Breaking News

ರಾಜ್ಯ

ಪುನೀತ್ ರಾಜ್ ಕುಮಾರ್ ಗೆ `ಪದ್ಮ ಪ್ರಶಸ್ತಿ’ : ಅಗತ್ಯ ಕ್ರಮಕ್ಕೆ ಮುಂದಾದ ರಾಜ್ಯ ಸರ್ಕಾರ!

ಬೆಂಗಳೂರು : ಇತ್ತೀಚೆಗಷ್ಟೇ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಪದ್ಮ ಪ್ರಶಸ್ತಿ ನೀಡುವಂತೆ ಅಭಿಮಾನಿಗಳು ಒತ್ತಾಯಿಸಿದ್ದು, ರಾಜ್ಯ ಸರ್ಕಾರ ಪುನೀತ್ ಗೆ ಪದ್ಮ ಪ್ರಶಸ್ತಿ ನೀಡುವ ಕುರಿತಂತೆ ಅಗತ್ಯ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ನಟ ಪುನೀತ್ ರಾಜ್ ಕುಮಾರ್ ಗೆ ಪದ್ಮಶ್ರೀ ಪ್ರಶಸ್ತಿ ನೀಡುವ ಕುರಿತು ನವೆಂಬರ್ 16ರ ಬಳಿಕ ಸರ್ಕಾರದ ಮಟ್ಟದಲ್ಲಿ ಹಾಗೂ ಪುನೀತ್ ಕುಟುಂಬದ ಜತೆ ಚರ್ಚಿಸಿ ಹೆಸರು ಶಿಫಾರಸು ಮಾಡುವ ಸಾಧ್ಯತೆ …

Read More »

LPG ಗ್ಯಾಸ್ ಸಿಲಿಂಡರ್ ಸ್ಪೋಟ: 7 ಜನರಿಗೆ ಗಂಭೀರ ಗಾಯ

ಬೆಂಗಳೂರು: ನಗರದ ಹೊರವಲಯದಲ್ಲಿನ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ಮನೆಯೊಂದರಲ್ಲಿನ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ( LPG Gas Cylinder Blast ) ಪರಿಣಾಮ, ಮನೆಯಲ್ಲಿದ್ದಂತ 7 ಜನರು ಗಂಭೀರವಾಗಿ ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಆನೇಕಲ್ ತಾಲೂಕಿನ ಜಿಗಣಿಯ ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವಂತ ಮಂಜುನಾಥ್ ರೆಡ್ಡಿ ಎಂಬುವರಿಗೆ ಸೇರಿದಂತೆ ಮನೆಯೊಂದರಲ್ಲಿ, ಉತ್ತರ ಭಾರತ ಮೂಲಕ ಏಳು ಕಾರ್ಮಿಕರು 2 ವರ್ಷಗಳಿಂದ ಬಾಡಿಗೆ ಇದ್ದರು. ಇಂತಹ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬ್ಲಾಸ್ ಆಗಿದೆ. …

Read More »

ಸಿವಿಲ್ ಆಸ್ಪತ್ರೆಯಲ್ಲಿ ಬೆಂಕಿ ದುರಂತ; 10 ಮಂದಿ ಸಾವು

ನವದೆಹಲಿ: ಮಹಾರಾಷ್ಟ್ರದ ಅಹಮದ್‌ನಗರದಲ್ಲಿರುವ ಸಿವಿಲ್ ಆಸ್ಪತ್ರೆಯಲ್ಲಿ ಅಗ್ನಿ ಅವಗಢ ಸಂಭವಿಸಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ. ಐಸಿಯು ವಾರ್ಡ್​ನಲ್ಲಿ ಬೆಂಕಿ ಕಾಣಿಸಿಕೊಂಡು ದುರಂತ ಸಂಭವಿಸಿದೆ. ಇನ್ನು ಹಲವು ಮಂದಿ ಬೆಂಕಿಯ ಕೆನ್ನಾಲಿಗೆಗೆ ಗಂಭೀರವಾಗಿ ಗಾಯಗೊಂಡಿದ್ದು, ಸಾವು ನೋವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸುಟ್ಟು ಗಾಯಗೊಂಡಿರೋರಿಗೆ ಚಿಕಿತ್ಸೆ ಶುರುಮಾಡಲಾಗಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದೆ. ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.

Read More »

64 ಪ್ರಯಾಣಿಕರನ್ನು ಊಟಕ್ಕೆಂದು ಕೆಳಗಿಳಿಸಿ ಬಹುದೊಡ್ಡ ಶಾಕ್​ ಕೊಟ್ಟ ಕೇರಳ ಖಾಸಗಿ ಬಸ್​ ಡ್ರೈವರ್​;

ಕೇರಳದಿಂದ ಅಸ್ಸಾಂಗೆ ಹೊರಟಿದ್ದ ಖಾಸಗಿ ಬಸ್​​ನ ಚಾಲಕ ಮತ್ತು ಕ್ಲೀನರ್​ ಸೇರಿ ಪ್ರಯಾಣಿಕರಿಗೆ ಬಹುದೊಡ್ಡ ಶಾಕ್​ ಕೊಟ್ಟಿದ್ದಾರೆ. ಬಹುಶ್ಯಃ ಆ ಪ್ರಯಾಣಿಕರು ಯಾರೂ ಹೀಗೊಂದು ಕೆಟ್ಟ ಸನ್ನಿವೇಶ ಎದುರಾಗಬಹುದು ಎಂದು ನಿರೀಕ್ಷೆ ಮಾಡಿರಲು ಸಾಧ್ಯವೇ ಇಲ್ಲ. ಇದೊಂದು ಕೇರಳ ಮೂಲದ ಖಾಸಗಿ ಬಸ್​ ಆಗಿದ್ದು, 64 ಪ್ರಯಾಣಿಕರನ್ನು ಹೊತ್ತು ಅಸ್ಸಾಂಗೆ ಸಾಗುತ್ತಿತ್ತು. ಹೀಗೆ ಹೋಗುವಾಗ ತೆಲಂಗಾಣದ ನಲ್ಗೊಂಡ ಬಳಿ ಊಟಕ್ಕೆ ಇಳಿದಿದ್ದರು. ಸಹಜವಾಗಿ ಪ್ರಯಾಣಿಕರೆಲ್ಲ ತಮ್ಮ ಲಗೇಜ್​ಗಳನ್ನೆಲ್ಲ ಬಸ್​​ನಲ್ಲೇ ಇಟ್ಟು …

Read More »

ರಾಜ್ಯದ ಚಿತ್ರಮಂದಿರಗಳಲ್ಲಿ ನಾಳೆ `ಪುನೀತ್ ರಾಜ್ ಕುಮಾರ್’ಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಬೆಂಗಳೂರು : ಇತ್ತೀಚೆಗೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ನಾಳೆ ರಾಜ್ಯದ ಚಿತ್ರಮಂದಿರಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ರಾಜ್ಯಾದ್ಯಂತ 550 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನಾಳೆ ಸಂಜೆ 6 ಗಂಟೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.   ಚಿತ್ರ ಪ್ರದರ್ಶಕರರು ನಟ ಪುನೀತ್ ರಾಜ್ ಕುಮಾರ್ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಗೀತಾಂಜಲಿ, ಪುಷ್ಪಾಂಜಲಿ, ದೀಪಾಂಜಲಿ ಮೂಲಕ ನಮನ ಸಲ್ಲಿಸಲಾಗಿದೆ.ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ರಚಿಸಿದ ಹಾಡಿನ ಮೂಲಕ ನಟ …

Read More »

ಟೂರಿಸ್ಟ್ ಸೀಸನ್ ಚಾರ್ಟರ್ಡ್ ವಿಮಾನವನ್ನು ಡಿಸೆಂಬರ್ 13 ಗೆ ಗೋವಾ ಸ್ವಾಗತಿಸಲು ತಯಾರಿ

ಗೋವಾ: ಸುಮಾರು ಒಂದು ವರ್ಷದ ನಂತರ, ಈ ಋತುವಿನ ಮೊದಲ ಚಾರ್ಟರ್ಡ್ ಫ್ಲೈಟ್ ಡಿಸೆಂಬರ್ 13 ರಂದು ಯುಕೆ ನಿಂದ ಗೋವಾಕ್ಕೆ ಆಗಮಿಸಲಿದೆ, ಇದು ಕೋವಿಡ್ -19 ಏಕಾಏಕಿ ನಂತರ ಅಂತರಾಷ್ಟ್ರೀಯ ಪ್ರವಾಸೋದ್ಯಮ ವಲಯದಲ್ಲಿ ವಿರಾಮವನ್ನು ಕೊನೆಗೊಳಿಸುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.   ಡಿಸೆಂಬರ್‌ನಿಂದ ಯುಕೆಯಿಂದ ಪ್ರತಿ ವಾರ ನಾಲ್ಕು ಚಾರ್ಟರ್ಡ್ ವಿಮಾನಗಳು, ಗ್ಯಾಟ್‌ವಿಕ್ ಮತ್ತು ಮ್ಯಾಂಚೆಸ್ಟರ್ ಏರ್‌ಪೋರ್ಟ್‌ಗಳಿಂದ ತಲಾ ಎರಡು ವಿಮಾನಗಳು ಗೋವಾಕ್ಕೆ ಹಾರಲಿವೆ ಎಂದು ಗೋವಾದ …

Read More »

ಡಾ.ರಾಜ್ ಕುಟುಂಬದ ವೈದ್ಯ ಡಾ.ರಮಣರಾವ್ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್

ಬೆಂಗಳೂರು, ನ.6- ಪುನೀತ್ ರಾಜ್‍ಕುಮಾರ್ ಅವರ ಸಾವಿಗೆ ವೈದ್ಯರ ಎಡವಟ್ಟೇ ಕಾರಣ ಎಂದು ಕೆಲವರು ಪೊಲೀಸರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಡಾ.ರಾಜ್ ಕುಟುಂಬದ ವೈದ್ಯ ಡಾ.ರಮಣರಾವ್ ಅವರ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸದಾಶಿವನಗರದಲ್ಲಿರುವ ಅವರ ನಿವಾಸದ ಬಳಿ ಇರುವ ವೈದ್ಯ ರಮಣರಾವ್ ಅವರ ಮನೆ ಮತ್ತು ಕ್ಲಿನಿಕ್ ಬಳಿ ಹೆಚ್ಚಿನ ಭದ್ರತೆಯನ್ನು ಕಲ್ಪಿಸಲಾಗಿದೆ. ಈಗಾಗಲೇ ಕೆಲ ಅಭಿಮಾನಿಗಳು ವೈದ್ಯರನ್ನು ಬಂಸಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಪ್ರತಿಭಟನೆಗಳು ಕೂಡ …

Read More »

ಹಾನಗಲ್ ಉಪ ಚುನಾವಣೆ ಫಲಿತಾಂಶದ ಹಿನ್ನೆಲೆ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಇನ್ನೂ ಆರು ತಿಂಗಳ ಕಾಲ ಮುಂದೂಡಲು ಯತ್ನ

ಬೆಂಗಳೂರು: ಹಾನಗಲ್ ಮತ್ತು ಸಿಂದಗಿ ಉಪ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಯಾವುದೇ ಚುನಾವಣೆ ನಡೆಸಲು ಆಸಕ್ತಿ ತೋರುತ್ತಿಲ್ಲ. ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಇನ್ನೂ ಆರು ತಿಂಗಳ ಕಾಲ ಮುಂದೂಡಲು ಯತ್ನಿಸುತ್ತಿದೆ. ಆಡಳಿತಾಧಿಕಾರಿಗಳ ಅವಧಿಯನ್ನು ಇನ್ನೂ ಆರು ತಿಂಗಳಿಗೆ ವಿಸ್ತರಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿದೆ. ಉಪ ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಸರ್ಕಾರ ಚುನಾವಣೆ ನಡೆಸಲು ಆಸಕ್ತಿ ತೋರಿಸುತ್ತಿಲ್ಲ ಎಂದು …

Read More »

ಬಾಡಿಗೆ ಹಣ ಖರ್ಚು ಮಾಡಿದ್ದಕ್ಕೆ ಪತ್ನಿಯ ಕೊಲೆ ಮಾಡಿದ ಪತಿ

ಪತ್ನಿ ಬಾಡಿಗೆ ನೀಡಲು ಎತ್ತಿಟ್ಟಿದ್ದ ಹಣ ಖರ್ಚು ಮಾಡಿದ್ದಾಳೆಂದು ಪತಿರಾಯ ತನ್ನ ಪತ್ನಿಯನ್ನೇ ಕೊಲೆಮಾಡಿದ್ದಾನೆ. ಘಟನೆ ಬೆಂಗಳೂರಿನ ದಯಾನಂದ ನಗರದಲ್ಲಿ ನಡೆದಿದೆ. ಪತಿ ಫಾರೂಕ್ ಆಗಿದ್ದು, ಪತ್ನಿ ನಾಜೀಯ ಕೊಲೆಯಾಗಿರುವ ದುರ್ದೈವಿಯಾಗಿದ್ದಾರೆ. ಪತ್ನಿ 6500ರೂ ಹಣದಲ್ಲಿ ಡ್ಯೂಪ್ಲಿಕೇಟ್ ಜ್ಯುವೆಲರಿ ಖರೀದಿಸಿದ್ದು, ಬಾಡಿಗೆಗೆ ಎಂದು ನೀಡಿದ್ದ ಹಣ ಖರ್ಚು ಮಾಡಿಕೊಂಡಿದ್ದಾಳೆ. ಬಳಿಕ ಬಾಡಿಗೆ ಹಣ ನೀಡುವಂತೆ ಪತಿ ತಿಳಿಸಿದಾಗ ವಿಚಾರ ಬಯಲಾಗಿದೆ. ನಂತರ ಕೋಪಗೊಂಡ ಫಾರೂಕ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ, …

Read More »

SBI ಗ್ರಾಹಕರಿಗೆ ಗುಡ್ ನ್ಯೂಸ್! ಉಚಿತವಾಗಿ ಸಿಗಲಿದೆ 2 ಲಕ್ಷ ರೂ., ಕೂಡಲೇ ಈ ಕೆಲಸ ಮಾಡಿ

ನವದೆಹಲಿ : ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್‌ಬಿಐ (SBI) ಗ್ರಾಹಕರಿಗೆ ಸಿಹಿ ಸುದ್ದಿ ಇದೆ. ಎಸ್‌ಬಿಐ ತನ್ನ ಗ್ರಾಹಕರಿಗೆ 2 ಲಕ್ಷ ರೂಪಾಯಿಗಳ ಉಚಿತ ಪ್ರಯೋಜನವನ್ನು ನೀಡುತ್ತಿದೆ. ರುಪೇ ಡೆಬಿಟ್ ಕಾರ್ಡ್‌ಗಳನ್ನು ಬಳಸುವ ಎಲ್ಲಾ ಜನ್-ಧನ್ ಖಾತೆದಾರರಿಗೆ ರೂ 2 ಲಕ್ಷದವರೆಗೆ ಉಚಿತ ಆಕ್ಸಿಡೆಂಟಲ್ ಕವರ್ ಅನ್ನು ನೀಡುತ್ತಿದೆ.   ಈ ರೀತಿ ನಿಮಗೆ 2 ಲಕ್ಷ ಕವರ್ ಸಿಗುತ್ತದೆ ಗ್ರಾಹಕರಿಗೆ ಅವರ ಜನ್ ಧನ್ ಖಾತೆಯನ್ನು ತೆರೆಯುವ ಅವಧಿಗೆ …

Read More »