Breaking News

ರಾಜ್ಯ

ಗ್ರಾಮೀಣ ಮಂಡಳದ ವಿವಿಧ ಸ್ಥಾನಗಳಿಗೆ ಪದಾಧಿಕಾರಿಗಳು ತಮ್ಮ ಸ್ಥಾನಗಳಿಗೆ ಬುಧವಾರ ಸಾಮೂಹಿಕವಾಗಿ ರಾಜೀನಾಮೆ ನೀಡುವ ಮೂಲಕ ಆಕ್ರೋಶ

ಬೆಳಗಾವಿ: ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯ ಮೂಲ ಕಾರ್ಯಕರ್ತರಿಗೆ ಟಿಕೆಟ್ ನೀಡದೇ ಹೊಸಬರಾಗಿರುವ ನಾಗೇಶ ಮನ್ನೋಳಕರಗೆ ಟಿಕೆಟ್ ಘೋಷಿಸಿದ್ದನ್ನು ಖಂಡಿಸಿ ಬಿಜೆಪಿಯ ಜಿಲ್ಲಾ ಹಾಗೂ ಗ್ರಾಮೀಣ ಮಂಡಳದ ವಿವಿಧ ಸ್ಥಾನಗಳಿಗೆ ಪದಾಧಿಕಾರಿಗಳು ತಮ್ಮ ಸ್ಥಾನಗಳಿಗೆ ಬುಧವಾರ ಸಾಮೂಹಿಕವಾಗಿ ರಾಜೀನಾಮೆ ನೀಡುವ ಮೂಲಕ ಆಕ್ರೋಶ ಹೊರ ಹಾಕಿದರು. ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಮಾಯಿಸಿದ್ದ ವಿವಿಧ ಮೋರ್ಚಾ, ಶಕ್ತಿ ಕೇಂದ್ರ, ಜಿಲ್ಲಾ ಮತ್ತು ಗ್ರಾಮೀಣ ಮಂಡಳ ಪದಾಧಿಕಾರಿಗಳು ತಮ್ಮ ರಾಜೀನಾಮೆ ಪತ್ರವನ್ನು ಕಚೇರಿಗೆ ನೀಡಿದ್ದಾರೆ. …

Read More »

ಅರವಿಂದ ಪಾಟೀಲ ಮುಂದಿನ ನಡೆ ಶುಕ್ರವಾರ

ಖಾನಾಪುರ: ಕ್ಷೇತ್ರದ ಸಹಕಾರ ಮತ್ತು ರಾಜಕೀಯ ರಂಗದ ಪರಿಣಿತರೊಂದಿಗೆ ಚರ್ಚಿಸಿದ ಬಳಿಕ ಸಂವಿಧಾನ ಶಿಲ್ಪಿಯ ಜಯಂತಿಯಂದು (ಏ.14) ತಮ್ಮ ಮುಂದಿನ ರಾಜಕೀಯ ನಡೆಯ ನಿರ್ಥಾರವನ್ನು ಪ್ರಕಟಿಸುವುದಾಗಿ ಮಾಜಿ ಶಾಸಕ ಅರವಿಂದ ಪಾಟೀಲ ಹೇಳಿದರು. ಬುಧವಾರ ಪಟ್ಟಣದಲ್ಲಿ ತಮ್ಮ ಬೆಂಬಲಿಗರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷ ತಮಗೆ ಟಿಕೆಟ್ ನೀಡದ್ದರಿಂದ ನಿರಾಸೆಯಾಗಿದೆ. ಇದರಿಂದ ಮನನೊಂದ ತಾವು ತಮ್ಮ ಮುಂದಿನ ರಾಜಕೀಯ ಭವಿಷ್ಯವನ್ನು ನಿರ್ಧರಿಸುವಲ್ಲಿ ಬೆಂಬಲಿಗರ ಹಾಗೂ ಅನುಯಾಯಿಗಳ ಅಭಿಪ್ರಾಯ …

Read More »

7 ಹಾಲಿ ಶಾಸಕರಿಗೆ ಟಿಕೆಟ್ ಇಲ್ಲ ಬುಧವಾರ ರಾತ್ರಿ ಬಿಡುಗಡೆಯಾಗಿದ್ದ ಬಿಜೆಪಿಯ 2ನೇ ಪಟ್ಟಿ

ನವದೆಹಲಿ: ಬಿಜೆಪಿಯ 2ನೇ ಪಟ್ಟಿ ಬುಧವಾರ ರಾತ್ರಿ ಬಿಡುಗಡೆಯಾಗಿದ್ದು, 23 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಇನ್ನೂ 12 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಬಾಕಿ ಇದೆ. 2ನೇ ಪಟ್ಟಿಯಲ್ಲಿ ಕಾಂಗ್ರೆಸ್ ನಿಂದ ಬಂದಿರುವ ನಾಗರಾಜ ಛಬ್ಬಿಗೆ ಟಿಕೆಟ್ ನೀಡಲಾಗಿದೆ. ಆದರೆ ಹುಬ್ಬಳ್ಳಿ ಸೆಂಟ್ರಲ್, ಶಿವಮೊಗ್ಗ, ಮಹಾದೇವಪುರ, ಗೋವಿಂದರಾಜನಗರ, ಹೆಬ್ಬಾಳ ಮೊದಲಾದ ಕ್ಷೇತ್ರಗಳ ಟಿಕೆಟ್ ಬಾಕಿ ಇದೆ. ಕಲಘಟಗಿ – ನಾಗರಾಜ ಛಬ್ಬಿ ದೇವರ ಹಿಪ್ಪರಗಿ – ಸೋಮನಗೌಡ ಪಾಟೀಲ ಬೀದರ್ – …

Read More »

ಹುಬ್ಬಳ್ಳಿ: ಟಿಕೇಟ್‌ ದೊರೆಯುವ ಭರವಸೆ ಇದೆ, ದೆಹಲಿಗೆ ಹೋಗುತ್ತೇನೆ ಎಂದ ಶೆಟ್ಟರ್‌

ಹುಬ್ಬಳ್ಳಿ : ನನ್ನ ಹೆಸರು ಮೊದಲ ಪಟ್ಟಿಯಲ್ಲಿ ಬರಬೇಕಿತ್ತು ಬಂದಿಲ್ಲ. ರಾಷ್ಟ್ರೀಯ ಅಧ್ಯಕ್ಷರು ಫೋನ್ ಮಾಡಿದ್ರು. ಹೀಗಾಗಿ ಇಂದು ದೆಹಲಿಗೆ ಹೋಗುತ್ತಿದ್ದೇನೆ . ಹೋಗಿ ಚರ್ಚೆ ಮಾಡುತ್ತೇನೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.   ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸಂಜೆ ಫೋನ್ ಮಾಡಿ ರಾಷ್ಟ್ರೀಯ ಅಧ್ಯಕ್ಷರು ಬನ್ನಿ ಎಂದಿದ್ದಾರೆ. ಹೀಗಾಗಿ ನಾನು ಹೋಗುತ್ತೇನೆ. ಏನು ಆಗುತ್ತದೆ ಎನ್ನುವುದನ್ನು ಈಗ ಚರ್ಚೆ ಮಾಡೋದು ಬೇಡ. ನಾನು …

Read More »

ಬ್ಯಾಂಕುಗಳು ನಗದು ಹಣ ಸಾಗಾಣಿಕೆ ಮಾಡುವ ಸಂದರ್ಭದಲ್ಲಿ ಕೀಮ್ ಆ್ಯಪ್ ನಲ್ಲಿ ಸಂಪೂರ್ಣ ವಿವರವನ್ನು ನಮೂದಿಸಿರಬೇಕು:ನಿತೇಶ್ ಪಾಟೀಲ

ಬೆಳಗಾವಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿಸಂಹಿತೆ ಜಾರಿಯಲ್ಲಿರುವುದಿಂದ ಎಲ್ಲೆಡೆ ತಪಾಸಣೆ ಮಾಡಲಾಗುತ್ತಿದೆ. ಆದ್ದರಿಂದ ಅನಗತ್ಯ ಗೊಂದಲವನ್ನು ತಡೆಗಟ್ಟಲು ಬ್ಯಾಂಕುಗಳು ನಗದು ಹಣ ಸಾಗಾಣಿಕೆ ಮಾಡುವ ಸಂದರ್ಭದಲ್ಲಿ ಕೀಮ್ ಆ್ಯಪ್ ನಲ್ಲಿ ಸಂಪೂರ್ಣ ವಿವರವನ್ನು ನಮೂದಿಸಿರಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದರು. ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೀಮ್ (KEEM) ಆ್ಯಪ್ ಕುರಿತು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ (ಏ.12) ನಡೆದ ಜಿಲ್ಲೆಯ ಬ್ಯಾಂಕರುಗಳ ಸಭೆಯ ಅಧ್ಯಕ್ಷತೆ …

Read More »

18 ವಿಧಾನ ಸಭಾ ಮತಕ್ಷೇತ್ರಗಳಿಗೆ 12 ಜನ ಚುನಾವಣಾ ವೆಚ್ಚ ವೀಕ್ಷಕರನ್ನು ಚುನಾವಣಾ ಆಯೋಗವು ನಿಯೋಜಿಸಿರುತ್ತದೆ

ಬೆಳಗಾವಿ: ಕರ್ನಾಟಕ ವಿಧಾನಸಭಾ ಚುನಾವಣೆ-2023 ರ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಒಟ್ಟು 18 ವಿಧಾನ ಸಭಾ ಮತಕ್ಷೇತ್ರಗಳಿಗೆ 12 ಜನ ಚುನಾವಣಾ ವೆಚ್ಚ ವೀಕ್ಷಕರನ್ನು ಚುನಾವಣಾ ಆಯೋಗವು ನಿಯೋಜಿಸಿರುತ್ತದೆ. ಭಾರತೀಯ ಕಂದಾಯ ಸೇವೆ(ಐ.ಆರ್.ಎಸ್)ಗೆ ಸೇರಿದ ಅಧಿಕಾರಿಗಳನ್ನು ಚುನಾವಣಾ ವೆಚ್ಚ ವೀಕ್ಷಕರಾಗಿ ನಿಯೋಜಿಸಲಾಗಿದೆ. ಹದಿನೆಂಟು ಕ್ಷೇತ್ರಗಳ ಪೈಕಿ ಕೆಲವು ಕಡೆ ಎರಡು ಕ್ಷೇತ್ರಗಳಿಗೆ ಒಬ್ಬ ಅಧಿಕಾರಿಯನ್ನು ನೇಮಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ಮತಕ್ಷೇತ್ರಗಳು ಹಾಗೂ ಚುನಾವಣಾ ವೆಚ್ಚ ವೀಕ್ಷಕರ ವಿವರ: …

Read More »

ಅಕ್ರಮವಾಗಿ ಗೋವು ಸಾಗಾಟ ವಾಹನ, ಗೋವುಗಳನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ

ವಾಹನದಲ್ಲಿ ಅಕ್ರಮವಾಗಿ ಗೋವು ಸಾಗಾಟ ವೇಳೆ ಪೊಲೀಸರು ದಾಳಿ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದಲ್ಲಿ ನಡೆದಿದೆ. ದಾಳಿ ವೇಳೆ ಡ್ರೈವರ್ ಸ್ಥಳದಲ್ಲಿ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ವಾಹನದಲ್ಲಿ 8ಕ್ಕೂ ಹೆಚ್ಚು ಗೋವುಗಳ ರಕ್ಷಣೆ ಮಾಡಲಾಗಿದೆ. ಕೆಎ 28 ಬಿ 0742 ನಂಬರಿನ ವಾಹನದಲ್ಲಿ ಗೋವು ಸಾಗಾಟ ಮಾಡಲಾಗುತ್ತಿತ್ತು. ವಾಹನ, ಗೋವುಗಳನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಬಬಲೇಶ್ವರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ಕಳಸಾ ಬಂಡೂರಿ ರೈತರ ಮೇಲೆ ಬಂಧನ ವಾರಂಟ್ ಜಾರಿ

ಕುಡಿಯುವ ನೀರಿಗಾಗಿ ಹೋರಾಟ ಮಾಡಿದ ಕಳಸಾ ಬಂಡೂರಿ ರೈತರ ಮೇಲೆ ಬಂಧನ ವಾರಂಟ್ ಜಾರಿ ಮಾಡಿ ರೈತರ ಮನೆ ಬಾಗಿಲಿಗೆ ವಾರಂಟ್ ನೋಟಿಸ್ ಅಂಟಿಸುವ ಮೂಲಕ ಮತ್ತೆ ರೈತರಿಗೆ ಕಿರುಕುಳ ನೀಡಲು ಪ್ರಾರಂಭಿಸಿದೆ. ಹೌದು 2016 ರಲ್ಲಿ ಮಹದಾಯಿ ಕಳಸಾ ಬಂಡೂರಿ ಹೋರಾಟಗಾರರು ಕುಡಿಯುವ ನೀರಿಗಾಗಿ ನಮ್ಮ ಪಾಲಿನ ನೀರನ್ನ ಹುಬ್ಬಳ್ಳಿ ಧಾರವಾಡಕ್ಕೆ ಹೋಗವುದನ್ನು ತಡೆಯಲು ಅಮ್ಮಿನಭಾವಿ ಗ್ರಾಮದ ಬಳಿವಿರುವ ಜಾಕ್ವಲ್ ಬಂದ್ ಮಾಡಲು ಹೋದಾಗ ರಸ್ತೆ ಪ್ರತಿಭಟನೆ ಹೋರಾಟದಲ್ಲಿ …

Read More »

ರಮೇಶ ಜಾರಕಿಹೊಳಿ,BJP ನಾಯಕರು ನಮಗೆ ಅವಕಾಶ ಮಾಡಿ ಕೊಟ್ಟಿದ್ದಕ್ಕೆ ಧನ್ಯವಾದ:ಮಹೇಶ ಕುಮಟಳ್ಳಿ ,

ಪಕ್ಷದ ಮೇಲೆ ಮುನಿಸಿಕೊಂಡು ರಾಜೀನಾಮೆಗೆ ಸವದಿ ನಿರ್ಧಾರ, ಅಥಣಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ಮಹೇಶ ಕುಮಟಳ್ಳಿ ಮಾಧ್ಯಮಗಳಿಗೆ ಪ್ರತಿಕ್ರಿಯೇ ನೀಡಿದ್ದಾರೆ. ಅಥಣಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೇ ನೀಡಿದ ಮಹೇಶ ಕುಮಟಳ್ಳಿ ಅಥಣಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ಮಹೇಶ ಕುಮಟಳ್ಳಿ , ಇಲ್ಲಿಯವರೆಗೂ ನಾನು ಮಾಡಿದ ಅಭಿವೃದ್ದಿ ಕೆಲಸಗಳು ನನ್ನ ಕೈ ಹಿಡಿಯುತ್ತೆ, ಕಳೆದ ಬಾರಿ ನೀವು ಕಾಂಗ್ರೇಸ್ ನಿಂದ ಬಂದು ಬಿಜೆಪಿಗೆ ಸೇರಿದ್ರಿ,ಈಗ ಸವದಿಯವರು ಬಿಜೆಪಿ ಬಿಟ್ಟು ಕಾಂಗ್ರೇಸ್ ಹೋಗ್ತಿದ್ದಾರೆ ಇದಕ್ಕೆ …

Read More »

ಕೇಂದ್ರ ಕಾರಾಗೃಹ ಮೇಲೆ ಪೊಲೀಸ್ ಮಿಂಚಿನ ದಾಳಿ

ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹ ( ಜೈಲು)ದ ಮೇಲೆ ಬುಧವಾರ ಬೆಳಗಿನ ಜಾವ ಕಲಬುರಗಿ ಮಹಾನಗರ ಪೊಲೀಸ್ ಉಪ ಆಯುಕ್ತರ ನೇತೃತ್ವದಲ್ಲಿ ಮಿಂಚಿನ ದಾಳಿ ನಡೆದಿದೆ. ಪೊಲೀಸ್ ಆಯುಕ್ತ ಆರ್. ಚೇತನ ಮಾರ್ಗದರ್ಶನದಲ್ಲಿ ಉಪ ಪೊಲೀಸ್ ಆಯುಕ್ತ ಅಡ್ಡೂರು ಶ್ರೀ ನಿವಾಸಲು ನೇತೃತ್ವದಲ್ಲಿ ತಂಡಗಳ ದಾಳಿ ನಡೆಸಿ ವ್ಯಾಪಕ ಶೋಧ ನಡೆಸಲಾಗಿದೆ.   ಬೆಳಗಿನ ಜಾವ 5.30ರ ಸುಮಾರಿಗೆ 120 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಳಗೊಂಡ ತಂಡ ದಾಳಿ ನಡೆಸಿ …

Read More »