ಬೆಳಗಾವಿ : ಪತ್ರಕರ್ತರನ್ನು ಹೊರಗಿಟ್ಟು ಸಾಮಾನ್ಯ ಸಭೆ ನಡೆಸುತ್ತಿರುವುದನ್ನು ಖಂಡಿಸಿ ಪತ್ರಕರ್ತರು ನಗರಸಭೆಯ ಹೊರಗೆ ಬುಧವಾರ ಧರಣಿ ನಡೆಸಿದರು. ನಗರಸಭೆಯಲ್ಲಿ ಸಾಮಾನ್ಯ ಸಭೆ ನಡೆಸಿದ್ದರು. ಈ ವೇಳೆ ಪ್ರತ್ರಕರ್ತರನ್ನು ಹೊರಗಿಟ್ಟು ಸಭೆ ನಡೆಸಿದ್ದಾರೆ. ಇದರಿಂದ ಅಸಮಾಧಾನಗೊಂಡ ಪತ್ರಕರ್ತರು ನಗರಸಭೆ ಎದುರು ಧರಣಿ ನಡೆಸಿ, ಧಿಕ್ಕಾರ ಕೂಗಿದ್ದಾರೆ. ಲೋಕಸಭೆ, ವಿಧಾನಸಭೆ ಅಧಿವೇಶನದಲ್ಲಿಯೂ ಪತ್ರಕರ್ತರಿಗೆ ವರದಿ ಮಾಡಲು ಅವಕಾಶ ಇರುತ್ತದೆ. ಹಾಗಾದರೆ ನಿಪ್ಪಾಣಿ ನಗರಸಭೆಯಲ್ಲಿ ಏಕಿಲ್ಲ. ನಗರಸಭೆ ಅಸ್ತಿತ್ವಕ್ಕೆ ಬಂದಾಗಿನಿಂದ ಮೊದಲ ಸಲ …
Read More »ರೈತರ ಬಾಯಿಗೆ ಕುಮಾರಸ್ವಾಮಿ ಮಣ್ಣು ಹಾಕೋ ಕೆಲಸ ಮಾಡಿದ್ರು. ಅವರು ಒಬ್ಬ ಡೀಲಿಂಗ್ ಮಾಸ್ಟರ್: ಕೋಡಿಹಳ್ಳಿ ಚಂದ್ರಶೇಖರ್:
ಬೆಂಗಳೂರು : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರನ್ನು ರೈತರು ಮಣ್ಣಿನ ಮಗ ಅಂತಾರೆ. ಆದ್ರೇ ರೈತರ ಬಾಯಿಗೆ ಕುಮಾರಸ್ವಾಮಿ ಮಣ್ಣು ಹಾಕೋ ಕೆಲಸ ಮಾಡಿದ್ರು. ಅವರಿಗೆ ರೈತರ ಪರ ಕಾಳಜಿಯೇ ಇಲ್ಲ. ಕುಮಾರಸ್ವಾಮಿ ಮಣ್ಣಿನ ಮಕ್ಕಳ ದ್ರೋಹಿ ಹಾಗೂ ಅವರು ಒಬ್ಬ ಡೀಲಿಂಗ್ ಮಾಸ್ಟರ್ ಎಂಬುದಾಗಿ ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದ್ದಾರೆ. ನಗರದಲ್ಲಿ ವಿಧಾನಸೌಧ ಮುತ್ತಿಗೆ ಪ್ರತಿಭಟನೆ ಚಳುವಳಿ ನಡೆಸುತ್ತಾ ಮಾಜಿ ಸಿಎಂ ಭೂ ಸುಧಾರಣಾ ತಿದ್ದುಪಡಿ …
Read More »ಡಿಕೆಶಿ ರಾಜಿನಾಮಗೆ ಒತ್ತಾಯ! ಸತೀಶ ಜಾರಕಿಹೋಳಿ ಹೇಳಿದ್ದೇನು
ಬೆಂಗಳೂರು: ನಮ್ಮದು ಸಾಮೂಹಿಕ ನಾಯಕತ್ವ. ಸೋಲಿನ ಹೊಣೆಗೆ ಡಿ.ಕೆ. ಶಿವಕುಮಾರ್ ಒಬ್ಬರೇ ಕಾರಣವಲ್ಲ. ಅವರು ರಾಜೀನಾಮೆ ಕೊಡಬೇಕಾದ ಅಗತ್ಯವಿಲ್ಲ. ಉಪಚುನಾವಣೆಯಲ್ಲಿ ಆಡಳಿತಾರೂಢ ಪಕ್ಷವೇ ಗೆಲ್ಲುತ್ತೆ. ಹಾಗಾಗಿ ರಾಜೀನಾಮೆ ಅಗತ್ಯವಿಲ್ಲ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಚುನಾವಣೆ ಸೋಲಿನ ಹೊಣೆ ಹೊತ್ತು ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡಬೇಕೆಂಬ ಈಶ್ವರಪ್ಪ ಹೇಳಿಕೆಗೆ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.
Read More »ಆಟವಾಡಲು ಹೋದ ಇಬ್ಬರು ಬಾಲಕರು ಬಾವಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ
ಬೆಳಗಾವಿ: ಸಂಬಂಧಿಕರ ಜಮೀನಿನಲ್ಲಿ ಆಟವಾಡಲು ಹೋದ ಇಬ್ಬರು ಬಾಲಕರು ಬಾವಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಬೆಕ್ಕಿನಕೇರಿಯಲ್ಲಿ ನಡೆದಿದೆ. ಮೃತ ಬಾಲಕರನ್ನು ಲೋಕೇಶ ವಿಠಲ (10) ಹಾಗೂ ನಿಕೀಲ (7) ಎಂದು ಗುರುತಿಸಲಾಗಿದೆ. ಬಾಳು ಮಲ್ಲಪ್ಪ ಗಾವಡೆ ಎಂಬುವವರ ಜಮೀನೊಂದರಲ್ಲಿ ಆಟವಾಡಲೆಂದು ಮೂವರು ಬಾಲಕರು ಹೋಗಿದ್ದಾರೆ. ಈ ವೇಳೆಮೀನು, ಏಡಿ ಹಿಡಿಯಲೆಂದು ಬಾವಿಯತ್ತ ಸಾಗಿದ ಇಬ್ಬರು ಬಾಲಕರು, ಏಕಾಏಕಿ ಬಾವಿಗೆ ಬಿದ್ದಿದ್ದಾರೆ. ಇನ್ನೋರ್ವ ಬಾಲಕ ರಕ್ಷಣೆಗಾಗಿ ಕೋಗಿದ್ದಾನೆ. ಗ್ರಾಮಸ್ಥರು ಬಂದು …
Read More »ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ ಶುರು
ಉಡುಪಿ: ಸೂರ್ಯಾಸ್ತ ಆಗುತ್ತಿದ್ದಂತೆ ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ ಶುರುವಾಗಿದೆ. ಕಾರ್ಕಳ ಹೆಬ್ರಿ ತಾಲೂಕಿನಲ್ಲಿ ಸಂಜೆಯೇ ಮಳೆ ಆರಂಭ ಆಗಿತ್ತು. ಸಾಗರ ತೀರದ ತಾಲೂಕುಗಳಲ್ಲಿ ಎರಡು ಗಂಟೆ ವರ್ಷಧಾರೆಯಾಗಿದೆ. ಅರಬ್ಬಿ ಸಮುದ್ರದ ಸಾಲಿನ ತಾಲೂಕುಗಳಾದ ಉಡುಪಿ, ಕಾಪು, ಕುಂದಾಪುರದಲ್ಲಿ ಜೋರು ವರ್ಷಧಾರೆಯಾಗಿದೆ. ಬೈಂದೂರು ತಾಲೂಕಿನ ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ಪಶ್ಚಿಮ ಘಟ್ಟದ ತಪ್ಪಲಲ್ಲಿ ಗಾಳಿ ಸಹಿತ ಮಳೆಯಾಗಿದೆ. ಇಂದು ದಿನಪೂರ್ತಿ ಉಷ್ಟಾಂಶ ಹೆಚ್ಚಾಗಿತ್ತುಉಡುಪಿ ಜಿಲ್ಲೆಯಲ್ಲಿ ದಿಢೀರ್ ಮಳೆಯಾಗಿದ್ದರಿಂದ ಪೇಟೆಯೊಳಗೆ …
Read More »ವಿಧಾನಪರಿಷತ್ ನಲ್ಲಿ ಭೂ ಸುಧಾರಣಾ ಕಾಯ್ದೆ ಅಂಗೀಕಾರ
ಬೆಂಗಳೂರು: ಕೂತುಹಲಕಾರಿ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಭೂ ಸುಧಾರಣಾ ಕಾಯ್ದೆ ವಿಧಾನಪರಿಷತ್ ನಲ್ಲೂ ಅಂಗೀಕಾರಗೊಂಡಿದೆ. ಕಳೆದ ಎರಡು ದಿನಗಳಿಂದ ಸುಧೀರ್ಘ ಚರ್ಚೆ ನಡೆದು ಇಂದು ಸಂಜೆ ವಿಧೇಯಕವನ್ನು ಮತಕ್ಕೆ ಹಾಕಿದಾಗ ಬಿಜೆಪಿ ಹಾಗೂ ಜೆಡಿಎಸ್ ನ 37 ಮಂದಿ ಪರವಾಗಿ ಮತ ಚಲಾಯಿಸಿದರು. ಕಾಂಗ್ರೆಸ್ ನ ಸದಸ್ಯರು, ಜೆಡಿಎಸ್ ನ ಮರಿತಿಬ್ಬೇಗೌಡ ಸೇರಿದಂತೆ ಒಟ್ಟು 21 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದರು. ಕೊನೆಗೆ ವಿಧೇಯಕ ಅಂಗೀಕಾರಗೊಂಡಿದೆ ಎಂದು ಸಭಾಪತಿ …
Read More »ಬೆಂಗಳೂರಲ್ಲಿ ಭಾರತ್ ಬಂದ್ ಹೇಗಿತ್ತು..? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್
ಬೆಂಗಳೂರು, ಡಿ.8- ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಭಟನೆಯ ಬಿಸಿ ಏರಿತ್ತು. ಮೈಸೂರು ಬ್ಯಾಂಕ್ ವೃತ್ತ, ಟೌನ್‍ಹಾಲ್, ಮೌರ್ಯ ವೃತ್ತದಲ್ಲಿ ರೈತ ಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ರಾಜಕೀಯ ಪಕ್ಷಗಳು, ಕನ್ನಡ ಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳವರು ಪ್ರತಿಭಟನೆ ನಡೆಸಿ ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿದವು. ರಾಜ್ಯ ರೈತ ಸಂಘ, ಹಸಿರು ಸೇನೆ, ಸಿಪಿಎಂ, ಎಎಪಿ, ಕಾಂಗ್ರೆಸ್ , ಜೆಡಿಎಸ್ ಪಕ್ಷಗಳು, ಕನ್ನಡ ಒಕ್ಕೂಟ, ಕರ್ನಾಟಕ ರಕ್ಷಣಾ ವೇದಿಕೆ, …
Read More »ಸಿಎಂ ಕಾರ್ಯವೈಖರಿ ವಿರುದ್ಧ ಶಾಸಕರ ಅಸಮಾಧಾನ, ವರದಿ ಕೇಳಿದ ಹೈಕಮಾಂಡ್..!
ಬೆಂಗಳೂರು,ಡಿ.8- ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರ್ಯವೈಖರಿ ವಿರುದ್ಧ ಶಾಸಕರು ಅಸಮಾಧಾನ ವ್ಯಕ್ಯಪಡಿಸಿರುವ ಹಿನ್ನೆಲೆಯಲ್ಲಿ ಈ ಕುರಿತು ವರದಿ ನೀಡುವಂತೆ ಬಿಜೆಪಿ ಹೈಕಮಾಂಡ್ ಪಕ್ಷದ ರಾಜ್ಯ ಘಟಕಕ್ಕೆ ಸೂಚನೆ ನೀಡಿದೆ.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡುವಂತೆ ಪಕ್ಷದ ಕೆಲ ನಾಯಕರು ಹೈಕಮಾಂಡ್‍ಗೆ ಒತ್ತಡ ಹಾಕುತ್ತಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಈ ಬೆಳವಣಿಗೆಗಳ ನಡುವೆಯೇ ಯಡಿಯೂರಪ್ಪ ವಿರುದ್ದ ಸಿಡಿದೆದ್ದಿರುವ ಅತೃಪ್ತ ಬಣ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ …
Read More »ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಅವರ ಮಾತನ್ನು ಯಾರು ಕೇಳ್ತಾರೆ..? : ಸಿಎಂ ವ್ಯಂಗ್ಯ
ಬೆಂಗಳೂರು, ಡಿ.8- ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅದು ಕಪ್ಪು ಪಟ್ಟಿಯನ್ನಾದರೂ ಧರಿಸಲಿ, ಬಿಳಿ ಪಟ್ಟಿಯನ್ನಾದರೂ ಧರಿಸಲಿ. ಅದನ್ನು ಯಾರು ಕೇಳುತ್ತಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವ್ಯಂಗ್ಯವಾಡಿದರು. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ಖಂಡಿಸಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಸಂಬಂಧ ವಿಧಾನಸೌಧದ ಬಳಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅವರ ಪ್ರತಿಭಟನೆಯನ್ನು ಯಾರು ಕೇಳುತ್ತಾರೆ ಎಂದು ಕೇಂದ್ರದ ನರೇಂದ್ರ ಮೋದಿ ಸರ್ಕಾರ ರೈತರ ಪರವಾಗಿರುವ ಸರ್ಕಾರ. ರೈತರಿಗೆ …
Read More »ಛಲದಂಕ ಮಲ್ಲ” ರಮೇಶ ಜಾರಕಿಹೊಳಿ:ಅಶೋಕ ಚಂದರಗಿ
ಛಲದಂಕ ಮಲ್ಲ” ರಮೇಶ ಜಾರಕಿಹೊಳಿಯವರ ಕಿರೀಟಕ್ಕೆ ಮತ್ತೊಂದು ಗರಿ: ಭದ್ರಾ ಮೇಲ್ದಂಡೆ ಯೋಜನೆಗೆ ” ರಾಷ್ಟ್ರೀಯ ಯೋಜನೆ” ಪಟ್ಟ:ಕೃಷ್ಣಾ ಮೇಲ್ದಂಡೆ ಯೋಜನೆಗೂ ” ದಿಲ್ಲಿಯ ದಾರಿ” ಸುಗಮವಾಗುವದೆ? ರಾಜ್ಯ ಜಲಸಂಪನ್ಮೂಲ ಖಾತೆಯ ಸಚಿವ ಶ್ರೀ ರಮೇಶ ಜಾರಕಿಹೊಳಿಯವರ ಕಾಲ್ಗುಣವೊ, ಕೈಗುಣವೊ, ಮುಖದ ಲಕ್ಷಣವೊ ಗೊತ್ತಿಲ್ಲ.ಆದರೆ ಅವರು ಈ ಖಾತೆಯನ್ನು ವಹಿಸಿಕೊಂಡ ನಂತರ ನೀರಾವರಿ ಯೋಜನೆಗಳಲ್ಲಿ ಲಾಟರಿ ಮೇಲೆ ಲಾಟರಿಯನ್ನು ಕರ್ನಾಟಕವು ಹೊಡೆದೇ ಹೊಡೆಯುತ್ತಿದೆ! ದೀರ್ಘ ಕಾಲದಿಂದ ಮುಂದೆ ಸಾಗದೇ ಬಸವಳಿಯುತ್ತಿದ್ದ …
Read More »
Laxmi News 24×7