Breaking News

ಜಿಲ್ಲೆ

ಬಡವರನ್ನು ಹಸಿವಿನಲ್ಲೆ ಮಲಗಿಸಿದ್ದೇ ಬಿಜೆಪಿ ಸರ್ಕಾರ:ಆಮ್ ಆದ್ಮಿ ಪಕ್ಷ

ಬೆಂಗಳೂರು: ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ಅಧಿಕಾರಕ್ಕೆ ಬಂದ ದಿನದಿಂದ ಇಂದಿರಾ ಕ್ಯಾಂಟೀನ್ ಮುಚ್ಚಲು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಹವಣಿಸುತ್ತಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದು ಬಡವರ ಪಾಲಿನ ಅನ್ನ ಕಸಿಯುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರದಾದ್ಯಂತ ಇರುವ 174 ಕ್ಯಾಂಟೀನ್ ಹಾಗೂ 15 ಮೊಬೈಲ್ ಕ್ಯಾಂಟೀನ್‌ಗಳಿಗೆ ಮೂಲ …

Read More »

ಸರ್ಕಾರದ ಹಿಡಿತಕ್ಕೆ ಸಿಲುಕಿ ಚುನಾವಣಾ ಆಯೋಗ ನಲುಗುತ್ತಿದೆ:ರೇವಣ್ಣ ಕಿಡಿ

ಹಾಸನ: ಒಂದು ವೋಟಿಗೆ ಐದು ಸಾವಿರ, ಮೂರು ಸಾವಿರ ಎಂದು ಹಂಚಿದ ಮೇಲೆ ಚುನಾವಣೆ ಯಾಕೆ ಮಾಡಬೇಕು ಎಂದು ಮಾಜಿ ಸಚಿವ ರೇವಣ್ಣ ಕಿಡಿಕಾರಿದ್ದಾರೆ. ಹಾಸನದಲ್ಲಿ ಶಿರಾ ಮತ್ತು ಆರ್.ಆರ್ ನಗರ ಉಪಚುನಾವಣೆ ಬಗ್ಗೆ ಮಾತನಾಡಿದ ಅವರು, ಸರ್ಕಾರದ ಹಿಡಿತಕ್ಕೆ ಸಿಲುಕಿ ಚುನಾವಣಾ ಆಯೋಗ ನಲುಗುತ್ತಿದೆ. ಶಿರಾ ಕ್ಷೇತ್ರದ ಒಂದು ಊರಿನಲ್ಲಿ ಬಿಜೆಪಿ ಅಭ್ಯರ್ಥಿಯನ್ನೇ ಊರೊಳಗಡೆ ಬಿಟ್ಟಿಲ್ಲ. ಆದರೂ ಆ ಊರಿನಲ್ಲಿ ಶೇ, 80ರಷ್ಟು ಮತಗಳು ಲೀಡ್ ಇದೆ ಅಂತಾ …

Read More »

ಬರುವ ಲೋಕಸಭಾ ಉಪ ಚುನಾವಣೆಯಲ್ಲಿ ಗೋಕಾಕ ಮತ್ತು ಅರಭಾವಿ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗೆ ಅತ್ಯಧಿಕ ಮತಗಳ ಮುನ್ನಡೆ:ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಬರುವ ಲೋಕಸಭಾ ಉಪ ಚುನಾವಣೆಯಲ್ಲಿ ಗೋಕಾಕ ಮತ್ತು ಅರಭಾವಿ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗೆ ಅತ್ಯಧಿಕ ಮತಗಳ ಮುನ್ನಡೆಯನ್ನು ದೊರಕಿಸಿಕೊಡುವುದಾಗಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು             ಸೋಮವಾರ ನಗರದ ಹೊರವಲಯದಲ್ಲಿರುವ ಗೋಕಾಕ ಸಪ್ಲಾಯರ‍್ಸ್ ಸಭಾ ಭವನದಲ್ಲಿ ಅರಭಾವಿ ಮಂಡಲದಿಂದ ನಡೆಯುತ್ತಿರುವ ಪ್ರಶಿಕ್ಷಣ ವರ್ಗ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ನೀಡಿರುವ ಮುನ್ನಡೆಗಿಂತ …

Read More »

ವಿದ್ಯುತ್ ಕದ್ದಾಲಿಕೆ ಆರೋಪ1. 51 ಲಕ್ಷ ರೂ. ದಂಡ:ಹೆಸ್ಕಾಂ ಇನ್ಸಪೆಕ್ಟರ್ ಟಿ.ಬಿ.ನೀಲಗಾರ

ಬೆಳಗಾವಿ:  ವಿದ್ಯುತ್ ಕದ್ದಾಲಿಕೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ವರಿಗೆ  ಹೆಸ್ಕಾಂ ಅಧಿಕಾರಿಗಳು  1. 51 ಲಕ್ಷ ರೂ. ದಂಡ ವಿಧಿಸಿದ್ದಾರೆ.  ಬೈಲಹೊಂಗಲ ತಾಲೂಕಿನ ಸಾನಿಕೊಪ್ಪ ಗ್ರಾಮದ ಅಶೋಕ ಟೊಲ್ ನಾಕಾ  ಎಂಬುವವರ ಹೆಸ್ಕಾಂ ಅಧಿಕಾರಿಗಳು ನ. 2 ದಾಳಿ ನಡೆಸಿದ್ದರು.  ದಾಳಿ  ವೇಲೆ  ವಿದ್ಯುತ್ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಗೆ 1,51,200 ರೂ. ಗಳ ದಂಡ ವಿಧಿಸಿದ್ದಾರೆ.  ಎಇಇ ಎ. ಆಯ್.ನೀರಲಕಟ್ಟಿ, ಹೆಸ್ಕಾಂ ಇನ್ಸಪೆಕ್ಟರ್ ಟಿ.ಬಿ.ನೀಲಗಾರ  ನೇತೃತ್ವದ ತಂಡ …

Read More »

ಶಬರಿಮಲೆಗೆ ಹೋಗುವ ಭಕ್ತರಿಗೆ ಮಾರ್ಗಸೂಚಿ

ಬೆಂಗಳೂರು/ತಿರುವನಂತಪುರಂ: ಶಬರಿ ಮಲೆ ದೇವಸ್ಥಾನಕ್ಕೆ ಹೋಗುವ ಭಕ್ತರಿಗಾಗಿ ಕೇರಳ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಏಳು ಮಾರ್ಗ ಸೂಚಿಗಳನ್ನು ಒಳಗೊಂಡ ಪ್ರಕಟಣೆಯನ್ನು ಧಾರ್ಮಿಕ ದತ್ತಿ ಇಲಾಖೆ ಕನ್ನಡದಲ್ಲೇ  ಬಿಡುಗಡೆ ಮಾಡಿದೆ. ಶಬರಿಮಲೆ ವೆಬ್ ಸೈಟ್ ನಲ್ಲಿ ನೊಂದಾಯಿಸಿಕೊಂಡು ಅನುಮತಿ ಪಡೆದ ಭಕ್ತರಿಗಷ್ಟೆ ಅವಕಾಶ ನೀಡಲಾಗುತ್ತದೆ. ಪ್ರತಿದಿನ 1 ಸಾವಿರ ಭಕ್ತರಿಗೆ ವಾರಾಂತ್ಯದಲ್ಲಿ 2 ಸಾವಿರ ಭಕ್ತರಿಗೆ ದೇವಸ್ಥಾನ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ದೇವಸ್ಥಾನ ಭೇಟಿಯ 48 ಗಂಟೆ ಅವಧಿಗೆ ಮೊದಲು …

Read More »

ಅನುಪ್ರಭಾಕರ್ ಮುಖರ್ಜಿ ಅವರದ್ದು ಇಂದು 40ನೇ ವರ್ಷದ ಹುಟ್ಟುಹಬ್ಬ

ಬೆಂಗಳೂರು: ಸ್ಯಾಂಡಲ್‍ವುಡ್ ಖ್ಯಾತ ನಟಿಯರಲ್ಲಿ ಒಬ್ಬರಾದ ಅನುಪ್ರಭಾಕರ್ ಮುಖರ್ಜಿ ಅವರದ್ದು ಇಂದು 40ನೇ ವರ್ಷದ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ನಟಿಗೆ ಅಭಿಮಾನಿಗಳು, ಸಂಬಂಧಿಕರು ಹಾಗೂ ನಟ-ನಟಿಯರಿಂದ ಶುಭಾಶಯಗಳ ಸುರಿಮಳೆಗಳೇ ಬರುತ್ತಿವೆ. ಈ ಮಧ್ಯೆ ಅನು ಅವರು ವಿಶೇಷವಾಗಿ ತಮಗೆ ತಾವೇ ವಿಶ್ ಕೂಡ ಮಾಡಿಕೊಂಡಿದ್ದಾರೆ. ಇವತ್ತು ನಾನು 40ನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ ಎಂಬ ತಲೆಬರಹದೊಂದಿಗೆ ಪತ್ರದ ಮೂಲಕ ಶುಭಾಶಯ ಕೋರಿಕೊಂಡ ಅನು, ಕೃತಜ್ಞತೆ! ಎಂಬ ಒಂದು ಪದವು ಇಂದು ನನ್ನ …

Read More »

ಲ್ಲೊಂದು ಖಾಸಗಿ ಶಾಲೆ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಶಾಲೆಯ ತರಗತಿಗಳನ್ನು ಆರಂಬಿಸಿದೆ.

ಕೊಪ್ಪಳ: ಕೊರೊನಾ ಹಿನ್ನೆಲೆ ಶಾಲೆಗಳನ್ನು ಆರಂಭಿಸಬೇಕೆ, ಬೇಡವೇ ಎಂಬ ಗೊಂದಲದಲ್ಲಿ ಸರ್ಕಾರ ಇದ್ದರೆ, ಇಲ್ಲೊಂದು ಖಾಸಗಿ ಶಾಲೆ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಶಾಲೆಯ ತರಗತಿಗಳನ್ನು ಆರಂಬಿಸಿದೆ. ಇದರಿಂದಾಗಿ ಪೋಷಕರು ಭಯಭೀತರಾಗಿದ್ದು, ಮಕ್ಕಳಿಗೆ ಸೋಂಕು ತಗುಲಿದರೆ ಏನು ಗತಿ ಎಂಬ ಆತಂಕದಲ್ಲಿದ್ದಾರೆ. ಜಿಲ್ಲೆಯ ಗಂಗಾವತಿಯ ಸೇಂಟ್ ಫಾಲ್ಸ್ ಖಾಸಗಿ ಶಾಲೆಯಲ್ಲಿ ತರಗತಿಗಳನ್ನು ಆರಂಭಿಸಲಾಗಿದ್ದು, ಸರ್ಕಾರದ ನಿಯಮ ಉಲ್ಲಂಘಿಸಿ ಖಾಸಗಿ ಶಾಲೆಯನ್ನು ಆಡಳಿತ ಮಂಡಳಿ ತೆರೆದಿದೆ. ಅಲ್ಲದೆ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ …

Read More »

ಅಡ್ವಾಣಿಗೆ ಭಾರತ ರತ್ನ ನೀಡಿ- ಶಂಕರಮೂರ್ತಿಯಿಂದ ಪ್ರಧಾನಿಗೆ ಪತ್ರ

ಶಿವಮೊಗ್ಗ: ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ನೀಡುವಂತೆ ವಿಧಾನ ಪರಿಷತ್‍ನ ಮಾಜಿ ಸಭಾಪತಿ ಡಿ.ಎಚ್ ಶಂಕರಮೂರ್ತಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಎಲ್.ಕೆ.ಅಡ್ವಾಣಿ ಅವರು 7 ದಶಕಕ್ಕೂ ಹೆಚ್ಚು ಕಾಲದಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅಡ್ವಾಣಿ ಅವರ ಈ ಎಲ್ಲ ಜನಪರ ಸೇವೆ ಗುರುತಿಸಿ ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಯಾದ …

Read More »

ನವ್ಹೆಂಬರ್ 14 ರಂದು ಡಿಸಿಸಿ ಬ್ಯಾಂಕ್ ಅದ್ಯಕ್ಚ ಉಪಾದ್ಯಕ್ಷರ ಚುನಾವಣೆ….

ಬೆಳಗಾವಿ – ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿಯ ಚುನಾವಣೆ ಮುಗಿದಿದ್ದು,ನವ್ಹೆಂಬರ್ 14 ರಂದು ಅದ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ನವ್ಹೆಂಬರ್ 14 ರಂದು ಬೆಳಿಗ್ಗೆ 11 ರಿಂದ ಮದ್ಯಾಹ್ನ 1 ಗಂಟೆಯವರೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ನಡೆಯಲಿದ್ದು ಮದ್ಯಾಹ್ನ 3-00 ಗಂಟೆಗೆ ನಿರ್ದೇಶಕ ಮಂಡಳಿಯ ಸಭೆ ಆರಂಭವಾಗಲಿದ್ದು,ನಾಮ ಪತ್ರ ವಾಪಸ್ ಪಡೆಯಲು 30 ನಿಮಿಷ ಕಾಲಾವಕಾಶ ನೀಡಿದ ಬಳಿಕ ಚುನಾವಣೆ ನಡೆಯಲಿದೆ. ಹಾಲಿ ಅದ್ಯಕ್ಷ ರಮೇಶ್ ಕತ್ತಿ …

Read More »

ಮಹಾ ರಾಜಕೀಯ ರಮೇಶ್‌ ಜಾರಕಿಹೊಳಿ!

ಬೆಂಗಳೂರು: ಮಹಾರಾಷ್ಟ್ರದ ಶಿವಸೇನೆ ನೇತೃತ್ವದ ಮಹಾ ವಿಕಾಸ್‌ ಅಘಾಡಿ ಸರಕಾರದಲ್ಲಿ “ಕರ್ನಾಟಕ ಮಾದರಿ ಭೂಕಂಪ’ ಸಂಭವಿಸುವ ದಿನಗಳು ಸಮೀಪಿಸುತ್ತಿವೆಯೇ? ಆಪರೇಷನ್‌ ಕಮಲದ ಬಿರುಗಾಳಿಗೆ ಸಿಲುಕಿ ಉದ್ಧವ್‌ ಸರಕಾರವೂ ಪತನಗೊಳ್ಳಲಿದೆಯೇ? ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದರೆ, ಇಂಥ ಬೆಳವಣಿಗೆ ಹೆಚ್ಚು ದೂರವಿಲ್ಲ ಎಂಬ ಸುಳಿವು ಸಿಗುತ್ತಿದೆ. ವಿಶೇಷವೆಂದರೆ ಮಹಾರಾಷ್ಟ್ರದಲ್ಲಿ ಆಪರೇಷನ್‌ ಕಮಲ ಕಾರ್ಯತಂತ್ರದ ಹಿಂದಿರುವುದು ಬೇರ್ಯಾರೂ ಅಲ್ಲ, ರಮೇಶ್‌ ಜಾರಕಿಹೊಳಿ! ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್‌ – ಜೆಡಿಎಸ್‌ ಮೈತ್ರಿ ಸರಕಾರದ ವಿರುದ್ಧ ಬಂಡೆದ್ದು,ರಾಜೀನಾಮೆ ನೀಡಿ, …

Read More »