Breaking News

ಹೋರಾಟ ಮಾಡೋಹಾಗಿದ್ರೆ ಗಂಡಸ್ತನದಿಂದ ಹೋರಾಡೋಣ: ರಾಕ್​ಲೈನ್ ವೆಂಕಟೇಶ್

Spread the love

ಬೆಂಗಳೂರು: ರಾಕ್​ಲೈನ್ ವೆಂಕಟೇಶ್ ಮನೆ ಮೇಲೆ ಕಲ್ಲು ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ರಾಕ್​ಲೈನ್​ ವೆಂಕಟೇಶ್ ಹೇಳಿಕೆ ಕೊಟ್ಟಿದ್ದಾರೆ.

ಇಂತಹ ಟೈಮ್​ನಲ್ಲಿ ನನ್ನ ಎದುರಿಸಬೇಕು ಅಂದ್ಕೊಂಡ್ರೆ ಅದು ಆಗಲ್ಲ, ಯಾರೋ ದುಷ್ಕರ್ಮಿಗಳು ಬಂದು ನಮ್ಮನೆಗೆ ಕಲ್ಲು ಎಸೆದಿದ್ದಾರೆ. ಏನೇ ಆದ್ರೂ ನಾನು ಅಂಬರೀಶ್ ಕುಟುಂಬಕ್ಕೆ ಸಪೋರ್ಟ್ ಮಾಡ್ತೀನಿ. ಈ ರೀತಿ ಗಲಾಟೆಗಳನ್ನ ಮಾಡಿಸಿ ನನ್ನ ಎದುರಿಸ್ತೀನಿ ಅಂದ್ಕೊಂಡ್ರೆ ಅದು ಆಗಲ್ಲ. ಅಂಬರೀಶ್ ಕುಟುಂಬದ ಹಿಂದೆ ನಾನು ಯಾವಾಗ್ಲೂ‌ ಇರ್ತೇನೆ. ಅಂಬರೀಶ್ ಕುಟುಂಬಕ್ಕಾಗಿ ನಾನು ಎಲ್ಲಾ ತ್ಯಾಗ ಮಾಡೋಕೂ ಸಿದ್ಧ ಅಂತ ಹೇಳಿದ್ದಾರೆ.

ಅವ್ರ ಫ್ಯಾಮಿಲಿಗಾಗಿ ನನ್ನ ಪ್ರಾಣ ಕೊಡೋಕೂ ಸಿದ್ದ, ಹಾಗಂತ ನಾನು ಹೆದ್ರುಕೊಂಡು ಹಿಂಜರಿಯಲ್ಲ, ನನಗೆ ಅಂಬರೀಶ್ ಕುಟುಂಬದ ಜೊತೆ ಒಳ್ಳೆ ಸ್ನೇಹ ಇದೆ. ನಾನ್ಯಾವತ್ತೂ ಹಿಂಜರಿಯಲ್ಲ, ಇಲ್ಲೀಗಲ್ ಮೈನಿಂಗ್ ವಿಷ್ಯಕ್ಕೆ ಸುಮಲತಾ ಅವ್ರು ಧ್ವನಿ ಎತ್ತಿದ್ದಾರೆ. ರಾಜಕೀಯವಾಗಿ ನಾನು ಮಾತನಾಡೋಕೆ ಹೋಗಲ್ಲ, ಹೋರಾಟ ಮಾಡೋಹಾಗಿದ್ರೆ ಗಂಡಸ್ತನದಿಂದ ಹೋರಾಡೋಣ ಅಂತ ರಾಕ್​ಲೈನ್ ವೆಂಕಟೇಶ್ ಹೇಳಿದ್ದಾರೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ