತ ಅವರು, ಠೇವಣಿದಾರರು ಡಿಸೆಂಬರ್ 24ರೊಳಗಾಗಿ ಅರ್ಜಿ ಸಲ್ಲಿಸಬೇಕು. ಎರಡು ಹಂತದಲ್ಲಿ ಅರ್ಜಿ ಸಲ್ಲಿಕೆ ಅವಕಾಶವಿದ್ದು, ಮೊದಲ ಹಂತದಲ್ಲಿ ವೈಯಕ್ತಿಕ ವಿವರ, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆಗಳನ್ನು …
Read More »ವಂಶಾಡಳಿತ ಮತ್ತು ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಆಕ್ರೋಶ
ಬೆಂಗಳೂರು: ಯಾರ ಹೆಸರನ್ನೂ ಉಲ್ಲೇಖಿಸದೇ ವಂಶಾಡಳಿತ ಮತ್ತು ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿರುವ ಯತ್ನಾಳ್, ಪಕ್ಷದ ಹೈಕಮಾಂಡ್ ಎಲ್ಲ ಚಟುವಟಿಕೆಗಳನ್ನು ಗಮನಿಸುತ್ತಿದೆ. ಯಾವುದೇ ಕಾರಣಕ್ಕೂ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ ಎಂದು ಹೇಳುವ ಮೂಲಕ ಹೆಸರನ್ನು ಹೇಳದೇ ತಮ್ಮದೇ ಪಕ್ಷದ ಕೆಲವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಪೋಸ್ಟ್ ನಲ್ಲಿ ಏನಿದೆ ನಮ್ಮ ಹೆಮ್ಮೆಯ ಪ್ರಧಾನಿ …
Read More »ಹಬ್ಬಕ್ಕೆ ಸಾಲು ಸಾಲು ರಜೆ – ಮೆಜೆಸ್ಟಿಕ್ KSRTC ಬಸ್ ನಿಲ್ದಾಣದಲ್ಲಿ ಜನಜಾತ್ರೆ
ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಸಾಲು ಸಾಲು ರಜೆ ಹಿನ್ನೆಲೆ ಬೆಂಗಳೂರಿನ ಮಂದಿ ಊರುಗಳತ್ತ ಪ್ರಯಾಣಿಸುತ್ತಿದ್ದು, ಮೆಜೆಸ್ಟಿಕ್ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಜಾತ್ರೆಯಂತಾಗಿದೆ. ಇಂದು ಮಧ್ಯಾಹ್ನದಿಂದಲೇ ಬೆಂಗಳೂರು ನಗರದ ಬಹುತೇಕ ಭಾಗಗಳಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಜನ ಮಳೆ ಮತ್ತು ಕೊರೊನಾ ಸಹ ಲೆಕ್ಕಿಸದೇ ಊರುಗಳತ್ತ ಹೊರಟು ನಿಂತಿದ್ದಾರೆ. ಹಬ್ಬದ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಸ್ ನಿಲ್ದಾಣದತ್ತ ಆಗಮಿಸಿದ್ದರಿಂದ ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿದೆ. ತುಮಕೂರು, ಬಳ್ಳಾರಿ, ಮೈಸೂರು …
Read More »ಬೆಳಗಾವಿ ದೇಸೂರು ಬಳಿ ಓವರ್‍ಟೆಕ್ ಮಾಡುವ ವೇಳೆ ಲಾರಿಗೆ ಬೈಕ್ ಡಿಕ್ಕಿ ಅಕ್ಕ, ತಮ್ಮ ಸ್ಥಳದಲ್ಲೇ ಸಾವ
ಬೆಳಗಾವಿ: ಲಾರಿ ಡಿಕ್ಕಿಯಾಕಿ ಬೈಕಿನಲ್ಲಿ ತೆರಳುತ್ತಿದ್ದ ಅಕ್ಕ, ತಮ್ಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳಗಾವಿ ತಾಲೂಕಿನ ದೇಸೂರು ಬಳಿ ನಡೆದಿದೆ. ರೇಣುಕಾ ತೇಗೂರ್(25), ಕಲ್ಮೇಶ್ ಕೊಳವಿ(19) ಮೃತ ದುರ್ದೈವಿಗಳು. ದೇಸೂರ್‍ನಿಂದ ಕಮಲ್ ನಗರದತ್ತ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಓವರ್‍ಟೆಕ್ ಮಾಡುವ ವೇಳೆ ಲಾರಿಗೆ ಬೈಕ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಲಾರಿ ಚಕ್ರದಡಿ ಸಿಲುಕಿ ಅಕ್ಕ-ತಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿತ್ತು. ಬೆಳಗಾವಿ ಗ್ರಾಮೀಣ …
Read More »ಇಂಜಿನ್‍ನಲ್ಲಿ ತಾಂತ್ರಿಕ ದೋಷಎಪಿಎಂಸಿ ಮೈದಾನದಲ್ಲಿ ತುರ್ತು ಭೂ ಸ್ಪರ್ಶ ಮಾಡಿದ. ಎನ್-741 ಹೆಲಿಕಾಪ್ಟರ್,
ಕಾರವಾರ: ಇಂಜಿನ್‍ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ಭಾರತೀಯ ನೌಕಾದಳಕ್ಕೆ ಸೇರಿದ ಎನ್-741 ಹೆಲಿಕಾಪ್ಟರ್, ಶಿರಸಿ ತಾಲೂಕಿನ ದಾಸನಕೊಪ್ಪ ಗ್ರಾಮದ ಎಪಿಎಂಸಿ ಮೈದಾನದಲ್ಲಿ ತುರ್ತು ಭೂ ಸ್ಪರ್ಶ ಮಾಡಿದೆ. ಬೆಂಗಳೂರಿನಿಂದ ಗೋವಾದತ್ತ ಹೆಲಿಕಾಪ್ಟರ್ ತೆರಳುತಿದ್ದು, ಈ ವೇಳೆ ಇಂಜಿನ್‍ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ನಂತರ ಪೈಲೆಟ್ ದಾಸನಕೊಪ್ಪದ ಮೈದಾನದಲ್ಲಿ ಜೀವರಕ್ಷಣೆಗಾಗಿ ಹೆಲಿಕಾಪ್ಟರ್ ಅನ್ನು ಕೆಳಗಿಳಿಸಿದ್ದಾರೆ. ಇಬ್ಬರು ಪೈಲಟ್, ಓರ್ವ ಕಮಾಂಡಿಂಗ್ ಆಫೀಸರ್ ಈ ಹೆಲಿಕಾಪ್ಟರಿನಲ್ಲಿ ಪ್ರಯಾಣಿಸುತ್ತಿದ್ದು, ಅದೃಷ್ಟವಶಾತ್ ಪೈಲೆಟ್ ಸಮಯ …
Read More »ತಾನು ಕ್ಷಮೆ ಯಾಚಿಸುವುದಿಲ್ಲ, ದಂಡವನ್ನೂ ಪಾವತಿಸುವುದಿಲ್ಲ,:ಕುನಾಲ್ ಕಮ್ರಾ
ನವದೆಹಲಿ: ತಾನು ಕ್ಷಮೆ ಯಾಚಿಸುವುದಿಲ್ಲ, ದಂಡವನ್ನೂ ಪಾವತಿಸುವುದಿಲ್ಲ, ಸುಪ್ರೀಂಕೋರ್ಟ್ ಕಾರ್ಯವೈಖರಿ ಟೀಕಿಸಿರುವ ಟ್ವೀಟ್‍ಗಳನ್ನು ಡಿಲೀಟ್ ಮಾಡುವುದಿಲ್ಲ ಎಂದು ಸ್ಟಾಂಡ್‍ಅಪ್ ಕಾಮಿಡಿಯನ್ ಕುನಾಲ್ ಕಮ್ರಾ ಸ್ಪಷ್ಟಪಡಿಸಿದ್ದಾರೆ. ಅರ್ನಬ್ ಗೋಸ್ವಾಮಿಗೆ ಜಾಮೀನು ನೀಡಿರುವ ಸುಪ್ರೀಂಕೋರ್ಟ್ ನಿರ್ಧಾರವನ್ನು ಕಾಮ್ರಾ ಟ್ವೀಟ್ ಮಾಡಿ ಟೀಕಿಸಿದ್ದರು. ‘ತಮಾಷೆಯ ಗೆರೆಯನ್ನು ಕಾಮ್ರಾ ದಾಟಿದ್ದಾರೆ’ ಎಂದು ಹೇಳಿದ್ದ ಅಟಾರ್ನಿ ಜನರಲ್ ವೇಣುಗೋಪಾಲ್, ಕಾಮ್ರಾ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು 8 ಮಂದಿಗೆ ಅವಕಾಶ ನೀಡಿದ್ದರು. ಕ್ಷಮಾಪಣೆ …
Read More »ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಸಾಗುವಳಿ ವೆಚ್ಚ ಉತ್ಪಾದನೆ
ಬೆಂಗಳೂರು: ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಸಾಗುವಳಿ ವೆಚ್ಚ ಉತ್ಪಾದನೆ ಪ್ರಮಾಣ, ಮಾರುಕಟ್ಟೆ ಬೆಳೆಗಳ ವಸ್ತುಸ್ಥಿತಿ ಮತ್ತು ನೂತನ ಮಾರುಕಟ್ಟೆ ಕಾಯ್ದೆಗಳ ಕುರಿತು ಸರ್ಕಾರಕ್ಕೆ ಕೃಷಿ ಬೆಲೆ ಆಯೋಗ ಹಲವು ಶಿಫಾರಸುಗಳನ್ನು ಮಾಡಿದೆ. ಬೆಳೆ ಶಿಫಾರಸು-ಉತ್ಪಾದನಾ ವೆಚ್ಚ ಕಡಿಮೆ ಮಾಡಿ, ಉತ್ಪಾದನೆ ಹೆಚ್ಚಿಸುವ ಮೂಲಕ ಆದಾಯ ಅಧಿಕಗೊಳಿಸುವುದು, ತಳಿ ಸಂಶೋಧನೆ, ಪ್ರಾತ್ಯಕ್ಷತೆ ಮತ್ತು ತರಬೇತಿ, ಹಣಕಾಸು ಮತ್ತು ಮಾನವ ಸಂಪನ್ಮೂಲದ ಆದ್ಯತೆ, ಉತ್ಪಾದನಾ ಸುಸ್ಥಿರತೆ ಮತ್ತು ಆದಾಯ ಭದ್ರತೆ, ಬೆಳೆ …
Read More »ಅಕ್ಷರ ಮಾಂತ್ರಿಕ”ನ ಅಗಲಿಕೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಂತಾಪ
ಗೋಕಾಕ : ಖ್ಯಾತ ಪತ್ರಕರ್ತ, ಸಾಹಿತಿ, ಲೇಖಕ, ಅಕ್ಷರ ಮಾಂತ್ರಿಕ ರವಿ ಬೆಳೆಗೆರೆ ಅವರ ನಿಧನಕ್ಕೆ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಕನ್ನಡ ಪತ್ರಿಕೋದ್ಯಮದಲ್ಲಿ ತಮ್ಮದೇಯಾದ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದ ಬೆಳೆಗೆರೆ ಅವರ ನಿಧನದಿಂದ ನಾಡಿಗೆ ಅಪಾರ ನಷ್ಟವಾಗಿದೆ. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ದುಡಿದು ನಂತರ ವಾರ ಪತ್ರಿಕೆಯ ಮೂಲಕ ದಿಟ್ಟ ಪತ್ರಕರ್ತರಾಗಿ ವಿಶಿಷ್ಟ ಸೇವೆ ಸಲ್ಲಿಸುತ್ತಿದ್ದ ಅವರ …
Read More »ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ನಾಡಿನ ಜನತೆಗೆ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರು ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯ ಕೋರಿದ್ದಾರೆ. ಎಲ್ಲರ ಬದುಕಿನಲ್ಲಿ ದೀಪಾವಳಿ ಹಬ್ಬ ನಿರಾಸೆಯ ಕಾರ್ಮೋಡ ತೊಡೆದು ಚೈತನ್ಯ ತುಂಬಲಿ. ಎಲ್ಲರ ಜೀವನದಲ್ಲಿ ದೀಪಗಳ ಬೆಳಕು ಸದಾ ಬೆಳಗಲಿ. ಮಹಾಲಕ್ಷ್ಮೀ ದೇವಿ ಸರ್ವರಿಗೂ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ, ಸಂಪತ್ತು, ಶಕ್ತಿ, ಆಯುರಾರೋಗ್ಯ ಕರುಣಿಸಲಿ ಎಂದು ಅವರು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಕೋವಿಡ್-19 ಹಿನ್ನೆಲೆಯಲ್ಲಿ ದೀಪಾವಳಿ …
Read More »
Laxmi News 24×7