Breaking News

ರಾಜ್ಯ

ಮಂಗಗಳ ಮಾರಣ ಹೋಮ ಪ್ರಕರಣ; 40 ಸಾವಿರಕ್ಕೆ ಗುತ್ತಿಗೆ ಪಡೆದು ಕೃತ್ಯವೆಸಗಿದ್ದ ಪಾಪಿಗಳು

ಹಾಸನ: ಮಂಗಗಳ ಮಾರಣ ಹೋಮ ಪ್ರಕರಣಕ್ಕೆ ಸಂಬಂಧಿಸಿದಂತೆ 3 ದಿನಗಳಲ್ಲಿ ಪ್ರಕರಣ ಭೇದಿಸಿದ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಹಾಸನದ ಉಗಾನೆ ಗ್ರಾಮದ ಪ್ರಸನ್ನ, ರುದ್ರೇಗೌಡ, ಚಾಲಕ ಮಂಜು, ಮಂಗಗಳನ್ನು ಸೆರೆ ಹಿಡಿದಿದ್ದ ಯಶೋಧ, ರಾಮು ದಂಪತಿ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಬೆಳೆ ಹಾನಿ ಮಾಡುತ್ತಿವೆ ಎಂದು ಕೋತಿಗಳ ಸೆರೆ ಹಿಡಿಯಲು ಜಮೀನಿನ ಮಾಲೀಕ ಪ್ರಸನ್ನ, ರುದ್ರೇಗೌಡ ಅವರು ಯಶೋಧ ಹಾಗೂ ರಾಮು ದಂಪತಿಗೆ …

Read More »

ಅಸಭ್ಯ ವರ್ತನೆ ತೋರಿದ್ದಕ್ಕೆ ಸ್ಕೂಟರ್ ಎತ್ತಿ ಚರಂಡಿಗೆ ಎಸೆದ ಮಹಿಳೆ; ನೆಟ್ಟಿಗರಿಂದ ಶ್ಲಾಘನೆ

ಮಹಿಳೆಯರು ಅವಮಾನ, ಲೈಂಗಿಕ ದೌರ್ಜನ್ಯ ಈ ರೀತಿಯ ಕೃತ್ಯಗಳಿಗೆ ಬಲಿಯಾಗುತ್ತಲೇ ಇದ್ದಾರೆ. ಅವಮಾನಿಸಿದ ವ್ಯಕ್ತಿಗೆ ಇರ್ಲೋರ್ವ ಮಹಿಳೆ ತಕ್ಕ ಪಾಠ ಕಲಿಸಿದ್ದಾಳೆ. ಘಟನೆ ಅಸ್ಸಾಂನಲ್ಲಿ(Assam) ನಡೆದಿದೆ. ಫೊಟೋದ ಜತೆಗೆ, ನಡೆದ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ(Social Media) ಹೇಳುತ್ತಿದ್ದಂತೆ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ. ಗುಹಾವಟಿಯಲ್ಲಿ ಭಾವನಾ ಕಶ್ಯಪ್ ನಿಂತಿದ್ದರು. ಅಡ್ರೆಸ್ ಕೇಳುವ ನೆಪದಲ್ಲಿ ಬಂದ ಅಪರಿಚಿತ ವ್ಯಕ್ತಿ ಅಸಭ್ಯವರ್ತನೆ ತೋರಿದ್ದಾನೆ. ನನಗೆ ಅಡ್ರೆಸ್ ಕುರಿತಾದ ಮಾಹಿತಿ ಇಲ್ಲ ಎಂದು ಹೇಳುತ್ತಿದ್ದಂತೆಯೇ ಮಹಿಳೆಯ …

Read More »

ಸಾರ್ವಜನಿಕರಿದ್ದ ಸ್ಥಳದಲ್ಲೇ ವ್ಯಕ್ತಿಯ ಮೇಲೆ ಮಾರಾಣಾಂತಿಕ ಹಲ್ಲೆ..!

ಬೆಂಗಳೂರು: ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನ ಅಡ್ಡಗಟ್ಟಿ ಹಲ್ಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯ ಸಂಜಯನಗರದಲ್ಲಿ ನಡೆದಿದೆ. ಮುನಿರಾಜು ಎಂಬಾತ ಬೈಕ್ ನಲ್ಲಿ ಹೋಗುತ್ತಿದ್ದ.‌ ಆ ವೇಳೆ ಅಡ್ಡ ಬಂದ ಹೆಲ್ಮೆಟ್ ಹಾಕಿದ್ದ ವ್ಯಕ್ತಿಗಳು ಆತನನ್ನ ತಡೆದಿದ್ದಾರೆ. ಗಾಡಿಯಿಂದ ಕೆಳಕ್ಕೆ ಬೀಳಿಸಿ, ಕಬ್ಬಿಣದ ಸಲಾಕೆ, ಕ್ರಿಕೆಟ್ ಆಡುವ ವಿಕೆಟ್ ನಿಂದ ಜೋರು ಹಲ್ಲೆ ನಡೆಸಿದ್ದಾರೆ. ಮುನಿರಾಜು ಜೊತೆ ಇದ್ದ ಮಹಿಳೆ ಕಿರುಚಿಕೊಂಡರು ಬಿಟ್ಟಿಲ್ಲ. ಮೃಗೀಯವಾಗಿ ವರ್ತಿಸಿದ್ದಾರೆ. ಘಟನೆಯಲ್ಲಿ ರಾಮಮೂರ್ತಿ ನಗರದ …

Read More »

ಬೆಂಗಳೂರಿನಲ್ಲಿ ಮತ್ತೆ ರೌಡಿಗಳ ಮನೆಗಳಿಗೆ ಸಿಸಿಬಿ ಪೊಲೀಸರ ದಾಳಿ

ಬೆಂಗಳೂರು: ಕೆಲ ದಿನಗಳ ಹಿಂದೆ ನಗರದಲ್ಲಿ 2 ಸಾವಿರಕ್ಕೂ ಹೆಚ್ಚು ರೌಡಿ ಮನೆಗಳ ಮೇಲೆ ದಾಳಿ ಮಾಡಿದ್ದ ಪೊಲೀಸರು ಶನಿವಾರ ಮತ್ತೆ ದಾಳಿ ಮುಂದುವರಿಸಿದ್ದಾರೆ. ಅಪರಾಧ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ರೌಡಿಗಳ ಮನೆ ಮೇಲೆ ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದಿದ್ದಾರೆ. ಈ ಹಿಂದಿನ ದಾಳಿಯಲ್ಲಿ ತಲೆ ಮರೆಸಿಕೊಂಡಿದ್ದ ರೌಡಿಶೀಟರ್​ಗಳಿಗೆ ಬೆಳ್ಳಂಬೆಳಗ್ಗೆ ಶಾಕ್​ ನೀಡಿದ್ದಾರೆ. ಆಡುಗೋಡಿ ಪೊಲೀಸ್​ ಠಾಣಾ ವ್ಯಾಪ್ತಿಯ 63 ರೌಡಿಶೀಟರ್​ಗಳ ಮನೆ ಮೇಲೆ ಆಗ್ನೇಯ ವಿಭಾಗ ಪೊಲೀಸರು ದಾಳಿ …

Read More »

ಕಾಗವಾಡ, ಕುಗನೊಳ್ಳಿ ಚೆಕ್ ಪೋಸ್ಟ್​​​ಗಳಿಗೆ ಜಿಲ್ಲಾಧಿಕಾರಿ, ಎಸ್‌ಪಿ ಭೇಟಿ

ಚಿಕ್ಕೋಡಿ : ಮಹಾರಾಷ್ಟ್ರದಿಂದ ಬೆಳಗಾವಿ‌ ಮೂಲಕ ರಾಜ್ಯದ ಗಡಿ ಪ್ರವೇಶಿಸುವ ಪ್ರಯಾಣಿಕರು ಕೋವಿಡ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯಗೊಳಿಸಲಾಗಿದೆ. ಆದ್ದರಿಂದ ಸರಕಾರದ ಮಾರ್ಗಸೂಚಿ ಪ್ರಕಾರ ನೆಗೆಟಿವ್ ವರದಿ ಹೊಂದಿದವರಿಗೆ ಮಾತ್ರ ರಾಜ್ಯದೊಳಗೆ ಪ್ರಯಾಣಕ್ಕೆ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಸೂಚನೆ ನೀಡಿದ್ದಾರೆ. ಜಿಲ್ಲೆಯ ಕುಗನೊಳ್ಳಿ ಹಾಗೂ ಕಾಗವಾಡ ಚೆಕ್ ಪೋಸ್ಟ್​​​ಗಳಿಗೆ ಜಿಲ್ಲಾಧಿಕಾರಿ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅಲ್ಲಿ ನಿಯೋಜಿತ ಅಧಿಕಾರಿಗಳು ಹಾಗೂ …

Read More »

ಕರ್ನಾಟಕ ರಾಜ್ಯ ಪೊಲೀಸ್ – ಫಾಲೋವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

  ಕರ್ನಾಟಕ ರಾಜ್ಯ ಪೊಲೀಸ್ (KSP) ಅನುಯಾಯಿ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 30 ಆಗಸ್ಟ್ 2021 ರ ಮೊದಲು ಅಧಿಕೃತ ವೆಬ್‌ಸೈಟ್ ksrpfoll21.ksponline.co.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಕೆಎಸ್‌ಪಿ ನೇಮಕಾತಿ 2021: ಹುದ್ದೆಯ ವಿವರಗಳು ಕೆಎಸ್‌ಪಿ ನೇಮಕಾತಿ 2021 ಡ್ರೈವ್ ಮೂಲಕ ಕುಕ್, ಕ್ಷೌರಿಕ, ಧೋಬಿ, ಸ್ವೀಪರ್, ವಾಟರ್ ಕ್ಯಾರಿಯರ್ ಹುದ್ದೆಗೆ ಒಟ್ಟು 250 ಹುದ್ದೆಗಳು ಲಭ್ಯವಿದೆ. ಪೋಸ್ಟ್ಗಳ …

Read More »

ಸಿದ್ದರಾಮಯ್ಯಗಾಗಿ ಕ್ಷೇತ್ರ ತ್ಯಾಗ! 2023ರ ಚುನಾವಣೆಯಲ್ಲಿ ಜಮೀರ್ ಅಹ್ಮದ್ ಖಾನ್ ತುಮಕೂರಿನಿಂದ ಸ್ಪರ್ಧೆ?

ತುಮಕೂರು: ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಪದೇ ಪದೇ ತುಮಕೂರಿಗೆ ಭೇಟಿ ನೀಡುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗಾಗಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರವನ್ನು ಬಿಟ್ಟುಕೊಟ್ಟು, 2023ರ ವಿಧಾನಸಭೆ ಚುನಾವಣೆಯಲ್ಲಿ ಜಮೀರ್ ತುಮಕೂರಿನಿಂದ ಸ್ಪರ್ಧಿಸಲಿದ್ದಾರೆ ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ಇಲಾಹಿ ಸಿಖಂದರ್ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು, ಭಾನುವಾರ ಜಮೀರ್ ಹುಟ್ಟುಹಬ್ಬವನ್ನು ಆಚರಿಸಿದರು, ಇದೇ ವೇಳೆ ನಗರದಲ್ಲಿ ಅಗತ್ಯವಿರುವ ಜನರಿಗೆ ಆಹಾರ ಕಿಟ್‌ಗಳನ್ನು ವಿತರಿಸಿದರು. …

Read More »

ನೀಲಿ ಚಿತ್ರ ನಿರ್ಮಾಣ ಆರೋಪ: ಬಂಗಾಳಿ ನಟಿ ನಂದಿತ ದತ್ತ ಬಂಧನ

ಕೋಲ್ಕತ್ತಾ: ಉದ್ಯಮಿ ರಾಜ್‌ ಕುಂದ್ರಾ ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಬಂಧಿತನಾಗಿರುವ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ನೀಲಿ ಚಿತ್ರ ನಿರ್ಮಾಣ ಆರೋಪದ ಮೇಲೆ ನಟಿ ನಂದಿತ ದತ್ತ ಹಾಗೂ ಆಕೆಯ ಮ್ಯಾನೇಜರ್‌ ಮಾಣಿಕ್‌ ಘೋಷ್‌ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ನಂದಿತ ದತ್ತ ಅಶ್ಲೀಲ ಚಿತ್ರಗಳನ್ನು ನಿರ್ಮಾಣ ಮಾಡಿ ಅವುಗಳನ್ನು ಓಟಿಟಿ ಮೂಲಕ ಪ್ರಸಾರ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ಜುಲೈ 26ರಂದು …

Read More »

ರೈಲ್ವೆ ಇಲಾಖೆಯ ಜಾಗದಲ್ಲಿ 179 ಕಡೆ ದೇಗುಲ, ಮಸೀದಿ, ದರ್ಗಾಗಳ ನಿರ್ಮಾಣ

ನವದೆಹಲಿ: ದೇಶದಾದ್ಯಂತ ರೈಲ್ವೆ ಇಲಾಖೆಯ ಆಸ್ತಿಯಲ್ಲಿ ಅಂದರೆ ಪ್ಲಾಟ್‌ಫಾರ್ಮ್‌ಗಳು ಮತ್ತು ಯಾರ್ಡ್‌ಗಳಲ್ಲಿ 179 ಕಡೆ ಅಕ್ರಮವಾಗಿ ಧಾರ್ಮಿಕ ಕಟ್ಟಡಗಳು ತಲೆ ಎತ್ತಿವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ. ಈ ಕಟ್ಟಡಗಳಲ್ಲಿ ದೇವಸ್ಥಾನ ದರ್ಗಾಗಳು, ಮಸೀದಿಗಳು ಸೇರಿವೆ. ಹಲವು ವರ್ಷಗಳಿಂದ ಇವು ಅಸ್ತಿತ್ವದಲ್ಲಿವೆ ಎಂದು ಸಂಸತ್ತಿನಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ಅವರು ತಿಳಿಸಿದ್ದಾರೆ. ಅಕ್ರಮ ನಿರ್ಮಾಣದ ಈ ಸಂಕೀರ್ಣಗಳ ತೆರವಿಗೆ ರೈಲ್ವೆ ಆಡಳಿತ ಮುಂದಾಗಿದೆ. ಇದಕ್ಕಾಗಿ ರೈಲ್ವೆ ಸುರಕ್ಷತಾ …

Read More »

ರೈಲ್ವೆ ಇಲಾಖೆಯ ಜಾಗದಲ್ಲಿ 179 ಕಡೆ ದೇಗುಲ, ಮಸೀದಿ, ದರ್ಗಾಗಳ ನಿರ್ಮಾಣ

ನವದೆಹಲಿ: ದೇಶದಾದ್ಯಂತ ರೈಲ್ವೆ ಇಲಾಖೆಯ ಆಸ್ತಿಯಲ್ಲಿ ಅಂದರೆ ಪ್ಲಾಟ್‌ಫಾರ್ಮ್‌ಗಳು ಮತ್ತು ಯಾರ್ಡ್‌ಗಳಲ್ಲಿ 179 ಕಡೆ ಅಕ್ರಮವಾಗಿ ಧಾರ್ಮಿಕ ಕಟ್ಟಡಗಳು ತಲೆ ಎತ್ತಿವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ. ಈ ಕಟ್ಟಡಗಳಲ್ಲಿ ದೇವಸ್ಥಾನ ದರ್ಗಾಗಳು, ಮಸೀದಿಗಳು ಸೇರಿವೆ. ಹಲವು ವರ್ಷಗಳಿಂದ ಇವು ಅಸ್ತಿತ್ವದಲ್ಲಿವೆ ಎಂದು ಸಂಸತ್ತಿನಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ಅವರು ತಿಳಿಸಿದ್ದಾರೆ. ಅಕ್ರಮ ನಿರ್ಮಾಣದ ಈ ಸಂಕೀರ್ಣಗಳ ತೆರವಿಗೆ ರೈಲ್ವೆ ಆಡಳಿತ ಮುಂದಾಗಿದೆ. ಇದಕ್ಕಾಗಿ ರೈಲ್ವೆ ಸುರಕ್ಷತಾ …

Read More »