ಮೈಸೂರು: ಕೊರೊನಾ ಎರಡನೇ ಅಲೆಯ ಸುಳಿಯಿಂದ ಹೊರಬರಲಾಗದ ಕಂಗೆಟ್ಟಿರುವ ಮೈಸೂರಿನ ಜನತೆ ಇದೀಗ ಮತ್ತೊಂದು ಮಾರಣಾಂತಿಕ ವೈರಾಣುವಿನ ಸುಳಿಗೆ ಸಿಲುಕಿದ್ದಾರೆ. ಕರೋನಾದ ರೂಪಾಂತರ ಡೆಲ್ಟಾ ಪ್ಲಸ್ ನ ಒಂದು ಪ್ರಕರಣ ಮೈಸೂರಿನಲ್ಲಿ ಇರುವುದು ಖಾತ್ರಿಯಾಗಿದೆ. ಈ ಕುರಿತು ಖಾತ್ರಿಪಡಿಸಿರುವ ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರು, ಮೈಸೂರು ಜಿಲ್ಲೆಯಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಸದ್ಯ ಅವರು ಗುಣಮುಖರಾಗಿದ್ದಾರೆ. ಸೋಂಕಿತರ ಗೌಪ್ಯತೆ ಕಾಪಾಡುವ ನಿಟ್ಟಿನಲ್ಲಿ ಅವರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ …
Read More »ಮೋಟಾರು ವಾಹನಗಳಿಗೆ ಶೇ.50ರಷ್ಟು ತೆರಿಗೆ ವಿನಾಯಿತಿ! : ಲಕ್ಷ್ಮಣ ಸವದಿ
ಬೆಂಗಳೂರು: ಕೊರೊನಾ 2ನೇ ಅಲೆಯ ಹಿನ್ನೆಲೆಯಲ್ಲಿ ಮೋಟಾರು ವಾಹನಗಳಿಗೆ ಶೇ.50ರಷ್ಟು ತೆರಿಗೆ ವಿನಾಯಿತಿ ನೀಡಿ ಆದೇಶ ಹೊರಡಿಸಲಾಗಿದೆ ಎಂದು ಸಾರಿಗೆ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಪ್ರಯಾಣಿಕ ವಾಹನ ಸಂಚಾರಕ್ಕೆ ನಿರ್ಬಂಧಗಳನ್ನು ವಿಧಿಸಿ ಆದೇಶಿಸಿರುವುದರಿಂದ, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957 ರ ಕಲಂ 16(1) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ರಾಜ್ಯದಲ್ಲಿ ನೊಂದಾಯಿಸಿರುವ (ಹೊಸ ವಾಹನಗಳ …
Read More »ರಮೇಶ್ ಜಾರಕಿಹೊಳಿ ಹಾಗೂ ಫ್ರೆಂಡ್ಸ್ ಕಾಂಗ್ರೆಸ್ ಗೆ ಮರು ಸೇರ್ಪಡೆ ವಿಚಾರ ಹೈಕಮಾಂಡ್ ನಿರ್ಧರಿಸುತ್ತೆ: ಸತೀಶ್ ಜಾರಕಿಹೊಳಿ
ಬಾಗಲಕೋಟೆ: ರಮೇಶ್ ಜಾರಕಿಹೊಳಿ ರಾಜೀನಾಮೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಅವರ ರಾಜೀನಾಮೆ ಬಗ್ಗೆ ಬಿಜೆಪಿ ಉತ್ತರಿಸಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಸಹೋದರ ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ಬಿಜೆಪಿ ನಾಯಕರು ಸ್ಪಷ್ಟಪಡಿಸಬೇಕು. ಇಷ್ಟಕ್ಕೂ ಶಾಸಕ ಸ್ಥಾನಕ್ಕೆ ಯಾಕೆ ರಾಜಿನಾಮೆ ನೀಡುತ್ತಿದ್ದಾರೆ ಎಂಬುದನ್ನು ರಮೇಶ್ ಅವರೇ ಹೇಳಬೇಕು. ಈಗಾಗಲೇ ಹೆಚ್.ವಿಶ್ವನಾಥ್ ಮಾತನಾಡಲು ಶುರು ಮಾಡಿದ್ದಾರೆ. ಬಿಜೆಪಿಯವರು ಮೊದಲು …
Read More »ರೈತರಿಗೆಸಾಕಷ್ಟು ಪ್ರಮಾಣದಲ್ಲಿ ನಷ್ಟ ಶಾಸಕ ಅನಿಲ ಬೆನಕೆ ಅವರು ಡ್ರೋಣ್ ಮೂಲಕ ಸರ್ವೆ
ಬೆಳಗಾವಿ – ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಬೆಳಗಾವಿ ನಗರದಲ್ಲಿ ಬಳ್ಳಾರಿ ನಾಲೆಯಿಂದ ಸಾಕಷ್ಟು ಪ್ರಮಾಣದಲ್ಲಿ ರೈತರಿಗೆ ಹಾನಿ ಉಂಟಾಗುತ್ತದೆ. ಅದೇ ರೀತಿ ಈ ವರ್ಷವು ಬಳ್ಳಾರಿ ನಾಲೆಯ ನೀರಿನಿಂದ ರೈತರಿಗೆಸಾಕಷ್ಟು ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು, ಶಾಸಕ ಅನಿಲ ಬೆನಕೆ ಅವರು ಡ್ರೋಣ್ ಮೂಲಕ ಸರ್ವೆ ನಡೆಸಿದರು. ಕೆಲ ದಿನಗಳ ಹಿಂದೆ ಶಾಸಕ ಅನಿಲ ಬೆನಕೆ ಅವರು, ಅಧಿಕಾರಿಗಳ ಜೊತೆ ಬಳ್ಳಾರಿ ನಾಲೆಯನ್ನು …
Read More »ಜುಲೈ 3ನೇ ವಾರದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ನಡೆಯಲಿದ್ದು, ಪರೀಕ್ಷಾ ಮಾರ್ಗಸೂಚಿ ಪ್ರಕಟ
ಬೆಂಗಳೂರು: ಜುಲೈ 3ನೇ ವಾರದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ನಡೆಯಲಿದ್ದು, ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಸ್ಒಪಿ ಬಿಡುಗಡೆ ಮಾಡಿದ್ದಾರೆ. ಕೊರೊನಾ ಸೋಂಕು ಇಳಿಮುಖವಾಗುತ್ತಿದ್ದು,ಈಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಅತ್ಯಂತ ಸುರಕ್ಷಿತವಾಗಿ ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗಿಯಾಗಲಿರುವ ಶಿಕ್ಷಕರು, ಸಿಬ್ಬಂದಿ ಮತ್ತು ಅಧಿಕಾರಿಗಳು ಸಿದ್ಧತೆ ನಡೆಸಬೇಕು ಎಂದು ಸೂಚಿಸಿದ್ದಾರೆ. ಶಿಕ್ಷಕರು, ಸಿಬ್ಬಂದಿಗಳು ಕಡ್ಡಾಯವಾಗಿ …
Read More »ಕಾಂಗ್ರೆಸ್ ತೊರೆದ ಬಾಂಬೆ ಫ್ರೆಂಡ್ಸ್ ಮರಳಿ ಗೂಡಿಗೆ? ಸಿದ್ದರಾಮಯ್ಯ ಪ್ರತಿಕ್ರಿಯೆ
ಬಳ್ಳಾರಿ, ಜೂನ್ 23: ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಪತನಕ್ಕೆ ಕಾರಣರಾದ ಹದಿನೇಳು ಶಾಸಕರ ಪೈಕಿ ಕೆಲವರು ಮರಳಿಗೂಡಿಗೆ ಬರಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ಪಕ್ಷ ದ್ರೋಹಿಗಳನ್ನು ಯಾವ ಕಾರಣಕ್ಕೂ ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಇದರ ಜೊತೆಗೆ, ಸಿದ್ದರಾಮಯ್ಯ ಭಾವೀ ಸಿಎಂ ಎನ್ನುವ ಕಾಂಗ್ರೆಸ್ಸಿನ ಕೆಲವು ಶಾಸಕರ ಹೇಳಿಕೆಗೂ ಸ್ಪಷ್ಟನೆ ಕೊಟ್ಟಿರುವ ಸಿದ್ದರಾಮಯ್ಯ, ಅದು ಅವರವರ …
Read More »ಮೋದಿ ಇರುವವರೆಗೂ ದೇಶದಲ್ಲಿ ಕಾಂಗ್ರೆಸ್ ಧೂಳಿಪಟ: ಬಿ.ಶ್ರೀರಾಮುಲು
ಚಿತ್ರದುರ್ಗ: ನರೇಂದ್ರ ಮೋದಿ ಅವರು ಪ್ರಧಾನಿ ಆಗಿರುವವರೆಗೆ ದೇಶದಲ್ಲಿ ಕಾಂಗ್ರೆಸ್ ಧೂಳಿಪಟ ಆಗಲಿದೆ ಎಂದು ಸಮಾಜಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು. ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದೆ. ಸಿದ್ದರಾಮಯ್ಯ ಅವರು ಪ್ರಧಾನಿ ಮತ್ತು ಮುಖ್ಯಮಂತ್ರಿ ಅವರನ್ನು ಟೀಕೆ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಅಧಿಕಾರ ಕಳೆದುಕೊಂಡು ಬುದ್ದಿ ಭ್ರಮಣೆ ಆಗಿದೆ. ಕಾಂಗ್ರೆಸ್ ಯಾವತ್ತೂ ಅಧಿಕಾರಕ್ಕೆ ಬರುವುದಿಲ್ಲ’ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದಲ್ಲೇ ನಾಯಕತ್ವಕ್ಕೆ ಕಿತ್ತಾಟ ನಡೆಯುತ್ತಿದೆ. …
Read More »ಡೌನ್‌ಆಗಿದ್ದ ತರಕಾರಿ ಬೆಲೆ ಈಗ ಅಪ್
ಧಾರವಾಡ: ಲಾಕ್‌ಡೌನ್ ಅವಧಿಯಲ್ಲಿ ನಿರೀಕ್ಷಿತ ಬೆಲೆ ಸಿಗದೇ, ಮಾರಾಟವಾಗದೇ ತಿಪ್ಪೆಯ ಪಾಲಾಗುತ್ತಿದ್ದ ತರಕಾರಿ ಹಾಗೂ ಸೊಪ್ಪಿಗೆ ಇದೀಗ ಅನ್‌ಲಾಕ್ ನಂತರ ಬಂಪರ್ ಬೆಲೆ ಬಂದಿದೆ. ಕೋವಿಡ್ ನಿಯಂತ್ರಣಕ್ಕೆ ಜಾರಿ ಮಾಡಿದ ಲಾಕ್ ಡೌನ್ ಹಾಗೂ ವ್ಯಾಪಾರಕ್ಕೆ ನೀಡಿದ ಸೀಮಿತ ಅವಧಿಯ ಪರಿಣಾಮ ನಗರದ ಹೊಸ ಎಪಿಎಂಸಿ ಆವರಣದಲ್ಲಿ ಪ್ರತಿದಿನ ನಡೆಯುವ ಹೋಲ್‌ಸೇಲ್ ತರಕಾರಿ ಮಾರುಕಟ್ಟೆ ಆವರಣದಲ್ಲಿ ಬೆಲೆ ಕುಸಿತ ಹಾಗೂ ಮಾರಾಟವಾಗದ ಕಾರಣ ತರಕಾರಿ ಹಾಗೂ ಸೊಪ್ಪು ತಿಪ್ಪೆಯ ಪಾಲಾಗುತ್ತಿತ್ತು. …
Read More »ನೀರವ್, ಮಲ್ಯ, ಚೋಕ್ಸಿಯಿಂದ ವಶಕ್ಕೆ ಪಡೆದ ಆಸ್ತಿಯಲ್ಲಿ 9,371 ಕೋಟಿ ರೂ.ಗಳನ್ನು ಬ್ಯಾಂಕ್ಗಳಿಗೆ ವರ್ಗಾಯಿಸಿದ ಇಡಿ
ನವದೆಹಲಿ: ಬ್ಯಾಂಕ್ಗಳಿಗೆ ಕೋಟ್ಯಾಂತರ ರೂಪಾಯಿ ವಂಚಿಸಿ ದೇಶ ಬಿಟ್ಟು ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗೆ ಸಂಬಂಧಿಸಿದ 18 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ವಶಪಡಿಸಿಕೊಂಡಿದ್ದು, ಇದು ಬ್ಯಾಂಕುಗಳು ಅನುಭವಿಸಿದ ಒಟ್ಟು ನಷ್ಟದ 80% ಆಗಿದೆ. ಬುಧವಾರ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಇಡಿ ಕೇವಲ ಆಸ್ತಿಯನ್ನು ವಶಕ್ಕೆ ಪಡೆದಿರುವುದಲ್ಲದೆ, 9,371.17 ಕೋಟಿ ರೂಪಾಯಿಯನ್ನು ಸಾರ್ವಜನಿಕ ಬ್ಯಾಂಕ್ ಮತ್ತು ಕೇಂದ್ರ …
Read More »ಕೊರೊನಾ ಎರಡನೆ ಅಲೆಗೆ ಕಾರಣವಾಗಿದ್ದ ಡೆಲ್ಟಾ ಮಾದರಿಯ ರೂಪಾಂತರ ವೈರಸ್ ಇದೀಗ ಇನ್ನಷ್ಟು ರೂಪಾಂತರ
ನವದೆಹಲಿ: ಕೊರೊನಾ ಎರಡನೆ ಅಲೆಗೆ ಕಾರಣವಾಗಿದ್ದ ಡೆಲ್ಟಾ ಮಾದರಿಯ ರೂಪಾಂತರ ವೈರಸ್ ಇದೀಗ ಇನ್ನಷ್ಟು ರೂಪಾಂತರಗೊಂಡಿದ್ದು, ಡೆಲ್ಟಾ ಪ್ಲಸ್ ಮಾದರಿಯಾಗಿ ಬದಲಾವಣೆಗೊಂಡಿದೆ. ಹೊಸ ಹೆಮ್ಮಾರಿ ಯುವಕರನ್ನೇ ಹೆಚ್ಚು ಟಾರ್ಗೆಟ್ ಮಾಡುತ್ತಿದೆ ಎಂಬ ಆತಂಕಕಾರಿ ವಿಷಯ ಹೊರಬಿದ್ದಿದೆ. ಕರ್ನಾಟಕ ಸೇರಿದಂತೆ ದೇಶದ ನಾಲ್ಕುರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ಮಾದರಿಯ ವೈರಸ್ ಪತ್ತೆಯಾಗಿದ್ದು, ರಾಜ್ಯದಲ್ಲಿ ಇಬ್ಬರು ಇಂತಹ ಸೋಂಕಿನಿಂದ ಬಳಲುತ್ತಿದ್ದಾರೆ. ಈ ನಡುವೆ ಕೊರೊನಾ ಎರಡನೇ ಅಲೆಯಲ್ಲಿ ಸಾವನ್ನಪ್ಪಿದ ಸುಮಾರು 11,000 ಜನರ ಪೈಕಿ …
Read More »
Laxmi News 24×7