ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನವನ್ನು ಸೋಮವಾರ ಹೆಚ್ಚಳಮಾಡುವ ಬಗ್ಗೆ ನಿರ್ಧಾರ ಪ್ರಕಟಿಸಲಾಗುವುದು ಎಂದು ಸಾರಿಗೆ ಸಚಿವರಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಕೆಎಸ್‌ಆರ್ಟಿಸಿ ನೌಕರರ ತರಬೇತಿ ಕೇಂದ್ರ ಆವರಣದಲ್ಲಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಾರಿಗೆ ನೌಕರರ ಸಂಘಟನೆಗಳ ಪ್ರಮುಖರ ಜೊತೆ ಚರ್ಚೆ ನಡೆಸಿದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಸೋಮವಾರ ಹಣಕಾಸು ಇಲಾಖೆ ಹಾಗೂ ಸಿಎಂ …
Read More »6 -9 ನೇ ತರಗತಿ ಸ್ಥಗಿತ, ಸಿನಿಮಾ ಶೇ. 50 ರಷ್ಟು ಸೀಟ್ ಭರ್ತಿ; ಮತ್ತೆ ಕಠಿಣ ನಿಯಮ ಜಾರಿ -ಇಲ್ಲಿದೆ ಮಾಹಿತಿ
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಆತಂಕವನ್ನುಂಟು ಮಾಡಿದ ಹಿನ್ನೆಲೆಯಲ್ಲಿ ಸೋಂಕು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಕಠಿಣ ನಿಯಮ ಜಾರಿಗೆ ತರಲಾಗಿದೆ. ವಿದ್ಯಾಗಮವೂ ಸೇರಿದಂತೆ 6 ರಿಂದ 9 ನೇ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. 10, 11, 12 ನೇ ತರಗತಿಗಳು ಪ್ರಸ್ತುತವಿರುವಂತೆಯೇ ಮುಂದುವರೆಯುತ್ತದೆ. ಆದರೆ ತರಗತಿಗಳಿಗೆ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಾಗಿರುವುದಿಲ್ಲ. ವಸತಿ ಶಾಲೆಗಳು ಬೋರ್ಡಿಂಗ್ ಶಾಲೆಗಳಲ್ಲಿ 10, 11 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆ ಬರೆಯುವ …
Read More »ರಾಬರ್ಟ್ , ಹೀರೋ ಬಳಿಕ ‘ಯುರತ್ನ’ನಿಗೂ ತಟ್ಟಿದ ಪೈರೆಸಿ ಬಿಸಿ..!
ಬೆಂಗಳೂರು: ನಿನ್ನೆ ಅಂದ್ರೆ ಏಪ್ರಿಲ್ 1ರಂದು ರಿಲೀಸ್ ಆಗಿ ಸಕ್ಸಸ್ ಫುಲ್ ಆಗಿ ಪ್ರದರ್ಶನ ಕಾಣ್ತಿರುವ ಯುವರತ್ನ ಸಿನಿಮಾಗೂ ಪೈರಸಿ ಬಿಸಿ ತಟ್ಟಿದೆ. ಹೌದು ಪೊಗರು, ಹೀರೋ, ರಾಬರ್ಟ್ ಸಿನಿಮಾಗಳ ನಂತರ ಇದೀಗ ಯುವರತ್ನ ಸಿನಿಮಾಗೂ ಪೈರೆಸಿ ಕಾಟ ಎದುರಾಗಿದೆ. ಸಿನಿಮಾ ತೆರೆಕಂಡ ಮೊದಲ ಮೊದಲ ದಿನವೇ ಚಿತ್ರ ಪೈರಸಿ ಆಗಿದ್ದು, ಟೆಲಿಗ್ರಾಂ ಸೇರಿದಂತೆ ಎಲ್ಲೆಡೆ ಯುವರತ್ನ ಚಿತ್ರ ಹರಿದಾಡುತ್ತಿದೆ. ಇತ್ತ ಪುನೀತ್ ಅಭಿಮಾನಿಗಳು ಪೈರಸಿ ವಿರುದ್ಧ ಧ್ವನಿಯೆತ್ತಿದ್ದು, ಟೆಲಿಗ್ರಾಂ …
Read More »ನನ್ನ ರಾಜಕೀಯ ಏಳ್ಗೆಗೆ ಗೋಕಾಕ ಕ್ಷೇತ್ರದ ಜನರ ಸಹಕಾರವೇ ಪ್ರಮುಖ ಕಾರಣ: ಸತೀಶ ಜಾರಕಿಹೊಳಿ
ಗೋಕಾಕ: “ನನ್ನ ರಾಜಕೀಯ ಜೀವನ ಆರಂಭವಾಗಿದ್ದೆ ಗೋಕಾಕ ಮತಕ್ಷೇತ್ರದಿಂದ. ಗೋಕಾಕ ಜನರೇ ನನ್ನ ರಾಜಕೀಯ ಏಳ್ಗೆಗೆ ಪ್ರಮುಖ ಕಾರಣ” ಎಂದು ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಹೇಳಿದರು. ಗೋಕಾಕ ವಿಧಾನಸಭಾ ಮತಕ್ಷೇತ್ರದ ಮಮದಾಪುರ ಗ್ರಾಮದಲ್ಲಿ ಬೆಳಗಾವಿ ಲೋಕಸಭಾ ಉಪಚುನಾವಣೆಯ ಪ್ರಚಾರ ನಡೆಸಿ ಅವರು ಮಾತನಾಡಿದರು. “ಕಳೆದ 30 ವರ್ಷಗಳಿಂದ ನಾನು ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ನಮ್ಮ ರಾಜಕೀಯ ಜೀವನ ಆರಂಭವಾಗಿದ್ದೆ ಗೋಕಾಕನಿಂದ. ಮಮದಾಪುರ ಗ್ರಾಮದ ಮುಖಂಡರು ಹಾಗೂ ಈ ಭಾಗದ …
Read More »ಡಿಕೆಶಿವಕುಮಾರ್ , ಸಿದ್ದರಾಮಯ್ಯ ಪ್ರಚಾರಕ್ಕೆ ಬರಲಿದ್ದಾರೆ : ಸತೀಶ್ ಜಾರಕಿಹೊಳಿ
ಬೆಳಗಾವಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲೋಕಸಭಾ ಉಪಚುನಾವಣೆ ಪ್ರಚಾರಕ್ಕೆ ಬರುತ್ತಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹೇಳಿದರು. ಗೋಕಾಕದಲ್ಲಿ ಪ್ರಚಾರದ ವೇಳೆ ಮಾತನಾಡಿ, ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಚಾರಕ್ಕೆ ಬರಲಿದ್ದಾರೆ. ರಾಜಕೀಯದಲ್ಲಿ ಪರ ವಿರೋಧ ಇದ್ದೇ ಇರುತ್ತದೆ ಎಂದರು. ಗೋಕಾಕ್, ಅರಭಾವಿ ಕ್ಷೇತ್ರ ಬಿಟ್ಟು ಬೇರೆ ಕಡೆ ಪ್ರಚಾರ ಮಾಡುವ ಕುರಿತು ಚರ್ಚೆ ಮಾಡುತ್ತೇನೆ. ಇನ್ನು ಸಿಡಿ …
Read More »ಶೂನ್ಯ ಸಂಪಾದನಾ ಮಠಕ್ಕೆ ಭೇಟಿ ನೀಡಿದ ಪ್ರಿಯಾಂಕಾ ಜಾರಕಿಹೊಳಿ
ಗೋಕಾಕ: ನಗರದ ಶೂನ್ಯ ಸಂಪಾದನಾ ಮಠ ಹಾಗೂ ಕೊಳವಿ ಹನುಮಪ್ಪ ದೇವಸ್ಥಾನಕ್ಕೆ ಯುವ ಮುಖಂಡರಾದ ಪ್ರಿಯಾಂಕಾ ಜಾರಕಿಹೊಳಿ ಅವರು ಇಂದು ಭೇಟಿ ನೀಡಿದರು. ಬೆಳಗಾವಿ ಲೋಕಸಭಾ ಉಪಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಶೂನ್ಯ ಸಂಪಾದನಾ ಮಠಕ್ಕೆ ಭೇಟಿ ನೀಡಿ, ಮುರುಘರಾಜೇಂದ್ರ ಶ್ರೀಗಳ ಆಶೀರ್ವಾದ ಪಡೆದರು. ಶ್ರೀಗಳು ಪ್ರಿಯಾಂಕಾ ಅವರನ್ನು ಆತ್ಮೀಯತೆಯಿಂದ ಬರಮಾಡಿಕೊಂಡು, ಆಶೀರ್ವಾದ ಮಾಡಿದರು. ಇದೇ ಸಂದರ್ಭದಲ್ಲಿ ಕೊಳವಿ ಹನುಮಪ್ಪ ದೇವಸ್ಥಾನಕ್ಕೆ ತೆರಳಿದ ಅವರು, ತಂದೆ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸತೀಶ …
Read More »ಈಗ ಈಶ್ವರಪ್ಪನವರಿಗೆ ತಲೆಕೆಟ್ಟಿದೆ – ಸಿಎಂ ಬದಲಾಗದಿದ್ದರೆ ಇನ್ನೂ ಹಲವರಿಗೆ ತಲೆ ಕೆಡಲಿದೆ: ಯತ್ನಾಳ್
ವಿಜಯಪುರ: ಸಿಎಂ ಯಡಿಯೂರಪ್ಪ ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪ ದೂರು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಈಶ್ವರಪ್ಪನವರ ಆರೋಪಕ್ಕೆ ಮಹತ್ವ ನೀಡಬೇಕು. ಅವರು ಮಾಡಿರುವ ತಪ್ಪಾದರೂ ಏನು ಎಂದು ಪ್ರಶ್ನಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಬಿಜೆಪಿಯನ್ನು ಈ ಹಿಂದೆ ಕಟ್ಟಿದವರು ಈಶ್ವರಪ್ಪ. ನಿನ್ನೆ ಮೊನ್ನೆ ಬಂದವರು ಅವರ ಬಗ್ಗೆ ಕಮೆಂಟ್ ಮಾಡುವುದು ಸರಿಯಲ್ಲ. ನಾನು ಹಾಗೂ ಯಡಿಯೂರಪ್ಪ ಪಕ್ಷ ಬಿಟ್ಟು ಮತ್ತೆ ಬಂದವರು. ಆದರೆ ಈಶ್ವರಪ್ಪ ಬಿಜೆಪಿಯಲ್ಲೇ …
Read More »ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಪತ್ರ ಬರೆದಿದ್ದು ಸರಿಯಲ್ಲ: ಜಗದೀಶ ಶೆಟ್ಟರ್
ಬೆಳಗಾವಿ: ‘ಸಚಿವ ಕೆ.ಎಸ್. ಈಶ್ವರಪ್ಪ ಅವರು ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿದ್ದು ಸರಿಯಲ್ಲ’ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು. ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಬಹಿರಂಗವಾಗಿ ಪತ್ರ ಬರೆಯುವುದು, ಅದನ್ನು ರಾಜ್ಯಪಾಲರಿಗಾಗಲಿ ಅಥವಾ ಪಕ್ಷದ ಮೇಲಿನವರಿಗಾಗಲಿ ಕಳುಹಿಸುವಂಥದು ಆಗಬಾರದಿತ್ತು. ಏನಿದ್ದರೂ ಮುಖ್ಯಮಂತ್ರಿ ಜೊತೆಯೇ ಚರ್ಚಿಸಬೇಕಿತ್ತು. ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಬೇಕಿತ್ತು. ಇದೆಲ್ಲವೂ ನಾಲ್ಕು ಗೋಡೆಗಳ ಒಳಗೆ ಆಗಬೇಕಾಗಿತ್ತು’ ಎಂದು ಪ್ರತಿಕ್ರಿಯಿಸಿದರು. ‘ನಾವೆಲ್ಲವೂ ಬಿ.ಎಸ್. ಯಡಿಯೂರಪ್ಪ ನಾಯಕತ್ವದಲ್ಲೇ …
Read More »ವಿದ್ಯಾರ್ಥಿಯ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಪ್ರಾಂಶುಪಾಲೆ
ಹಾಸನ: ವಿದ್ಯಾರ್ಥಿಗಳ ಹಿತ ಕಾಯಬೇಕಿದ್ದ ಮಹಿಳಾ ಪ್ರಾಂಶುಪಾಲರೊಬ್ಬರು ತಲೆ ತಗ್ಗಿಸುವಂತಹ ಕೆಲಸ ಮಾಡಿದ್ದು, ಗುರು-ಶಿಷ್ಯರ ಸಂಬಂಧಕ್ಕೆ ಮಸಿ ಬೆಳೆದಿದ್ದಾರೆ. ಉದ್ದೇಶ ಪೂರ್ವಕವಾಗಿಯೇ ವಿದ್ಯಾರ್ಥಿಯೊಬ್ಬನ ಉತ್ತರ ಪತ್ರಿಕೆಯ ಉತ್ತರಗಳನ್ನು ವಿರೂಪಗೊಳಿಸಿದ ಆರೋಪ ಕೇಳಿಬಂದಿದ್ದು, ಈ ಘಟನೆ ಹಾಸನ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ನಡೆದಿದೆ. ಈ ಸಂಬಂಧ ಪ್ರಾಂಶುಪಾಲೆ ಶೋಭಾದೇವಮಾನೆ ವಿರುದ್ಧ ಹಾಸನ ಬಡಾವಣೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನೊಂದ ವಿದ್ಯಾರ್ಥಿ ಚನ್ನಯ್ಯ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಕಾಲೇಜಿನ …
Read More »ಪೊಲೀಸ್ ಧ್ವಜ ದಿನಾಚರಣೆ: ಔರಾದಕರ್ ವರದಿ ಜಾರಿಗೆ ಆಗ್ರಹ
ವಿಜಯಪುರ: ರಾಘವೇಂದ್ರ ಔರಾದಕರ್ ವರದಿಯನ್ನು ಸರ್ಕಾರ ತಕ್ಷಣ ಜಾರಿಗೊಳಿಸಬೇಕು ಎಂದು ನಿವೃತ್ತ ಪೊಲೀಸ್ ಅಧಿಕಾರಿ ಬಿ.ಪಿ.ಹುಲಸಗುಂದ ಆಗ್ರಹಿಸಿದರು. ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಪೊಲೀಸ್ ಕಲ್ಯಾಣ ಮತ್ತು ಧ್ವಜ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಬೇಕು. ಈ ಮೂಲಕ ಪೊಲೀಸರನ್ನು ಒತ್ತಡ ಮುಕ್ತರನ್ನಾಗಿ ಮಾಡಬೇಕು. ಪೊಲೀಸರು ಬಿಡುವಿನ ವೇಳೆ ತಮ್ಮ ಕುಟುಂಬದ ಕಲ್ಯಾಣಕ್ಕೆ ಗಮನ ನೀಡಲು ಅವಕಾಶ …
Read More »
Laxmi News 24×7