Breaking News

ರಾಜ್ಯ

ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಶಿರೋಳ ಗ್ರಾಮಕ್ಕೆ ಬಂತು ಸಾರಿಗೆ ಬಸ್ !

ಮುದ್ದೇಬಿಹಾಳ: ಕೊನೆಗೂ ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ಮೊದಲ ಬಾರಿಗೆ ಪಟ್ಟಣದಿಂದ 3-4 ಕಿಮಿ ಅಂತರದಲ್ಲಿರುವ ಶಿರೋಳ ಗ್ರಾಮಕ್ಕೆ ಸೋಮವಾರ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಬಂದಿದ್ದು ಗ್ರಾಮಸ್ಥರಲ್ಲಿ ಹರ್ಷದ ಹೊನಲು ಹರಿಯುವಂತೆ ಮಾಡಿದೆ.   ಶನಿವಾರ ನಡೆದಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಬಸ್ ಸೌಲಭ್ಯ ಇಲ್ಲದಿರುವ ಕುರಿತು ತಾಲೂಕಾಡಳಿತದ ಮುಖ್ಯಸ್ಥರಾದ ತಹಶೀಲ್ದಾರ್ ಬಿ.ಎಸ್.ಕಡಕಭಾವಿ ಅವರ ಗಮನ ಸೆಳೆದಿದ್ದರು. ಸಭೆಯಲ್ಲಿ ಭರವಸೆ ನೀಡಿದಂತೆ ತಹಶೀಲ್ದಾರ್ …

Read More »

7 I.A.S.ಅಧಿಕಾರಿಗಳ ವರ್ಗಾವಣೆ ಮಾಡಿದ ಸರ್ಕಾರ

ಬೆಂಗಳೂರು: ಏಳು ಐಎಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ನೂತನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಮಹಾಂತೇಶ್‌ ಬೀಳಗಿ ಅವರನ್ನು ನೇಮಿಸಿದೆ. ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಪಿ.ರಾಜೇಂದ್ರ ಚೋಳನ್‌ ಅವರನ್ನು ಬೆಂಗಳೂರು ಸ್ಮಾರ್ಟ್‌ ಸಿಟಿ ಲಿ., ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾವಣೆ ಆಗಿದ್ದಾರೆ.   ಕೆ. ಶ್ರೀನಿವಾಸ್‌ ಅವರನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಬಿಬಿಎಂಪಿ ವಿಶೇಷ ಆಯುಕ್ತೆ (ಹಣಕಾಸು) ಆಗಿದ್ದ ತುಳಸಿ ಮದ್ದಿನೇನಿ …

Read More »

ಅಕ್ರಮ ಅಕ್ಕಿ ಸಾಗಾಟ ; ಅಧಿಕಾರಿಗಳ ತಪಾಸಣೆ; ಚಾಲಕನ ಬಂಧನ

ಕುಳಗೇರಿ ಕ್ರಾಸ್ : ಸರಕಾರದ ವಿವಿಧ ಯೋಜನೆಗಳಲ್ಲಿ ಉಚಿತವಾಗಿ ಫಲಾನುಭವಿಗಳಿಗೆ ವಿತರಣೆ ಮಾಡುತ್ತಿದ್ದ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಅಕ್ರಮ ಅಕ್ಕಿ ಸಾಗಾಣಿಕೆ ಮಾಡುತ್ತಿದ್ದ, ವಾಹನವನ್ನು ಅಧಿಕಾರಿಗಳು ತಪಾಸಣೆ ಮಾಡಿದ್ದು, ಚಾಲಕನನ್ನು ಹಿಡಿದು ಬಂಧಿಸಿದ ಘಟನೆ ಬಾದಾಮಿ ತಾಲೂಕಿನ ರೇಲ್ವೆ ಸ್ಟೇಶನ್ ಗ್ರಾಮದ ಹತ್ತಿರ ನಡೆದಿದೆ.   ಬಾದಾಮಿಯಿಂದ ಬಾಗಲಕೋಟೆ ಕಡೆಗೆ ಹೊರಟಿದ್ದ ಅಶೋಕ ಲೇಲ್ಯಾಂಡ್ ವಾಹನದಲ್ಲಿ ಸರಕಾರದ ಅನುಮತಿ ಇಲ್ಲದೇ ರೂ.೨೩೧೦೦ ಮೌಲ್ಯದ ೧೦೫೦ …

Read More »

ರಿಟರ್ನ್ ಗಿಫ್ಟ್’ ನೀಡಿದ ಪ್ರಕೃತಿ, ಮುಂಬೈ ಬೀಚ್​ ನೋಡಿದ್ರೆ ಗೊತ್ತಾಗುತ್ತೆ!

ಮಾನವನ ದುರಾಸೆಯಿಂದ ಪ್ರಕೃತಿ ನಶಿಸುತ್ತಿದೆ. ಮರಗಳನ್ನು ಕಡಿದು ನಗರ ನಿರ್ಮಾಣ, ತ್ಯಾಜ್ಯವನ್ನು ಬಯಲು ಪ್ರದೇಶ, ಸಮುದ್ರಕ್ಕೆಸೆದು ಸುಂದರ ಪರಿಸರ ವ್ಯವಸ್ಥೆಯನ್ನೇ ಹಾಳು ಮಾಡಲಾಗುತ್ತಿದೆ. ಹೀಗೆ ಮಾಡಿದ ಮನುಷ್ಯನಿಗೆ ಅದೇ ಪ್ರಕೃತಿ ಪ್ರತಿಯಾಗಿ ನೀಡಿದ ಕೊಡುಗೆಯನ್ನು ಮುಂಬೈ ಬೀಚ್‌ನಲ್ಲಿ ಕಾಣಬಹುದು!.   ಅರಬ್ಬಿ ಸಮುದ್ರದ ದಡದಲ್ಲಿರುವ ಮುಂಬೈ ನಗರಿಗೆ ನಿಸರ್ಗ ತನ್ನದೇ ಆದ ರೀತಿಯಲ್ಲಿ ಕೊಟ್ಟಿರುವ ಎಚ್ಚರಿಕೆ ಇದು. ಸಾವಿರಾರು ಟನ್‌ಗಟ್ಟಲೆ ಪ್ರಮಾಣದಲ್ಲಿ ಬಿಸಾಡಲಾಗಿದ್ದ ತ್ಯಾಜ್ಯವನ್ನು ಸಮುದ್ರ ವಾಪಸ್​ ತಂದು ಮಾಹಿಮ್​ …

Read More »

ಸಿ.ಟಿ ರವಿ ಅವರಿಗೆ ಹುಟುಹಬ್ಬದ ಶುಭಾಶಯ ಕೋರಿ ಅಳವಡಿಸಿದ್ದ ಬ್ಯಾನರ್ ಹರಿದು ಹಾಕಿ ಕಾಂಗ್ರೆಸ್ ನಾಯಕಿ ಬಿಂದು ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದ ಮುಂದೆ ಸಿ.ಟಿ ರವಿ ಅವರಿಗೆ ಹುಟುಹಬ್ಬದ ಶುಭಾಶಯ ಕೋರಿ ಅಳವಡಿಸಿದ್ದ ಬ್ಯಾನರ್ ಹರಿದು ಹಾಕಿ ಕಾಂಗ್ರೆಸ್ ನಾಯಕಿ ಬಿಂದು ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು: ವಿಧಾನಸೌಧದ ಬಳಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರಿಗೆ ಹುಟುಹಬ್ಬದ ಶುಭಾಶಯ ಕೋರಿ ಅಳವಡಿಸಿದ್ದ ಬ್ಯಾನರ್ ಹರಿದು ಹಾಕಿ ಕಾಂಗ್ರೆಸ್ ನಾಯಕಿ ಬಿಂದು ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.   ವಿಧಾನಸೌಧದ ಮುಂಭಾಗದಲ್ಲಿ ಸಿ.ಟಿ. ರವಿ ಬರ್ತ್ ಡೇ ಫ್ಲೆಕ್ಸ್ ಹರಿದ ಬಿಂದು …

Read More »

ರಾಷ್ಟ್ರಪತಿ ಚುನಾವಣೆ ಮತಮೌಲ್ಯದ ಲೆಕ್ಕಾಚಾರವೇನು? ಇಲ್ಲಿದೆ ಮಾಹಿತಿ

ರಾಷ್ಟ್ರಪತಿ ಚುನಾವಣಾ ಪ್ರಕ್ರಿಯೆಯು ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಗಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಈ ಪ್ರಕ್ರಿಯೆಯಲ್ಲಿ, ಲೋಕಸಭೆ ಮತ್ತು ರಾಜ್ಯಸಭೆಯ ಚುನಾಯಿತ ಪ್ರತಿನಿಧಿಗಳು ಹಾಗೂ ಎಲ್ಲ ರಾಜ್ಯಗಳ ವಿಧಾನಸಭೆಗಳ ಸದಸ್ಯರು ರಾಷ್ಟ್ರಪತಿ ಚುನಾವಣೆಯ ಮತದಾರರಾಗಿರುತ್ತಾರೆ. ಆದರೆ, ರಾಷ್ಟ್ರಪತಿ ಅವರು ನಾಮನಿರ್ದೇಶನ ಮಾಡಿದ ರಾಜ್ಯಸಭೆಯ ಸದಸ್ಯರಿಗೆ ಮತದಾನದ ಹಕ್ಕು ಇರುವುದಿಲ್ಲ. ಒಬ್ಬ ಜನಪ್ರತಿನಿಧಿ ಚಲಾಯಿಸುವ ಮತವನ್ನು ಒಂದು ಮತ ಎಂದು ಪರಿಗಣಿಸಲಾಗುವುದಿಲ್ಲ. ಬದಲಾಗಿ, ಆಯಾ ರಾಜ್ಯಗಳ ಜನಸಂಖ್ಯೆಯ ಆಧಾರದ ಮೇಲೆ ಅಲ್ಲಿನ ಶಾಸಕನ …

Read More »

ಅಕ್ರಮ‌ ಸಂಬಂಧಕ್ಕೆ ಅಡ್ಡಿಯಾದ ಪತಿ ಪರಲೋಕಕ್ಕೆ ಕಳುಹಿಸಿದ ಪತ್ನಿ!

ಕಲಬುರಗಿ: ಎರಡು ತಿಂಗಳ ಹಿಂದೆ ನಡೆದ ವ್ಯಕ್ತಿಯೊಬ್ಬರ ಕೊಲೆ ಕೇಸನ್ನು ಪೊಲೀಸರು ಭೇದಿಸಿದ್ದಾರೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದನೆಂದು ಪತ್ನಿಯೇ ಪತಿಯನ್ನು ಕೊಲೆ ಮಾಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಪತ್ನಿ ಮಹಾದೇವಿ, ಸಂತೋಷ್ ಬಿರಾದಾರ್, ಸತೀಶ್​ರನ್ನು ಬಂಧಿಸಲಾಗಿದೆ. ಘಟನೆ ಏನು?: ಮೇ 15 ರಂದು ಜಿಲ್ಲೆಯ ಅಫಜಲಪುರ ತಾಲೂಕಿನ ಕೇಶ್ವಾಪುರ ಗ್ರಾಮದ ಬಳಿ ಜಮೀನುವೊಂದರಲ್ಲಿ ಗುರುಪ್ಪ ಎಂಬಾತನ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೇ, ಪತ್ನಿಯ ವಿರುದ್ಧವೇ ಕುಟುಂಬಸ್ಥರು …

Read More »

ಡಿಕೆಶಿ-‌ಜಿಟಿಡಿ ಗುಸುಗುಸು: ವಿಧಾನಸೌಧ ಮೊಗಸಾಲೆಯಲ್ಲಿ ಕುತೂಹಲ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರ ನಡುವಿನ ಗುಸುಗುಸು ಮಾತುಕತೆಯು ವಿಧಾನಸೌಧ ಮೊಗಸಾಲೆಯಲ್ಲಿ ನೋಡಿದವರ ಕುತೂಹಲ ಕೆರಳಿಸಿತು. ರಾಷ್ಟ್ರಪತಿ ಚುನಾವಣೆಗಾಗಿ‌ ಮತ ಚಲಾಯಿಸಿ ಹೊರ ಬಂದ ಜಿ.ಟಿ.ದೇವೇಡರಿಗೆ ಮೊಗಸಾಲೆಯಲ್ಲಿ ಡಿಕೆಶಿ‌ ಎದುರಾದರು.   ಡಿಕೆಶಿ ಅವರು‌ ಹೆಗಲ ಮೇಲೆ‌ ಕೈ ಹಾಕುತ್ತಿದ್ದಂತೆ‌ ಜಿಟಿಡಿ ಏನೋ ಮಾತನಾಡಲು ಬಯಸಿದರು. ತಕ್ಷಣವೇ‌ ಜಿಟಿಡಿ ಅವರನ್ನು ಡಿಕೆಶಿ ಪಕ್ಕಕ್ಕೆ ಕರೆದುಕೊಂಡು ಹೋಗಿ ಕೆಲ ದನಿಯಲ್ಲಿ ಒಂದು ನಿಮಿಷ ಮಾತನಾಡಿದರು. ಇದಾದ ಬಳಿಕ …

Read More »

ಕೇಸರಿ ಶಾಲನ್ನು ಬೈರತಿ ಹೆಗಲಿಗೆ,ಮೂವರ ಮಧ್ಯೆ ಸಿಕ್ಕಿ ಒದ್ದಾಡಿದ ಬೈರತಿ ಸುರೇಶ್!

ಬೆಂಗಳೂರು: ರಾಷ್ಟ್ರಪತಿ ಚುನಾವಣೆಗೆ ಮತದಾನ ಮಾಡುವ ಮುನ್ನ ಬಿಜೆಪಿ ಶಾಸಕ ರಾಜುಗೌಡ, ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಔಪಚಾರಿಕವಾಗಿ ಮಾತುಕತೆ ನಡೆಸಿದರು. ಈ ವೇಳೆ ಮಾಧ್ಯಮದವರ ಕಣ್ಣು ಮತ್ತು ಕ್ಯಾಮರಾ ಅವರತ್ತ ಹೊರಳಿದವು. ಇಷ್ಟಾಗಿದ್ದೇ ತಡ ರಾಜುಗೌಡ ಅವರು ಬೈರತಿ ಹೆಗಲ ಮೇಲೆ ಕೈಹಾಕಿ ಗಟ್ಟಿಯಾಗಿ ಹಿಡಿದು ಫೋಟೋಗೆ ಪೋಸ್ ಕೊಟ್ಟರು. ರಾಜುಗೌಡರು ಇಷ್ಟಕ್ಕೆ ಸುಮ್ಮನಾಗದೆ ತನ್ನ ಹೆಗಲ ಮೇಲಿನ ಕೇಸರಿ ಶಾಲನ್ನು ಬೈರತಿ ಹೆಗಲಿಗೆ ಹಾಕುತ್ತಿದ್ದಂತೆ ಮಾಧ್ಯಮದವರು ಮುಗಿಬಿದ್ದು ಚಿತ್ರೀಕರಿಸಿದರು. …

Read More »

ವ್ಹೀಲ್‌ ಚೇರ್‌ ನಲ್ಲಿ ಬಂದು ಮತ ಚಲಾಯಿಸಿದ ದೇವೇಗೌಡರು

ರಾಷ್ಟ್ರಪತಿ ಚುನಾವಣೆಗೆ ಇಂದು ಮತದಾನ ನಡೆದಿದ್ದು, ರಾಜ್ಯದಿಂದ 224 ಶಾಸಕರು ಹಾಗೂ ಒಬ್ಬರು ರಾಜ್ಯಸಭಾ ಸದಸ್ಯರು ಮತ್ತು ಒಬ್ಬರು ಲೋಕಸಭಾ ಸದಸ್ಯರು ಸೇರಿ ಒಟ್ಟು 226 ಮತದಾರರು ಮತದಾನ ಮಾಡಿದ್ದಾರೆ. ರಾಜ್ಯದ ಇತರೆ ಲೋಕಸಭಾ ಸದಸ್ಯರುಗಳು ಅಧಿವೇಶನದ ಹಿನ್ನಲೆಯಲ್ಲಿ ನವದೆಹಲಿಯಲ್ಲಿದ್ದು, ಅಲ್ಲಿಯೇ ತಮ್ಮ ಮತ ಹಕ್ಕನ್ನು ಚಲಾಯಿಸಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ವ್ಹೀಲ್‌ ಚೇರ್‌ ಮೂಲಕ ವಿಧಾನಸೌಧಕ್ಕೆ ಬಂದು ತಮ್ಮ ಮತ ಚಲಾಯಿಸಿದ್ದಾರೆ.

Read More »