Breaking News

ರಾಜಕೀಯ

ಕಾರ್ಖಾನೆ ಆಡಳಿತ ಮಂಡಳಿಯಿಂದ ಮೃತ ಕಾರ್ಮಿಕ ಕುಟುಂಬಕ್ಕೆ 18 ಲಕ್ಷ ರೂ ಪರಿಹಾರ

ಬೆಳಗಾವಿ, ಆಗಸ್ಟ್​​ 09: ಕಾರ್ಖಾನೆಯಲ್ಲಿ ಅಗ್ನಿ ದುರಂತದಲ್ಲಿ (Fire Tragedy) ಮೃತಪಟ್ಟ ಕಾರ್ಮಿಕ ಯಲ್ಲಪ್ಪ ಕುಟುಂಬಕ್ಕೆ ಕಾರ್ಖಾನೆ ಆಡಳಿತ ಮಂಡಳಿಯಿಂದ ಒಟ್ಟು 18 ಲಕ್ಷ ರೂ. ಪರಿಹಾರ ನೀಡಲಾಗಿದೆ. ಆ.6ರಂದು ಜಿಲ್ಲೆಯ ನಾವಗೆ ಬಳಿಯ ಸ್ನೇಹಂ ಟೇಪಿಂಗ್ ಕಾರ್ಖಾನೆಯಲ್ಲಿ ನಡೆದಿದ್ದ ದುರ್ಘಟಯಲ್ಲಿ ಲಿಫ್ಟ್‌ನಲ್ಲಿ ಕಾರ್ಮಿಕ ಯಲ್ಲಪ್ಪ‌ ಗುಂಡ್ಯಾಗೋಳ ಸಜೀವದಹನವಾಗಿದ್ದ. ಸರ್ಕಾರ‌ ಹಾಗೂ ಜಿಲ್ಲಾಡಳಿತಕ್ಕೂ ಮೊದಲು ಕಾರ್ಖಾನೆ ಆಡಳಿತ ಮಂಡಳಿ 18 ಲಕ್ಷ ರೂ. ಪರಿಹಾರ ನೀಡಿದೆ. ಮುಂಚೆ 10 ಲಕ್ಷ ರೂ. ಪರಿಹಾರ ಬೇಡ …

Read More »

ಹಳ್ಳಹಿಡಿದ ಜಲ ಜೀವನ್​ ಯೋಜನೆ: ನೀರು ಬರುವ ಮೊದಲೇ ತುಕ್ಕು ಹಿಡಿದ ಪೈಪ್​ಗಳು

ಗದಗ, ಆಗಸ್ಟ್​ 09: ಕೇಂದ್ರ ಸರ್ಕಾರ ಪ್ರತಿ ಗ್ರಾಮಗಳ ಮನೆ ಮನೆಗೆ ಕುಡಿಯುವ ನೀರು (water) ಪೂರೈಕೆ ಮಾಡುವ ಉದ್ದೇಶದಿಂದ ಜಲ ಜೀವನ ಮಷಿನ್ ಯೋಜನೆ (Jal Jeevan Yojana) ಜಾರಿ ಮಾಡಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವ್ರ ಮಹತ್ವಾಕಾಂಕ್ಷಿ ಯೋಜನೆ. ಇದು ಗದಗ ಜಿಲ್ಲೆಯಲ್ಲಿ ಸಂಪೂರ್ಣ ಹಳ್ಳಹಿಡಿದಿದೆ. ರಾಜ್ಯದ ಪ್ರತಿಯೊಂದು ಮನೆಗೆ ಕುಡಿಯವ ನೀರು ಸಿಗಲಿ ಅಂತ ಕೇಂದ್ರ ಸರ್ಕಾರ ಕೋಟಿ ಕೋಟಿ ಅನುದಾನ ನೀಡಿದೆ. ಆದ್ರೆ, ಕಾಮಗಾರಿ ಮುಗಿದು ಮೂರ್ನಾಲ್ಕು ವರ್ಷಗಳು ಕಳೆದ್ರೂ …

Read More »

ಆಲಮಟ್ಟಿ ಡ್ಯಾಂ ಭರ್ತಿಗೆ ಕಲವೇ ಅಡಿ ಬಾಕಿ,

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿದೆ ಕೊಯ್ನಾ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ. ಇದರಿಂದ ಆಲಮಟ್ಟಿ ಜಲಾಶಯಾಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹಾಗಾದರೆ ಆಲಮಟ್ಟಿ ಜಲಾಶಯದಲ್ಲಿ ಇಂದಿನ ನೀರಿನ ಮಟ್ಟ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

Read More »

ಇಬ್ಬರ ಮನೆಯಲ್ಲಿ ಪ್ರೀತಿಗೆ ವಿರೋಧ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬಾಗಲಕೋಟೆ : ಮನೆಯಲ್ಲಿ ಇಬ್ಬರ ಪ್ರೀತಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮನನೊಂದು ಯುವಕ ಮತ್ತು ಯುವತಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಂದಗಾಂವ್ ಗ್ರಾಮದಲ್ಲಿ ನಡೆದಿದೆ.‌ ರಬಕವಿ – ಬನಹಟ್ಟಿ ತಾಲೂಕಿನ ನಂದಗಾಂವ ಗ್ರಾಮದ ಸಚಿನ್ ಭೀಮಪ್ಪ ದಳವಾಯಿ ( 22 ) ಹಾಗೂ ಪ್ರೀಯಾ ಮಲ್ಲಪ್ಪ ಮಡಿವಾಳ ( 19 ) ನಾಗರಪಂಚಮಿ ದಿನವೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಯುವಕ ಹಾಗೂ ಯುವತಿ …

Read More »

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿಇಒ ಶಿಂಧೆ ಭೇಟಿ

ಬೈಲಹೊಂಗಲ: ತಾಲ್ಲೂಕಿನ ಉಡಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ಶಿಂಧೆ  ಭೇಟಿ ನೀಡಿ, ಪರಿಶೀಲಿಸಿದರು. ‘ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಸಾಂಕ್ರಾಮಿಕ ಕಾಯಿಲೆಗಳು ಉದ್ಭವಿಸುತ್ತಿದ್ದು, ರೋಗಿಗಳ ಆರೋಗ್ಯವಂತರನ್ನಾಗಿ ಮಾಡುವಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕೈಜೊಡಿಸಬೇಕು’ ಎಂದು ಸೂಚಿಸಿದರು. ಔಷಧಿ ಕೊಠಡಿ ನಿರ್ವಹಣೆ, ವಿತರಣೆ ಕುರಿತು ಮಾಹಿತಿ ಪಡೆದರು. ಕೆಂಗಾನೂರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಡಿಜಿಟಲ್‌ ಗ್ರಂಥಾಲಯ ವೀಕ್ಷಣೆ …

Read More »

ತರಕಾರಿ ಬೆಳೆಗಾರರಿಗೆ ಹೆಚ್ಚುವರಿ ಶುಲ್ಕ ಇಲ್ಲ: ತಹಶೀಲ್ದಾರ ಮಂಜುಳಾ

ಸಂಕೇಶ್ವರ: ಪಟ್ಟಣದ ದುರದುಂಡೀಶ್ವರ ಸಗಟು ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ಮುಂದಿನ ಸಭೆಯವರೆಗೂ ಈಗಿರುವ ಸೇವಾ ಶುಲ್ಕವನ್ನು ರದ್ದು ಮಾಡಲಾಗಿದೆ ಎಂದು ತಹಶೀಲ್ದಾರ್‌ ಮಂಜುಳಾ ನಾಯಿಕ ಹೇಳಿದರು. ಪಟ್ಟಣದ ಸಗಟು ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ಹಕ್ಕೋತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತ ಮುಖಂಡರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಮಾತನಾಡಿದ ಅವರು, ಕಾಯಿಪಲ್ಲೆ ಮಾರುಕಟ್ಟೆಯಿಂದ ಈ ಭಾಗದ ರೈತರಿಗೆ ಅನುಕೂಲವಾಗಿದ್ದು, ರೈತರು ಹಾಗೂ ಮಾರುಕಟ್ಟೆ ಸಮಿತಿಯೊಂದಿಗೆ ಶೀಘ್ರದಲ್ಲಿ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದರು. …

Read More »

ಜಮೀನಿಗೆ ಹಾನಿ: ಎಂಜಿನಿಯರ್‌ ಪರಿಶೀಲನೆ

ಹಿರೇಬಾಗೇವಾಡಿ: ಇಲ್ಲಿನ ಮಲ್ಲಪ್ಪನಗುಡ್ಡದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೂತನ ಕಟ್ಟಡಗಳು ನಿರ್ಮಾಣಗೊಳ್ಳುತ್ತಿರುವ ಸ್ಥಳಕ್ಕೆ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಸಹಾಯಕ ಎಂಜಿನಿಯರ್‌ ಅರುಣ ಕುಮಾರ ಅವರು ಗುರುವಾರ ಭೇಟಿ ನೀಡಿ, ಪರಿಶೀಲಿಸಿದರು. ಕಟ್ಟಡ ಕಾಮಗಾರಿಯಿಂದ ಜಮೀನುಗಳಿಗೆ ನೀರು ನುಗ್ಗದಂತೆ ಕ್ರಮ ವಹಿಸಬೇಕೆಂದು ಆಗ್ರಹಿಸಿ ರೈತರು ಈಚೆಗೆ ಕುಲಪತಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಭೇಟಿ ನೀಡಿದ ಅರುಣ ಕುಮಾರ ಅವರು, ರಸ್ತೆ ನಿರ್ಮಾಣ, ಅಂತರ್ಜಲ, ಜಮೀನುಗಳಿಗೆ ಉಂಟಾಗುವ ಹಾನಿ ತಡೆ …

Read More »

ಎನ್ಎಸ್ಎಫ್ ಕಚೇರಿಯಲ್ಲಿ ನಾಗಪ್ಪ ( ನಾಗ ದೇವತೆ) ನಿಗೆ ಹಾಲೇರೆದ ಶಾಸಕ ಬಾಲಚಂದ್ರ ಜಾರಕಿಹೊಳಿ

ಶ್ರಾವಣ ಮಾಸದಲ್ಲಿ ಆರಂಭವಾಗುವ ನಾಗರ ಪಂಚಮಿ ಎಲ್ಲ ಹಬ್ಬ-ಹರಿ ದಿನಗಳಿಗೆ ಮುನ್ನುಡಿ- ಬಾಲಚಂದ್ರ ಜಾರಕಿಹೊಳಿ ಗೋಕಾಕ- ಹೆಚ್ಚಾಗಿ ಹೆಣ್ಣು ಮಕ್ಕಳ ಹಬ್ಬವಾಗಿರುವ ನಾಗರ ಪಂಚಮಿ ಹಬ್ಬದ ಹಿಂದಿನ ದಿನ ಸಹೋದರಿಯರು ನಾಗ ದೇವತೆಗೆ ಪ್ರಾರ್ಥಿಸಿಕೊಂಡು ತಮ್ಮ ಸಹೋದರರಿಗೆ ರಕ್ಷಣೆ ಸಿಗಲೆಂದು ಹರಕೆ ಹೊರುವ ಪ್ರತೀತಿ ಇಂದಿಗೂ ಪ್ರಸ್ತುತವಿದೆ ಎಂದು ಅರಭಾವಿ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು. ಗುರುವಾರ ಸಂಜೆ ತಮ್ಮ ಗೃಹ ಕಚೇರಿಯಲ್ಲಿ ನಾಗರ ಪಂಚಮಿ ನಿಮಿತ್ತ …

Read More »

ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ ಕಬ್ಬು ಬೆಳೆಗಾರರ ಪ್ರತಿಭಟನೆ

ಕಲಬುರಗಿ: ಜಿಲ್ಲೆಯಲ್ಲಿರುವ ರೇಣುಕಾ ಶುಗರ್ಸ್ ಸಕ್ಕರೆ ಕಾರ್ಖಾನೆ ಹಾಗೂ ಕೆಪಿಆರ್ ಚಿಣಮಗೇರಾ ಸಕ್ಕರೆ ಕಾರ್ಖಾಬೆ ಸೇರಿದಂತೆ ವಿವಿಧ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡ ರೈತರ ಕಬ್ಬಿನ ಬಾಕಿ ಬಿಲ್ ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿ ‌ಕಚೇರಿ ಎದುರು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು. ನಗರದ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ …

Read More »

ಮುಂದುವರಿದ ತನಿಖೆ, ಮಹತ್ವದ ‌ಮಾಹಿತಿ‌ ಪಡೆದ ಸಿಐಡಿ

ಯಾದಗಿರಿ: ನಗರ ಠಾಣೆ ಪಿಎಸ್‌ಐ ಪರಶುರಾಮ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಸಿಐಡಿ ತಂಡವು ನಗರದ ಡಿವೈಎಸ್‌ಪಿ ಕಚೇರಿಗೆ ಆಗಮಿಸಿ ಪರಶುರಾಮ್ ಅವರ ತಂದೆ ಜನಕಮುನಿ, ಸಹೋದರ ಹಣಮಂತ, ಮಾವ ವೆಂಕಟಸ್ವಾಮಿ ಅವರಿಂದ ಹೇಳಿಕೆ ಪಡೆಯಿತು. ನಂತರ ಪೊಲೀಸ್‌ ಇಲಾಖೆಯ ವಸತಿ ಗೃಹದಲ್ಲಿರುವ ಮೃತ ಪರಶುರಾಮ್ ಅವರ ಮನೆಗೆ ತೆರಳಿದರು. ಸ್ಥಳ ಮಹಜರು ನಡೆಸಿದರು. ಸ್ಥಳ ಮಹಜರು ನಡೆಸಿ ಮೃತ ಪಿಎಸ್‌ಐ ಪರಶುರಾಮ್ ಕುಟುಂಬಸ್ಥರಿಂದ ಸಿಐಡಿ ತಂಡ ಮಾಹಿತಿ ಪಡೆದರು. ಅಲ್ಲದೇ …

Read More »