Breaking News

ರಾಜ್ಯ

ಧರ್ಮಶಾಲಾದಲ್ಲಿ ಭಾರೀ ಮಳೆ, ಪ್ರವಾಹ ಪರಿಸ್ಥಿತಿ; ಕೊಚ್ಚಿಹೋದ ಕಾರುಗಳು

ನವದೆಹಲಿ: ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಸೋಮವಾರ (ಜುಲೈ 12) ಭಾರೀ ಮೇಘ ಸ್ಫೋಟದ ಪರಿಣಾಮ ಪ್ರವಾಹದಂತಹ ಪರಿಸ್ಥಿತಿಗೆ ಕಾರಣವಾಗಿತ್ತು. ಅಲ್ಲದೇ ರಸ್ತೆ ಸಮೀಪ ನಿಲುಗಡೆ ಮಾಡಿದ್ದ ಹಲವಾರು ಕಾರುಗಳು ಕೊಚ್ಚಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ ಎಂದು ವರದಿ ತಿಳಿಸಿದೆ. ಮೆಕ್ಲಿಯೊಡ್ ಗಂಜ್ ಸಮೀಪದ ಭಾಗ್ಸು ಪ್ರದೇಶದಲ್ಲಿ ಮೇಘಸ್ಫೋಟದಿಂದಾಗಿ ಭಾರೀ ಮಳೆ ಸುರಿದಿದ್ದು, ಹೋಟೆಲ್ ಗಳು ಹಾನಿಗೊಳಗಾಗಿರುವುದಾಗಿ ವರದಿಯಾಗಿದೆ. ಆದರೆ ಘಟನೆಯಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ಮೂಲಗಳು …

Read More »

ದಿಢೀರನೆ ಸಚಿವ ಮುರುಗೇಶ್ ನಿರಾಣಿಯನ್ನು ಭೇಟಿಯಾದ ಸಂಸದೆ ಸುಮಲತಾ ಅಂಬರೀಶ್

ಬೆಂಗಳೂರು: ಮಂಡ್ಯ ಲೋಕಸಭಾ ಸದಸ್ಯರಾಗಿರುವ ಸುಮಲತಾ ಅಂಬರೀಶ್ ಇಂದು ( ಸೋಮವಾರ) ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿರುವ ಮುರುಗೇಶ್ ನಿರಾಣಿ ಅವರನ್ನು ಸಚಿವರ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. ಅಕ್ರಮ ಗಣಿಗಾರಿಗೆ ಕುರಿತಂತೆ ಹಲವಾರು ಮಾಹಿತಿಗಳನ್ನು ಸಲ್ಲಿಕೆ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಕಳೆದ ಹಲವು ದಿನಗಳಿಂದ ಕೆಆರ್ ಎಸ್ ವಿಚಾರವಾಗಿ ಮತ್ತು ಅಕ್ರಮ ಗಣಿಗಾರಿಗೆ ಕುರಿತಂತೆ ಸುಮಲತಾ ಅಂಬರೀಶ್ ಸುದ್ದಿಯಲ್ಲಿದ್ದಾರೆ. ಇಷ್ಟೇ ಅಲ್ಲದೆ ಕುಮಾರಸ್ವಾಮಿ …

Read More »

ಕಿತ್ತೂರು ಅಭಿವೃದ್ಧಿ ಕ್ರಿಯಾ ಯೋಜನೆಗೆ ರಾಜ್ಯ ಸರಕಾರ ಅನುಮೋದನೆ ನೀಡಿದೆ.

ಕಿತ್ತೂರು ಅಭಿವೃದ್ಧಿ ಕ್ರಿಯಾ ಯೋಜನೆಗೆ ರಾಜ್ಯ ಸರಕಾರ ಅನುಮೋದನೆ ನೀಡಿದೆ. 10 ಕೋಟಿ ರೂ. ವೆಚ್ಚದಲ್ಲಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಿಂದ ವಿವಿಧ ಕಾಮಗಾರಿಗಳನ್ನು ಮಾಡಲು ಕ್ರಿಯಾಯೋಜನೆ ಸಲ್ಲಿಸಲಾಗಿತ್ತು. ಇದೀಗ ಇದಕ್ಕೆ ಸರಕಾರ ಒಪ್ಪಿಗೆ ನೀಡಿದೆ. ರಾಣಿ ಚನ್ನಮ್ಮ ಸ್ಮಾರಕ ಭವನ ನಿರ್ಮಾಣ, ಸಮಾಧಿ ಸ್ಥಳ ಹಾಗೂ ಚೌಕಿಮಠ ಗದ್ದುಗೆ ಅಭಿವೃದ್ಧಿ, ಕಿತ್ತೂರು ಸಂಸ್ಥಾನದ ಅರಮನೇ ಪುನರ್ ನಿರ್ಮಾಣ, ಬೆಳವಡಿ ಮಲ್ಲಮ್ಮನ ಪ್ರತಿಮೆ ನಿರ್ಮಾಣ, ಕಿತ್ತೂರು ಸಂಸ್ಥಾನದ ಕಾಗದಪತ್ರಗಳ ಸಂರಕ್ಷಣೆ ಯೋಜನೆಗಳು …

Read More »

ಅಜ್ಜಿಯನ್ನೇ ಕೊಂದ ಮೊಮ್ಮಗ ಅರೆಸ್ಟ್, ಮತ್ತೊಂದೆಡೆ ಹಳೇ ವೈಷಮ್ಯಕ್ಕೆ ಯುವಕನ ಕೊಲೆ

ಮಡಿಕೇರಿ: ಮಣಜೂರಿನಲ್ಲಿ ಕೊಳೆತ ಸ್ಥಿತಿಯಲ್ಲಿ ವೃದ್ಧೆ ಶವ ಪತ್ತೆಯಾದ ಕೇಸ್ಗೆ ಸಂಬಂಧಿಸಿ ವೃದ್ಧೆ ನಿಗೂಢ ಸಾವಿನ ಕಾರಣ ಬಯಲಾಗಿದೆ. ಮೊಮ್ಮಗನೇ ಅಜ್ಜಿಯನ್ನು ಕೊಂದಿದ್ದು ವೃದ್ಧೆ ಹತ್ಯೆಗೈದಿದ್ದ ಮೊಮ್ಮಗ ಮಂಜುನಾಥ್(40) ಅರೆಸ್ಟ್ ಆಗಿದ್ದಾರೆ. ಕೊಡಗಿನ ಕುಶಾಲನಗರ ತಾಲ್ಲೂಕಿನ ಮಣಜೂರಿನಲ್ಲಿ ಈ ಘಟನೆ ನಡೆದಿದೆ. ಹಣಕಾಸು ವಿಚಾರವಾಗಿ ವೃದ್ಧೆ ಗೌರಮ್ಮ ಜತೆ ಮೊಮ್ಮಗ ಮಂಜುನಾಥ್ನಿಗೆ ಭಿನ್ನಾಭಿಪ್ರಾಯವಾಗಿತ್ತು. ಮಂಜುನಾಥ್ ಕತ್ತು ಹಿಸುಕಿ ಗೌರಮ್ಮ(77) ಕೊಲೆ ಮಾಡಿದ್ದಾನೆ. ಮಣಜೂರಿನಲ್ಲಿ ಜು.3ರಂದು ಗೌರಮ್ಮ ಶವ ಪತ್ತೆಯಾಗಿತ್ತು. ಕುಶಾಲನಗರ …

Read More »

ಶಾಸಕ ಅರವಿಂದ ಬೆಲ್ಲದ್ ಪರ ಬ್ಯಾಟ್ ಮಾಡಿದ ಸಚಿವ ಉಮೇಶ್ ಕತ್ತಿ, “ಮುಂದಿನ ಮುಖ್ಯಮಂತ್ರಿ ಬೆಲ್ಲದ್, ನಿರಾಣಿ ಅಥವಾ ನಾನೇ

ಧಾರವಾಡ, ಜುಲೈ 12: “ಕರ್ನಾಟಕ ರಾಜ್ಯಕ್ಕೆ ಒಬ್ಬರೇ ಮುಖ್ಯಮಂತ್ರಿ, ಮುಂದೆ ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ ಆಗಬಹುದು,” ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಉಮೇಶ್ ಕತ್ತಿ ಭವಿಷ್ಯ ನುಡಿದರು. ಸೋಮವಾರ ಧಾರವಾಡದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಉಮೇಶ್ ಕತ್ತಿ, “ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ, ಸುಮ್ಮನಿರಲ್ಲ. ಈ ಭಾಗದ ಜನರ ಸಹಕಾರದಿಂದ ಉತ್ತರ ಕರ್ನಾಟಕ ಪ್ರತ್ಯೇಕ ಕಟ್ಟುವುದು ಶತ ಸಿದ್ಧ,” ಎಂದು ಮತ್ತೊಮ್ಮೆ ರಾಜ್ಯ ವಿಭಜನೆಯ ಮಾತುಗಳನ್ನಾಡಿದರು. …

Read More »

ಕೆಆರ್ ಎಸ್ ಡ್ಯಾಮ್ ವಿಚಾರ: ಸುಮಲತಾ ಪರವಾಗಿ ಬ್ಯಾಟ್ ಬೀಸಿದ ಸಿದ್ದರಾಮಯ್ಯ

ಹುಬ್ಬಳ್ಳಿ: ಕೆಆರ್ ಎಸ್ ಡ್ಯಾಮ್ ಬಿರುಕು ಬಿಟ್ಟಿದೆ ಎಂದು ಸಂಸದೆ ಸುಮಲತಾ ಆರೋಪ ಮಾಡಿದ್ದಾರೆ. ಅವರು ಆರೋಪ ಮಾಡಿದ ನಂತರ ಸರ್ಕಾರವಾಗಲಿ, ಗಣಿ ಇಲಾಖೆಯಾದರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಬೇಕಾಗಿತ್ತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಸುಮಲತಾ ಅವರು ತಮ್ಮ ಪುತ್ರನನ್ನು ಸೋಲಿಸಿದ್ದಕ್ಕೆ ಕುಮಾರಸ್ವಾಮಿಯವರು ಆರೋಪಕ್ಕೆ ಮುಂದಾಗಿರಬಹುದು. ಕೆಆರ್ ಎಸ್ ಸುತ್ತಮುತ್ತಲಿನ 20 ಕಿಲೋ ಮೀಟರ್ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಅಲ್ಲಿ ಜೆಡಿಎಸ್ ನಾಯಕರ ಗಣಿ ಕಂಪನಿಗಳು …

Read More »

ಎಸ್‌ಎಸ್ ಎಲ್ ಸಿ ಪರೀಕ್ಷೆ ನಡೆಸಲು ಸಮ್ಮತಿಸಿದ ಹೈಕೋರ್ಟ್

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸಲು ಹೈಕೋರ್ಟ್ ಸಮ್ಮತಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ ದ್ವೀತಿಯ ಪಿಯು ಪರೀಕ್ಷೆ ರದ್ದುಪಡಿಸಿರುವಂತೆ ಹತ್ತನೇ ತರಗತಿ ಪರೀಕ್ಷೆಗಳನ್ನೂ ಸಹ ರದ್ದುಪಡಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಮಕ್ಕಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಪರೀಕ್ಷೆ ನಡೆಸುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಕೋವಿಡ್ ಸುರಕ್ಷಿತ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಪರೀಕ್ಷೆ ನಡೆಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.   ಈ ಬಾರಿ ಎಸ್‌ಎಸ್‌ಎಲ್ …

Read More »

ಮಾಟ-ಮಂತ್ರ ಎಂದು ಜನರಿಗೆ ಮೋಸ ಮಾಡುತ್ತಿದ್ದ ಡೋಂಗಿ ಬಾಬಾನಿಗೆ ಸ್ಥಳೀಯರಿಂದ ಹಿಗ್ಗಾಮುಗ್ಗಾ ಥಳಿತ

ಗದಗ: ಕಷ್ಟಪಟ್ಟು ಮೈ ಬಗ್ಗಿಸಿ ದುಡಿಯದೇ ಆರಾಮಾಗಿ ಹಣ ಮಾಡಲು ಮುಂದಾಗಿದ್ದ, ಜನರನ್ನು ನಂಬಿಸಿ ಹಣ ಮಾಡುತ್ತಿದ್ದ ಡೋಂಗಿ ಬಾಬಾನಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗದಗ ನಗರದ ಗಂಗಿಮಡಿ ಆಶ್ರಯ ಕಾಲೋನಿಯಲ್ಲಿ ಡೋಂಗಿ ಬಾಬಾ ಅಲಿಯಾಸ್ ಆಸೀಫ್ ಜಾಗಿರದಾರ್ ಎಂಬುವ ವ್ಯಕ್ತಿ ಜನರನ್ನು ನಂಬಿಸಿ ಮೋಸ ಮಾಡುತ್ತಿದ್ದ. ಸದ್ಯ ಈತನ ಕೃತ್ಯ ಬಯಲಾಗಿದ್ದು ಸ್ಥಳೀಯರು ಡೋಂಗಿ ಬಾಬಾನಿಗೆ ತಕ್ಕ ಪಾಠ ಕಲಿಸಿದ್ದಾರೆ. ಮೂಲತಃ ವಿಜಯಪುರ ಜಿಲ್ಲೆಯವನಾಗಿದ್ದ ಡೋಂಗಿ ಬಾಬಾ ಅನೇಕ …

Read More »

ಹಾಳಾದ ರಸ್ತೆ, ಸೇತುವೆ ದುರಸ್ತಿಪಡಿಸಿ: ಅಧಿಕಾರಿಗಳಿಗೆ ಸಚಿವ ಸೂಚನೆ

ಬೀದರ್: ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆಲವೆಡೆ ರಸ್ತೆ ಹಾಗೂ ಸೇತುವೆಗಳು ಹಾಳಾಗಿವೆ. ತಕ್ಷಣ ದುರಸ್ತಿ ಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೆಲವು ಕಡೆಗಳಲ್ಲಿ ರಸ್ತೆ ಮೇಲೆ ಮಳೆ ನೀರು ನಿಂತು ರಸ್ತೆಯೇ ಕಾಣದಂತಹ ಸ್ಥಿತಿಯಿದೆ. ರಸ್ತೆಗಳ ಮೇಲೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ರಸ್ತೆಗಳಲ್ಲಿ ಉರುಳಿ ಬಿದ್ದ ಮರಗಳನ್ನು ತೆರವುಗೊಳಿಸಿ, ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಅಲ್ಲಲ್ಲಿ …

Read More »

ಹುಬ್ಬಳ್ಳಿ: ನೆಲೆ ನಿಂತರೂ ಅಲೆಮಾರಿಗಳಿಗಿಲ್ಲ ಸೌಲಭ್ಯ

ಕಲಬುರ್ಗಿ: ಡಾಂಬರ್‌ ಕಾಣದ, ತಗ್ಗು ಗುಂಡಿಗಳಿಂದ ಕೂಡಿದ ದೂಳುಮಯ ರಸ್ತೆ, ಮಳೆ ಬಂದರೆ ಸೋರುವ ಜೋಪಡಿಗಳು, ಚರಂಡಿ ಇಲ್ಲದೆ ಎಲ್ಲೆಂದರಲ್ಲಿ ನಿಂತಿರುವ ತ್ಯಾಜ್ಯ ನೀರು… ನಗರ ಹೊರವಲಯದ ಶಹಾಬಾದ್ ರಸ್ತೆಯಲ್ಲಿನ ಅಲೆಮಾರಿ ಬುಡ್ಗ ಜಂಗಮ ಕಾಲೊನಿಯ ದುಸ್ಥಿತಿ ಇದು. ರಾಜ್ಯದ ವಿವಿಧ ಭಾಗಗಳಿಂದ ಬಂದು ಕಳೆದ 8 ವರ್ಷಗಳಿಂದ ಇಲ್ಲಿಯೇ ನೆಲೆ ಕಂಡುಕೊಂಡಿರುವ ಬುಡ್ಗ ಜಂಗಮ ಸಮುದಾಯದ 200ಕ್ಕೂ ಹೆಚ್ಚು ಕುಟುಂಬಗಳು ಮೂಲಸೌಲಭ್ಯದಿಂದ ವಂಚಿತವಾಗಿವೆ. ಯಾದಗಿರಿ ಜಿಲ್ಲೆ ಯರಗೋಳ ಗ್ರಾಮದ …

Read More »