Breaking News

ಜಿಲ್ಲೆ

ಶಿಂದಿಕುರಬೇಟ ಗ್ರಾಪಂ ಗೆ ಅವಿರೋಧ ಆಯ್ಕೆ: ಸದಸ್ಯರಿಂದ ಸಚಿವ ರಮೇಶ ಜಾರಕಿಹೊಳಿಗೆ ಸತ್ಕಾರ

ಗೋಕಾಕ: ತಾಲೂಕಿನ ಶಿಂದಿಕುರಬೇಟ ಗ್ರಾಮ ಪಂಚಾಯತಿಗೆ ವಾರ್ಡ್ ನಂಬರ್ 8ರ ಸದಸ್ಯರಾದ ಭೀಮಶಿ ಯಲ್ಲಪ್ಪ ಬಿರನಾಳಿ ಮತ್ತು ಮಂಜುಳಾ ವಿಠ್ಠಲ ಕರೋಶಿ ಅವರು ಅವಿರೋಧ ಆಯ್ಕೆಯಾದ ಹಿನ್ನೆಲೆಯಲ್ಲಿ ಸದಸ್ಯರು ಹಾಗೂ ಗ್ರಾಮದ ಮುಖಂಡರು ಸಚಿವ ರಮೇಶ ಜಾರಕಿಹೊಳಿ ಅವರನ್ನು ಬುಧವಾರದಂದು ನಗರದ ಅವರ ಕಾರ್ಯಾಲಯದಲ್ಲಿ ಸತ್ಕರಿಸಿದರು. ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಟಿ. ಆರ್. ಕಾಗಲ, ಮಡೆಪ್ಪ ತೋಳಿನವರ, ಶ್ರೀಕಾಂತ ಯತ್ತಿನಮನಿ,ರಾಮಯ್ಯ ಆಲೋಶಿ,ಅಡಿವೆಪ್ಪ ಬೆಳಗಲಿ, ಸಿದ್ದಪ್ಪ ಸಂಸುದ್ದಿ, ಮುಸಾ ಸರಕಾವಸ, …

Read More »

ಗೋಕಾಕ: ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ

ಗೋಕಾಕ: ರಾಜಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುವಾಗ ಅನಾರೋಗ್ಯದಿಂದ ಸಾವನ್ನಪ್ಪಿದ್ದ ತಾಲೂಕಿನ ಲೋಳಸೂರ ಗ್ರಾಮದ ಹುತಾತ್ಮ ಯೋಧ ಕಲ್ಲಪ್ಪ ಸಿದ್ದಪ್ಪ ಬಾಂವಚಿ (45) ಅವರ ಅಂತ್ಯಕ್ರಿಯೆಯನ್ನು ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಮಧ್ಯಾಹ್ನ 12.30ಕ್ಕೆ ನೆರವೇರಿಸಲಾಯಿತು.ಬುಧವಾರದಂದು ಬೆಳಿಗ್ಗೆ 11.00ಕ್ಕೆ ಯೋಧ ಕಲ್ಲಪ್ಪ ಅವರ ಪಾರ್ಥಿವ ಶರೀರ ಗೋವಾ ಮಾರ್ಗವಾಗಿ ಲೋಳಸೂರ ಗ್ರಾಮಕ್ಕೆ ತಲುಪಿತು.  ಅವರ ಜಮೀನಿನಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಯಿತು.  ನೂರಾರು ಜನ   ಆಗಮಿಸಿ ಅಂತಿಮ ದರ್ಶನ ಪಡೆದರು. ಯೋಧ ಕಲ್ಲಪ್ಪ ಬಾಂವಚಿ …

Read More »

ಗೋಕಾಕ: ಡಿ. 19 ರಂದು ಎಸ್ಎಸ್ಎಲ್ ಸಿ, ಪಿಯುಸಿ ಟಾಪರ್ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ

ಗೋಕಾಕ: ಅಖಿಲ ಭಾರತ ವೀರಶೈವ ಮಹಾಸಭಾ ಗೋಕಾಕ ತಾಲೂಕು ಘಟಕದ ವತಿಯಿಂದ ಡಿ. 19 ರಂದು ಮುಂಜಾನೆ 10 ಘಂಟೆಗೆ ನಗರದ ಕೆ.ಎಲ್.ಇ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಸೋಮಶೇಖರ್ ಮಗದುಮ್ಮ ಹೇಳಿದರು. ನಗರದ ಕೆಎಲ್ಇ ಶಾಲಾ ಆವರಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎಸ್ ಎಸ್ ಎಲ್ …

Read More »

ರಾಜೀನಾಮೆ ನೀಡಲು ಮುಂದಾಗಿದ್ದಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿಕಾಂಗ್ರೆಸ್ ಅವರನ್ನು ತಡೆದಿದೆ.

ಬೆಂಗಳೂರು,ಡಿ.16- ವಿಧಾನಪರಿಷತ್‍ನಲ್ಲಿ ನಿನ್ನೆ ನಡೆದ ಕೋಲಾಹಲದ ಹಿನ್ನೆಲೆಯಲ್ಲಿ ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ ರಾಜೀನಾಮೆ ನೀಡಲು ಮುಂದಾಗಿದ್ದರಾದರೂ ಕಾಂಗ್ರೆಸ್ ಅವರನ್ನು ತಡೆದಿದೆ. ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ ಅವರು ಇಷ್ಟೆಲ್ಲಾ ರಂಪಾಟವಾದ ಮೇಲೂ ಹುದ್ದೆಯಲ್ಲಿ ಮುಂದುವರೆದರೆ ತಾವು ಅಧಿಕಾರಕ್ಕೆ ಅಂಟಿಕೊಂಡವರು ಎಂಬ ತಪ್ಪು ಸಂದೇಶ ರವಾನೆಯಾಗುತ್ತದೆ. ಸಭಾಪತಿ ಹುದ್ದೆಗೆ ಅದು ಘನತೆ ತರುವುದಿಲ್ಲ. ಹಾಗಾಗಿ ನಾನು ರಾಜೀನಾಮೆ ನೀಡುತ್ತೇನೆ ಎಂದು ಅವಿಶ್ವಾಸ ಮಂಡನೆಯಾದ ದಿನದಿಂದಲೂ ಆಂತರಿಕವಾಗಿ ಹೇಳುತ್ತಲೇ ಬಂದಿದ್ದಾರೆ. ಆದರೆ ಅದಕ್ಕೆ ಪ್ರತಿಪಕ್ಷದ …

Read More »

ಗೋಹತ್ಯೆ ನಿಷೇಧ ಮಸೂದೆಗೆ ಸುಗ್ರೀವಾಜ್ಞೆ ಹೊರಡಿಸಲು ಬಿಜೆಪಿ ಸಿದ್ಧತೆ..!

ಬೆಂಗಳೂರು,ಡಿ.16- ಗೋಹತ್ಯೆ ನಿಷೇಧ ಮಸೂದೆಗೆ ವಿಧಾನಪರಿಷತ್‍ನಲ್ಲಿ ಅಂಗೀಕಾರ ಪಡೆಯುವಲ್ಲಿ ವಿಫಲವಾಗಿರುವ ಕಾರಣ ಸುಗ್ರೀವಾಜ್ಞೆ ಮೂಲಕ ಮಸೂದೆಯನ್ನು ಜಾರಿಗೊಳಿಸಲು ಆಡಳಿತಾರೂಢ ಬಿಜೆಪಿ ಮುಂದಾಗಿದೆ. ವಿಧಾನಪರಿಷತ್ತಿನಲ್ಲಿ ವಿಧೇಯಕ ಅಂಗೀಕಾರಕ್ಕೆ ಅಡ್ಡಿ ಉಂಟಾದ ಕಾರಣಕ್ಕೆ ಸುಗ್ರೀವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಹಸು, ಕರು ಮತ್ತು ಎಮ್ಮೆ ಸೇರಿದಂತೆ ದನಗಳನ್ನು ಅಕ್ರಮವಾಗಿ ಮಾರಾಟ ಮಾಡುವುದು, ಖರೀದಿಸುವುದು ಮತ್ತು ಸಾಗಿಸುವುದನ್ನು ನಿಷೇಧಿಸುವ ಮಸೂದೆಯನ್ನು ಕಳೆದ ವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿತ್ತು. ವಿಧಾನಸಭೆಯಲ್ಲಿ ಅಂಗೀಕಾರವಾಗಿರುವ ಗೋಹತ್ಯೆ …

Read More »

ರಮೇಶ್ ಜಾರಕಿಹೊಳಿ ಅನುಪಸ್ಥಿತಿಯಲ್ಲಿ ಅವರ ಇಲಾಖೆಗೆ ಸೇರಿದಮಹತ್ವದ ಪ್ರಸ್ತಾವನೆಗಳಿಗೆ b.sy.ಅನುಮೋದನೆ

ಬೆಂಗಳೂರು: ರಮೇಶ್ ಜಾರಕಿಹೊಳಿ ಅವರ ಅನುಪಸ್ಥಿತಿಯಲ್ಲಿ ಅವರ ಇಲಾಖೆಗೆ ಸೇರಿದ ಕೆಲ ಮಹತ್ವದ ಪ್ರಸ್ತಾವನೆಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಅನುಮೋದನೆ ನೀಡಿದ್ದಾರೆ. ಬೆಳಗಾವಿ ಸಾಹುಕಾರ ಅವರ ರಾಜಕೀಯ ವೇಗಕ್ಕೆ ಕಡಿವಾಣ ಹಾಕಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂದೇಶ ರವಾನಿಸುವ ಸಲುವಾಗಿಯೇ ಆ ಕೆಲಸ ನಿರ್ವಹಿಸಿದರಾ ಎಂಬುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ.    ಡಿಸೆಂಬರ್ 2, ಬೆಳಗಾವಿಯಲ್ಲಿ ಬಿಜೆಪಿಯ ಕಾರ್ಯಕಾರಣಿ ಸಭೆ ನಡೆದಿತ್ತು. ರಮೇಶ ಜಾರಕಿಹೊಳಿ …

Read More »

ಮಹಿಳೆ ಮೇಲೆ ಹಲ್ಲೆ ಪ್ರಕರಣ: ಇಬ್ಬರ ಬಂಧನ

ಹುಬ್ಬಳ್ಳಿ: ಮನೆ ಎದುರು ಗಲಾಟೆ ಮಾಡಿದಕ್ಕೆ ಮಹಿಳೆ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಇಬ್ಬರನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಕೇಶ್ ಹೆಬ್ಬಳ್ಳಿ, ಸಚಿನ್ ಹೆಬ್ಬಳ್ಳಿ ಬಂಧಿತ ಆರೋಪಿಗಳು. ಹೆಗ್ಗರಿ ಬಡಾವಣೆಯಲ್ಲಿ ವಾಸವಿರುವ ಮಹಿಳೆ ಮನೆ ಮುಂದೆ ಸಹೋದರರಿಬ್ಬರು ಗಲಾಟೆ ಮಾಡುತ್ತಿದ್ದರು. ಇಬ್ಬರನ್ನು ಮಹಿಳೆ ಅಲ್ಲಿಂದ ಕಳುಹಿಸಿದ್ದಳು. ಇದೇ ವಿಚಾರವಾಗಿ ರಾತ್ರಿ ಆಕೆ ಮನೆಗೆ ಬಂದ ಇಬ್ಬರು ಚಾಕುವಿನಿಂದ ಇರಿದು, ಹೊಡೆದಿದ್ದರು. ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಳೇ …

Read More »

ಬೆಳಗಾವಿಯ ಸಾಹುಕಾರ್ ಗೆ ಶಾಕ್ ನೀಡಿದ ಸಿಎಂ ಬಿಎಸ್ ವೈ

ಬೆಂಗಳೂರು: ರಮೇಶ್ ಜಾರಕಿಹೊಳಿ ಅವರ ಅನುಪಸ್ಥಿತಿಯಲ್ಲಿ ಅವರ ಇಲಾಖೆಗೆ ಸೇರಿದ ಕೆಲ ಮಹತ್ವದ ಪ್ರಸ್ತಾವನೆಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಅನುಮೋದನೆ ನೀಡಿದ್ದಾರೆ. ಬೆಳಗಾವಿ ಸಾಹುಕಾರ ಅವರ ರಾಜಕೀಯ ವೇಗಕ್ಕೆ ಕಡಿವಾಣ ಹಾಕಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂದೇಶ ರವಾನಿಸುವ ಸಲುವಾಗಿಯೇ ಆ ಕೆಲಸ ನಿರ್ವಹಿಸಿದರಾ ಎಂಬುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ. ಡಿಸೆಂಬರ್ 2, ಬೆಳಗಾವಿಯಲ್ಲಿ ಬಿಜೆಪಿಯ ಕಾರ್ಯಕಾರಣಿ ಸಭೆ ನಡೆದಿತ್ತು. ರಮೇಶ ಜಾರಕಿಹೊಳಿ ಸಭೆಯಲ್ಲಿ …

Read More »

ಮೋದಿಯ ಬಣ್ಣದ ಮಾತಿಗೆ ದೇಶ ಮರುಳಾಗಿದೆ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

ರಾಯಬಾಗ: ‘ ಪ್ರಧಾನಿ ಮೋದಿಯ ಬಣ್ಣದ ಮಾತಿಗೆ ಈಗಾಗಲೇ ದೇಶ ಮರುಳಾಗಿದೆ. ಇದೇನು ಹೊಸದೆನಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು. ಪಟ್ಟಣದಲ್ಲಿ ನಡೆದ ಗ್ರಾಮ ಪಂಚಾಯಿತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗೋ ಹತ್ಯೆ ನಿಷೇಧ ಕಾಯ್ದೆ ಏನು ಹೊಸದಲ್ಲ. 1965ರಲ್ಲಿಯೇ ನೆಹರು ಅವರು ಜಾರಿಗೆ ತಂದಿದ್ದರು. ಆದರೆ ಈಗ ಬಿಜೆಪಿ ಸರ್ಕಾರ ಅದಕ್ಕೆ ಸುಣ್ಣ ಬಣ್ಣ ಬಳೆದು, ಅಲಂಕರಿಸಿ ಹೊರಟ್ಟಿದ್ದಾರೆ. ದೇಶದ ಜನರು ಬಣ್ಣದ ಮಾತಿಗೆ …

Read More »

ಗ್ರಾ.ಪಂ. ಚುನಾವಣೆ ಹಿನ್ನೆಲೆ ಮದ್ಯ ಮಾರಾಟಕ್ಕೆ ಬ್ರೇಕ್: ಡಿಸಿ ಮಹಾಂತೇಶ ಹಿರೇಮಠ

ಗ್ರಾ.ಪಂ. ಚುನಾವಣೆ ಹಿನ್ನೆಲೆ ಮದ್ಯ ಮಾರಾಟಕ್ಕೆ ಬ್ರೇಕ್: ಡಿಸಿ ಮಹಾಂತೇಶ ಹಿರೇಮಠ ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಚುನಾವಣೆ ಜರುಗಲಿರುವ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಡಿ.20ರಂದು ಸಂಜೆ 5 ಗಂಟೆಯಿಂದ ಡಿ.22 ಸಂಜೆ 5 ಗಂಟೆವರೆಗೆ ಸಾರಾಯಿ ಮಾರಾಟಕ್ಕೆ ನಿಷೇಧ ಹೇರಿ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಮಹತ್ವದ ಆದೇಶ ಹೊರಡಿಸಿದ್ದಾರೆ. ಅದೇ ರೀತಿ 2ನೇ ಹಂತದಲ್ಲಿ ಚುನಾವಣೆ ಜರುಗಲಿರುವ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಡಿ.25ರಂದು ಸಾಯಂಕಾಲ 5 ಗಂಟೆಯಿಂದ ಡಿ.27ರಂದು …

Read More »