Breaking News

ರಾಜ್ಯ

ಕೊರಗಜ್ಜ ಕ್ಷೇತ್ರದ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿ ವಿಕೃತಿ ಮೆರೆದ ಕಿಡಿಗೇಡಿಗಳು

ಮಂಗಳೂರು: ತುಳುವರ ಆರಾಧ್ಯ ದೈವ ಸ್ವಾಮಿ‌ ಕೊರಗಜ್ಜ ಹಾಗೂ ಗುಳಿಗಜ್ಜನ ಪುಣ್ಯಕ್ಷೇತ್ರದ ಕಾಣಿಕೆ‌ ಹುಂಡಿಗೆ ಕಾಂಡೋಮ್ ಹಾಗೂ ನಿಂದನಾರ್ಹ ಬರಹಗಳನ್ನು ಹಾಕಿ ಕಿಡಿಗೇಡಿಗಳು ವಿಕೃತಿ ಮೆರೆದ ಘಟನೆ ಮಂಗಳೂರು ಸಮೀಪದ ಉಳ್ಳಾಲದಲ್ಲಿ‌ ನಡೆದಿದೆ. ಉಳ್ಳಾಲದ ಬಸ್ ನಿಲ್ದಾಣದ ಬಳಿ ಇರುವ‌ ಸಾರ್ವಜನಿಕ‌ ಶ್ರೀ‌ಕೊರಗಜ್ಜ, ಗುಳಿಗಜ್ಜ ಸೇವಾ ಸಮಿತಿ ಕ್ಷೇತ್ರದಲ್ಲಿರುವ ಕಾಣಿಕೆ‌ ಹುಂಡಿಯಲ್ಲಿ‌ ಇಂದು ಮುಂಜಾನೆ ಈ ವಿಕೃತಿ ಪತ್ತೆಯಾಗಿದೆ. ಈ ಕ್ಷೇತ್ರದಲ್ಲಿ ಪ್ರತೀ ಸಂಕ್ರಮಣದಂದು ಕಾಣಿಕೆ‌ ಹುಂಡಿಯ ಹಣ ಎಣಿಕೆ …

Read More »

ಅಂಜಲಿ ನಿಂಬಾಳ್ಕರ್ ಪ್ರತಿಭಟನೆ ವೇಳೆ ಅಸ್ವಸ್ಥ

; ಬೆಂಗಳೂರು; ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ನಡೆಯುತ್ತಿದ್ದ ರಾಜಭವನ ಚಲೋ ರೈತರ ಪ್ರತಿಭಟನೆ ವೇಳೆ ಶಾಸಕಿ ಅಂಜಲಿ ನಿಂಬಾಳ್ಕರ್ ಅಸ್ವಸ್ಥಗೊಂಡಿದ್ದಾರೆ. ರಾಜಭವನದತ್ತ ತೆರಳುತ್ತಿದ್ದ ಕಾಂಗ್ರೆಸ್ ನಾಯಕರನ್ನು ಪೊಲೀಸರು ಮಾರ್ಗ ಮಧ್ಯೆಯೇ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಶಾಸಕಿ ಅಂಜಲಿ ನಿಂಬಾಳ್ಕರ್ ಅಸ್ವಸ್ಥಗೊಂಡಿದ್ದಾರೆ. ನಂತರ ಅಲ್ಲೇ ಕುಳಿತು ವಿಶ್ರಾಂತಿ ಪಡೆದುಕೊಂಡರು. ಕಾಂಗ್ರೆಸ್ ರಾಜಭವನ ಚಲೋ ಪ್ರತಿಭಟನಾ ರ್ಯಾಲಿ ತಡೆದು ನಾಯಕರನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆಯೇ ಪ್ರತಿಭಟನೆಗಳು ಭುಗಿಲೆದ್ದಿವೆ.

Read More »

ನೂತನ ಸಚಿವರಿಗೆ ಖಾತೆ ಹಂಚಿಕೆ

ಬೆಂಗಳೂರು – ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಹಸನದ ನಂತರ ನೂತನ ಸಚಿವರಿಗೆ ಖಾತೆ ಹಂಚಿಕೆ ಕಸರತ್ತು ಶುರುವಾಗಿದೆ. ಪ್ರಮುಖ ಖಾತೆಗಳಿಗೆ ಪ್ರಭಾವಿ ಸಚಿವರಿಂದ ಲಾಬಿ ನಡೆಯುತ್ತಿದ್ದು, ಕೆಲವರ ಖಾತೆಯೂ ಅದಲು ಬದಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ನಾಳೆ ನೂತನ ಸಚಿವರುಗಳಿಗೆ ಖಾತೆ ಹಂಚಿಕೆ ಮಾಡುವುದಾಗಿ ಸಿಎಂ ಯಡಿಯೂರಪ್ಪ ಪ್ರಕಟಿಸಿದ್ದಾರೆ. ಖಾತೆ ಹಂಚಿಕೆ ಜೊತೆಗೆ ಸಣ್ಣ ಪ್ರಮಾಣದಲ್ಲಿ ಸಂಪುಟ ಪುನಾರಚನೆಯು ನಡೆಯಲಿದೆ ಎಂದು ಹೇಳಲಾಗುತ್ತಿದೆ. ಕೆಲ ಸಚಿವರು ಪ್ರಮುಖ ಖಾತೆಗೆ ಪಟ್ಟು …

Read More »

ಸ್ಮಾಟ್‍ಫೋನ್ ಅಥವಾ ಕಂಪ್ಯೂಟರ್ ನೋಡುವುದರಿಂದ ಕಣ್ಣುಗಳನ್ನು ಕಳಕೋತಿರಾ ಹುಷಾರ್ !

ಮಾನವನ ಕಣ್ಣಿನ ಸ್ವಾಭಾವಿಕ ನೋಡುವ ವಿಧಾನವೆಂದರೆ, ಯಾವುದಾದರೂ ವಸ್ತುವಿನ ಮೇಲೆ ಬೆಳಕಿನ ಕಿರಣಗಳು ಬಿದ್ದಾಗ ಅವುಗಳನ್ನು ಆ ವಸ್ತುವು ಹೀರುವುದರಿಂದ ಹಾಗೂ ಅದರ ಪ್ರತಿಫಲನದಿಂದ ಉಂಟಾಗುವ ಕಿರಣಗಳು ನಮ್ಮ ಕಣ್ಣಿನ ಮೇಲೆ ಬೀಳುವುದರಿಂದ. ಈ ಪ್ರಕ್ರಿಯೆಯಲ್ಲಿ ನಮ್ಮ ಅಕ್ಷಿಪಟಲದ ಮೇಲೆ ಬೀಳುವ ಬೆಳಕಿನ ಶಕ್ತಿಯು ಅಲ್ಪ ಪ್ರಮಾಣದ್ದಾಗಿರುತ್ತದೆ. ಆದರೆ ವಿದ್ಯುನ್ಮಾನ ಪರದೆಗಳನ್ನು ವೀಕ್ಷಿಸುವಾಗ ಈ ಕಿರಣಗಳು ನೇರವಾಗಿ ಅಕ್ಷಿಪಟಲದ ಮೇಲೆ ಬೀಳುವುದರಿಂದ ಹೆಚ್ಚು ಪ್ರಮಾಣದ ಶಕ್ತಿಪಾತ ಕಣ್ಣಿನ ಮೇಲಾಗುತ್ತದೆ. ಫೋನಿನಲ್ಲಿ …

Read More »

ಕೇಂದ್ರ ಬಜೆಟ್ : ಜ.30ರಂದು ಪ್ರಧಾನಿ ಮೋದಿ ಸರ್ವಪಕ್ಷ ಸಭೆ

ಹೊಸದಿಲ್ಲಿ : ಫೆಬ್ರವರಿ 1 ರಂದು 2021-2022ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಈ ಹಿನ್ನೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನವರಿ 30 ರಂದು ಸರ್ವಪಕ್ಷ ಸಭೆ ಕರೆದಿದ್ದಾರೆ. ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿಯವರು ಸರ್ವಪಕ್ಷ ಸಭೆ ನಡೆಸಲಿದ್ದಾರೆಂದು ವರದಿಗಳು ತಿಳಿಸಿವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಕೇಂದ್ರ ಬಜೆಟ್ 2021-22 ಅನ್ನು ಮಂಡಿಸಲಿದ್ದಾರೆ. ಬಜೆಟ್ ಅಧಿವೇಶನವು …

Read More »

ಆಸ್ತಿ ವಿವಾದ : ಬೆಳಗಾವಿಯಲ್ಲಿ 4 ವರ್ಷದ ಬಾಲಕನ ಕೊಲೆಗೈದ ಪಾಪಿ

    ಬೆಳಗಾವಿ : ಆಸ್ತಿ ವಿವಾದಕ್ಕೆ ಸಮಂಧಿಸಿದಂತೆ 4 ವರ್ಷದ ಬಾಲಕನನ್ನ ಕೊಲೆ ಮಾಡಿದ ಘಟನೆ ಸವದತ್ತಿ ತಾಲ್ಲೂಕಿನ ಹಾರುಗೊಪ್ಪ ಗ್ರಾಮದಲ್ಲಿ ನಡೆದಿದೆ. ಮಾರುತಿ ವಿರೇಶ್ ಸಂಕಣ್ಣವರ ಹತ್ಯೆಯಾದ ಬಾಲಕ. ಈರಪ್ಪ ಬಸಪ್ಪ ಸಂಕಣ್ಣ(35) ಕೊಲೆ ಆರೋಪಿಯಾಗಿದ್ದು, ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಿದೆ. ಸ್ಥಳಕ್ಕೆ ಮುರಗೋಡ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ತನಿಖೆ‌ ನಡೆಸಿದ್ದಾರೆ.

Read More »

ಇನ್ನು ಮುಂದೆ ಉಚಿತವಾಗಿ ಸಿಗಲ್ಲ ಅನ್ನಭಾಗ್ಯದ ಅಕ್ಕಿ

ಬೆಂಗಳೂರು : ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯಡಿ ಈವರೆಗೂ ನೀಡಲಾಗುತ್ತಿದ್ದ ಉಚಿತ ಅಕ್ಕಿಗೆ ಇನ್ನು ಮುಂದೆ ಹಣ ಪಾವತಿಸಬೇಕಾಗುತ್ತದೆ. ಅನ್ನಭಾಗ್ಯ ಯೋಜನೆಯಿಂದ ಸರಕಾರಕ್ಕೆ ಪ್ರತಿ ತಿಂಗಳು 120 ಕೋಟಿ ರೂ. ವೆಚ್ಚವಾಗುತ್ತಿದೆ. ಆದರೆ ಇಷ್ಟೆಲ್ಲಾ ವೆಚ್ಚ ಮಾಡಿದರೂ ಯೋಜನೆ ದುರ್ಬಳಕೆ ಆಗುತ್ತಿದ್ದು, ಅಕ್ಕಿ ದರ ವಿಧಿಸಿ ಪ್ರಯೋಗಿಸಿದರೆ ಹೇಗೆ ಎಂಬ ಚಿಂತನೆಯಲ್ಲಿ ತೊಡಗಿದೆ. ಈಗಾಗಲೇ ಇಲಾಖೆ ಮಟ್ಟದಲ್ಲಿ ಚರ್ಚೆ ನಡೆಸಲಾಗಿದ್ದು, ಅಂತಿಮವಾಗಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವರು …

Read More »

ಯತ್ನಾಳ್ ಇನ್ನು ಮುಂದೆ ಬಾಯಿ ಮುಚ್ಚದಿದ್ರೆ ಕೇಂದ್ರ ನಾಯಕರು ಸೂಕ್ತ ಕ್ರಮ ಕೈಗೊಳ್ಳುವುದು ನಿಶ್ಚಿತ: ಡಿ.ವಿ.ಸದಾನಂದ ಗೌಡ

ಮಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇನ್ನು ಮುಂದೆ ಬಾಯಿ ಮುಚ್ಚದಿದ್ರೆ ಕೇಂದ್ರ ನಾಯಕರು ಸೂಕ್ತ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಎಚ್ಚರಿಸಿದ್ದಾರೆ. ಪುತ್ತೂರಿನಲ್ಲಿ ಜನಸೇವಕ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಪಕ್ಷದ ರಾಜ್ಯಾಧ್ಯಕ್ಷನಾಗಿದ್ದ ಸಂದರ್ಭದಲ್ಲೂ ಯತ್ನಾಳ್ ಇದೇ ರೀತಿ ಹೇಳಿಕೆ ನೀಡುತ್ತಿದ್ದರು. ಹಲವು ಎಚ್ಚರಿಕೆಯ ಬಳಿಕವೂ ಅವರು ತಮ್ಮ ವರ್ತನೆ ಸರಿಪಡಿಸಿಕೊಳ್ಳದ ಕಾರಣ ನಾನೇ ಅವರನ್ನು 6 …

Read More »

ಸ್ಮಶಾನಕ್ಕಾಗಿ ತಹಶೀಲ್ದಾರ್ ಕಚೇರಿ ಎದುರು ಶವವಿಟ್ಟು ಪ್ರತಿಭಟನೆ

ಮಂಡ್ಯ: ಸ್ಮಶಾನಕ್ಕಾಗಿ ಆಗ್ರಹಿಸಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕಾರೇಕುರ ಗ್ರಾಮಸ್ಥರು ತಹಶೀಲ್ದಾರ್ ಕಚೇರಿ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಜರುಗಿದೆ. ಕಾರೇಕುರ ಗ್ರಾಮದ ಪುಟ್ಟಮ್ಮ ಎಂಬವರು ಅನಾರೋಗ್ಯಕ್ಕೆ ತುತ್ತಾಗಿ ಸೋಮವಾರ ಮೃತಪಟ್ಟಿದ್ದರು. ಐದಾರು ದಶಕಗಳಿಂದ ಅಂತ್ಯಸಂಸ್ಕಾರ ನಡೆಸುತ್ತಿದ್ದ ಬೆಳಗೋಳ ಗ್ರಾಮ ವ್ಯಾಪ್ತಿಯ ಸರ್ವೆ ನಂ. 342ರ ಜಾಗದಲ್ಲಿ ಅಂತ್ಯಕ್ರಿಯೆ ನಡೆಸಲು ಮುಂದಾದಾಗ ಥಾಮಸ್ ಮ್ಯಾಥ್ಯೂ ಎಂಬವರು ತಡೆದಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಶವವನ್ನು ಶ್ರೀರಂಗಪಟ್ಟಣ ತಹಶೀಲ್ದಾರ್ ಕಚೇರಿ …

Read More »

ಮುಡಾ ನಿವೇಶನಗಳ ಅಭಿವೃದ್ಧಿಗೆ ಒನ್ ಟೈಂ ಸೆಟ್ಲಮೆಂಟ್

ಮೈಸೂರು, ಜನವರಿ 19: “ಮೈಸೂರು ನಗರಾಭಿವೃದ್ಧಿಗೆ ನಮ್ಮ ಸರ್ಕಾರದಿಂದ ಏನಾಗಬೇಕು ಎಂಬುದನ್ನು ನೋಡಿಕೊಳ್ಳುತ್ತೇವೆ. ಮುಡಾಕ್ಕೆ ಇರುವ ಅಡೆತಡೆಯನ್ನು ತೊಡೆದುಹಾಕುವ ವಿಷಯದಲ್ಲಿ ನಾನು ಪರವಾಗಿರುತ್ತೇನೆ” ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು. ಮಂಗಳವಾರ ವಿಜಯನಗರ ಬಡಾವಣೆ ಪರಿಶೀಲನೆ ಬಳಿಕ ಮಾತನಾಡಿದ ಸಚಿವರು, “ಒಂದು ವೇಳೆ ಈಗಿರುವ ಅಡೆತಡೆಗಳನ್ನು ತೆಗೆದರೆ ಬಹುತೇಕ ಎಲ್ಲ ಸಮಸ್ಯೆಗಳಿಗೆ ಶೀಘ್ರದಲ್ಲಿಯೇ ಪರಿಹಾರ ಸಿಗಲಿದೆ. ಅಲ್ಲದೆ, ವಿಜಯನಗರ ಬಡಾವಣೆಯನ್ನು ಕಾರ್ಪೋರೇಶನ್‌ಗೆ ಸೇರಿಸಬೇಕು ಎಂಬ …

Read More »