Breaking News

ರಾಜ್ಯ

ಅದ್ದೂರಿಯಾಗಿ ನೆನವೆರಿತು ಬೀಷ್ಠಾದೇವಿ ಜಾತ್ರಾ ಮಹೋತ್ಸವ..!!

ಬೆಳಗಾವಿ :   ವಿಜಯದಶಮಿ ದಿನ ಬೆಳಗಾವಿಯ ಬುರುಡ ಗಲ್ಲಿಯಲ್ಲಿ ಆಯೋಸಿದ್ದ ಭಿಷ್ಠಾದೇವಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೆರಿತು.ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು.    ಬೆಳಗಾವಿ ನಗರದಲ್ಲೇ ಅತಿ ವಿಜೃಂಭಣೆಯಿಂದ ಆಚರಿಸುವ ಶ್ರೀ ಭಿಷ್ಠಾದೇವಿ ದಸರಾ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.ಕೋರೊನಾ ಕಾಲದಲ್ಲಿ ಸರಳವಾಗಿ ಆಚರಿಸಲ್ಪಟ್ಟಿದ್ದರಿಂದ ಈ ವರ್ಷ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ಕೈಗೊಳ್ಳಲಾಗಿತ್ತು.ನವರಾತ್ರಿ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೆರಿಸಿ ವಿಜಯದಶಮಿ ದಿನ ಮಹಾಪೂಜೆ …

Read More »

ಸಂಚಾರಿ ಪಶು ಚಿಕಿತ್ಸಾಲಯ ವಾಹನಕ್ಕೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ

  ಗೋಕಾಕ*: ರೈತರ ಜಾನುವಾರುಗಳು ಅನಾರೋಗ್ಯಕ್ಕೀಡಾದಾಗ ರೈತರು ಟೋಲ್ ಫ್ರೀ 1962 ಕ್ಕೆ ಕರೆ ಮಾಡಿದಲ್ಲಿ ಸಂಚಾರಿ ಪಶು ಚಿಕಿತ್ಸಾಲಯ ವಾಹನ ರೈತರ ಮನೆ ಬಾಗಿಲಿಗೆ ತೆರಳಿ ಜಾನುವಾರುಗಳಿಗೆ ತುರ್ತು ಚಿಕಿತ್ಸೆ ನೀಡಲಿದೆ ಎಂದು ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಮ್ಮ ಗೃಹ ಕಛೇರಿಯಲ್ಲಿ ಪಶು ಪಾಲನಾ ಇಲಾಖೆಯಿಂದ ಸಂಚಾರಿ ಪಶು ಚಿಕಿತ್ಸಾ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತರ ಜಾನುವಾರುಗಳ ಆರೋಗ್ಯ ರಕ್ಷಣೆಗಾಗಿ …

Read More »

ಡಿವೋರ್ಸ್‌ ವಾಪಸ್:‌ ದಾಂಪತ್ಯ ಜೀವನ ಮುಂದುವರೆಸಲು ನಟ ಧನುಷ್ & ಐಶ್ವರ್ಯಾ ರಜನಿಕಾಂತ್ ನಿರ್ಧಾರ!

ಚೆನ್ನೈ: ಸುಮಾರು ಒಂಬತ್ತು ತಿಂಗಳ ಹಿಂದೆ ಬೇರ್ಪಟ್ಟ ಖ್ಯಾತ ತಮಿಳು ನಟ ಧನುಷ್(Dhanush) ಮತ್ತು ಐಶ್ವರ್ಯಾ ರಜನಿಕಾಂತ್(Aishwaryaa Rajinikanth) ತಮ್ಮ ವಿಚ್ಛೇದನವನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಧನುಷ್ ಹಾಗೂ ಐಶ್ವರ್ಯಾ ಒಟ್ಟಿಗೆ ಇರಲು ಅವರನ್ನು ಮನವೊಲಿಸಲು ಅವರ ಕುಟುಂಬಗಳು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಆದ್ರೆ, ಈ ಬಗ್ಗೆ ಧನುಷ್ ಅಥವಾ ಐಶ್ವರ್ಯ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಸೂಪರ್‌ಸ್ಟಾರ್ ರಜನಿಕಾಂತ್ ಅವರ ಮಗಳು ಐಶ್ವರ್ಯ ಅವರು 2004 ರಲ್ಲಿ …

Read More »

B.S.Y.ಇಲ್ಲ ಅಂದ್ರೆ ಬಿಜೆಪಿ ಇಲ್ಲ: ಚೆಲುವರಾಯಸ್ವಾಮಿ

ಮಂಡ್ಯ: ಬಿಜೆಪಿಯಲ್ಲಿ ನೂರು ಬಾಗಿಲು, ನಮ್ಮಲ್ಲಿ ಒಂದೇ ಬಾಗಿಲು. ಯಡಿಯೂರಪ್ಪ ಇಲ್ಲ ಅಂದ್ರೆ ಬಿಜೆಪಿ ಇಲ್ಲ. ಅಧಿಕಾರದ ದರ್ಪದಲ್ಲಿ ಬಿಜೆಪಿಯವ್ರು ಮಾತಾಡುತ್ತಿದ್ದಾರೆ ಅಷ್ಟೇ ಎಂದು ಮಾಜಿ ಸಂಸದ ಚೆಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.     ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆ ಉತ್ಸಾಹದಿಂದ ಸಾಗುತ್ತಿದೆ. ಸೋನಿಯಾ ಗಾಂಧಿ ಯವರು ಭಾಗವಹಿಸ್ತಿರೋದು ನಮಗೆಲ್ಲ ಹೆಮ್ಮೆ. ಅಧಿಕಾರಕ್ಕಿಂತ ಹೆಚ್ಚಾಗಿ ಪ್ರಜಾಪ್ರಭುತ್ವ ಗಟ್ಟಿ ಮಾಡಲು ರಾಹುಲ್ ಗಾಂಧಿ ಈ ಯಾತ್ರೆ ಮಾಡುತ್ತಿದ್ದಾರೆ ಎಂದರು.

Read More »

ಸರ್ಕಾರ, ಪೊಲೀಸರು, ಸೈನಿಕರಿಂದ ಮಾತ್ರ ಹಿಂದೂ ಧರ್ಮದ ರಕ್ಷಣೆ ಸಾಧ್ಯವಿಲ್ಲ.:ಗೋಪಾಲ್ ನಾಗರಕಟ್ಟೆ

ಬೆಳಗಾವಿ: ಸರ್ಕಾರ, ಪೊಲೀಸರು, ಸೈನಿಕರಿಂದ ಮಾತ್ರ ಹಿಂದೂ ಧರ್ಮದ ರಕ್ಷಣೆ ಸಾಧ್ಯವಿಲ್ಲ. ಹಿಂದೂ ಸಮಾಜದಲ್ಲಿ ಪರಾಕ್ರಮ ಜಾಗೃತಗೊಳಿಸಬೇಕಿದೆ ಎಂದು ವಿಹೆಚ್‌ಪಿ ಮುಖಂಡ, ಅಯೋಧ್ಯೆ ರಾಮಮಂದಿರ ನಿರ್ಮಾಣದ ಉಸ್ತುವಾರಿ ಗೋಪಾಲ್ ನಾಗರಕಟ್ಟೆ ಹೇಳಿದರು. ನಗರದಲ್ಲಿ ಆಯುಧ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಪರಾಕ್ರಮ ಮುಖ್ಯವಾಗಿದೆ. ನಾವು ಪರಾಕ್ರಮ ಆರಾಧನೆ ಮಾಡಿದ್ದೇವೆ. ಕೆಲವು ವರ್ಷಗಳ ಕಾಲ ಕೆಲವರು ಶಾಂತಿ – ಶಾಂತಿ ಎಂದು ಹೇಳಿದರು. ಸದ್ಯ ದೇಶದಲ್ಲಿ …

Read More »

ಪಂಚಮಸಾಲಿ ಸಮಾಜದ 2ಎ ಮೀಸಲಾತಿಗೆ ಸಂಪೂರ್ಣ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

  ಮೂಡಲಗಿ : ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪಂಚಮಸಾಲಿ ಸಮಾಜದ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಕೂಡಲ ಸಂಗಮ ಪೀಠದ ಜಗದ್ಗುರು ಜಯ ಮೃತ್ಯುಂಜಯ ಸ್ವಾಮಿಗಳೊಂದಿಗೆ ಮಂಗಳವಾರ ರಾತ್ರಿ …

Read More »

ಶುಕ್ರವಾರ ರಾಜ್ಯ ಬಿಜೆಪಿ ಕಾರ್ಯಕಾರಿಣಿ: ಸಿಎಂ ರಾಜ್ಯ ಪ್ರವಾಸಕ್ಕೆ ನಿಗದಿಯಾಗುವುದೇ ಮುಹೂರ್ತ?

ಬೆಂಗಳೂರು : ದಸರಾ ಮುಕ್ತಾಯದ ಬೆನ್ನಲ್ಲೇ ಸಾಲು ಸಾಲು ರಾಜಕೀಯ ಚಟುವಟಿಕೆಗಳು ಗರಿಗೆದರುವುದಕ್ಕೆ ರಾಜ್ಯ ಬಿಜೆಪಿಯಲ್ಲಿ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಶುಕ್ರವಾರ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕಾರಿಣಿಯಲ್ಲಿ ದಿನಾಂಕ ನಿಗದಿಯಾಗಲಿದೆ.   ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಗುರುವಾರ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಲಿದ್ದು, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ಸಿಎಂ ಬಸವರಾಜ್ ಬೊಮ್ಮಾಯಿ, ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಮುಂಚೂಣಿ ನಾಯಕರು ಭಾಗಿಯಾಗಲಿದ್ದಾರೆ. ಈ ಸಭೆಯಲ್ಲಿ …

Read More »

ಸಿಇಟಿ ಕೋಟಾ ಸೀಟು ಆಕಾಂಕ್ಷಿಗಳಿಗೆ ನಿರಾಸೆ

ಬೆಂಗಳೂರು: ಎಂಜಿನಿಯರಿಂಗ್‌ ಸೇರಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಈಗಾಗಲೇ ವಿಳಂಬ ಮಾಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಈಗ ಸೀಟು ಹಂಚಿಕೆ ಯಲ್ಲಿಯೂ ವಿಳಂಬ ನೀತಿ ಅನುಸರಿಸುವ ಮೂಲಕ ಬಡ ವಿದ್ಯಾರ್ಥಿಗಳ ಸರಕಾರಿ ಕೋಟ ಸೀಟು ದೊರೆಯದಂತೆಯೂ ನಿರಾಸೆ ಮೂಡಿಸಿದೆ.   ಸುಮಾರು 10 ದಿನಗಳ ಮೊದಲೇ ಕಾಮೆಡ್‌-ಕೆ ಸೀಟುಗಳ ಹಂಚಿಕೆ ವೇಳಾಪಟ್ಟಿಯನ್ನು ಕಾಮೆಡ್‌-ಕೆ ಪ್ರಕಟಿಸಿದ್ದು ಇದಕ್ಕೂ ಮೊದಲೇ ಸಿಇಟಿ ಕೌನ್ಸೆಲಿಂಗ್‌ ಪ್ರಕ್ರಿಯೆ ನಡೆಸಬಹುದಿತ್ತು. ಆದರೂ ಕಾಮೆಡ್‌-ಕೆ ಬಳಿಕ ಸೀಟು …

Read More »

ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ-

ಮೈಸೂರು: ವಿಶ್ವ ವಿಖ್ಯಾತ ದಸರಾ (Mysuru Dasara 2022) ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಜಂಬೂ ಸವಾರಿಯ ಪ್ರಮುಖ ಆಕರ್ಷಣೆ ಗಜ ಪಡೆಯ ಕ್ಯಾಪ್ಟನ್ ಅಭಿಮನ್ಯು (Abhimanyu) ಕೂಡ ಅಂಬಾರಿ ಹೊರಲು ಫಿಟ್ ಆಗಿ ಸಿದ್ಧನಾಗಿದ್ದಾನೆ. ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಅಂಬಾರಿ ಹೊತ್ತು ರಾಜಮಾರ್ಗದಲ್ಲಿ ಸಾಗಲು ಗಜಪಡೆ ಸಿದ್ಧವಾಗಿದೆ. ಅರಮನೆ (Mysuru Palace) ಗೆ ಆಗಮಿಸಿದ್ದ ಗಜ ತಂಡದಲ್ಲಿ ಜಂಬೂ ಸವಾರಿಯಲ್ಲಿ ಭಾಗಿಯಾಗುತ್ತಿರೋದು 9 ಆನೆಗಳು ಮಾತ್ರ. ಈ …

Read More »

ರಾಮಾಯಣಕ್ಕೆ ಅಪಮಾನ: ‘ಆದಿಪುರುಷ್’ ತಂಡಕ್ಕೆ ಗೃಹ ಸಚಿವ ಎಚ್ಚರಿಕೆ

ಆದಿಪುರುಷ್’ ಟೀಸರ್ ಬಿಡುಗಡೆ ಮಾಡಿದ ಬೆನ್ನಲ್ಲೆ ಚಿತ್ರತಂಡ ತೀವ್ರ ಟ್ರೋಲಿಂಗ್ ಎದುರಿಸುತ್ತಿದೆ. ಕಳಪೆ ಮಟ್ಟದ ವಿಎಫ್‌ಎಕ್ಸ್‌ನಿಂದಾಗಿ ವಿಪರೀತ ಟ್ರೋಲ್ ಆಗಿರುವ ಜೊತೆಗೆ ರಾಮಾಯಣದ ಪಾತ್ರಗಳನ್ನು ತಮಗೆ ತೋಚಿದಂತೆ ಪ್ರೆಸೆಂಟ್ ಮಾಡಿರುವುದು ಸಹ ಆಕ್ರೋಶಕ್ಕೆ ಗುರಿಯಾಗಿದೆ.   ಕೆಲವು ಹಿಂದು ಸಂಘಟನೆಗಳು ಸಹ ‘ಆದಿಪುರುಷ್’ ಟೀಸರ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿವೆ. ಇದರ ಬೆನ್ನಲ್ಲೇ ಈಗ ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಸಹ ‘ಆದಿಪುರುಷ್’ ಟೀಸರ್ ಬಗ್ಗೆ ಕಣ್ಣು ಕೆಂಪಗೆ …

Read More »