Breaking News

ಜಿಲ್ಲೆ

ಸೌಭಾಗ್ಯ ಲಕ್ಷ್ಮೀ ಶುಗರ್ಸ ನಿಂದ ಸಕ್ಕರೆ ವಿತರಣೆ ಕಾರ್ಯಕ್ರಮ

ಗೋಕಾಕ: ಸೌಭಾಗ್ಯ ಲಕ್ಷ್ಮೀ ಶುಗರ್ಸ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷ ಕೂಡ ನಾವು ರೈತ ಬಾಂಧವರಿಗೆ ತಿಳಿಸುವುದು ಏನೆಂದರೆ ಈ ವರ್ಷ ನಾವು ನಮ್ಮ ಕಾರ್ಖಾನೆಗೆ ಕಬ್ಬು ಕಳುಹಿಸಿದ ಎಲ್ಲಾ ರೈತ ಬಾಂಧವರಿಗೆ ಪ್ರತಿ ಟನ್ ಗೆ ಅರ್ಧ ಕೇಜಿಯಂತೆ ಸಕ್ಕರೆ ವಿತರಿಸುವ ಕಾರ್ಯಕ್ರಮವನ್ನಾ ಯರಗಟ್ಟಿ, ಗೋಕಾಕ, ಹಾಗೂ ಮಮದಾಪೂರ ಈ ರೀತಿ ಮೂರು ವಿಭಾಗಗಳಾಗಿ ವಿಂಗಡಿಸಿ ಈ ಮೂರು ಝೋನ್ ಗಳಲ್ಲಿ ಸಕ್ಕರೆ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ. …

Read More »

ಕೊರೊನಾ ಪಾಸಿಟಿವ್​ ಬಂತೆಂದು ಎಸ್ಕೇಪ್​ ಆಗಿದ್ದ 96,000 ಜನರು ಪತ್ತೆ.. 400 ಮಂದಿ ಈಗಲೂ ಮಿಸ್ಸಿಂಗ್

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದ್ರೆ, ಮತ್ತೊಂದೆಡೆ ಸೋಂಕಿತರು ನಾಪತ್ತೆಯಾಗ್ತಿದ್ರು. ಇದು ಪೊಲೀಸರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿತ್ತು. ಮೊದಲನೇ ಅಲೆಗಿಂತ ಎರಡನೇ ಅಲೆಯಲ್ಲೇ ಹೆಚ್ಚು ಮಂದಿ ನಾಪತ್ತೆ‌ಯಾಗಿದ್ದರು. ಈ ನಡುವೆ ಪೊಲೀಸ್ರಿಗೆ ಸಿಕ್ಕವರು ಎಷ್ಟು ಮಂದಿ ಗೊತ್ತಾ? ಕೊರೊನಾ.. ಹೆಸ್ರು ಕೇಳಿದ್ರೆನೆ ಒಂದು ಸಮಯದಲ್ಲಿ ಎಲ್ಲರೂ ಬೆಚ್ಚಿ ಬೀಳ್ತಿದ್ರು. ಇನ್ನು ತಮಗೆ ಹೆಮ್ಮಾರಿ ತಗುಲಿದೆ ಅಂದಾಕ್ಷಣ ಅದೆಷ್ಟೋ ಸೋಂಕಿತರು ಹೆದರಿ ಹೇಳದೆ ಕೇಳದೆ ನಾಪತ್ತೆಯಾಗ್ಬಿಟ್ಟಿದ್ರು. ತಪ್ಪಿಸಿಕೊಂಡವರ …

Read More »

ತಿಡಗುಂದಿ ಕಾಲುವೆ, ಕೆರೆ ತುಂಬುವ ನೀರಾವರಿ ನನ್ನ ಕನಸಿನ ಯೋಜನೆ : ಎಂ.ಬಿ.ಪಾಟೀಲ

ವಿಜಯಪುರ : ರಾಜ್ಯದ ಜಲಸಂಪನ್ಮೂಲ ಸಚಿವನಾಗಿ ಸೇವೆ ಸಲ್ಲಿಸಿರುವ ನಾನು ವಿಜಯಪುರ ಜಿಲ್ಲೆ ಮಾತ್ರವಲ್ಲ ರಾಜ್ಯದ ಎಲ್ಲ ನೀರಾವರಿ ಯೋಜನೆ ಬಗ್ಗೆ ಮಾತನಾಡುವ ಅಧಿಕಾರ ಹೊಂದಿದ್ದೇನೆ. ತಿಡಗುಂದಿ ಶಾಖಾ‌ ಕಾಲುವೆ ಹಾಗೂ 16 ಕೆರೆ ತುಂಬುವ ಯೋಜನೆ ನನ್ನ ಕನಸಿನ ಯೋಜನೆ. ಈ ಬಗ್ಗೆ ವಿಪಕ್ಷದಲ್ಲಿದ್ದರೂ ಮಾತನಾಡುವುದಕ್ಕೆ ಯಾರ ಅನುಮತಿ ಬೇಕಿಲ್ಲ ಎಂದು ಜಲಸಂಪನ್ಮೂಲ ಮಾಜಿ ಸಚಿವ ಎಂ.ಬಿ.ಪಾಟೀಲ ಪ್ರತಿಕ್ರಿಯಿಸಿದ್ದಾರೆ. ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮದೇ ಕಾಂಗ್ರೆಸ್ …

Read More »

ಸಕಲ ಸರ್ಕಾರಿ ಗೌರವಗಳೊಂದಿಗೆ ಬೆಳಗಾವಿ ಯೋಧನ ಅಂತ್ಯಕ್ರಿಯೆ

ಗೋಕಾಕ : ಕಳೆದ ನಾಲ್ಕೈದು ದಿನಗಳ ಹಿಂದೆ ನ್ಯಾಗಾಲ್ಯಾಂಡ್ ಗಡಿ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಅಪಘಾತದಲ್ಲಿ ಅಸುನೀಗಿದ್ದ ಗೋಕಾಕ ತಾಲ್ಲೂಕಿನ ವೀರಯೋಧನ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಜರುಗಿತು.   ಶಿವಾಪುರ ಗ್ರಾಮದ ಯೋಧ ಮಂಜುನಾಥ ಗೌಡಣ್ಣವರ (38) ಯೋಧ ಅಫಘಾತದಲ್ಲಿ ಸಾವನ್ನಪ್ಪಿದ್ದರು. ಮೃತ ಯೋಧನ ಪಾರ್ಥಿವ ಶರೀರ ಬೆಂಗಳೂರಿನಿಂದ ಇಂದು ಬೆಳಿಗ್ಗೆ 7 ಗಂಟೆಗೆ ಯೋಧನ‌ ಸ್ವಗ್ರಾಮ ಗೋಕಾಕ್ ತಾಲ್ಲೂಕಿನ ಶಿವಾಪುರ ಗ್ರಾಮಕ್ಕೆ ರಸ್ತೆ ಮೂಲಕ ಕರೆತರಲಾಯಿತು.   …

Read More »

ಮಹಾನಗರ ಪಾಲಿಕೆ ಮುಂದೆ ಇರುವ ಕನ್ನಡ ಬಾವುಟವನ್ನು ಬದಲಾಯಿಸುವಂತೆ ಒತ್ತಾಯಿಸಿ ಕರ್ನಾಟಕ ನವನಿರ್ಮಾಣ ಸೇನೆ :ಜಿಲ್ಲಾಧಿಕಾರಿಗೆ ಮನವಿ

ಬೆಳಗಾವಿ – ಮಹಾನಗರ ಪಾಲಿಕೆ ಮುಂದೆ ಇರುವ ಕನ್ನಡ ಬಾವುಟವನ್ನು ಬದಲಾಯಿಸುವಂತೆ ಕರ್ನಾಟಕ ನವನಿರ್ಮಾಣ ಸೇನೆಯ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿಗಳು ಹಾಗೂ ಬೆಳಗಾವಿ ನಗರ ಪೋಲಿಸ ಆಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಿದರು.ಮಹಾನಗರ ಪಾಲಿಕೆ ಮುಂದೆ ಇರುವ ಕನ್ನಡ ಬಾವುಟವು ಮಳೆ, ಗಾಳಿಗೆ ನಾಶಗೊಳುತ್ತಿದೆ. ಈ ಕಾರಣದಿಂದ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಕೂಡಲೇ ಎಚ್ಚೆತುಕೊಂಡು ಬಾವುಟ ಬದಲಾವಣೆ‌ ಮಾಡಬೇಕು. ಬಾವುಟ ನಾಶಗೊಳ್ಳುತ್ತಿರುವುದರಿಂದ ಬೆಳಗಾವಿ ಸಮಸ್ತ ಕನ್ನಡಿಗರ ಭಾವನೆಗೆ ದಕ್ಕೆ ಉಂಟಾಗುತ್ತಿದೆ. …

Read More »

ಹೋರಾಟ ಮಾಡೋಹಾಗಿದ್ರೆ ಗಂಡಸ್ತನದಿಂದ ಹೋರಾಡೋಣ: ರಾಕ್​ಲೈನ್ ವೆಂಕಟೇಶ್

ಬೆಂಗಳೂರು: ರಾಕ್​ಲೈನ್ ವೆಂಕಟೇಶ್ ಮನೆ ಮೇಲೆ ಕಲ್ಲು ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ರಾಕ್​ಲೈನ್​ ವೆಂಕಟೇಶ್ ಹೇಳಿಕೆ ಕೊಟ್ಟಿದ್ದಾರೆ. ಇಂತಹ ಟೈಮ್​ನಲ್ಲಿ ನನ್ನ ಎದುರಿಸಬೇಕು ಅಂದ್ಕೊಂಡ್ರೆ ಅದು ಆಗಲ್ಲ, ಯಾರೋ ದುಷ್ಕರ್ಮಿಗಳು ಬಂದು ನಮ್ಮನೆಗೆ ಕಲ್ಲು ಎಸೆದಿದ್ದಾರೆ. ಏನೇ ಆದ್ರೂ ನಾನು ಅಂಬರೀಶ್ ಕುಟುಂಬಕ್ಕೆ ಸಪೋರ್ಟ್ ಮಾಡ್ತೀನಿ. ಈ ರೀತಿ ಗಲಾಟೆಗಳನ್ನ ಮಾಡಿಸಿ ನನ್ನ ಎದುರಿಸ್ತೀನಿ ಅಂದ್ಕೊಂಡ್ರೆ ಅದು ಆಗಲ್ಲ. ಅಂಬರೀಶ್ ಕುಟುಂಬದ ಹಿಂದೆ ನಾನು ಯಾವಾಗ್ಲೂ‌ ಇರ್ತೇನೆ. ಅಂಬರೀಶ್ …

Read More »

ನೀರಾವರಿ ಯೋಜನೆಯಿಂದ ರೈತರ ಅಭಿವೃದ್ಧಿ-ಸಚಿವೆ ಶಶಿಕಲಾ ಜೊಲ್ಲೆ

ಚಿಕ್ಕೋಡಿ – ನಿಪ್ಪಾಣಿ ತಾಲೂಕಿನ ಸಮಗ್ರ ಅಭಿವೃದ್ಧಿ ಜೊತೆಗೆ ರೈತರ ಅಭಿವೃದ್ಧಿಗೆ ಕೂಡ ಆದ್ಯತೆ ನೀಡಲಾಗಿದೆ. ಕಳೆದ ೩೦-೩೫ ವರ್ಷಗಳಿಂದ ನೀರಿಲ್ಲದೆ ಒಣಗುತ್ತಿರುವ ಬರಡು ಭೂಮಿ ನೀರಾವರಿ ಯೋಜನೆಯಿಂದ ಹಸಿರಿಕರಣವಾಗಲಿದೆ. ಗಂಗಾಕಲ್ಯಾಣ ಯೋಜನೆಯಿಂದ ರೈತರ ಆರ್ಥಿಕ ಅಭಿವೃದ್ಧಿ ಆಗಲಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.           ಸಮೀಪದ ಸೌಂದಲಗಾ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾದ ೧.೫ ಕೋಟಿ ವೆಚ್ಚದಲ್ಲಿ ಗಂಗಾಕಲ್ಯಾಣ ನೀರಾವರಿ ಯೋಜನೆಯನ್ನು …

Read More »

ಮರ್ಡರ್ ಮಾಡಿದ್ದ ಐವರು ಖದೀಮರನ್ನು ಪೊಲೀಸರು ಒದ್ದು ಒಳಗೆಹಾಕಿದ್ದಾರೆ

ಕಿತ್ತೂರು – ಕ್ಷುಲ್ಲಕ ಕಾರಣಕ್ಕೆ ದಾಬಾ ಮಾಲಿಕನನ್ನು ಮರ್ಡರ್ ಮಾಡಿದ್ದ ಐವರು ಖದೀಮರನ್ನು ಪೊಲೀಸರು ಒದ್ದು ಒಳಗೆಹಾಕಿದ್ದಾರೆ. ಕೊಲೆಯಾಗಿರುವ ಪ್ರಕಾಶ ತನ್ನ ಮುದ್ದಾದ ಮಕ್ಕಳೊಂದಿಗೆ ಇದ್ದ ಚಿತ್ರ                   ಖರೀದಿಸಿದ್ದ ಹೂವಿನ ಹಣ 1500 ರೂಗಳನ್ನು ಹೂವಿನ ವ್ಯಾಪಾರಿಗೆ ಕೊಡು ಎಂದು ಹೇಳಿದ್ದಕ್ಕೆ ಐವರು ಸೇರಿ ದಾಬಾ ಮಾಲಿಕ ಪ್ರಕಾಶ ಬಸವರಾಜ ನಾಗನೂರು (35) ಅವರನ್ನು ಕೊಲೆ ಮಾಡಿದ್ದರು. ಮಹಮ್ಮದಶಫೀ …

Read More »

ಕೋವಿಡ್:ರಾಜ್ಯದಲ್ಲಿಂದು 3204 ಸೋಂಕಿತರು ಗುಣಮುಖ;1386 ಹೊಸ ಪ್ರಕರಣ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿ( ದಿನಾಂಕ: 11.07.2021, 00:00 ರಿಂದ 23:59 ರವರೆಗೆ)ಯಲ್ಲಿ ಹೊಸದಾಗಿ 1386 ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿವೆ ಹಾಗೂ 61 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ( ಜುಲೈ 12) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ. ಮೇಲೆ ತಿಳಿಸಿದ ಕಾಲಾವಧಿಯಲ್ಲಿ 3204 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಇದುವರೆಗೆ …

Read More »

ಎರಡು ವರ್ಷದೊಳಗೆ ಜಿಲ್ಲೆಯಲ್ಲಿಯೇ ಮಾದರಿ ಕಾರ್ಖಾನೆ ಮಾಡಲು ಶಾಸಕ ಬಾಲಚಂದ್ರ ಜಾರಕಿಹೊಳಿ ಪಣ

  ಗೋಕಾಕ : ರೈತರ ಕಲ್ಯಾಣಕ್ಕಾಗಿ ಸಹಕಾರ ತತ್ವದಡಿ ಸ್ಥಾಪಿತಗೊಂಡಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಕುರಿತು ಇತ್ತೀಚೆಗೆ ಕೆಲವರು ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಇಂತಹ ವದಂತಿಗಳನ್ನು ಯಾರೂ ನಂಬಬಾರದು. ಕಾರ್ಖಾನೆ ಈಗಲೂ ನಮ್ಮ ಆಡಳಿತದಲ್ಲಿದೆ ಎಂದು ಕಾರ್ಖಾನೆಯ ಮಾರ್ಗದರ್ಶಕರೂ ಆಗಿರುವ ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸ್ಪಷ್ಟಪಡಿಸಿದರು. ನಗರದ ಹೊರವಲಯದಲ್ಲಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಿಯದರ್ಶಿನಿ ಸಮುದಾಯ ಭವನದಲ್ಲಿ ಟ್ರ್ಯಾಕ್ಟರ್ ಮಾಲೀಕರು ಹಾಗೂ …

Read More »