ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಮಾರೀಹಾಳ, ಬಾಳೇಕುಂದ್ರಿ, ಮೋದಗಾ, ಬಾಳೇಕುಂದ್ರಿ ಕೆ.ಎಚ್., ಮುತಗಾ, ಸಾಂಬ್ರಾ, ತಾರೀಹಾಳ, ಕೆ.ಕೆ. ಕೊಪ್ಪ ಗ್ರಾಮಗಳಲ್ಲಿ ಇಂದು ಬೆಳಗಾವಿ ಲೋಕಸಭಾ ಉಪಚುನಾವಣೆಯ ಪ್ರಚಾರ ನಡೆಸಿ, ಮತಯಾಚಿಸಲಾಯಿತು. ಪ್ರಚಾರದಲ್ಲಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹಾಗೂ ವಿವಿಧ ಮುಖಂಡರು ಸಾಥ್ ನೀಡಿದರು. “ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತುಂಬಾ ಕಷ್ಟಪಡುತ್ತಿದ್ದಾರೆ. ಬಿಜೆಪಿ ಸರ್ಕಾರವನ್ನು ನಿಯಂತ್ರಣ ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಅಗತ್ಯ ವಸ್ತುಗಳ …
Read More »ಗ್ರಾಮೀಣ ಪ್ರದೇಶದ ಸಾಂಬ್ರಾ ಗ್ರಾಮಕ್ಕೆ ಶ್ರೀ ಸತೀಶಣ್ಣನವರ ಜೊತೆ ಪ್ರಚಾರ
ಬೆಳಗಾವಿ ಗ್ರಾಮೀಣ ಪ್ರದೇಶದ ಸಾಂಬ್ರಾ ಗ್ರಾಮದಕ್ಕೆ ಇವತ್ತು ಲೋಕಸಭಾ ಚುನಾವಣೆಯ ಪ್ರಚಾರಾರ್ಥ ಸಲುವಾಗಿ ತೆರಳಿ ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ ಹಾಗೂ ಮಹಾನ್ ನಾಯಕರಾದ ಡಾ. ಬಿ. ಆರ್ ಅಂಬೇಡ್ಕರ್ ಜಯಂತಿಯ ನಿಮಿತ್ಯ ಅವರ ಪುತ್ಥಳಿಗೆ ಗೌರವಾರ್ಪಣೆಯನ್ನು ಸಲ್ಲಿಸಿ ಶ್ರೀ ಸತೀಶಣ್ಣನವರ ಜೊತೆ ಪ್ರಚಾರವನ್ನು ಕೈಗೊಂಡು ಮತ ಯಾಚಿಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀ ಬೀರದೇವರ ಮಂದಿರಕ್ಕೆ ಸಹ ತೆರಳಿ ಆಶೀರ್ವಾದವನ್ನು ಪಡೆದು, ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ …
Read More »ಮಯನ್ಮಾರ್ನಿಂದ ಬೆಂಗಳೂರಿನವರೆಗೆ ಮಿಕ್ಸರ್, ಗ್ರೈಂಡರ್ ಬಾಕ್ಸ್ ನಲ್ಲಿ ಡ್ರಗ್ಸ್ ಸಾಗಾಟ ಜಾಲ ; ಪೋಲೀಸ್ ಬಲೆಗೆ
ಬೆಂಗಳೂರು : ಬೌನ್ಸ್ ಕಂಪನಿಯ ಬೈಕ್ಗಳ ಮುಖಾಂತರ ಗ್ರಾಹಕರಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮೂವರು ಅಂತಾರಾಜ್ಯ ದಂಧೆಕೋರರನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮಣಿಪುರ ಮೂಲದ ಮೊಹಮ್ಮದ್ ಸಜೀದ್ ಖಾನ್, ಮೊಹಮ್ಮದ್ ಅಜಾದ್ ಹಾಗೂ ಸಪಮ್ ಸೀತಲ್ ಕುಮಾರ್ ಸಿಂಗ್ ಬಂಧಿತ ಆರೋಪಿಗಳು. ಬಂಧಿತರಿಂದ 60 ಲಕ್ಷ ರೂ. ಮೌಲ್ಯದ 130 ಗ್ರಾಂ ಹೆರಾಯಿನ್, 2480 ಎಕ್ಸೆಟೆನ್ಸಿ ಮಾತ್ರೆಗಳನ್ನ ವಶಪಡಿಸಿಕೊಳ್ಳಲಾಗಿದೆ. .ಆರೋಪಿಗಳು ಕೆಲಸ ಅರಸಿ ಮೂರು ವರ್ಷಗಳ ಹಿಂದೆ ರಾಜಧಾನಿಗೆ ಬಂದಿದ್ದರು. …
Read More »ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಮಂಜುನಾಥ ಅಲಿಯಾಸ್ ಅಂಬಾರಿ ಮೇಲೆ ಫೈರಿಂಗ್
ಬೆಂಗಳೂರು: ಕೊಲೆ ಆರೋಪಿಯ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಮಂಜುನಾಥ ಅಲಿಯಾಸ್ ಅಂಬಾರಿ ಮೇಲೆ ಫೈರಿಂಗ್ ಮಾಡಲಾಗಿದೆ. ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ಸ್ ಪೆಕ್ಟರ್ ಕಿಶೋರ್ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದು, ಆರೋಪಿ ಮಂಜುನಾಥ್ ನನ್ನು ಬಂಧಿಸಲಾಗಿದೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದಬಲ್ ಮರ್ಡರ್ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದು, ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. …
Read More »ಮೊಬೈಲ್‍ನಲ್ಲಿ ಮಾತಾಡಿ ಜೇಬಲ್ಲಿ ಇಟ್ಟುಕೊಳ್ಳುವಾಗ ಬಡೀತು ಸಿಡಿಲು- ವ್ಯಕ್ತಿ ಸಾವು
ಬೆಂಗಳೂರು: ಅಕಾಲಿಕ ಮಳೆಯಿಂದ ಜನ ಕಂಗಾಲಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ವರುಣನ ಅಬ್ಬರದಿಂದ ಹಲವು ಅನಾಹುತಗಳು ಸಂಭವಿಸುತ್ತಿವೆ. ಸಿಡಿಲು ಬಡಿದು ಟಿಎಪಿಸಿಎಂಎಸ್ ಅಧ್ಯಕ್ಷ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದ ಬಳಿ ನಡೆದಿದೆ. ಸೋಮಣ್ಣ ಬೀರಪ್ಪ ತೇರದಾಳ(40) ಸಿಡಿಲು ಬಡಿದು ಸಾವಿಗೀಡಾದ ದುರ್ದೈವಿ. 100 ಕುರಿ ಸಾಕಿದ್ದ ಸೋಮಣ್ಣ ಬೀರಪ್ಪ ತೇರದಾಳ, ಮಧ್ಯಾಹ್ನ ಕುರಿ ಕಾಯುವ ಆಳಿನ ಜೊತೆ ನೋಡಲು ಹೋಗಿದ್ದ. ಈ ವೇಳೆ ಮೊಬೈಲ್‍ನಲ್ಲಿ …
Read More »10 ನಗರಗಳಲ್ಲಿ ನೈಟ್ ಕರ್ಫ್ಯೂ ಇನ್ನಷ್ಟು ಬಿಗಿಗೊಳಿಸಿ; ಅಧಿಕಾರಿಗಳಿಗೆ ಸಿಎಂ ಬಿಎಸ್ವೈ ಕಟ್ಟುನಿಟ್ಟಿನ ಸೂಚನೆ
ಬೆಂಗಳೂರು: ಪ್ರಾಯೋಗಿಕವಾಗಿ ಹತ್ತು ನಗರಗಳಲ್ಲಿ ಜಾರಿ ಮಾಡಲಾಗಿರುವ ನೈಟ್ ಕರ್ಫ್ಯೂ ಇನ್ನಷ್ಟು ಬಿಗಿಗೊಳಿಸಬೇಕೆಂದು ಸಿಎಂ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಯುಗಾದಿ ದಿನವೂ ಹಿರಿಯ ಅಧಿಕಾರಿಗಳ ಜೊತೆ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಸಭೆ ನಡೆಸಿದ ಅವರು, ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಪೊಲೀಸ್ ಕಮಿಷನರ್ ಕಮಲ್ ಪಂಥ್, ಸಾರಿಗೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. ಮೊದಲು ಸಾರಿಗೆ ನೌಕರರ ಮುಷ್ಕರದ ಬಗ್ಗೆ …
Read More »ಹಬ್ಬದ ಶಾಪಿಂಗ್‌ನಲ್ಲಿ ದಂಪತಿ ಬಿಜಿ: ಕಾರಿನಲ್ಲಿ ಸಾವು-ಬದುಕಿನ ಮಧ್ಯೆ ಮಗುವಿನ ಹೋರಾಟ
ಬೆಂಗಳೂರು: ಕಾರಿನಲ್ಲಿ ಮಗುವನ್ನು ಬಿಟ್ಟು ಯುಗಾದಿ ಹಬ್ಬದ ಶಾಪಿಂಗ್‌ಗೆ ತೆರಳಿದ ಪರಿಣಾಮ ಮಗು ಉಸಿರುಗಟ್ಟಿ ನರಳಾಡಿದ ಘಟನೆ ನಗರದ ಜಾಲಹಳ್ಳಿಯ ನ್ಯೂ ಬಿಇಎಲ್ನಲ್ಲಿ ನಡೆದಿದೆ. ದೃಷ್ಟವಶಾತ್ ಸ್ಥಳೀಯರ ಸಮಯಪ್ರಜ್ಞೆಯಿಂದ ಮಗುವಿನ ಪ್ರಾಣ ಉಳಿದೆ. ಜಾಲಹಳ್ಳಿಯ ನ್ಯೂ ಬಿಇಎಲ್ನಲ್ಲಿ ಸೋಮವಾರ ರಾತ್ರಿ ನಾಲ್ಕು ವರ್ಷದ ಮಗುವನ್ನು ಕಾರಿನಲ್ಲೇ ಬಿಟ್ಟು ದಂಪತಿ ಶಾಪಿಂಗ್‌ಗೆ ತೆರಳಿದ್ದರು. ಕೀ ಕಾರಿನಲ್ಲೇ ಇದ್ದಿದ್ರಿಂದ ಆಟೋಮೆಟಿಕ್ ಲಾಕ್ ಆಗಿತ್ತು. ಇದಾದ ಕೆಲವೊತ್ತಿನಲ್ಲೇ ಉಸಿರುಗಟ್ಟಲು ಆರಂಭಿಸಿ ಮಗು ಚೀರಾಡಲು ಶುರು …
Read More »ಮುಷ್ಕರದ ಮಧ್ಯೆಯೂ ಬಸ್ ಚಲಾಯಿಸಿದ ಡ್ರೈವರ್ಗೆ ತಾಳಿ ಹಾಕಲು ಮುಂದಾದ ಮಹಿಳೆ
ಬೆಳಗಾವಿ: ಸಾರಿಗೆ ನೌಕರರ ಮುಷ್ಕರ ಇಂದು ವಿಭಿನ್ನ ಸ್ವರೂಪ ಪಡೆದುಕೊಂಡಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆಯ ತೀವ್ರತೆ ಹೆಚ್ಚಾಗಿದೆ. ಅದರಂತೆ ಬೆಳಗಾವಿ ಬಸ್ ನಿಲ್ದಾಣದ ಘಟಕದ ಬಸ್ ಡ್ರೈವರ್ ಒಬ್ಬರಿಗೆ ಮಹಿಳೆಯರು ತೀವ್ರ ತರಾಟೆ ತೆಗೆದುಕೊಂಡ ಪ್ರಸಂಗ ನಡೆಯಿತು. 6 ನೇ ವೇತನ ಆಯೋಗಕ್ಕೆ ಆಗ್ರಹಿಸಿ ಸಾರಿಗೆ ನೌಕರರ ಕುಟುಂಬಸ್ಥರು ಭಿಕ್ಷೆ ಬೇಡುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ವೇಳೆ ಕೆಎಸ್ಆರ್ಟಿಸಿ ಬಸ್ ಬರುವುದನ್ನ ನೋಡಿದ ಮಹಿಳೆಯರು ಬಸ್ ತಡೆದು …
Read More »ಯುಗಾದಿ ಹಬ್ಬದಂದೆ ಸಚಿವೆ ಶಶಿಕಲಾ ಜೊಲ್ಲೆಗೆ ಮಾತೃ ವಿಯೋಗ.
ಬೆಳಗಾವಿ: ಇಂದು ಯುಗಾದಿ ಹಬ್ಬ. ಹೊಸ ಯುಗದ ಆರಂಭ. ಎಲ್ಲರ ಮನೆಯಲ್ಲಿ ಸಂಭ್ರಮ ಮನೆ ಮಾಡಿರುತ್ತೆ. ಆದ್ರೆ ಇಂತಹ ಹಬ್ಬದ ದಿನದಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರ ತಾಯಿ ಮೃತಪಟ್ಟಿದ್ದಾರೆ. ವಯೋಸಹಜ ಕಾಯಿಲೆಯಿಂದ ಸೇವಂತಾ ಹರದಾರೆ(90) ಮಹಾರಾಷ್ಟ್ರದ ಕೊಲ್ಹಾಪುರ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಹಬ್ಬದ ದಿನದಂದೇ ಸಚಿವೆ ಶಶಿಕಲಾ ಜೊಲ್ಲೆಗೆ ಮಾತೃ ವಿಯೋಗ ಉಂಟಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಸೇವಂತಾ ಹರದಾರೆಯವರು ಕೆಲ ದಿನಗಳಿಂದ ಮಹಾರಾಷ್ಟ್ರದ …
Read More »ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಅವರು ಭಾವನಾತ್ಮಕವಾಗಿ ಮತ ಯಾಚನೆ
ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತದಾನ ದಿನ ಸಮೀಪಿಸುತ್ತಿದ್ದಂತೆಯೇ, ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಅವರು ಭಾವನಾತ್ಮಕವಾಗಿ ಮತ ಯಾಚನೆ ಮಾಡುತ್ತಿದ್ದಾರೆ. ‘ಅವರನ್ನ (ಪತಿ ಸುರೇಶ ಅಂಗಡಿ) ಮಧ್ಯ ದಾರಿಯಲ್ಲೇ ದೇವರು ಕರೆಸಿಕೊಂಡ. ಅವರು ನನ್ನ ಬಿಟ್ಟು ಹೊರಟ್ರು. ಅವರು ಜೀವನ ಪೂರ್ತಿ ನಿಮಗಾಗಿ ದುಡಿದವರು, ನೀವು ನನ್ನ ಕೈ ಬಿಡಬೇಡಿ’ ಎಂದು ಮತದಾರರನ್ನು ಕೋರುತ್ತಿದ್ದಾರೆ. ಹೀಗೊಂದು ಪೋಸ್ಟ್ ಅನ್ನು ಬಿಜೆಪಿಯು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದೆ. …
Read More »
Laxmi News 24×7