ಹುಬ್ಬಳ್ಳಿ: ‘ಜುಲೈ ತಿಂಗಳಿನಲ್ಲಿ ದೊಡ್ಡ ಮಟ್ಟದಲ್ಲಿ ಕೋವಿಡ್ ಲಸಿಕೆ ಅಭಿಯಾನ ನಡೆಯಲಿದೆ. ವಿಶ್ವದಲ್ಲೇ ಅತ್ಯಂತ ವೇಗವಾಗಿ ಲಸಿಕೆ ಅಭಿಯಾನ ನಡೆಯುತ್ತಿರುವ ದೇಶ ಭಾರತವಾಗಿದ್ದು, ಇದುವರೆಗೆ 32 ಕೋಟಿ ಲಸಿಕೆ ನೀಡಲಾಗಿದೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ನೈಸರ್ಗಿಕ ವಿಕೋಪದಿಂದ ಮೃತಪಟ್ಟ ಎಂಟು ಜನರ ಕುಟುಂಬದವರಿಗೆ ಸೋಮವಾರ ಪರಿಹಾರ ಚೆಕ್ ವಿತರಿಸಿ ಮಾತನಾಡಿದ ಅವರು, ‘ತಯಾರಕರು ಉತ್ಪಾದನೆಗೆ ಅನುಗುಣವಾಗಿ ಲಸಿಕೆ ಪೂರೈಕೆ ಮಾಡುತ್ತಿದ್ದಾರೆ. ಹಾಗಾಗಿ, ಆದ್ಯತಾ ವಲಯಗಳನ್ನು ಗುರುತಿಸಿ …
Read More »ಮಾತು ಬಾರದ, ಕಿವಿ ಕೇಳದ ವಿಶೇಷ ಜೋಡಿ ಮದುವೆಯಲ್ಲಿ ಮಾಸ್ಕ್ ಬದಲಿಸಿಕೊಂಡು ದಾಂಪತ್ಯಜೀನಕ್ಕೆ ಕಾಲಿಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ಧಾರವಾಡ: ಮಾತು ಬಾರದ, ಕಿವಿ ಕೇಳದ ವಿಶೇಷ ಜೋಡಿ ಮದುವೆಯಲ್ಲಿ ಮಾಸ್ಕ್ ಬದಲಿಸಿಕೊಂಡು ದಾಂಪತ್ಯಜೀನಕ್ಕೆ ಕಾಲಿಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ. ಸತ್ತೂರಿನ ಕುಮಾರ, ಧಾರವಾಡದ ಸಾರಸ್ವತಪುರದ ಶ್ವೇತಾ ವಿಶೇಷ ಚೇತನರಾಗಿದ್ದಾರೆ. ವಧುಗೆ ವರ ಮಾಸ್ಕ್ ಹಾಕುವುದು, ವರನಿಗೆ ವಧು ಮಾಸ್ಕ್ ಹಾಕುವ ಮೂಲಕ ಹಾರ ಬದಲಾಯಿಸಿದಂತೆ ಮಾಸ್ಕ್ ಬದಲಾಯಿಸಿ, ಬಳಿಕ ಸಂಪ್ರಾಯದಂತೆ ಅಕ್ಷತೆಯನ್ನೂ ಹಾಕಿ ನಡೆದ ಮದುವೆಯಾಗಿದ್ದಾರೆ. ಎರಡೂ ಮನೆ ಕಡೆಯವರ ಉಪಸ್ಥಿತಿಯಲ್ಲಿ ಸರಳವಾಗಿ ವಿವಾಹ ಸಮಾರಂಭ ನಡೆಯಿತು ವಿದ್ಯಾಕಾಶಿ ಧಾರವಾಡದಲ್ಲಿ …
Read More »ಹುಬ್ಬಳ್ಳಿಯಿಂದ ವಿಮಾನಯಾನ ಸೇವೆ ಮತ್ತೆ ಆರಂಭ
ಹುಬ್ಬಳ್ಳಿ: ಲಾಕ್ ಡೌನ್ ವೇಳೆ ಹುಬ್ಬಳ್ಳಿಯಿಂದ ವಿವಿಧ ಮಹಾನಗರಗಳಿಗೆ ಸಂಪರ್ಕಿಸುವ ವಿಮಾನಯಾನ ಸೇವೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಇಂಡಿಗೋ ಸಂಸ್ಥೆ ಜುಲೈ 1 ರಿಂದ ಮತ್ತೆ ವಿಮಾನಯಾನ ಸೇವೆ ಪುನರಾರಂಭ ಮಾಡುವುದಾಗಿ ತಿಳಿಸಿದೆ. ಹುಬ್ಬಳ್ಳಿಯಿಂದ ಮುಂಬೈ, ಚೆನೈ, ಬೆಂಗಳೂರು, ಕಣ್ಣೂರು, ಕೊಚ್ಚಿ ಮಹಾನಗರಗಳಿಗೆ ವಿಮಾನಯಾನ ಸಂಪರ್ಕ ಸೇವೆ ಮತ್ತೆ ಆರಂಭಗೊಳ್ಳಲಿದೆ. ಜುಲೈ 9 ರಿಂದ ಹುಬ್ಬಳ್ಳಿ- ಹೈದ್ರಾಬಾದ್ ಅಲಯನ್ಸ್ ಏರ್ ವಿಮಾನ ಸೇವೆ ಆರಂಭವಾಗಲಿದೆ. ಅಗಸ್ಟ್ 2 ರಿಂದ ಹುಬ್ಬಳ್ಳಿ – …
Read More »ವರ್ಗಾವಣೆ ವಿಚಾರಕ್ಕೆ ಮನನೊಂದು ಎನ್‍ಈಕೆಎಸ್‍ಆರ್ ಟಿಸಿ ಸಿಬ್ಬಂದಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ
ರಾಯಚೂರು: ವರ್ಗಾವಣೆ ವಿಚಾರಕ್ಕೆ ಮನನೊಂದು ಎನ್‍ಈಕೆಎಸ್‍ಆರ್ ಟಿಸಿ ಸಿಬ್ಬಂದಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಮುಂದೆ ನಡೆದಿದೆ. ವರ್ಗಾವಣೆ ವಿರೋಧಿಸಿ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದ ಬಸ್ ಚಾಲಕ ಸೈಯದ್ ಯೂನೂಸ್ ಆತ್ಮಹತ್ಯೆಗೆ ಯತ್ನಿಸಿದ್ದಾಋಏ. ಸ್ಥಳದಲ್ಲಿದ್ದವರು ವಿಷ ಬಾಟಲಿಯನ್ನ ಕಸಿದುಕೊಂಡು ಎಸೆದಿದ್ದಾರೆ. ಈ ಹಿಂದೆ ಸಾರಿಗೆ ಮುಷ್ಕರದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಇಲಾಖೆಯಿಂದ ಕಿರುಕುಳ ನೀಡಲಾಗುತ್ತಿದೆ. ಬೀದರ್ ಜಿಲ್ಲೆಯ ಬಾಲ್ಕಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. …
Read More »ಎಂಟು ಅಂಗಡಿಗಳಲ್ಲಿ ಸರಣಿ ಕಳ್ಳತನ
ಹಾವೇರಿ: ಎಂಟು ಅಂಗಡಿಗಳಲ್ಲಿ ಸರಣಿ ಕಳ್ಳತನವಾಗಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿಆಲೂರು ಮತ್ತು ಹಾನಗಲ್ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ನಾಲ್ಕು ಮೆಡಿಕಲ್ ಶಾಪ್, ಒಂದು ಕಿರಾಣಿ ಮತ್ತು ತರಕಾರಿ ಅಂಗಡಿ ಸೇರಿದಂತೆ ಎಂಟು ಅಂಗಡಿಗಳಿಗೆ ಖದೀಮರು ಕನ್ನ ಹಾಕಿದ್ದಾರೆ. ನಾಲ್ಕು ಅಂಗಡಿಗಳಲ್ಲಿ ಒಂದು ಸಾವಿರ, ಐದು ಸಾವಿರ ಹೀಗೆ ಕೈಗೆ ಸಿಕ್ಕಷ್ಟು ಹಣವನ್ನ ದೋಚಿಕೊಂಡು ಖದೀಮರು ಪರಾರಿಯಾಗಿದ್ದಾರೆ. ಇನ್ನು ನಾಲ್ಕು ಅಂಗಡಿಗಳಲ್ಲಿ ಕಳ್ಳತನಕ್ಕೆ ಯತ್ನಿಸಿದ್ದರೂ ಏನೂ ಸಿಗದೇ …
Read More »ಇಮ್ಯುನಿಟಿ ಮಾತ್ರೆ ಎಂದು ವಿಷದ ಮಾತ್ರೆ ನೀಡಿ ಮೂವರ ಹತ್ಯೆ
ಚೆನ್ನೈ: ಕರೊನಾ ಸೋಂಕು ಹೆಚ್ಚಾಗುತ್ತಿದೆ. ದೇಹದಲ್ಲಿ ಇಮ್ಯುನಿಟಿ ಇದ್ದರೆ ಮಾತ್ರ ನೀವು ಕರೊನಾ ಗೆಲ್ಲಬಹುದು, ಅದಕ್ಕಾಗಿ ಈ ಮಾತ್ರೆ ತಿನ್ನಿ ಎಂದು ನಕಲಿ ಆರೋಗ್ಯ ಸಿಬ್ಬಂದಿ ಕೊಟ್ಟ ಮಾತ್ರೆ ತಿಂದವರು ಇದೀಗ ಸಾವಿಗೀಡಾಗುತ್ತಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ಈರೋಡ್ನಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಕರುಪ್ಪಂಕೌಂಡರ್ (72 ವರ್ಷ) ಹೆಸರಿನ ವ್ಯಕ್ತಿಯ ಮನೆಗೆ ಜೂನ್ 26ರಂದು ಬಂದ ಶಬರಿ ಹೆಸರಿನ ನಕಲಿ ಆರೋಗ್ಯ ಸಿಬ್ಬಂದಿ, ಮನೆಯಲ್ಲಿ ಎಲ್ಲರೂ ಹುಷಾರಾಗಿದ್ದಾರಾ ಎಂದು …
Read More »ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಇನ್ನಿಬ್ಬರ ಬಂಧನ; ಬಂಧಿತರ ಸಂಖ್ಯೆ 7ಕ್ಕೆ ಏರಿಕೆ
ಬೆಂಗಳೂರು: ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅವರ ಸಹೋದರಿ ಮಾಲಾ ಮತ್ತು ಪುತ್ರ ಅರುಳ್ ಅವರುಗಳನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಳೆದ 3 ದಿನಗಳಿಂದ ತೀವ್ರ ವಿಚಾರಣೆ ನಡೆಸಿದ್ದ ಪೊಲೀಸರು ರೇಖಾ ಕದಿರೇಶ್ ಹತ್ಯೆಯಲ್ಲಿ ಮಾಲಾ, ಅರುಳ್ ಪಾತ್ರದ ಬಗ್ಗೆ ಸಾಕ್ಷ್ಯ ದೊರಕಿದ ಕಾರಣ ಬಂಧಿಸಿದ್ದಾರೆ. ಈಮೂಲಕ ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಈವರೆಗೆ ಕೇಸ್‌ನಲ್ಲಿ ಈವರೆಗೆ ಬಂಧಿತರ ಸಂಖ್ಯೆ 7ಕ್ಕೆ …
Read More »ಕದ್ದ ನಾಯಿ ಮಾರಲು ವಾಟ್ಸ್ ಅಪ್ ಗೆ ಫೋಟೋ ಹಾಕಿ ಸಿಕ್ಕಿ ಬಿದ್ದ ಕಳ್ಳ
ಹಾಸನ: ಹಾಸನ ಹೊರವಲಯದ ಹೊನ್ನೇನಹಳ್ಳಿ ರಸ್ತೆಯಲ್ಲಿರುವ GRR ಕೆನಲ್ಸ್ ನಾಯಿ ಫಾರಂನಿಂದ ದುಬಾರಿ ಬೆಲೆಯ ನಾಯಿಗಳನ್ನು ಕಳ್ಳತನ ಮಾಡಿದ್ದ ಕಳ್ಳರು ಅಂದರ್ ಆಗಿದ್ದಾರೆ. ಕಳ್ಳನ ಪತ್ತೆಗೆ ಸಹಕಾರಿಯಾಗಿದ್ದು ವಾಟ್ಸಾಪ್ ಗ್ರೂಪ್. ಹಾಸನ ನಗರದ ಹೊರವಲಯದ ಗೆಂಡೆಕಟ್ಟೆ ಫಾರೆಸ್ಟ್ ಬಳಿ ದಿವಾಕರ್ ಎಂಬವರಿಗೆ ಸೇರಿದ GRR ಕೆನಲ್ಸ್ ನಾಯಿ ಫಾರಂನಲ್ಲಿ ಜೂ.18ರ ರಾತ್ರಿ ಒಂದೂವರೆ ಲಕ್ಷ ರೂ. ಮೌಲ್ಯದ ನಾಲ್ಕು ನಾಯಿಗಳನ್ನು ನಾಲ್ವರು ಸೇರಿ ಕದ್ದೊಯ್ದಿದ್ದರು. ರಾಟ್ ವೀಲರ್, ಲ್ಯಾಬ್ರಡಾರ್, ಡ್ಯಾಶೌಂಡ್ …
Read More »ಮಳೆಯ ಆರ್ಭಟಕ್ಕೆ ತತ್ತರಿಸಿದ ಮಂತ್ರಾಲಯ.. ಮದ್ವೆಗೆ ಬಂದು ಫಜೀತಿಗೆ ಸಿಲುಕಿದ ಜನ
ರಾಯಚೂರು: ಮಳೆಯ ಅಬ್ಬರ ಜೋರಾಗಿರೋ ಹಿನ್ನೆಲೆಯಲ್ಲಿ ಮಂತ್ರಾಲಯದಲ್ಲಿ ಇಂದು ಅವಾಂತರ ಸೃಷ್ಟಿಯಾಗಿತ್ತು. ಮಂತ್ರಾಲಯದ ಮದುವೆ ಮಂಟಪಕ್ಕೆ ಮಳೆ ನೀರು ನುಗ್ಗಿದ್ದರಿಂದ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಲ್ಯಾಣ ಮಂಟಪಕ್ಕೆ ನೀರು ನುಗ್ಗಿದ್ದರಿಂದ ಮದುವೆಗೆ ಬಂದಿದ್ದ ಜನರು ಫಜಿತಿಗೆ ಸಿಲುಕಿದ್ರು. ಇನ್ನು ಮಂತ್ರಾಲಯದಲ್ಲಿನ ಕರ್ನಾಟಕ ಭವನಕ್ಕೂ ಮಳೆ ನೀರು ನುಗ್ಗಿತ್ತು. ರಸ್ತೆ ತುಂಬಾ ನೀರು ನಿಂತಿದ್ದರಿಂದ ವಾಹನ ಸವಾರರೂ ಪರದಾಟ ನಡೆಸಿದ್ರು. ಅಲ್ಲದೇ ಕೆಲವು ವಾಹನ ಸವಾರರು ನೀರಿನಲ್ಲಿ ಗಾಡಿ ಚಲಾಯಿಸುವ ದುಸ್ಸಾಹಸ …
Read More »ಜೀವಂತ ಪುಟ ಎನಿಸಿದ ಹಂಪಿ
ಚರಿತ್ರೆಯ ಜೀವಂತ ಪುಟ ಎನಿಸಿದ ಹಂಪಿಯನ್ನು ನೀವು ಹೀಗೆ ನೋಡಿರುವುದು ಸಾಧ್ಯವೇ ಇಲ್ಲಬಿಡಿ. ಮುಂಗಾರಿನ ಮೊದಲ ಮಳೆ ಸುರಿದ ಕೆಲವು ದಿನಗಳ ಬಳಿಕ ಸೆರೆಸಿಕ್ಕ ಚಿತ್ರಗಳಿವು. ಆಗತಾನೆ ತಲೆಸ್ನಾನ ಮಾಡಿ, ಎಳೆ ಬಿಸಿಲಿಗೆ ಮೈಯೊಡ್ಡಿದ ಯುವತಿಯಂತೆ ಸ್ಮಾರಕಗಳೆಲ್ಲ ಫಳ ಫಳ ಹೊಳೆಯುತ್ತಿದ್ದವು. ಅವುಗಳ ಆವರಣದಲ್ಲಿ ಬೆಳೆಸಲಾದ ಗಿಡ-ಬಳ್ಳಿಗಳು ಗಾಢ ಹಸಿರುಬಣ್ಣದ ಎಲೆಗಳನ್ನು ತೊಟ್ಟು, ಮೊಗ್ಗುಗಳನ್ನು ಮೈತುಂಬಾ ಧರಿಸಿಕೊಂಡು ನಿಂತಿದ್ದವು. ಸ್ಮಾರಕಗಳ ಲ್ಯಾಂಡ್‌ಸ್ಕೇಪ್ ಚಿತ್ರಗಳನ್ನು, ಆ ಸ್ಮಾರಕಗಳ ಜತೆಯಲ್ಲೇ ಬಾಳಿ ಬದುಕುವ …
Read More »
Laxmi News 24×7