Breaking News

ಜಿಲ್ಲೆ

ಸಾಯಿ ಸ್ಪೋರ್ಟ್ಸ್ ತಂಡಕ್ಕೆ ಸುಳೇಭಾವಿ ಚಾಂಪಿಯನ್ಸ್ ಟ್ರೋಫಿ

ಬೆಳಗಾವಿ : ಸುಳೇಭಾವಿ ಗ್ರಾಮದಲ್ಲಿ ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ಆಯೋಜಿಸಲಾಗಿದ್ದ “ಸುಳೇಭಾವಿ ಚಾಂಪಿಯನ್ಸ್ ಟ್ರೋಫಿ” ಹಾಫ್ ಪಿಚ್ ಕ್ರಿಕೆಟ್ ಪಂದ್ಯಾವಳಿಯು ಯಶಸ್ವಿಯಾಗಿ ಮುಕ್ತಾಯಗೊಂಡಿತು. ಪಂದ್ಯಾವಳಿಯ ಉದ್ದಕ್ಕೂ ಅದ್ಭುತ ಪ್ರದರ್ಶನ ನೀಡಿ, ಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ ಶ್ರೀ ಸಾಯಿ ಸ್ಪೋರ್ಟ್ಸ್, ಸುಳೇಭಾವಿ ತಂಡಕ್ಕೆ ಯುವ ಮುಖಂಡ ಮೃಣಾಲ ಹೆಬ್ಬಾಳಕರ್ ಭಾನುವಾರ ಸಂಜೆ ಪ್ರಶಸ್ತಿ ವಿತರಿಸಿದರು. ದ್ವಿತೀಯ ಸ್ಥಾನ ಪಡೆದ ಸುಳೇಭಾವಿ ಈಗಲ್ಸ್ ಹಾಗೂ ತೃತೀಯ ಸ್ಥಾನ ಪಡೆದ …

Read More »

ಯುವ ನಾಯಕ ರಾಹುಲ್ ಜಾರಕಿಹೊಳಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ಶುಭಾಶಯ ಕೋರಿದರು

ಗೋಕಾಕ ತಾಲೂಕಿನ ಸಾವಳಗಿ ಗ್ರಾಮದ ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಪ್ರಸಾದ್ ನಾಯಿಕ (ನಾಯಕಗೌಡರು) ಅವರ ಮದುವೆಯಲ್ಲಿ ಯುವ ನಾಯಕ ರಾಹುಲ್ ಜಾರಕಿಹೊಳಿ ಇತ್ತೀಚೆಗೆ ನಡೆದ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ವರ–ವಧುವರಿಗೆ ಶುಭಾಶಯ ಕೋರಿದರು. ಈ ವೇಳೆ ಕುಟುಂಬಸ್ಥರು, ಬಂಧುಮಿತ್ರರು ಹಾಗೂ ಅಭಿಮಾನಿಗಳೊಂದಿಗೆ ಮಾತನಾಡಿ, ಹೊಸ ದಂಪತಿಗೆ ಸುಖಮಯವಾದ ದಾಂಪತ್ಯ ಜೀವನವಾಗಲಿ ಎಂದು ಆಶಿಸಿದರು. ಮದುವೆ ಸಮಾರಂಭದಲ್ಲಿ ಹಲವಾರು ಗಣ್ಯರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದು, ಕಾರ್ಯಕ್ರಮವು ಹರ್ಷೋದ್ಗಾರಗಳ ನಡುವೆ …

Read More »

ಗ್ಯಾರಂಟಿ ಯೋಜನೆ ಪರಿಷ್ಕರಣೆ ಮಾಡಬೇಕು, ಸಿಎಂ, ಸಚಿವರು ಏನೂ ಮಾತನಾಡಿಲ್ಲ: ಹೆಚ್.ಎಂ ರೇವಣ್ಣ

ಬೆಂಗಳೂರು: ಗ್ಯಾರಂಟಿ ಯೋಜನೆಗಳ  ಪರಿಷ್ಕರಣೆ ಮಾಡುತ್ತೇವೆ, ಆದರೆ ಸಿಎಂ, ಸಚಿವರು ಇನ್ನೂ ಈ ಬಗ್ಗೆ ಮಾತನಾಡಿಲ್ಲ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ ರೇವಣ್ಣ  ಹೇಳಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, 51 ಸಾವಿರ ಕೋಟಿ ಇಟ್ಟು ಗ್ಯಾರಂಟಿ ಯಶಸ್ವಿಯಾಗಿದೆ. 91% ಡಿಬಿಟಿ ಮೂಲಕ ಹಣ ವರ್ಗಾಯಿಸಲಾಗಿದೆ. ಲಂಚ ಇಲ್ಲದೆ ಯೋಜನೆಗಳ ಹಣ ನೇರ ವರ್ಗಾವಣೆ ಆಗಿದೆ. ಯಾರೆಲ್ಲ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಾರೆ ಅವರಿಗೆ ಸರಿಯಾದ ಮಾಹಿತಿ ಇಲ್ಲ ಎಂದು …

Read More »

ರೈತ, ದುಡಿಯುವ ವರ್ಗ ಆಧುನಿಕ ಯುಗದ ಕುಬೇರರು: ಸಂಸದ ಬಸವರಾಜ ಬೊಮ್ಮಾಯಿ

ಹಾವೇರಿ: ರೈತ ಮತ್ತು ದುಡಿಯುವ ವರ್ಗ ಆಧುನಿಕ ಯುಗದ ಕುಬೇರರು. ಅನುದಾನ ಮಂಜೂರು ಮಾಡುವುದರಿಂದ ದೇಶದ ಆರ್ಥಿಕತೆ ಹೆಚ್ಚಾಗುವುದಿಲ್ಲ, ದುಡಿಯುವ ವರ್ಗ ಮಾಡುವ ಕೆಲಸ ಹಾಗೂ ಉತ್ಪಾದನೆಯಿಂದ ಸರ್ಕಾರಕ್ಕೆ ಆದಾಯ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಅಗ್ರಣೀಯ ಬ್ಯಾಂಕ್ ಸಹಯೋಗದಲ್ಲಿ ಆಯೋಜಿಸಿದ್ದ ಫಲಾನುಭವಿಗಳಿಗೆ ಸಾಲ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 60 …

Read More »

ಬಜೆಟ್‌ನಲ್ಲಿ ಲೋಕೋಪಯೋಗಿ ಇಲಾಖೆಗೆ ಹೆಚ್ಚಿನ ಹಣ ನೀಡಿಲ್ಲ : ಸಚಿವ ಸತೀಶ್‌ ಜಾರಕಿಹೊಳಿ

ಬೆಂಗಳೂರು: ಸೇತುವೆಗಳ ನಿರ್ಮಾಣ ಹಾಗೂ ಇತರ ಕಾಮಗಾರಿಗಳನ್ನು ಒಳಗೊಂಡು ಲೋಕೋಪಯೋಗಿ ಇಲಾಖೆಗೆ ಬಜೆಟ್‌ನಲ್ಲಿ ಹೆಚ್ಚಿನ ಹಣ ನೀಡಿರುವುದರಿಂದ ಈ ಬಾರಿ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗಲಿದೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕೇಳಿದ ಎಲ್ಲವನ್ನೂ ಮುಖ್ಯಮಂತ್ರಿಯವರು ಬಜೆಟ್‌ನಲ್ಲಿ ಕೊಟ್ಟಿದ್ದಾರೆ. ಸೇತುವೆಗಳ ನಿರ್ಮಾಣಕ್ಕೆ 20 ವರ್ಷಗಳಿಂದಲೂ ಆಧ್ಯತೆ ನೀಡಿರಲಿಲ್ಲ. ಈ ಬಾರಿ 2 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಣ ಸಿಕ್ಕಿದೆ. ಇದರಿಂದ ನಮಗೆ ನಿಭಾಯಿಸಲು …

Read More »

ಕೇಂದ್ರದ ಅನ್ಯಾಯದಿಂದ ಸಾಲದ ಹೊರೆ – ಸಾಲರಾಮಯ್ಯ ಎಂದ ಬಿಜೆಪಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು

ಬೀದರ್‌: ಕೇಂದ್ರದ ಅನ್ಯಾಯದಿಂದ ನಮಗೆ ಇಷ್ಟೊಂದು ಸಾಲದ ಹೊರೆಯಾಗಿದೆ ಎಂದು ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಬೀದರ್‌ನಲ್ಲಿ  ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ ಬಜೆಟ್‌  ವಿಚಾರವಾಗಿ ಸಾಲಾರಾಮಯ್ಯ ಎಂದು ವ್ಯಂಗ್ಯ ಮಾಡಿದ್ದ ಬಿಜೆಪಿ ವಿರುದ್ಧ ಹರಿಹಾಯ್ದರು. ಅವರಿಗೆ ದೇಶ ಮತ್ತು ರಾಜ್ಯವನ್ನ ಆರ್ಥಿಕವಾಗಿ ಹೇಗೆ ನಡೆಸಬೇಕು ಎಂದು ಗೊತ್ತಿಲ್ಲ. ಕೇಂದ್ರ ಸರ್ಕಾರದ ಅನ್ಯಾಯದಿಂದಾಗಿ ನಮಗೆ ಇಷ್ಟೊಂದು ಸಾಲದ ಹೊರೆಯಾಗಿದೆ ಎಂದು ಅಸಮಾಧಾನ ಹೊರಹಾಕಿದರು. ಕೇಂದ್ರ ಸರ್ಕಾರ …

Read More »

ಕಲ್ಲಿನಿಂದ ಜಜ್ಜಿ ಮಹಿಳೆ ಕೊಲೆ ಕೇಸ್‌ – ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

ರಾಯಚೂರು: 2024ರಲ್ಲಿ ರಾಯಚೂರಿನ ಲಿಂಗಸುಗೂರು ಪಟ್ಟಣದಲ್ಲಿ ನಡೆದಿದ್ದ ಮಹಿಳೆ ಕೊಲೆ ಪ್ರಕರಣದ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ.ದಂಡ ವಿಧಿಸಿ ಲಿಂಗಸುಗೂರು  ಪೀಠ ತೀರ್ಪು ನೀಡಿದೆ. ಮೃತ ಮಹಿಳೆ ವಿಜಯಲಕ್ಷ್ಮಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಯರಡೋಣ ಗ್ರಾಮದ ಆರೋಪಿ ದೇವರಾಜ ವಿರುದ್ಧ ಆರೋಪಿ ಸಾಬೀತಾದ ಹಿನ್ನೆಲೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಲಿಂಗಸುಗೂರು ಪೀಠ ತೀರ್ಪು ನೀಡಿ, ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ. …

Read More »

ಆಸ್ತಿ ತೆರಿಗೆ ಏರಿಕೆ ವಿರುದ್ಧ ಹಿರಿಯ ನಾಗರಿಕರ ಆಕ್ರೋಶ

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಆಸ್ತಿ ತೆರಿಗೆ ಏರಿಕೆ ವಿಚಾರ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ನಿಯಮ ಬಾಹಿರವಾಗಿ ತೆರಿಗೆ ಹೆಚ್ಚಳ ಮಾಡಲಾಗುತ್ತಿದೆ ಎಂದು ಆರೋಪಿಸಿ ಇಂದು ಹಿರಿಯ ನಾಗರಿಕರು ಹಾಗೂ ಮಾಜಿ ನಗರಸೇವಕರು ಮಹಾಪೌರರಿಗೆ ಮನವಿ ಸಲ್ಲಿಸಿದರು. ಶೇ. 3ರಷ್ಟು ತೆರಿಗೆ ಏರಿಕೆ ಜನತೆಗೆ ದೊಡ್ಡ ಹೊರೆಯಾಗಿದೆ ಎಂದರು. ಇಂದು ಬೆಳಗಾವಿ ಮಹಾಪೌರ ಮಂಗೇಶ್ ಪವಾರ್ ಅವರಿಗೆ ಹಿರಿಯ ನಾಗರೀಕರು ಮನವಿಯನ್ನು ಸಲ್ಲಿಸಿದರು. ಈ ವೇಳೆ ಮಹಾಪೌರರೊಂದಿಗೆ ಆಸ್ತಿ ತೆರಿಗೆ …

Read More »

ಸಾಲ ಮಾಡಿ ಬಜೆಟ್‌ ಮಂಡಿಸಿದ್ದು ಇದೇ ಮೊದಲ ಬಾರಿಯಲ್ಲ: ಸಚಿವ ಸತೀಶ್‌ ಜಾರಕಿಹೊಳಿ

ಕಳೆದ ಐವತ್ತು ವರ್ಷದಿಂದ ಸಾಲ ಮಾಡಿಯೇ ಬಜೆಟ್‌ ಮಂಡಿಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯನವರಷ್ಟೇ ಸಾಲ ಮಾಡಿ ಬಜಟ್‌ ಮಂಡನೆ ಮಾಡಿಲ್ಲ. ಬಿಜೆಪಿಯವರು ಸಾಲ ಮಾಡಿಯೇ ಬಜೆಟ್‌ ಮಂಡಿಸಿದ್ದು, ಈಗ ಟೀಕೆ ಮಾಡಿದರೆ ಪ್ರಯೋಜನವಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು. ಇಂದು ಬೆಂಗಳೂರಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು, ಲೋಕೋಪಯೋಗಿ ಇಲಾಖೆ ಬಜೆಟ್’ನಲ್ಲಿ ಸೇತುವೆಗಳಿಗೆ ಬೇಡಿಕೆಯಿಟ್ಟಿತ್ತು. ಅದಕ್ಕೆ ಅನುದಾನವನ್ನು ನೀಡಿದ್ದಾರೆ. ಕಳೆದ …

Read More »

ಬೆಳಗಾವಿ ಕೆ.ಎಸ್.ಆರ್. ಸಿ ಬಿ ಎಸ್ ಸಿ ಶಾಲಾ ಮಕ್ಕಳಲ್ಲಿ ಆತ್ಮರಕ್ಷಣೆಯ ಕಲೆ: 150 ವಿದ್ಯಾರ್ಥಿಗಳಿಗೆ ಕರಾಟೆ ಬೆಲ್ಟ್ ವಿತರಣೆ

ಬೆಳಗಾವಿ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ಮತ್ತು ಬೆಳಗಾವಿ ಜಿಲ್ಲಾ ಸ್ಪೋರ್ಟ್ಸ್ ಅಸೋಸಿಯೇಷನ ವತಿಯಿಂದ ಕೆ.ಎಸ್.ಆರ್. ಸಿ ಬಿ ಎಸ್ ಸಿ ಶಾಲೆಯಲ್ಲಿ ಕರಾಟೆ ಬೆಲ್ಟ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ಮತ್ತು ಬೆಳಗಾವಿ ಜಿಲ್ಲಾ ಸ್ಪೋರ್ಟ್ಸ್ ಅಸೋಸಿಯೇಷನ ವತಿಯಿಂದ ಕೆ.ಎಸ್.ಆರ್. ಸಿ ಬಿ ಎಸ್ ಸಿ ಶಾಲೆಯಲ್ಲಿ ಮಕ್ಕಳಿಗೆ ಕರಾಟೆ ತರಬೇತಿಯನ್ನು ನೀಡಲಾಗುತ್ತಿದ್ದು, ತರಬೇತಿ ಪೂರೈಸಿದ ವಿದ್ಯಾರ್ಥಿಗಳಿಗೆ ಕರಾಟೆ ಬೆಲ್ಟ್ ವಿತರಿಸಲಾಯಿತು. ಕಾಂಗ್ರೆಸ್ …

Read More »