Breaking News

ರಾಜ್ಯ

ಉತ್ತರ ಕನ್ನಡ ಜಿಲ್ಲೆಯ ನಾಲ್ಕು ತಾಲೂಕುಗಳು ನಾಳೆಯಿಂದ ಸೀಲ್​ಡೌನ್

ಉತ್ತರಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಹೆಚ್ಚಾಗಿದ್ದು, ದಿನೇದಿನೆ ಸೋಂಕಿತರ ಸಂಖ್ಯೆ ಏರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ನಾಳೆ ಬೆಳಗ್ಗೆ 10 ಗಂಟೆಯಿಂದ ಸೀಲ್​​ಡೌನ್​ ಜಾರಿ ಮಾಡಲಾಗುವುದು ಎಂದು ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್​ ತಿಳಿಸಿದ್ದಾರೆ. ಉತ್ತರಕನ್ನಡದ ಸಿದ್ದಾಪುರ, ಶಿರಸಿ, ಯಲ್ಲಾಪುರ ಮತ್ತು ಮುಂಡಗೋಡು ಪಟ್ಟಣಗಳು ನಾಳೆಯಿಂದ ಮೇ 24ರ ಸಂಜೆಯವರೆಗೆ ಸೀಲ್​ಡೌನ್ ಆಗಲಿವೆ. ಇನ್ನು ಉಳಿದ ಎಲ್ಲ ತಾಲೂಕುಗಳು ಶನಿವಾರ ಮತ್ತು ಭಾನುವಾರ ಮಾತ್ರ ಸೀಲ್​ಡೌನ್​ ಆಗಲಿವೆ …

Read More »

ಬಂಗಾರಕ್ಕೆ ಕನ್ನ ಹಾಕಿದ್ದ ಡಿ.ವೈ.ಎಸ್ ಪಿ ಜಾವೇದ ಮತ್ತು ಸಹಚರರಿಗೆ ಸಿಕ್ತು ರಾತ್ರೋರಾತ್ರಿ ವರ್ಗಾವಣೆ ಶಿಕ್ಷೆ : ಇಷ್ಟೆಲ್ಲಾ ಬೇಕಿತ್ತಾ

ಗೋಕಾಕ:ಬಂಗಾರಕ್ಕೆ ಕನ್ನ ಹಾಕಿದ್ದ ಡಿ.ವೈ.ಎಸ್ ಪಿ ಜಾವೇದ ಮತ್ತು ಸಹಚರರಿಗೆ ಸಿಕ್ತು ರಾತ್ರೋರಾತ್ರಿ ವರ್ಗಾವಣೆ ಶಿಕ್ಷೆ : ಇಷ್ಟೆಲ್ಲಾ ಬೇಕಿತ್ತಾ ಸಾಬಾ ಗೋಕಾಕ ಡಿ.ವೈ.ಎಸ್.ಪಿ ಯಾಗಿ ಬಂದಿದ್ದ ವಿಜಯಪುರ ಜಿಲ್ಲೆಯ ಶೆಗುಣಶಿ ಗ್ರಾಮದ ಜಾವೇದ ಇನಾಂದಾರ ತಮ್ಮ ಸ್ವ- ಗ್ರಾಮ ದಲ್ಲಿ ತನಗಾದ ಅವಮಾನಗಳನ್ನು ಗೆದ್ದು ಡಿ.ವೈ.ಎಸ್‌.ಪಿ ಹುದ್ದೆಗೆ ಏರಿ ಗ್ರಾಮದ ಜನರ ಹುಬ್ಬೇರಿಸಿದರು ಇವರ ಈ ಡಿಟ್ಟ ಕ್ರಮದಿಂದ ಅವರಿಗೆ ಅವಮಾನ ಮಾಡಿದ ಗ್ರಾಮದ ಜನರಿಂದಲೇ ಸತ್ಕಾರ ಮಾಡಿಸಿಕೊಂಡು …

Read More »

ಬೇಡಿಕೆ ಕುಸಿತ; ಒಣಗಿ ಬೀಳುತ್ತಿರುವ ವಿಳ್ಯಾದೆಲೆ

ಕೊಲ್ಹಾರ: ವಿಳ್ಯಾದೆಲೆಗೆ ಕೊರೊನಾ ಪರಿಣಾಮ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತವಾಗಿ ಧಾರಣೆಯೂ ಇಲ್ಲದಂತಾಗಿದೆ. ಎಲೆಬಳ್ಳಿ ಕೃಷಿಯನ್ನೇ ಅವಲಂಭಿಸಿರುವ ತಾಲ್ಲೂಕಿನ ನೂರಾರು ರೈತರು, ಕೃಷಿ ಕೂಲಿಕಾರ್ಮಿಕರು ಹಾಗೂ ವ್ಯಾಪಾರಿಗಳ ಬದುಕನ್ನು ಕೊರೊನಾ ಲಾಕಡೌನ್ ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಕೊಲ್ಹಾರ ತಾಲ್ಲೂಕಿನ ಕೂಡಗಿ, ತಳೇವಾಡ, ಕಲಗುರ್ಕಿ, ಮಸೂತಿ, ಮಲಘಾಣ, ಆಸಂಗಿ ಹಾಗೂ ಸುತ್ತಮುತ್ತಲಿನ ವಿವಿಧ ಗ್ರಾಮಗಳಲ್ಲಿ ಅಂದಾಜು 300 ಎಕರೆಯಷ್ಟು ಪ್ರದೇಶದಲ್ಲಿ ಎಳೆಬಳ್ಳಿ ಕೃಷಿ ಮಾಡಲಾಗಿದೆ. ಎಲೆಬಳ್ಳಿ ವರ್ಷಪೂರ್ತಿ ಪ್ರತಿ 15-20 ದಿನಗಳಿಗೊಮ್ಮೆ ಕಟಾವಿಗೆ …

Read More »

ಕೋವಿಡ್ ಲಾಕ್ ಡೌನ್ ನಿಯಮ ಉಲ್ಲಂಘನೆ; ಸಿಎಂ ಪುತ್ರ ಬಿವೈ ವಿಜಯೇಂದ್ರ ವಿರುದ್ಧ ಎಫ್‌ಐಆರ್ ಗೆ ಒತ್ತಡ

ಮೈಸೂರು: ಕೋವಿಡ್ ತಡೆಯುವುದಕ್ಕಾಗಿ ಕಟ್ಟುನಿಟ್ಟಾದ ಲಾಕ್‌ಡೌನ್ ವಿಧಿಸಿದ್ದರು, ಈ ನಿ‌ಯಮ ಉಲ್ಲಂಘಿಸಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ನಡೆದುಕೊಂಡಿರುವ ಕಾರಣ ಅವರ ವಿರುದ್ಧ ಎಫ್‌ಐಆರ್ ದಾಖಲು ಮಾಡಬೇಕು ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಒತ್ತಾಯಿಸಿದೆ. ವೈ.‌ ವಿಜಯೇಂದ್ರ ಮೇ 18ರಂದು ಕುಟುಂಬ ಸಮೇತರಾಗಿ ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದರು. ವಿಶೇಷ ಪೂಜೆ ಹಾಗೂ ಹೋಮ ನಡೆಸಿದ್ದರು. ಇದು ಡಿಸಾಸ್ಟರ್ ಮ್ಯಾನೇಜ್ಮೆಂಟ್ ಕಾಯ್ದೆ 2005, ಸೆಕ್ಷನ್ …

Read More »

ಬಿಡಿಸಲು ಬಂದ ಕುಟುಂಬಸ್ಥರಿಗೆ ಪೊಲೀಸ್​ ಇನ್ಸ್​ಪೆಕ್ಟರ್​ ಕೈ ಮುಗಿದ ಬೇಡಿಕೊಂಡ ಘಟನೆ

ವಿಜಯನಗರ: ಲಾಕ್​ಡೌನ್​ ಸಂದರ್ಭದಲ್ಲಿ ಅನಗತ್ಯವಾಗಿ ಹೊರ ಬಂದವರನ್ನು ಬಿಡಿಸಲು ಬಂದ ಕುಟುಂಬಸ್ಥರಿಗೆ ಪೊಲೀಸ್​ ಇನ್ಸ್​ಪೆಕ್ಟರ್​ ಕೈ ಮುಗಿದ ಬೇಡಿಕೊಂಡ ಘಟನೆ ಹೊಸಪೇಟೆಯ ಉದ್ಯೋಗ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಸರ್​ ನನ್ನ ತಮ್ಮನನ್ನು ಬಿಟ್ಟುಬಿಡಿ ಎಂದು ವ್ಯಾಪಾರಿಯೊಬ್ಬರು ಕೇಳಿಕೊಂಡು ಬಂದಿದ್ದರು. ಈ ವೇಳೆ ಮಾತನಾಡಿದ ಇನ್ಸ್​ಪೆಕ್ಟರ್​, ದಯಮಾಡಿ ನಿಮಗೆ ಕೈ ಮುಗಿದು ಕೇಳುವೆ ಜನರನ್ನು ಬದುಕಿಸಿ ಎಂದರು. ನಿಮಗೆ ದುಡ್ಡು ಬೇಕು, ನಮಗೆ ಜನ ಬೇಕು. ನಾವು ಕೂಡ ಹೆಂಡತಿ …

Read More »

ಸಿ ಟಿ ರವಿ ವಿರುದ್ದ ಕಾಂಗ್ರೆಸ್‌ ನಿಂದ ಪೋಲೀಸ್‌ ದೂರು

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಕಾಂಗ್ರೆಸ್‌ ವಿರುದ್ಧ ಆಧಾರರಹಿತ ಆರೋಪ ಮಾಡಿದ್ದು, ಅವರ ವಿರುದ್ಧ ಕೂಡಲೇ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಹನುಮಂತ ನಗರ ಬ್ಲಾಕ್ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸಿ.ತೇಜೇಶ್ ಕುಮಾರ್ ಹೈಗ್ರೌಂಡ್ಸ್‌ ಠಾಣೆಗೆ ದೂರು ನೀಡಿದ್ದಾರೆ. ‘ಸಿ.ಟಿ.ರವಿ ಅವರು ಕೊರೊನಾ ವಿಚಾರವನ್ನು ಪ್ರಸ್ತಾಪಿಸಿ, ಕಾಂಗ್ರೆಸ್‌ ಪಕ್ಷದ ವಿರುದ್ಧ ಹಲವು ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಅಪಪ್ರಚಾರ …

Read More »

ಆಕ್ಸಿಜನ್ ದುರಂತ: ಚಾಮರಾಜನಗರ ಡಿಸಿ ಡಾ.ಎಂ.ಆರ್‌.ರವಿ ಎತ್ತಂಗಡಿ

ಚಾಮರಾಜನಗರ: ಜಿಲ್ಲೆಯಲ್ಲಿ ನಡೆದ ಆಕ್ಸಿಜನ್ ದುರಂತಕ್ಕೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರನ್ನು ಹೊಣೆಯಾಗಿಸಿ ಸ್ಥಳ ನೀಡದೇ ಸರ್ಕಾರ ಅವರನ್ನು ಎತ್ತಂಗಡಿ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಫೆ‌.13ರಂದೇ ಚಾಮರಾಜನಗರ ಡಿಸಿ ರವಿ ಅವರನ್ನು ವರ್ಗಾವಣೆಗೊಳಿಸಿ ಅವರ ಸ್ಥಾನಕ್ಕೆ ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಡಾ.ಬಿ‌.ಸಿ.ಸತೀಶ್ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ಬಳಿಕ ಕೆಲವು ಬೆಳವಣಿಗೆಗಳು ನಡೆದು ರವಿ ಗಡಿಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಮುಂದುವರೆದಿದ್ದರು. ದುರಂತ ನಡೆದ ಬಳಿಕ ನಡೆದ ನ್ಯಾಯಾಂಗ ತನಿಖೆಯಲ್ಲಿ …

Read More »

ಕೊವಿಡ್ ಪರೀಕ್ಷೆಯನ್ನು ಮನೆಯಲ್ಲಿ ನಾವೇ ಮಾಡಿಕೊಳ್ಳಬಹುದು; ಐಸಿಎಂಆರ್​ನಿಂದ ಬಿಡುಗಡೆಯಾಯ್ತು ಹೊಸ ಕಿಟ್

ದೆಹಲಿ: ಕೊವಿಡ್-19 ಪರೀಕ್ಷೆಯನ್ನು ನಮಗೆ ನಾವೇ ಮಾಡಿಕೊಳ್ಳಬಹುದು. ಯಾವುದೇ ವೈದ್ಯಕೀಯ ಸಿಬ್ಬಂದಿಯ ಇರುವಿಕೆಯ ಹೊರತಾಗಿ, ಕೊರೊನಾ ಪರೀಕ್ಷೆಯನ್ನು ನಾವೇ ಮಾಡಿಕೊಳ್ಳಬಹುದು. ಈ ನೂತನ ವ್ಯವಸ್ಥೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಇಂದು (ಮೇ 19) ಸೂಚನೆ ನೀಡಿದೆ. ನಮಗೆ ನಾವೇ ಕೊರೊನಾ ಪರೀಕ್ಷೆ ನಡೆಸುವುದು ಹೇಗೆ ಎಂಬ ಬಗ್ಗೆ ಸೂಚನೆ ನೀಡಿದ ಐಸಿಎಂಆರ್ ಕೊವಿಸೆಲ್ಫ್ ಎಂಬ ಕಿಟ್​ನ ಬಗ್ಗೆ ವಿವರಣೆ ನೀಡಿದೆ. ಸ್ವತಃ ನಮಗೆ ನಾವೇ ಕೊವಿಡ್-19 ಪರೀಕ್ಷೆ …

Read More »

ಆಹಾರ ಪೊಟ್ಟಣಗಳ ಮೇಲೆ ಕೊರೊನಾ ಸೋಂಕಿತರಿಗೆ ವಿಶೇಷ ಸಂದೇಶ ಕಳುಹಿಸಿದ ಬಾಲಕ

ಸಂಪೂರ್ಣ ವಿಶ್ವವೇ ಸಂಕಷ್ಟದಲ್ಲಿರುವ ಈ ಕಾಲದಲ್ಲಿ ಆತ್ಮವಿಶ್ವಾಸ ತುಂಬಬಲ್ಲ ಸಣ್ಣ ಮಾತೂ ಸಹ ಭಾರೀ ಖುಷಿಯನ್ನ ಕೊಡಬಹುದು. ಇದೇ ಮಾತನ್ನ ಅತ್ಯಂತ ಚಿಕ್ಕ ವಯಸ್ಸಿಗೆ ಅರ್ಥ ಮಾಡಿಕೊಂಡ ಬಾಲಕನೊಬ್ಬ ತನ್ನ ತಾಯಿ ಕೋವಿಡ್​ ರೋಗಿಗಳಿಗೆಂದು ತಯಾರು ಮಾಡಿದ್ದ ಊಟದ ಪ್ಯಾಕೆಟ್​ಗಳ ಮೇಲೆ ‘ಖುಷಿಯಾಗಿರಿ’ ಎಂದು ಬರೆದಿದ್ದಾನೆ. ಬಾಲಕ ಈ ರೀತಿ ಆಹಾರ ಪೊಟ್ಟಣಗಳ ಮೇಲೆ ಸಂದೇಶ ಬರೆಯುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ …

Read More »

ಹಂಪಿಯ 70ಕ್ಕೂ ಹೆಚ್ಚು ಖಾಸಗಿ ಗೈಡ್​​ಗಳಿಗೆ ಸಹಾಯ ಮಾಡಿದ ಮಾತೃ ಹೃದಯಿ ಡಾ.ಸುಧಾಮೂರ್ತಿ

ವಿಜಯನಗರ: ಈ ಕೊರೊನಾ ಬಂದಾಗಿನಿಂದ ಒಂದಲ್ಲ ಒಂದು ಸಮಸ್ಯೆ ಎಲ್ಲರನ್ನೂ ಕಾಡ್ತಿದೆ. ಯಾರನ್ನೂ ಬಿಡದ ಈ ಕೊರೊನಾದಿಂದಾಗಿ, ಅದೆಷ್ಟೋ ಜನರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಸಂಕಷ್ಟಕ್ಕೆ ಸಿಲುಕಿದವರಿಗೆ ಹಲವರು ನೆರವಿನ ಹಸ್ತವನ್ನೂ ಚಾಚಿದ್ದಾರೆ. ಅದರಲ್ಲಿ, ಸದಾ ಎಲ್ಲರ ಕಷ್ಟಗಳಿಗೆ ಸ್ಪಂದಿಸೋ ಮಾತೃ ಹೃದಯಿ ಡಾ.ಸುಧಾಮೂರ್ತಿ ಮಿಡಿದಿದ್ದಾರೆ. ಹಂಪಿ ಪ್ರವಾಸಿ ಗೈಡ್ಸ್‌ಗಳಿಗೆ ನೆರವಿನ ಸಹಾಯ ಹಸ್ತ ನೀಡಿದ್ದಾರೆ ಸುಧಾಮೂರ್ತಿ. ಕೊರೊನಾ ಹೊಡೆತಕ್ಕೆ ಉದ್ಯೋಗವಿಲ್ಲದೆ ಸಂಕಷ್ಟಕ್ಕೆ …

Read More »