ಹುಬ್ಬಳ್ಳಿ: ಸಾಲ ನೀಡಿದ್ದ ಹಣಕ್ಕೆ ಸರಿಯಾಗಿ ಬಡ್ಡಿ ನೀಡಿಲ್ಲ ಅಂತ ಆಟೋ ಚಾಲಕನನ್ನು ಕೊಲೆಗೈದಿರುವ ಘಟನೆ ಹುಬ್ಬಳ್ಳಿಯ ನೇಕಾರ ನಗರದಲ್ಲಿ ನಡೆದಿದೆ. ಲೋಕೇಶ್ ಹತ್ಯೆಯಾದ ಆಟೋ ಚಾಲಕರಾಗಿದ್ದು, ಕೆಲ ದಿನಗಳ ಹಿಂದೆ ಲೋಕೇಶ್, ಮಾರುತಿ ಎನ್ನುವವನಿಂದ 5 ರೂಪಾಯಿ ಸಾಲ ಪಡೆದುಕೊಂಡಿದ್ದ. ಆದರೆ ಸಾಲದ ಬಡ್ಡಿ ಜೊತೆಗೆ ಆಟೋದ ನಿತ್ಯ 200 ರೂಪಾಯಿ ಕೊಡುವಂತೆ ಮಾರುತಿ ಪಿಡುಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಇದೇ ವಿಚಾರಕ್ಕೆ ನಿನ್ನೆ ಸಂಜೆ ಮಾರುತಿ …
Read More »ದಲ್ಲಾಳಿಯ ಪುತ್ರನಿಗೆ ಹಿಗ್ಗಾಮುಗ್ಗ ಥಳಿಸಿದ ವ್ಯಾಪಾರಿಗಳು
ಗದಗ: ಕ್ಷುಲ್ಲಕ ಕಾರಣಕ್ಕಾಗಿ ದಲ್ಲಾಳಿ ಹಾಗೂ ತರಕಾರಿ ಮಾರಾಟಗಾರರ ನಡುವೆ ಮಾರಾಮಾರಿ ನಡೆದಿದ್ದು ಗದಗ ಎಪಿಎಂಸಿ ಆವರಣ ರಣಾಂಗಣವಾಗಿ ಮಾರ್ಪಟ್ಟ ಘಟನೆ ನಡೆದಿದೆ. ಗದಗ ಎಪಿಎಂಸಿ ತರಕಾರಿ ಹೋಲ್ ಸೇಲ್ ಮಾರ್ಕೆಟ್ನಲ್ಲಿ ಘಟನೆ ನಡೆದಿದ್ದು ದಲ್ಲಾಳಿ ಅಂಗಡಿಗೆ ನುಗ್ಗಿ ದಲ್ಲಾಳಿ ಪುತ್ರನಿಗೆ ವ್ಯಾಪಾರಿಗಳು ಹಿಗ್ಗಾಮುಗ್ಗ ಥಳಿಸಿದ್ದಾರೆ. ರೈತರ ತರಕಾರಿ ಖರೀದಿ ವಿಷಯದಲ್ಲಿ ದಲ್ಲಾಳಿ ಹಾಗೂ ವ್ಯಾಪಾರಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವಾಗ್ವಾದ ವಿಕೋಪಕ್ಕೆ ತಿರುಗಿ ಹೊಎದಾಟ ನಡೆದಿದೆ …
Read More »ಬಹುಮಹಡಿ ಕಟ್ಟಡ ಕುಸಿತ; ಮನೆ ಮಾಲೀಕನ ವಿರುದ್ಧ ದಾಖಲಾಯ್ತು FIR
ಬೆಂಗಳೂರು: BBMP ವ್ಯಾಪ್ತಿಯ ದಕ್ಷಿಣ ವಲಯದ ಲಕ್ಕಸಂದ್ರದಲ್ಲಿ 3 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣ ಸಂಬಂಧ ಕಟ್ಟಡ ಮಾಲೀಕನ ವಿರುದ್ಧ ದೂರು ದಾಖಲು ಮಾಡಲಾಗಿದೆ. ಲಕ್ಕಸಂದ್ರದ 7ನೇ ಮುಖ್ಯರಸ್ತೆ, 14ನೇ ಕ್ರಾಸ್ನಲ್ಲಿನ ಈ ಮೂರು ಅಂತಸ್ತಿನ ಕಟ್ಟಡವನ್ನು 1974ರಲ್ಲಿ ನಿರ್ಮಿಸಲಾಗಿತ್ತು. ಸುರೇಶ್ ಎಂಬ ವ್ಯಕ್ತಿಗೆ ಈ ನಿವಾಸ ಸೇರಿದ್ದಾಗಿದೆ, ಶಿಥಿಲಾವ್ಯವಸ್ಥೆಯಲ್ಲಿದ್ದ ಕಟ್ಟಡದ ಬಗ್ಗೆ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳದೇ ಮಾಲೀಕರು ನಿರ್ಲಕ್ಷ್ಯ ವಹಿಸಿದ್ದರು ಅನ್ನೋ ಆರೋಪ ಕೇಳಿಬಂದಿತ್ತು. ಹೀಗಾಗಿ …
Read More »ಕೆಪಿಸಿಸಿ ಪಟ್ಟಿ : ಹೈಕಮಾಂಡ್ ಜತೆ ಇಂದು ಡಿಕೆಶಿ ಚರ್ಚೆ
ಬೆಂಗಳೂರು: ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಂಗಳವಾರ ಹೈಕಮಾಂಡ್ ನಾಯಕರ ಜತೆ ಚರ್ಚಿಸುವ ನಿರೀಕ್ಷೆಯಿದೆ. ರವಿವಾರ ದಿಲ್ಲಿಗೆ ತೆರಳಿರುವ ಡಿಕೆಶಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಭೇಟಿಗೆ ಕಾಲಾವಕಾಶ ಕೋರಿದ್ದಾರೆ. ಪಂಜಾಬ್ ಪ್ರವಾಸದಲ್ಲಿರುವ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮಂಗಳವಾರ ದಿಲ್ಲಿಗೆ ಆಗಮಿಸಲಿದ್ದು ಡಿಕೆಶಿ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ. ಕೆಪಿಸಿಸಿ ಪದಾಧಿಕಾರಿಗಳa ಪಟ್ಟಿ, ಹಿಂದುಳಿದ, …
Read More »ಗೋಕಾಕದಲ್ಲಿ ಪ್ರವಾಹ ಪೀಡಿತ ಸಂಬಂಧ ಗೋಕಾಕ ಹಾಗೂ ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಧನವನ್ನು ವಿತರಿಸುವಂತೆ ಕೆಎಂಎಫ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ರವಿವಾರ ರಾತ್ರಿ ತಮ್ಮ ಗೃಹ ಕಛೇರಿ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ಅಧಿಕಾರಿಗಳ ಸಭೆ ನಡೆಸಿದ …
Read More »ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಮುಂದಾದ್ರಾ ಕೋನರೆಡ್ಡಿ..?
ಧಾರವಾಡ: ಜೆಡಿಎಸ್ ನವಲಗುಂದ ಶಾಸಕ ಕೋನರೆಡ್ಡಿ ಜೆಡಿಎಸ್ ತೊರೆದು ಕೈ ಪಡೆ ಸೇರ್ತಾರಾ ಎಂಬ ಚರ್ಚೆ ಶುರುವಾಗಿದೆ. ಕೋನರಡ್ಡಿ ಜೆಡಿಎಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಮೊನ್ನೆಯಷ್ಟೇ ನಡೆದ ಹು-ಧಾ ಪಾಲಿಕೆ ಚುನಾವಣೆ ಸೋಲು ಹಿನ್ನೆಲೆ ಹೊಣೆ ಹೊತ್ತು ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಬೆನ್ನಲ್ಲೇ 2023 ಚುನಾವಣೆಗೆ ಕೋನರಡ್ಡಿ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಕೈ ನಾಯಕರ ಜೊತೆ ಕೋನರೆಡ್ಡಿ ಒಂದು ಸುತ್ತು ಮಾತುಕತೆ ನಡೆಸಿದ್ದಾರೆ ಎನ್ನಲಾಗ್ತಿದೆ.. …
Read More »ದಯಮಾಡಿ ಬಂದ್ಗೆ ಸಹಕಾರ ನೀಡಿ ಸ್ವಾಮಿ- ಆಟೋ ಚಾಲಕನ ಕಾಲಿಗೆ ಬಿದ್ದ ರೈತ
ಧಾರವಾಡ: ‘ಭಾರತ್ ಬಂದ್’ ಹಿನ್ನೆಲೆ ನಗರದ ಆಲೂರು ವೆಂಕಟರಾವ್ ವೃತ್ತದಲ್ಲಿ ಬಸ್ ತೆಡೆದು ಪ್ರತಿಭಟನೆ ನಡೆಸಲಾಗುತ್ತಿದ್ದು, ಪ್ರತಿಭಟನಾಕಾರರು ಬೀದಿಗಿಳಿದು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಭಾರತ ಬಂದ್ ಗೆ ಬೆಂಬಲ ನೀಡಲು ರೈತನೋರ್ವ ಆಟೋ ಚಾಲಕನ ಕಾಲಿಗೆ ಬಿದ್ದು ಮನವಿ ಮಾಡಿದ ಘಟನೆ ಆಲೂರು ವೆಂಕಟರಾವ್ ವೃತ್ತದಲ್ಲಿ ನಡೆದಿದೆ. ಜನರ ಪರವಾಗಿ ಹೋರಾಟ ಮಾಡುತ್ತಿದ್ದೇವೆ ದಯಮಾಡಿ ನಮಗೆ ಬೆಂಬಲ ನೀಡಿ ಎಂದು ರೈತ …
Read More »ಪ್ರತಿಭಟನೆ ವೇಳೆ ಸಿಂಘು ಗಡಿಯಲ್ಲಿ ಮೃತಪಟ್ಟ ರೈತ: ʼಹೃದಯಾಘಾತʼ ಎಂದ ಪೊಲೀಸರು
ಹೊಸದಿಲ್ಲಿ: ಇಂದು ದೇಶಾದ್ಯಂತ ರೈತ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ. ಹಲವಾರು ಕಡೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈ ನಡುವೆ ಹರ್ಯಾಣದ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ರೈತನೋರ್ವ ಮೃತಪಟ್ಟಿದ್ದು, ಇದು ಹೃದಯಾಘಾತದಿಂದ ಸಂಭವಿಸಿದ ಸಾವು ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ ಎಂದು indiatoday ವರದಿ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಹೆಚ್ಚಿನ ವಿವರಗಳನ್ನು ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಕೇಂದ್ರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ …
Read More »ಪ್ರತಿಭಟನೆ ವೇಳೆ ಡಿಸಿಪಿ ಧರ್ಮೇಂದ್ರ ಕುಮಾರ್ ಕಾಲಿನ ಮೇಲೆ ಹರಿದ ಕಾರು..!
ಬೆಂಗಳೂರು: ಭಾರತ್ ಬಂದ್ ಪ್ರತಿಭಟನೆ ವೇಳೆ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಅವರು ದೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರೈತ ಸಂಘಟನೆಗಳಿಂದ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರದ ಗೊರಗುಂಟೆ ಪಾಳ್ಯ ಜಂಕ್ಷನ್ನಲ್ಲಿ ಪ್ರತಿಭಟನಾ ಜಾಥಾ ನಡೆಯುತ್ತಿತ್ತು. ಈ ವೇಳೆ ಕೆಲವು ಪ್ರತಿಭಟನಾಕಾರರನ್ನ ಪೊಲೀಸರು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಈ ವೇಳೆ ರೈತ ಮುಖಂಡನ ಕಾರನ್ನ ಅಡ್ಡ ಹಾಕಲು ಡಿಸಿಪಿ ಧರ್ಮೇಂದ್ರ ಕುಮಾರ್ ಮುಂದಾಗಿದ್ದಾರೆ. ಆಗ ಕಾರು ಚಾಲಕ ಗಾಡಿಯನ್ನ …
Read More »ಸಕಾಲಕ್ಕೆ ಬಾರದ ಆಂಬ್ಯುಲೆನ್ಸ್.. ಫುಟ್ಪಾತ್ನಲ್ಲಿಯೇ ಮಲಗಿದ ರೋಗಿ..!
ರಾಯಚೂರು: ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಾರದೆ ರೋಗಿಯೋರ್ವ ಆಸ್ಪತ್ರೆ ಆವರಣದಲ್ಲಿಯೇ ಮಲಗಿ ಪರದಾಡಿದ ಘಟನೆ ಜಿಲ್ಲೆಯ ರಿಮ್ಸ್ ಆಸ್ಪತ್ರೆ ಬಳಿ ನಡೆದಿದೆ. ಯಾದಗಿರಿ ಜಿಲ್ಲೆಯಿಂದ ಆಸ್ಪತ್ರೆಗೆ ಬಂದಿದ್ದ ರೋಗಿಗೆ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ದಾಖಲಾಗುವಂತೆ ವೈದ್ಯರು ಸೂಚಿಸಿದ್ದರು ಎನ್ನಲಾಗಿದೆ. ಅರ್ಧ ಗಂಟೆಯಿಂದ ಆಂಬ್ಯುಲೆನ್ಸ್ಗಾಗಿ ಕಾದರೂ ಬಾರದ ಆಂಬ್ಯುಲೆನ್ಸ್ ನಿಂದ ಕಂಗಾಲಾದ ರೋಗಿ ಆಸ್ಪತ್ರೆ ಫುಟ್ಪಾತ್ ಮೇಲೆಯೇ ಮಲಗಿದ್ದಾನೆ. ಫುಟ್ಪಾತ್ ಮೇಲೆ ಮಲಗಿದ ಸಾಕಷ್ಟು ಹೊತ್ತಿನ ಬಳಿಕ ಆಂಬ್ಯುಲೆನ್ಸ್ ಆಗಮಿಸಿದ್ದು …
Read More »
Laxmi News 24×7