Breaking News

ರಾಜ್ಯ

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: ಬರೋಬ್ಬರಿ ʼ100 ಇನ್ಸ್ ಪೆಕ್ಟರ್ʼಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ. ಬರೋಬ್ಬರಿ 100 ಪೊಲೀಸ್ ಇನ್ಸ್ ಪೆಕ್ಟರ್ʼಗಳನ್ನ ವರ್ಗಾವಣೆ ಮಾಡಲಾಗಿದ್ದು, ತಕ್ಷಣದಿಂದಲೇ ಈ ಆದೇಶ ಜಾರಿಗೆ ಬರುವಂತೆ ಸೂಚಿಸಲಾಗಿದೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಪೊಲೀಸ್ ಸಿಬ್ಬಂದಿ ಮಂಡಳಿಯ ಆದೇಶದನ್ವಯ 100 ಸಿವಿಲ್ ಪೊಲೀಸ್ ಇನ್ಸ್ ಪೆಕ್ಟರ್ʼಗಳನ್ನ ವರ್ಗಾವಣೆ ಮಾಡಿ ಕ್ರಮಕೈಗೊಂಡಿದ್ದಾರೆ. ಅಂದ್ಹಾಗೆ, ವರ್ಗಾವಣೆ ಆದೇಶವನ್ನ ಡಿಜಿ ಐಜಿಪಿ ಕಚೇರಿಯಿಂದ ಹೊರಡಿಸಲಾಗಿದೆ.  

Read More »

ಲಾಕ್​ಡೌನ್, ನೈಟ್ ಕರ್ಪ್ಯೂ ಬಗ್ಗೆ ಬೇಕಾಬಿಟ್ಟಿ ಯಾರೂ ಹೇಳಿಕೆ ಕೊಡುವಂತಿಲ್ಲ; B.S.Y.

ಬೆಂಗಳೂರು(ಮಾ.29): ಲಾಕ್ ಡೌನ್ , ನೈಟ್ ಕರ್ಪ್ಯೂ ಬಗ್ಗೆ ಬೇಕಾಬಿಟ್ಟಿ ಯಾರೂ ಹೇಳಿಕೆ ಕೊಡುವಂತಿಲ್ಲ ಎಂದು ಸಿಎಂ ಬಿಎಸ್​ ಯಡಿಯೂರಪ್ಪ ಸಚಿವರು ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.  ಲಾಕ್‌ಡೌನ್, ಕರ್ಫ್ಯೂ , ಕಂಟೋನ್ಮೆಂಟ್ ವಲಯಗಳ ಬಗ್ಗೆ ಆಯಾ ಕಾಲಕ್ಕೆ ತಕ್ಕಂತೆ ಕೇಂದ್ರ ಗೃಹ ಸಚಿವಾಲಯ ಮಾತ್ರ ಆದೇಶ ಹೊರಡಿಸಲಿದೆ. ಕೇಂದ್ರದ ಮಾದರಿಯಲ್ಲೇ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಆದೇಶಗಳನ್ನು ಹೊರಡಿಸಲಿದೆ ಎಂದು ಹೇಳಿದರು. ರಾಜ್ಯದಲ್ಲಿ ಕೋವಿಡ್ ಸಂಬಂಧಿತ ಸೂಚನೆ ಮತ್ತು …

Read More »

ರಾಜಕೀಯದವರ ಸಂಗ ಮಾಡ್ಬೇಡ ಅಂದ್ರೂ ನಮ್ಮ ಮಾತು ಕೇಳ್ಳಿಲ್ಲ: ಸಿಡಿ ಸಂತ್ರಸ್ತೆ ತಾಯಿ

ಬೆಳಗಾವಿ: ರಾಜಕೀಯದವರ ಸಂಗ ಮಾಡಬೇಡ ಅಂತ ಅವಳಿಗೆ ಹೇಳಿದ್ದೆ ಆದ್ರೆ ಅವಳು ಕೇಳಲಿಲ್ಲ ಎಂದು ಸಿಡಿ ಸಂತ್ರಸ್ತೆಯ ತಾಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿರುವ ಸಂತ್ರಸ್ತೆಯ ತಾಯಿ, ಬಾರಮ್ಮ ಮನೆಗೆ ಮದುವೆ ಮಾಡ್ತೀವಿ, ರಾಜಕೀಯದವರ ಸಂಗ ಮಾಡಬೇಡ. ಯಾವತ್ತಿದ್ರೂ ಅಪಾಯ ಎಂದು ಅವಳಿಗೆ ಬುದ್ದಿ ಹೇಳಿದ್ದೆ ಆದ್ರ ನನ್ನ ಮಾತನ್ನು ಅವಳು ಕೇಳಲಿಲ್ಲ. ನಿನಗೆ 40 ಸಾವಿರ ರೂ. ಸಂಬಳ ಇದೆ ಸರ್ಕಾರಿ ಕೆಲಸ ಯಾಕೆ ಬೇಕು ಎಂದು …

Read More »

ಮಹಾನಾಯಕ ಆಗಲು ಹೊರಟವರು ಖಳನಾಯಕನಾಗಿದ್ದು ಕಾಂಗ್ರೆಸ್ ನ ನೈತಿಕ ದಿವಾಳಿತನ: ಬಿಜೆಪಿ

ಬೆಂಗಳೂರು: ಒಬ್ಬ ಅಮಾಯಕ ಹೆಣ್ಣು ಮಗಳನ್ನು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಬಳಸಿಕೊಂಡು ರಾಜ್ಯದ “ಮಹಾ ನಾಯಕ” ಆಗಲು ಹೊರಟ “ಜೈಲು ಹಕ್ಕಿ” ಇಂದು “ಖಳನಾಯಕ” ಆಗಿರುವುದು ಕಾಂಗ್ರೆಸ್ ಪಕ್ಷದ ನೈತಿಕ ದಿವಾಳಿತನಕ್ಕೆ ಸಾಕ್ಷಿ ಎಂದು ಬಿಜೆಪಿ ಟೀಕೆ ಮಾಡಿದೆ. ಕಾಂಗ್ರೆಸ್ ವಿರುದ್ಧ ರಾಜ್ಯ ಬಿಜೆಪಿಯು ಟ್ವೀಟ್ ವಾರ್ ಮುಂದುವರಿಸಿದೆ. ಸೆಕ್ಷನ್ ಸಿದ್ದರಾಮಯ್ಯನವರೇ ನಿಮ್ಮ ನೇತೃತ್ವದಲ್ಲಿ ಸತ್ಯ ಶೋಧನಾ ಸಮಿತಿ ರಚನೆಯಾದರೆ ಒಂದೇ ಕಲ್ಲಿನಲ್ಲಿ ಎರಡು ಹಣ್ಣು ಕೆಡವಲು ಸಾಧ್ಯವಿದೆ. ಒಂದು, …

Read More »

ಡಿಕೆಶಿಯಿಂದ ನಮ್ಮ ಮಗಳು ದುಡ್ಡು ಪಡೆದಿದ್ದಾಳೆ : ಸಿಡಿ ಯುವತಿ ಪೋಷಕರು

ಬೆಂಗಳೂರು : ಡಿಕೆಶಿಯಿಂದ ನಮ್ಮ ಮಗಳು ದುಡ್ಡು ಪಡೆದಿದ್ದಾಳೆ, ಕೆಲಸ ಕೊಡಿಸುವುದಾಗಿ ಡಿಕೆಶಿ ಹುಡುಗರು ಹೇಳಿದ್ದರು. ರಾಜಕೀಯ ದಾಳವಾಗಿ ನಮ್ಮ ಮಗಳನ್ನು ಬಳಕೆ ಮಾಡಿದ್ದಾರೆ, ಡಿಕೆಶಿ ಮತ್ತು ತಮ್ಮ ಮಗಳ ವಿರುದ್ಧವೇ ಸಿಡಿ ಯುವತಿಯ ಪೋಷಕರು ಹೇಳಿಕೆ ನೀಡಿದ್ದಾರೆ. ಇನ್ನು ವಿಚಾರಣೆ ಬಗ್ಗೆ ಮಾತನಾಡಿರುವ ಯುವತಿ ಪರ ವಕೀಲ ಜಗದೀಶ್, ಇಂದೇ ಹಾಜರು ಪಡಿಸಲು ಕೇಳಿದ್ರೆ ನಾವು ಸಿದ್ದರಿದ್ದೇವೆ. ಅಲ್ಲದೆ ನ್ಯಾಯಾಧೀಶರ ಮನೆಗೂ ಹಾಜರು ಪಡಿಸಲು ನಾವು ಸಿದ್ದರಾಗಿದ್ದೇವೆ ಎಂದಿದ್ದಾರೆ.

Read More »

ಬೆಳಗಾವಿ ಲೋಕಸಭೆ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆ

ಬೆಳಗಾವಿ : ಬೆಳಗಾವಿ ಲೋಕಸಭೆ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ್ದಾರೆ. ನಗರದ ಆರ್ ಟಿಒ ನಗರದಲ್ಲಿರುವ ಕಾಂಗ್ರೆಸ್ ಭವನದಿಂದ ಮೂರು ವಾಹನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸತೀಶ್ ಜಾರಕಿಹೊಳಿ ಹಸಿರು ಶಾಲು ಧರಿಸಿ ನಾಮಪತ್ರ ಸಲ್ಲಿಸಿದ್ದಾರೆ. ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸಾಥ್ ನೀಡಿದರು. ಏಪ್ರಿಲ್ 17ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ …

Read More »

ಇಂದೇ ತನ್ನ ಹೇಳಿಕೆ ದಾಖಲಿಸುತ್ತಾರೆಯೇ ಸಿಡಿ ಲೇಡಿ?

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸೇರಿದ್ದು ಎನ್ನಲಾದ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಇಂದೇ ತನ್ನ ಹೇಳಿಕೆ ದಾಖಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಯುವತಿ ಯಾವುದೇ ಕ್ಷಣದಲ್ಲಾದರೂ ಕೋರ್ಟ್ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ಕೂಡ ಯುವತಿ ಭದ್ರತೆಗಾಗಿ ಓರ್ವ ಮಹಿಳಾ ಪಿಎಸ್ ಐ ಸೇರಿದಂತೆ 8 ಮಹಿಳಾ ಪೊಲೀಸ್ ಸಿಬ್ಬಂದಿಯ …

Read More »

ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್:‌ ನ್ಯಾಯಾಧೀಶರೆದುರು ʼಸಿಡಿ ಲೇಡಿʼ ಹಾಜರಾಗಲು ಕೋರ್ಟ್‌ ಅನುಮತಿ..!

ಬೆಂಗಳೂರು: ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ಸಿಡಿ ಲೇಡಿ ನ್ಯಾಯಾಧೀಶರ ಮುಂದೆ ನೇರವಾಗಿ ಹಾಜರಾಗಲು ಕೋರ್ಟ್‌ ಅನುಮತಿ ನೀಡಿದೆ. ಈ ಸಿಡಿ ಪ್ರಕರಣದಲ್ಲಿ ಯುವತಿಯ ಹೇಳಿಕೆ ತುಂಬಾನೇ ಮುಖ್ಯವಾಗಿದ್ದು, ಸಧ್ಯ ನ್ಯಾಯಾಧೀಶರ ಎದುರು ನೇರವಾಗಿ ಹಾಜರಾಗಲು ಕೋರ್ಟ್‌ ಅನುಮತಿ ನೀಡಿದೆ. ಆದ್ರೆ, ಯುವತಿ ಇವತ್ತೇ ನ್ಯಾಯಾಲಯದ ಮುಂದೆ ಇಂದೇ ಹಾಜರಾಗ್ತಾಳಾ? ಅಥ್ವಾ ಕೋರ್ಟ್‌ ಬೇರೆ ಸಮಯ ನೀಡಿದ್ಯಾ? ಅನ್ನೋ ಮಾಹಿತಿ ತಿಳಿಯಬೇಕಿದೆ.

Read More »

ಮದುವೆಯಾದ ಕೆಲವೇ ತಾಸುಗಳಲ್ಲಿ ಠಾಣೆ ಮೆಟ್ಟಿಲೇರಿದ ಬಿಗ್‌ಬಾಸ್ ಸ್ಪರ್ಧಿ ಚೈತ್ರಾ

ಕೋಲಾರ: ಬಿಗ್‌ಬಾಸ್‌ 7ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದ ಚೈತ್ರಾ ಕೋಟೂರು ಹಾಗೂ ರಿಯಲ್‌ ಎಸ್ಟೇಟ್‌ ಉದ್ಯಮಿ ನಾಗಾರ್ಜುನ್‌ ಮದುವೆಯಾದ ಕೆಲವೇ ತಾಸುಗಳಲ್ಲಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ದಂಪತಿಯ ಸಂಬಂಧದಲ್ಲಿ ಬಿರುಕು ಮೂಡಿದೆ. ಕೋಲಾರ ಜಿಲ್ಲೆಯ ಚೈತ್ರಾ ಮತ್ತು ಮಂಡ್ಯ ಜಿಲ್ಲೆಯ ನಾಗಾರ್ಜುನ್‌ ಬೆಂಗಳೂರಿನ ಬ್ಯಾಟರಾಯನಪುರದ ಗಣೇಶ ದೇವಸ್ಥಾನದಲ್ಲಿ ಭಾನುವಾರ (ಮಾರ್ಚ್ 28) ಬೆಳಿಗ್ಗೆಯಷ್ಟೇ ಮದುವೆಯಾಗಿದ್ದರು. ಬಳಿಕ ಕೋಲಾರಕ್ಕೆ ಬಂದ ನವ ದಂಪತಿಯು ಸಂಜೆ ವೇಳೆಗೆ ಇಲ್ಲಿನ ಮಹಿಳಾ ಪೊಲೀಸ್‌ ಠಾಣೆಗೆ ಪರಸ್ಪರ ದೂರು ಕೊಟ್ಟಿದ್ದಾರೆ. …

Read More »

ಮೇಕೆದಾಟು ಮುತ್ತಿಗೆಗೆ ಮುಂದಾದ ತಮಿಳುನಾಡು ರೈತರು

ಕನಕಪುರ: ಮೇಕೆದಾಟು ಜಲಾಶಯ ನಿರ್ಮಾಣ ವಿರೋಧಿಸಿ ಪ್ರತಿಭಟಿಸಲು ಬರುತ್ತಿದ್ದ ತಮಿಳುನಾಡು ರೈತ ಸಂಘಟನೆಗಳ ಸದಸ್ಯರನ್ನು ರಾಜ್ಯದ ಪೊಲೀಸರು ಭಾನುವಾರ ಕನಕಪುರ ಗಡಿಯಲ್ಲಿಯೇ ತಡೆದರು. ಕುಡಿಯುವ ನೀರು ಮತ್ತು ವಿದ್ಯುತ್‌ ಉತ್ಪಾದನೆ ಉದ್ದೇಶಕ್ಕಾಗಿ ಜಲಾಶಯ ನಿರ್ಮಾಣಕ್ಕೆ ಕರ್ನಾಟಕ ಮುಂದಾಗಿದೆ. ಇದನ್ನು ವಿರೋಧಿಸಿ ಅಣೆಕಟ್ಟೆ ನಿರ್ಮಾಣ ಸ್ಥಳದಲ್ಲಿ ಪ್ರತಿಭಟನೆ ನಡೆಸಿ, ಮುತ್ತಿಗೆ ಹಾಕಲು ಮುಖಂಡರು ಕರೆ ಕೊಟ್ಟಿದ್ದರು. ಈ ಮಾಹಿತಿ ತಿಳಿದ ಪೊಲೀಸರು ಬೆಳಿಗ್ಗೆಯಿಂದಲೇ ತಮಿಳುನಾಡಿನ ಒಬ್ಬ ಹೋರಾಟಗಾರನೂ ರಾಜ್ಯದ ಗಡಿ ಪ್ರವೇಶಿದಂತೆ …

Read More »