Breaking News

ರಾಜಕೀಯದವರ ಸಂಗ ಮಾಡ್ಬೇಡ ಅಂದ್ರೂ ನಮ್ಮ ಮಾತು ಕೇಳ್ಳಿಲ್ಲ: ಸಿಡಿ ಸಂತ್ರಸ್ತೆ ತಾಯಿ

Spread the love

ಬೆಳಗಾವಿ: ರಾಜಕೀಯದವರ ಸಂಗ ಮಾಡಬೇಡ ಅಂತ ಅವಳಿಗೆ ಹೇಳಿದ್ದೆ ಆದ್ರೆ ಅವಳು ಕೇಳಲಿಲ್ಲ ಎಂದು ಸಿಡಿ ಸಂತ್ರಸ್ತೆಯ ತಾಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿರುವ ಸಂತ್ರಸ್ತೆಯ ತಾಯಿ, ಬಾರಮ್ಮ ಮನೆಗೆ ಮದುವೆ ಮಾಡ್ತೀವಿ, ರಾಜಕೀಯದವರ ಸಂಗ ಮಾಡಬೇಡ. ಯಾವತ್ತಿದ್ರೂ ಅಪಾಯ ಎಂದು ಅವಳಿಗೆ ಬುದ್ದಿ ಹೇಳಿದ್ದೆ ಆದ್ರ ನನ್ನ ಮಾತನ್ನು ಅವಳು ಕೇಳಲಿಲ್ಲ.

ನಿನಗೆ 40 ಸಾವಿರ ರೂ. ಸಂಬಳ ಇದೆ ಸರ್ಕಾರಿ ಕೆಲಸ ಯಾಕೆ ಬೇಕು ಎಂದು ಬುದ್ದಿ ಹೇಳಿದ್ದೆವು ಆದ್ರೂ ಅವಳು ಕೇಳಲಿಲ್ಲ ಎಂದು ಆಕೆ ತಾಯಿ ಕಣ್ಣೀರಾಗಿದ್ದಾರೆ.

ಡಿಕೆ ಶಿವಕುಮಾರ್‌ ಅವರ ಕಡೆಯವರು ಎಲ್ಲೂ ಹೋಗಲು ಬಿಡುತ್ತಿಲ್ಲ ಎಂದು ಮಾರ್ಚ್.2ನೇ ತಾರೀಖು ಕರೆ ಮಾಡಿದಾಗ ಅಕ್ಕ ಹೇಳಿದ್ದಳು ಎಂದು ಆಕೆಯ ಸಹೋದರ ಹೇಳಿದ್ದಾನೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ