ಬೆಂಗಳೂರು: ಪ್ರಧಾನಿ ಮೋದಿ ತಿಗಣೆ ತರ ದೇಶದ ಜನರ ರಕ್ತ ಹೀರುತ್ತಿದ್ದಾರೆ. ಒಂದೆಡೆ ಜನರು ಕೋವಿಡ್ ನಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಇನ್ನೊಂದೆಡೆ ತೈಲ ಬೆಲೆಯಿಂದ ಹಿಡಿದು ಅಗತ್ಯ ವಸ್ತುಗಳವರೆಗೂ ಎಲ್ಲದರ ಬೆಲೆಯನ್ನೂ ಏರಿಕೆ ಮಾಡಲಾಗಿದೆ. ಜನಸಾಮಾನ್ಯರು ಬದುಕು ನಡೆಸುವುದಾದರೂ ಹೇಗೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮೋದಿ, ಮೋದಿ ಎಂದು ಹುಡುಗರು ಘೋಷಣೆಗಳನ್ನು ಕೂಗುತ್ತಿದ್ದರು. ಕೊರೊನಾ ಓಡಿಸಲೆಂದು ಪ್ರಧಾನಿ ಮೋದಿ ಹೇಳಿದಂತೆ ಗಂಟೆ, …
Read More »ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿ A.S.I.
ಬೆಂಗಳೂರು: ಎಎಸ್ಐ ಒಬ್ಬರು 5 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಎಎಸ್ಐ ದಯಾನಂದ ತನ್ನಿಂದ 5 ಲಕ್ಷ ರೂಪಾಯಿ ಲಂಚ ಪಡೆದುಕೊಂಡಿರುವುದಾಗಿ ಆರೋಪಿಸಿ ಈ ಬಗ್ಗೆ ಸ್ವತ: ಭರತ್ ಶೆಟ್ಟಿ ಸಿಸಿಟಿವಿ ವಿಡಿಯೋ ಸಮೇತ ಎಎಸ್ಐ ವಿರುದ್ಧ ಕೋಡಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನಿಡಿದ್ದಾರೆ. ಉದ್ಯಮಿ ಭರತ್ ಶೆಟ್ಟಿ ವಿರುದ್ಧ ಮಲ್ಲೇಶ್ವರಂ ವ್ಯಕ್ತಿಯೊಬ್ಬರು ನಿವೇಶನ ವಂಚನೆ ಪ್ರಕರಣ ದಾಖಲಿಸಿದ್ದರು. ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಲು …
Read More »ಆರೋಪಿ ನರೇಶ್ ಹಾಗೂ ಶ್ರವಣ್ ಇದೀಗ ಎಸ್ ಐಟಿ ವಿಚಾರಣೆಗೆ ಹಾಜರ
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಕೇಸ್ ಗೆ ಸಂಬಂಧಿಸಿದಂತೆ ಕಿಂಗ್ ಪಿನ್ ಗಳೆಂದೇ ಆರೋಪಿಸಲಾಗುತ್ತಿರುವ ನರೇಶ್ ಹಾಗೂ ಶ್ರವಣ್ ಇದೀಗ ಎಸ್ ಐಟಿ ವಿಚಾರಣೆಗೆ ಹಾಜರಾಗಿದ್ದಾರೆ. ಸಿಡಿ ಪ್ರಕರಣ ಬಹಿರಂಗವಾದಾಗಿನಿಂದ ಕಳೆದ 100 ದಿನಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಗಳು ಇದೀಗ ಬೆಂಗಳೂರಿನ ಆಡುಗೋಡಿ ಎಸ್ ಐಟಿ ಟೆಕ್ನಿಕಲ್ ಸೆಲ್ ಗೆ ವಿಚಾರಣೆಗೆ ಹಾಜರಾಗಿದ್ದಾರೆ. ನರೇಶ್ ಹಾಗೂ ಶ್ರವಣ್ ವಿರುದ್ಧ ರಮೇಶ್ ಜಾರಕಿಹೊಳಿ ಹನಿ ಟ್ರ್ಯಾಪ್, ಬ್ಲ್ಯಾಕ್ …
Read More »ಕೋವಿಡ್-19: ರಾಜ್ಯದಲ್ಲಿ 2 ತಿಂಗಳ ಬಳಿಕ ದೈನಂದಿನ ಸೋಂಕು ಪ್ರಮಾಣ ಅತಿಕಡಿಮೆ!
ಬೆಂಗಳೂರು: ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಿಕೆ ಘೋಷಣೆ ಹೊರಬಿದ್ದ ಬೆನ್ನಲ್ಲೇ ಅಚ್ಚರಿ ರೀತಿಯಲ್ಲಿ ರಾಜ್ಯ ಸಹಜ ಸ್ಥಿತಿಗೆ ಬರಲಾರಂಭಿಸಿದೆ. ರಾಜ್ಯದಲ್ಲಿ ಶುಕ್ರವಾರ 8249 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 2 ತಿಂಗಳ ಬಳಿಕ ದೈನಂದಿನ ಸೋಂಕು ಕನಿಷ್ಟಕ್ಕೆ ಕುಸಿದಿದೆ. ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಕೊರೋನಾ ಅಬ್ಬರ ಕಡಿಮೆಯಾಗಿದ್ದು, ನಿನ್ನೆ 1,154 ಹೊಸ ಪ್ರಕರಣಗಳು ಪತ್ತೆಯಾಗಿದೆ. ರಾಜ್ಯದಲ್ಲಿ ಏಪ್ರಿಲ್ 13 ರಂದು 8,778 ಪ್ರಕರಣಗಳು ಪತ್ತೆಯಾಗಿತ್ತು. ಮಾರ್ಚ್ ತಿಂಗಳಿನಲ್ಲಿ …
Read More »ಲಾಕ್ಡೌನ್ ಸಡಿಲಿಕೆ ಬೆನ್ನಲ್ಲೇ ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಲಕ್ಷಾಂತರ ಜನ ವಲಸಿಗರು ರಾಜ್ಯಕ್ಕೆ ವಾಪಸ್
ಬೆಂಗಳೂರು, ಜೂ.12- ಕೋವಿಡ್-19 ಲಾಕ್ಡೌನ್ ಸಡಿಲಿಕೆ ಬೆನ್ನಲ್ಲೇ ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಲಕ್ಷಾಂತರ ಜನ ವಲಸಿಗರು ರಾಜ್ಯಕ್ಕೆ ವಾಪಸ್ ಬರಲು ಆರಂಭಿಸಿದ್ದು, ಹೀಗಾಗಿ ರಾಜ್ಯದಲ್ಲಿ ಕೊರೋನಾ ಸೋಂಕು ಮತ್ತೊಮ್ಮೆ ಸ್ಫೋಟಗೊಳ್ಳುವ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಇತರೆ ರಾಜ್ಯಗಳಿಂದ ಬರುವ ವಲಸಿಗರಿಗೆ ರೈಲ್ವೇ ಹಾಗೂ ಬಸ್ ನಿಲ್ದಾಣಗಳಲ್ಲೇ ಕೋವಿಡ್ ಪರೀಕ್ಷೆಗೊಳಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಲಾಕ್ಡೌನ್ ಸಡಿಲಿಕೆಯಾದ ಬಳಿಕ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳು ಪುನರಾರಂಭಗೊಳ್ಳಲಿವೆ. ಬೆಂಗಳೂರು ನಗರಕ್ಕೆ ಹೆಚ್ಚಿನ …
Read More »ಫೋನ್ ಮಾಡಿದ ಸೈಬರ್ ಖದೀಮರು, 102,ಬಾರಿ ಓಟಿಪಿ ಶೇರ್, ಬರೊಬ್ಬರಿ ಹತ್ತು ಲಕ್ಷ ರೂ ಗುಳುಂ
ಬೆಳಗಾವಿ- ಅಜ್ಞಾತರು ಫೋನ್ ಮಾಡಿ ಓಟಿಪಿ ಕೇಳಿದ್ರೆ ಕೊಡಬೇಡಿ ಎಂದು ಎಷ್ಟೇ ಬೊಬ್ಬೆ ಹೊಡೆದರೂ ಜನ ಜಾಗೃತರಾಗುತ್ತಿಲ್ಲ,ಒಂದೆರಡು ಬಾರಿ ಅಲ್ಲ,ಬರೊಬ್ಬರಿ 102,ಬಾರಿ ಓಟಿಪಿ ಶೇರ್ ಮಾಡಿದವನ ಖಾತೆಯಿಂದ ಬರೊಬ್ಬರಿ ಹತ್ತು ಲಕ್ಷ ರೂ ಗುಳುಂ ಆದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಈ ರೀತಿ ವಂಚನೆಗೊಳಗಾದ ವ್ಯೆಕ್ತಿ ಅಜ್ಞಾನಿಯೂ ಅಲ್ಲ,ಅನಕ್ಷರಸ್ಥನೂ ಅಲ್ಲ,102 ಬಾರಿ ಓಟಿಪಿ ಶೇರ್ ಮಾಡಿ ವಂಚನೆಗೊಳಗಾದ ವ್ಯೆಕ್ತಿ ಬಿಎಸ್ಎನ್ಎಲ್ ನಿವೃತ್ತ ಅಧಿಕಾರಿ ಅನ್ನೋದು ವಿಶೇಷ. ಇತ್ತೀಚಿಗೆ ಸೈಬರ್ ಕ್ರೈಂ …
Read More »ಸೋನು ಸೂದ್ ರನ್ನ ಭೇಟಿಯಾಗಲು 700 ಕಿ.ಮೀ. ಕಾಲ್ನಡಿಗೆಯಲ್ಲೇ ಸಾಗಿ ಬಂದ ಅಭಿಮಾನಿ..!
ಬಾಲಿವುಡ್ ನಟ ಸೋನು ಸೂದ್ ನಟನೆಗಿಂತ ಹೆಚ್ಚಾಗಿ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕವೇ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಕೊರೊನಾ ಸಂಕಷ್ಟದ ಈ ಸಂದರ್ಭದಲ್ಲಿ ಬಡ ಜನರ ಪರವಾಗಿ ನಿಂತಿರುವ ಸೂನ್ ಸೂದ್ರನ್ನ ಭೇಟಿಯಾಗಬೇಕು ಅಂತಾ ವೆಂಕಟೇಶ್ ಎಂಬಾತ ಹೈದರಾಬಾದ್ನಿಂದ ಮುಂಬೈವರೆಗೆ ಕಾಲ್ನಡಿಗೆಯಲ್ಲೇ ಸಾಗಿ ಬಂದಿದ್ದಾನೆ. ಟ್ವಿಟರ್ನಲ್ಲಿ ಅಭಿಮಾನಿಯನ್ನ ಭೇಟಿಯಾದ ಫೋಟೋ ಶೇರ್ ಮಾಡಿರುವ ಸೋನು ಸೂದ್, ಅಭಿಮಾನಿಗಳ ಬಳಿ ನನ್ನ ಭೇಟಿಯಾಗಲು ಈ ರೀತಿಯ ಕಷ್ಟವನ್ನ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ. …
Read More »3 ಆಯಂಬುಲೆನ್ಸ್ ಕೊಡುಗೆ ನೀಡಿದ ಶಾಸಕಿ ಅಂಜಲಿ ನಿಂಬಾಳ್ಕರ್
ಬೆಳಗಾವಿ: ಇತ್ತೀಚೆಗೆ ಶಾಸಕ ಎಂಪಿ ರೇಣುಕಾಚಾರ್ಯ ತಾವಾಗಿಯೇ ಆಯಂಬುಲೆನ್ಸ್ ಡ್ರೈವ್ ಮಾಡುವ ಮೂಲಕ ಗಮನ ಸೆಳೆದಿದ್ದರು. ಇದೀಗ ಶಾಸಕಿ ಅಂಜಲಿ ನಿಂಬಾಳ್ಕರ್ ತಾವೇ ಌಂಬುಲೆನ್ಸ್ ಚಲಾಯಿಸುವ ಮೂಲಕ ಗಮನ ಸೆಳೆದಿದ್ದಾರೆ. ಖಾನಾಪೂರದಲ್ಲಿ ತಾಯಿ ಫೌಂಡೇಶನ್ ವತಿಯಿಂದ ಸಾರ್ವಜನಿಕರಿಗೆ ನೀಡಲಾದ ಅಂಬ್ಯುಲೆನ್ಸ್ನ್ನು ತಾವೇ ಚಲಾಯಿಸುವ ಮೂಲಕ ಉದ್ಘಾಟಿಸಿದ್ದಾರೆ. ಅಂಜಲಿ ನಿಂಬಾಳ್ಕರ್ ಫೌಂಡೇಶನ್ ವತಿಯಿಂದ ತನ್ನ ಕ್ಷೇತ್ರದ ಜನರಿಗೆ ಮೂರು ಅಂಬ್ಯುಲೆನ್ಸ್ ಕೊಡುಗೆ ನೀಡಿದ್ದಾರೆ. ಈ ವೇಳೆ ತಾವೇ ಌಂಬುಲೆನ್ಸ್ ಚಲಾಯಿಸಿದ್ದನ್ನ ಕಂಡು …
Read More »ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದ ಚಿರತೆಯನ್ನು ಬೈಲಹೊಂಗಲದ ಬಿಜೆಪಿ ಯುವ ಮುಖಂಡ ಗುರು ಮೆಟಗುಡ್ಡ ದತ್ತು ಸ್ವೀಕರಿಸಿದರು.
ಬೆಳಗಾವಿ – ಭೂತರಾಮನಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದ ಚಿರತೆಯನ್ನು ಬೈಲಹೊಂಗಲದ ಬಿಜೆಪಿ ಯುವ ಮುಖಂಡ ಗುರು ಮೆಟಗುಡ್ಡ ದತ್ತು ಸ್ವೀಕರಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಎಮ್ ವಿ ಅಮರನಾಥ, ವಲಯ ಅರಣ್ಯ ಅಧಿಕಾರಿ ಡಿ. ಶಿವಕುಮಾರ್, ರಾಕೇಶ್ ಅರ್ಜುನವಾಡ, ಪರಿಸರ ಪ್ರೇಮಿ ದಯಾನಂದ ಪರಾಳಶೆಟ್ಟರ್ ಉಪಸ್ಥಿತಿಯಲ್ಲಿ ಗುರು ಮೆಟಗುಡ್ ದತ್ತು ಸ್ವೀಕಾರ ಪ್ರಮಾಣ ಪತ್ರ ಪಡೆದರು. ಮುಂದಿನ ಒಂದು ವರ್ಷಗಳ ಅವಧಿಗೆ ಚಿರತೆಯನ್ನು ಅವರು ದತ್ತು ಸ್ವೀಕರಿಸಿದ್ದಾರೆ.
Read More »ಸಾಲ ಕೊಡಿಸ್ತೀವಿ, ಫೀಸ್ ಕಟ್ಟಿ ಎಂದ ಖಾಸಗಿ ಶಾಲೆ
ಬೆಂಗಳೂರು: ಶಾಲಾ ಶುಲ್ಕ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಶಾಲೆಯೊಂದು ಸಾಲ ದಂಧೆ ಶುರು ಮಾಡಿಕೊಂಡಿದೆ. ಸಾಲ ಕೊಡಿಸ್ತೀವಿ, ನಮಗೆ ಫೀಸ್ ಕಟ್ಟಿ ಎಂದು ಲಗ್ಗೆರೆಯ ಖಾಸಗಿ ಶಾಲೆಯೊಂದು ಪೋಷಕರಿಗೆ ದುಂಬಾಲು ಬಿದ್ದಿದೆ. ಲಗ್ಗೆರೆಯ ಈ ಖಾಸಗಿ ಶಾಲೆ, ಫೈನಾನ್ಸ್ ಪೀರ್ ಎಂಬ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ವಿದ್ಯಾರ್ಥಿಯ ಟಿಸಿಯನ್ನು ಅಡಮಾನ ಇಟ್ಟುಕೊಂಡು ಪೊಷಕರಿಗೆ ಸಾಲ ವಿತರಣೆಗೆ ಈ ಫೈನಾನ್ಸ್ ಕಂಪನಿ ಮುಂದಾಗಿದೆ. ಸಾಲ ತೆಗೆದುಕೊಂಡ 6 ತಿಂಗಳವರೆಗೆ ಯಾವುದೇ ರೀತಿಯ …
Read More »
Laxmi News 24×7