Breaking News

ರಾಜ್ಯ

ಬಿಡುವಿಲ್ಲದೆ ಏರುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆ, ಗ್ರಾಹಕರು ಕಂಗಾಲು

ನವದೆಹಲಿ: ತೈಲ ದರ ಏರಿಕೆಗೆ ಬಿಡುವಿಲ್ಲದಂತಾಗಿ, ಮಂಗಳವಾರ ಸಹ ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿ ಲೀಟರ್ ಗೆ 35 ಪೈಸೆ ಏರಿಕೆಯಾಗಿ ಗ್ರಾಹಕರು ದಾರಿ ಕಾಣದೆ ಪರಿತಪಿಸುವಂತಾಗಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಗೆ 86ರ ಗಡಿಯನ್ನು ದಾಟಿದೆ ಡೀಸೆಲ್ ದರವು ಕಳೆದ ಒಂದು ವರ್ಷದಲ್ಲಿ ಗರಿಷ್ಠ ಏರಿಕೆ ಕಂಡು ಲೀಟರ್ ಗೆ 76ಕ್ಕಿಂತಲೂ ಹೆಚ್ಚಿದೆ. ಅಂತಾರಾಷ್ಟ್ರೀಯ ಬೆಲೆ ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್ …

Read More »

72ನೇ ಗಣರಾಜ್ಯೋತ್ಸವ: ಗೂಗಲ್​ ಡೂಡಲ್​ದಲ್ಲಿ ಭಾರತದ ಪರಂಪರೆ ಪ್ರದರ್ಶನ

ನವದೆಹಲಿ: ರಾಷ್ಟ್ರದ 72ನೇ ಗಣರಾಜ್ಯೋತ್ಸವವನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ. ಪ್ರಪಂಚದ ಜನಪ್ರಿಯ ಸರ್ಚ್ ಎಂಜಿನ್ ಗೂಗಲ್ ಸಹ ಗಣರಾಜ್ಯೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದ್ದು, ದೇಶದ ಕಲೆ ಮತ್ತು ವಾಸ್ತುಶಿಲ್ಪ, ಸಾಂಸ್ಕೃತಿಕ ಮತ್ತು ಏಕತೆಯ ಪರಂಪರೆಯನ್ನು ಡೂಡಲ್‌ನಲ್ಲಿ ಗೂಗಲ್ ಕಟ್ಟಿಕೊಟ್ಟಿದೆ. ಡೂಡಲ್ ಕಲಾಕೃತಿಯಲ್ಲಿ ಕೆಂಪು ಕೋಟೆ ಸೇರಿದಂತೆ ದೇಶದ ಐತಿಹಾಸಿಕ ಕಟ್ಟಡಗಳು, ರಾಷ್ಟ್ರಧ್ವಜದಲ್ಲಿರುವ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳ ಮುಂಭಾಗದಲ್ಲಿ ದೇಶದ ವಿವಿಧ ಸಂಸ್ಕೃತಿಯ ಜನರನ್ನು ಪ್ರದರ್ಶಿಸುತ್ತಿದೆ. ಗೂಗಲ್ ಎಂಬ ಪದದ …

Read More »

ಸಾಮಾಜಿಕ ಅಂತರ, ಚಿಕ್ಕ ರೂಟ್​​ನಲ್ಲಿ 72ನೇ ಗಣರಾಜ್ಯೋತ್ಸವ ಪರೇಡ್; ರಫೇಲ್​ ಪ್ರಮುಖ ಆಕರ್ಷಣೆ

ನವದೆಹಲಿ: ಇಂದು ಭಾರತದ 72ನೇ ಗಣರಾಜ್ಯೋತ್ಸವ. ಈ ಬಾರಿ ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ಗಣರಾಜ್ಯೋತ್ಸವ ಸಮಾರಂಭವನ್ನ ಸಂಕ್ಷಿಪ್ತವಾಗಿ ನಡೆಸಲಾಗ್ತಿದೆ. ದೆಹಲಿಯ ಕೆಂಪುಕೋಟೆಯಲ್ಲಿ ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು ಬೆಳಗ್ಗೆ 11.25 ಕ್ಕೆ ಮುಕ್ತಾಯಗೊಳ್ಳಲಿದೆ. ರಾಜ್​ಪಥ್​​ನಲ್ಲಿ ನಡೆಯಲಿರುವ ಪಥಸಂಚಲನದ ಮಾರ್ಗವನ್ನ ಕಡಿತಗೊಳಿಸಲಾಗಿದೆ. ಹಾಗೇ ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಇಲ್ಲ. ಕಡಿಮೆ ಸಂಖ್ಯೆಯ ಪ್ರೇಕ್ಷಕರು ಮಾತ್ರ ಪರೇಡ್​ ವೀಕ್ಷಿಸಲಿದ್ದಾರೆ. 15 ವರ್ಷದೊಳಗಿನ ಮಕ್ಕಳಿಗೆ ಕಾರ್ಯಕ್ರಮಕ್ಕೆ ಬರಲು ಅವಕಾಶ …

Read More »

ಮುಖ್ಯ ಅತಿಥಿಯಿಲ್ಲದೆ ಗಣರಾಜ್ಯೋತ್ಸ, 50 ವರ್ಷಗಳಲ್ಲಿ ಇದೇ ಮೊದಲು

ನವದೆಹಲಿ, ಜ.26- ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಇಲ್ಲದೇ ಆಚರಿಸಲ್ಪಟ್ಟಿರುವ ಪ್ರಥಮ ಗಣರಾಜ್ಯೋತ್ಸವ ಇದಾಗಿದೆ. ವಿಶ್ವದ್ಯಾಂತ ಕೊರೊನಾ ಸಾಂಕ್ರಾಮಿಕ ವ್ಯಾಪಿಸಿರುವ ಕಾರಣ ಅತಿಥಿಯ ಅನುಪಸ್ಥಿತಿಯಲ್ಲಿ 72ನೇ ಗಣರಾಜ್ಯೋತ್ಸವ ಆಚರಿಸಲಾಯಿತು. 50 ವರ್ಷಗಳಲ್ಲಿ ಮೊಟ್ಟಮೊದಲ ಬಾರಿಗೆ ಇಂತಹ ಅನಿವಾರ್ಯತೆ ಕಂಡುಬಂತು. ಯುಕೆ ಪ್ರಧಾನ ಮಂತ್ರಿ ಬೋರಿಸ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಾಗಿತ್ತು. ಆದರೆ, ಕೋವಿಡ್-19 ಸಾಂಕ್ರಾಮಿಕ ಮಹಾಮಾರಿ ಕಾರಣದಿಂದ ಅವರ ಅನುಪಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತ್ರಿವರ್ಣ ಧ್ವಜ ಹಾರಿಸುವ …

Read More »

ಗೋಕಾಕ ಹಿಲ್ ಗಾರ್ಡನ್ ಕಚೇರಿಯಲ್ಲಿ 72ನೇ ಗಣರಾಜೋತ್ಸವ ಆಚರಣೆ

ಗೋಕಾಕ್ : ಪಟ್ಟಣದ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರ ಹಿಲ್ ಗಾರ್ಡನ್ ಕಚೇರಿಯಲ್ಲಿ 72ನೇ ಗಣರಾಜೋತ್ಸವವನ್ನು ಅದ್ಧೂರಿಯಾಗಿ ಇಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿಠ್ಠಲ ಪರಸಣ್ಣವರ, ವಿವೇಕ ಜತ್ತಿ, ಪಾಡು ರಂಗಸೂಭೆ,ಪ್ರಕಾಶ ಬಸಾಪುರ , ಸುರೇಶ್ ಸೇರಿದಂತೆ ಇತರರು ಇದ್ದರು.

Read More »

ಬೆಳಗಾಂ ಶುಗರ್ಸ ಪ್ರೈ ಲಿ , ಆವರಣದಲ್ಲಿ 72ನೇ ಗಣರಾಜ್ಯೋತ್ಸವ ದಿನಾಚರಣೆ

ಬೆಳಗಾವಿ : ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಒಡೆತನದ ಬೆಳಗಾಂ ಶುಗರ್ಸ ಪ್ರೈ ಲಿ , ಆವರಣದಲ್ಲಿ 72ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಇಂದು ಅದ್ದೂರಿಯಾಗಿ ಆಚರಿಸಿದರು. ಪ್ರಸಕ್ತ 2020-21 ಕಬ್ಬು ನುರಿಸುವ ಹಂಗಾಮಿನಲ್ಲಿ ಕಾರ್ಖಾನೆಗೆ ಹೆಚ್ಚು ಕಬ್ಬನ್ನು ಸಾರಿಗೆ ಮಾಡಿದ ಮುಕ್ತೆದಾರರಾದ ಕಾಶಿನಾಥ ನಿಂಗಪ್ಪಾ ಕರಗುಪ್ಪಿ ಹಾಗೂ ಫಕೀರಪ್ಪಾ ರುದ್ರಪ್ಪಾ ಕುರಬರ ಅವರು ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೆಶಕ ಸಿದ್ದಾರ್ಥ ವಾಡೆನ್ನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿ, …

Read More »

ಪ್ರತಿಭಟನಾ ನಿರತ ರೈತರ ಮೇಲಿನ ಹಲ್ಲೆ ಖಂಡನೀಯ : ಅಶೋಕ ಪೂಜಾರಿ

ಗೋಕಾಕ : ಕೇಂದ್ರ ಸರ್ಕಾರದ ಕೃಷಿ ಮಸೂದೆ ಜಾರಿಯನ್ನು ಸುಪ್ರೀಂ ಕೋರ್ಟ್ ತಡೆದಿದೆ . ಜತೆಗೆ ಪ್ರತಿಭಟನೆ ಜನಸಾಮಾನ್ಯರ ಹಕ್ಕು ಅದನ್ನು ಮೊಟಕುಗೊಳಿಸಬಾರದು ಎಂದು ಮಹತ್ವದ ನಿರ್ದೇಶನವನ್ನು ನೀಡಿದೆ. ಇದರ ಹೊರತಾಗಿಯೂ ಸಹ ಕೇಂದ್ರ ಸರ್ಕಾರ ಮಸೂದೆಯನ್ನು ತರಲು ಹೊರಟಿದೆ ಎಂದು ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಕಿಡಿ ಕಾರಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೃಷಿ ಮಸೂದೆಯನ್ನು ವಿರೋಧಿ ದೇಶದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ …

Read More »

ಘಟಪ್ರಭಾದಲ್ಲಿ ಮುಂದಿನ ಬಾರಿ ರಾಷ್ಟ್ರೀಯ ನಾಯಕರಿಂದ ಧ್ವಜಾರೋಹಣ: ಸತೀಶ ಜಾರಕಿಹೊಳಿ

ಘಟಪ್ರಭಾ: ಪಟ್ಟಣದ ಡಾ.ಎನ್.ಎಸ್. ಹರ್ಡೀಕರ್ ಸೇವಾದಳ ತರಬೇತಿ ಕೇಂದ್ರದಲ್ಲಿ ಮುಂದಿನ ಬಾರಿ ಗಣರಾಜ್ಯೋತ್ಸವಕ್ಕೆ ರಾಷ್ಟ್ರೀಯ ನಾಯಕರನ್ನು ಕರೆಸಿ ಧ್ವಜಾರೋಹಣ ನೆರವೇರಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು. ಮಂಗಳವಾರ ಧ್ವಜಾರೋಹಣದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇವಾದಳ ತರಬೇತಿ ಕೇಂದ್ರದಲ್ಲಿ ರಾಷ್ಟ್ರೀಯ ದಿನಗಳು ಸೇರಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. “ಸ್ವಾತಂತ್ರ್ಯ ಹೋರಾಟದಲ್ಲಿ ಹರ್ಡೀಕರ್ ಅವರ ನೇತೃತ್ವದಲ್ಲಿ ಸೇವಾದಳದ …

Read More »

ರೆಸಾರ್ಟ್ ವಾಸ್ತವ್ಯ ಬಗ್ಗೆ ಸಚಿವ ರಮೇಶ್ ಜಾರಕಿಹೊಳಿ‌ಹೇಳಿದ್ದೇನು

ಬೆಳಗಾವಿ-ರೆಸಾರ್ಟ್ ವಾಸ್ತವ್ಯ ಬಗ್ಗೆ ಸಚಿವ ರಮೇಶ್ ಜಾರಕಿಹೊಳಿ‌ ಸ್ಪಷ್ಟನೆ ನೀಡಿದ್ದು,ಚಿಕ್ಕಮಗಳೂರು ಪ್ರವಾಸ ಒಂದು ವಾರದ ಮೊದಲೇ ನಿಗದಿಯಾಗಿತ್ತು,ನನ್ನ ಪ್ರವಾಸದ ಮಾಹಿತಿ ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ಮೊದಲೇ ಕಳುಹಿಸಲಾಗಿತ್ತು,ಸಂಪುಟ ವಿಸ್ತರಣೆ, ಖಾತೆ ಬದಲಾವಣೆ ಮಾಹಿತಿಯೇ ನನಗಿರಲಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿಹೇಳಿದ್ದಾರೆ. ಗಣರಾಜ್ಯೋತ್ಸವ ಧ್ವಜಾರೋಹಣ ಬಳಿಕ ಸಚಿವ ರಮೇಶ್ ಜಾರಕಿಹೊಳಿ‌ ಸುದ್ದಿಗೋಷ್ಠಿ ನಡೆಸಿದ ಅವರು,ಆದರೆ ನಮಗೆ ಡ್ಯಾಮೇಜ್ ಆಗುವ ರೀತಿಯಲ್ಲಿ ಮಾಧ್ಯಮಗಳಲ್ಲಿ ವರದಿ ಬಂದವು,ಸಂಪುಟ ವಿಸ್ತರಣೆ ವಿಚಾರದಲ್ಲಿ ಸಿಎಂ ನಿರ್ಧಾರಕ್ಕೆ ಬದ್ಧನಾಗಿದ್ದೇನೆ.ಮಾರ್ಚ್ ನಂತರ …

Read More »

ಕೆಂಪುಕೋಟೆಯ ಸಮೀಪ ತಲುಪಿದ ರೈತರ ಟ್ರ್ಯಾಕ್ಟರ್‌ ರ‍್ಯಾಲಿ

ಹೊಸದಿಲ್ಲಿ,ಜ.26: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕೆಂಬ ನಿಟ್ಟಿನಲ್ಲಿ ರೈತರು ಗಣರಾಜ್ಯೋತ್ಸವ ದಿನವಾದ ಇಂದು ರಾಷ್ಟ್ರ ರಾಜಧಾನಿ ದಿಲ್ಲಿಗೆ ಟ್ರ್ಯಾಕ್ಟರ್‌ ರ‍್ಯಾಲಿಯನ್ನು ಹಮ್ಮಿಕೊಂಡಿದ್ದಾರೆ. ಸದ್ಯ ಪರಿಸ್ಥಿತಿಯು ಕೈ ಮೀರುವ ಹಂತದಲ್ಲಿದ್ದು, ಪೊಲೀಸರು ನಿರಂತರ ಅಶ್ರುವಾಯು ಸಿಡಿಸುತ್ತಿದ್ದಾರೆ ಹಾಗೂ ಲಾಠಿ ಚಾರ್ಜ್‌ ಮಾಡುತ್ತಿದ್ದಾರೆ. ಈ ನಡುವೆ ರೈತರು ಭಾರತೀಯ ಐತಿಹಾಸಿಕ ಸ್ಮಾರಕ ಕೆಂಪುಕೋಟೆಯ ಬಳಿ ಜಮಾವಣೆಗೊಂಡು ತಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತಿದ್ದಾರೆ ಎಂದುವರದಿ ಮಾಡಿದೆ. ಐತಿಹಾಸಿಕ ಸ್ಮಾರಕ ಕೆಂಪುಕೋಟೆಯ ಬಳಿ ಇದೀಗ …

Read More »